ಹಣ ನೋಡುವ ದೃಷ್ಟಿ ಜಪಾನೀಯರದ್ದು ವಿಭಿನ್ನ; ಎರಿಗಾಟು ಸೂತ್ರ ತಿಳಿದಿರಿ

|

Updated on: Oct 30, 2024 | 5:43 PM

Money and Japanese philosophy: ಜಪಾನೀಯರು ಗುಣಮಟ್ಟ ಮತ್ತು ಶ್ರಮಜೀವನಕ್ಕೆ ಹೆಸರುವಾಸಿಯಾಗಿದ್ದಾರೆ. ಹಣದ ಬಗ್ಗೆ ಅವರಿಗೆ ಇರುವ ಗೌರವ ಭಾವನೆ ಭಾರತೀಯ ಸಂಸ್ಕೃತಿಗೆ ಹೋಲುತ್ತದೆ. ತಮಗೆ ಸಿಗುವ ಸಂಪತ್ತಿಗೆ ಅವರು ಸದಾ ಕೃತಜ್ಞರಾಗಿರುತ್ತಾರೆ. ಅವರ ಎರಿಗಾಟು ತತ್ವವು ಜಪಾನೀಯರ ಚಿಂತನೆ, ದೃಷ್ಟಿಕೋನವನ್ನು ರೂಪಿಸಿದೆ.

ಹಣ ನೋಡುವ ದೃಷ್ಟಿ ಜಪಾನೀಯರದ್ದು ವಿಭಿನ್ನ; ಎರಿಗಾಟು ಸೂತ್ರ ತಿಳಿದಿರಿ
ಹಣ
Follow us on

ಜಪಾನೀಯರ ಸಂಸ್ಕೃತಿ, ಪರಂಪರೆಗೆ ಬಹಳ ವಿಶೇಷತೆ ಇದೆ. ಅಲ್ಲಿನ ಜನರ ಯೋಚನಾಲಹರಿ, ನಡತೆ, ದೃಷ್ಟಿ ಎಲ್ಲವೂ ಕೂಡ ವಿಶೇಷವಾದುದು. ಬಹಳ ಶ್ರಮ ಜೀವಿಗಳು, ಶ್ರೇಷ್ಠ ಚಿಂತನೆ ಉಳ್ಳವರು. ಅವರ ವ್ಯಕ್ತಿತ್ವ ನಿರ್ಮಿಸುವ ಸಂಸ್ಕೃತಿ ವಿಚಾರಗಳು ಅವರಲ್ಲಿ ಹಲವಿವೆ. ಅದರಲ್ಲಿ ಏರಿಗಾಟು ತತ್ವವೂ ಒಂದು. ಎರಿಗಾಟು ಎಂದರೆ ಧನ್ಯವಾದ, ಥ್ಯಾಂಕ್ ಯೂ. ಜಪಾನೀ ಸಂಸ್ಕೃತಿಯಲ್ಲಿ ಇದು ಮಹತ್ವದ ಪದ. ಸಂತೃಪ್ತತೆಯ ಭಾವನೆ ಅದು. ತನಗೆ ಸಿಕ್ಕ ಫಲಕ್ಕೆ ತೃಪ್ತಿ ಪಟ್ಟುಕೊಳ್ಳುವ ಗುಣ.

ಜಪಾನೀಯರು ಹಣ ನೋಡುವ ದೃಷ್ಟಿ ಭಿನ್ನ. ಎರಿಗಾಟು ಫಿಲಾಸಫಿ ಪ್ರಕಾರ ಅವರು ಹಣವನ್ನು ಒಂದು ವಿಧದ ಶಕ್ತಿ ಎಂದು ಭಾವಿಸುತ್ತಾರೆ. ಹಣದ ವಿಚಾರದಲ್ಲಿ ಪಾಸಿಟಿವ್ ಇರಬೇಕು ಎನ್ನುವುದು ಅವರ ನಂಬಿಕೆ.

ಹಣವೆಂದರೆ ಶಕ್ತಿ…

ನಾವು ಗಳಿಸುವ ಒಂದೊಂದು ರುಪಾಯಿಗೂ ತೃಪ್ತಿ ಪಡಬೇಕು. ಹಣ ಬಂದದ್ದಕ್ಕೆ ಧನ್ಯವಾದ ಹೇಳಬೇಕು. ಇದರಿಂದ ಸಕಾರಾತ್ಮಕ ಶಕ್ತಿ ಉದ್ಭವವಾಗಿ ಸಂಪತ್ತು ಇನ್ನಷ್ಟು ಸೇರುತ್ತದೆ ಎಂಬುದು ಜಪಾನೀಯರಲ್ಲಿ ಅಂತರ್ಗತವಾಗಿರುವ ಆಲೋಚನೆ.

ಇದನ್ನೂ ಓದಿ: ಡಿಜಿಟಲ್ ಗೋಲ್ಡ್ ಸೇರಿ ವಿವಿಧ ರೀತಿಯ ಚಿನ್ನದ ಮೇಲೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಎಷ್ಟಿದೆ, ವಿವರ ಇಲ್ಲಿದೆ

ಹಣ ಉಳಿಸುವ ಗುಣ

ನಿಮಗೆ ಬಂದ ಹಣದಲ್ಲಿ ಮೊದಲು ಹಣ ಉಳಿಸಿ, ನಂತರ ವೆಚ್ಚ ಮಾಡಿ ಎನ್ನುವುದು ಅವರ ಫಿಲಾಸಫಿ. ಸಂಬಳದಲ್ಲಿ ನಿರ್ದಿಷ್ಟ ಮೊತ್ತದ ಹಣವನ್ನು ತೆಗೆದಿರಿಸಿ, ಉಳಿದ ಹಣವನ್ನು ಖರ್ಚಿಗೆ ಬಳಸಬಹುದು. ಇದರಿಂದ ಹಣ ಉಳಿತಾಯ ಭಾವನೆ ಗಟ್ಟಿಗೊಳ್ಳುತ್ತದೆ.

ಸಾಲವೆಂದರೆ ಸೂಲ

ಮುಂದುವರಿದ ದೇಶಗಳ ಪೈಕಿ ಅತಿ ಕಡಿಮೆ ವೈಯಕ್ತಿಕ ಸಾಲ ಹೊಂದಿರುವುದು ಜಪಾನೀಯರೇ. ಅಲ್ಲಿನ ಬ್ಯಾಂಕುಗಳಲ್ಲಿ ತೀರಾ ಕಡಿಮೆ ಬಡ್ಡಿಗೆ ಸಾಲ ಸಿಕ್ಕರೂ ಹೆಚ್ಚು ಜನರು ಸಾಲ ಪಡೆಯುವುದಿಲ್ಲ. ತೀರಾ ಅವಶ್ಯಕತೆ ಇದ್ದರೆ ಮಾತ್ರವೇ ಅವರು ಸಾಲ ಮಾಡುವುದು.

ಇದನ್ನೂ ಓದಿ: ವಯಸ್ಸಾದವರಿಗೆ 5 ಲಕ್ಷ ಕವರೇಜ್ ಇರುವ ಪಿಎಂ ಆಯುಷ್ಮಾನ್ ಕಾರ್ಡ್ ಮಾಡಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಸರಳತೆಯ ಜೀವನ

ಭೌತಿಕ ಜೀವನ ಮತ್ತು ಹಣಕಾಸು ಜೀವನ ಎರಡೂ ಕೂಡ ಸಂಕೀರ್ಣತೆ ಇಲ್ಲದ ಸರಳತೆ ಹೊಂದಿರಬೇಕು. ಬೇಕಾಗಿರುವ ವಸ್ತುಗಳನ್ನು ಮಾತ್ರವೇ ಇಟ್ಟುಕೊಂಡು, ಅನಗತ್ಯವಾದ ಜಂಜಾಟಗಳಿಂದ ದೂರವಾಗಿರಬೇಕು.

ಮಿತವ್ಯಯ ಗುಣ

ಜಪಾನೀಯರು ತೀರಾ ಅಗತ್ಯವಿರುವಂಥವಕ್ಕೆ ಮಾತ್ರ ಖರ್ಚು ಮಾಡುತ್ತಾರೆ. ಕ್ವಾಂಟಿಟಿಗಿಂತ ಕ್ವಾಲಿಟಿಗೆ ಅವರದು ಪ್ರಾಶಸ್ತ್ಯ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ