ನ್ಯಾಷನಲ್ ಸೇವಿಂಗ್ಸ್ ಸ್ಕೀಮ್, ಅಕ್ಟೋಬರ್ 1ರಿಂದ ಬದಲಾಗಲಿವೆ ಈ ನಿಯಮಗಳು, ಗಮನಿಸಿ

|

Updated on: Sep 11, 2024 | 5:23 PM

Irregular NSS-87 accounts rules change: 1987ರ ಎನ್​ಎಸ್​ಎಸ್ ಸ್ಕೀಮ್ ಅಡಿಯಲ್ಲಿ ಒಂದಕ್ಕಿಂತ ಹೆಚ್ಚು ಅಕೌಂಟ್​ಗಳನ್ನು ಹೊಂದಿರುವವರು ಗಮನಿಸಬೇಕು. ಒಂದಕ್ಕಿಂತ ಹೆಚ್ಚು ಅಕೌಂಟ್ ಇದ್ದರೆ ಮೊದಲ ಅಕೌಂಟ್​ಗೆ ಪ್ರಸಕ್ತ ದರಗಳು ಅನ್ವಯ ಆಗುತ್ತವೆ. ಎರಡನೇ ಅಕೌಂಟ್​ಗೆ ಸೇವಿಂಗ್ಸ್ ಅಕೌಂಟ್ ದರ ಮಾತ್ರವೇ ಸಿಗುತ್ತದೆ. ಅಕ್ಟೋಬರ್ 1ರಿಂದ ನಿಯಮ ಜಾರಿಗೆ ಬರಲಿದೆ.

ನ್ಯಾಷನಲ್ ಸೇವಿಂಗ್ಸ್ ಸ್ಕೀಮ್, ಅಕ್ಟೋಬರ್ 1ರಿಂದ ಬದಲಾಗಲಿವೆ ಈ ನಿಯಮಗಳು, ಗಮನಿಸಿ
ಹಣ
Follow us on

ನವದೆಹಲಿ, ಸೆಪ್ಟೆಂಬರ್ 11: ಹಣಕಾಸು ಸಚಿವಾಲಯ ಸಣ್ಣ ಉಳಿತಾಯ ಯೋಜನೆಗಳ ನಿಯಮಗಳನ್ನು ಸರಳಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಅನಿಯಮಿತವಾಗಿರುವ ಎನ್​ಎಸ್​ಎಸ್, ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ನಿಯಮ ಸರಿಪಡಿಸಲಾಗುತ್ತಿದೆ. 2024ರ ಅಕ್ಟೋಬರ್ 1ರಿಂದ ಇವು ಜಾರಿಗೆ ಬರಲಿವೆ. ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಯಾವುದೆಲ್ಲಾ ನಿಯಮಗಳ ಬದಲಾವಣೆ ಆಗಲಿದೆ ಎಂಬುದನ್ನು ತಿಳಿಸುವ ಲಿಂಕ್​ಗಳನ್ನು ಈ ಲೇಖನದ ಕೆಳಗಿನ ಸಾಲುಗಳ ಮಧ್ಯೆ ನೀಡಲಾಗಿದೆ, ಗಮನಿಸಿ. ಈ ಲೇಖನದಲ್ಲಿ ಎನ್​ಎಸ್​ಎಸ್ 87 ಅಕೌಂಟ್​ಗಳ ವಿಚಾರದಲ್ಲಿ ಸರ್ಕಾರ ತರಲಿರುವ ಬದಲಾವಣೆ ಬಗ್ಗೆ ಮಾಹಿತಿ ಇದೆ.

ಮೊದಲಿಗೆ, ಎನ್​ಎಸ್​ಎಸ್ ಎಂಬುದು ನ್ಯಾಷನಲ್ ಸೇವಿಂಗ್ಸ್ ಸ್ಕೀಮ್. ಅಂಚೆ ಕಚೇರಿಯಲ್ಲಿ ಮಾಡಿಸಬಹುದಾದ ಸಣ್ಣ ಉಳಿತಾಯ ಯೋಜನೆಗಳು. ಮಾಸಿಕ ಆದಾಯ ಯೋಜನೆ, ಟೈಮ್ ಡೆಪಾಸಿಟ್, ರೆಕರಿಂಗ್ ಡೆಪಾಸಿಟ್, ರಾಷ್ಟ್ರೀಯ ಉಳಿತಾಯ ಪತ್ರ (ಎನ್​ಎಸ್​ಸಿ), ಕಿಸಾನ್ ವಿಕಾಸ್ ಪತ್ರ ಇತ್ಯಾದಿ ವಿವಿಧ ಸ್ಕೀಮ್​ಗಳು ಒಳಗೊಳ್ಳುತ್ತವೆ.

ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆ: ಅ. 1ರಿಂದ ಬದಲಾಗಲಿವೆ 2 ನಿಯಮಗಳು, ಗಮನಿಸಿ

ಒಂದಕ್ಕಿಂತ ಹೆಚ್ಚು ಎನ್​ಎಸ್​ಎಸ್ ಅಕೌಂಟ್​ಗಳು ತೆರೆಯುವಂತಿಲ್ಲ. ಉದಾಹರಣೆಗೆ, ನೀವು ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್​ನಲ್ಲಿ ಹೂಡಿಕೆ ಮಾಡಿದ್ದರೆ ಒಬ್ಬ ವ್ಯಕ್ತಿ ಒಂದು ಎನ್​ಎಸ್​ಸಿ ಖಾತೆ ಮಾತ್ರವೇ ತೆರೆಯಬಹುದು. 1987ರ ಎನ್​ಎಸ್​ಎಸ್ ಯೋಜನೆ ಅಡಿಯಲ್ಲಿ ಎರಡು ಅಕೌಂಟ್ ತೆರೆದಿದ್ದರೆ ಈಗ ಒಂದನ್ನು ಮಾತ್ರವೇ ಉಳಿಸಿಕೊಳ್ಳಲಾಗುತ್ತದೆ. ಎರಡನೆಯ ಅಕೌಂಟ್ ಏನಾಗುತ್ತದೆ?

1990ರಲ್ಲಿ ಒಂದಕ್ಕಿಂತ ಹೆಚ್ಚು ಎನ್​ಎಸ್​ಎಸ್ ಖಾತೆ ಹೊಂದುವಂತಿಲ್ಲ ಎಂದು ಡಿಜಿ ವತಿಯಿಂದ ಆರ್ಡರ್ ಮಾಡಲಾಗಿತ್ತು. ಅದಕ್ಕಿಂತ ಮುನ್ನ ಒಂದಕ್ಕಿಂತ ಹೆಚ್ಚು ಎನ್​ಎಸ್​ಎಸ್ ಖಾತೆ ಆರಂಭಿಸಿದ್ದರೆ ಏನಾಗುತ್ತದೆ ಎನ್ನುವ ವಿವರ ಇಲ್ಲಿದೆ:

  • ಒಂದಕ್ಕಿಂತ ಹೆಚ್ಚು ಎನ್​ಎಸ್​ಎಸ್-87 ಅಕೌಂಟ್​ಗಳಿದ್ದರೆ ಮೊದಲು ಆರಂಭಿಸಿದ ಅಕೌಂಟ್​ಗೆ ಈಗಿರುವ ಲಾಭ ನೀಡಲಾಗುತ್ತದೆ.
  • ಎರಡನೇ ಖಾತೆಗೆ ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್​ನ ಬಡ್ಡಿದರ ಸಿಗುತ್ತದೆ. ಇದರ ಜೊತೆಗೆ ಬಾಕಿ ಮೊತ್ತಕ್ಕೆ 200 ಬಿಪಿಎಸ್ (ಶೇ. 2) ಬಡ್ಡಿ ಸಿಗುತ್ತದೆ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಎರಡು ಎನ್​​ಎಸ್​ಎಸ್ ಅಕೌಂಟ್​ಗಳಲ್ಲಿ ಇರುವ ಹಣವು ಸ್ಕೀಮ್​ನ ಹೂಡಿಕೆ ಮಿತಿಯೊಳಗೆ ಇರಬೇಕು. ಮಿತಿಗಿಂತ ಹೆಚ್ಚು ಹಣ ಇದ್ದರೆ ಅದಕ್ಕೆ ಯಾವುದೇ ಬಡ್ಡಿ ಸಿಗುವುದಿಲ್ಲ. ಅದನ್ನು ಹೂಡಿಕೆದಾರರಿಗೆ ಮರಳಿಸಲಾಗುತ್ತದೆ.

ಇದನ್ನೂ ಓದಿ: ತಪ್ಪದೇ ಗಮನಿಸಿ; ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರುವುದೂ ಸೇರಿ ಪಿಪಿಎಫ್ ಯೋಜನೆಯ 3 ನಿಯಮಗಳಲ್ಲಿ ಮಾರ್ಪಾಡು; ಅ. 1ರಿಂದ ಜಾರಿ

ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಅಕ್ಟೋಬರ್ 1ರಿಂದ ಈ ಎನ್​ಎಸ್​ಎಸ್-87 ಅಕೌಂಟ್​​ಗಳಿಗೆ ಯಾವ ಬಡ್ಡಿ ಸಿಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ