ಎಸ್​ಐಪಿ ಮತ್ತು ಎಸ್​ಡಬ್ಲ್ಯುಪಿ ಸಂಯೋಜನೆಯಲ್ಲಿ ನಿಮ್ಮ ಜೀವನಕ್ಕೊಂದು ಭದ್ರತೆ ನೀಡುವುದು ಹೇಗೆ?

|

Updated on: Sep 16, 2024 | 4:49 PM

SIP and SWP combination: ಎಸ್​ಐಪಿ ಬಗ್ಗೆ ಸಾಕಷ್ಟು ಜನರು ಕೇಳಿರುತ್ತಾರೆ. ಎಸ್​ಡಬ್ಲ್ಯುಪಿ ಬಗ್ಗೆ ಹೆಚ್ಚಿನ ಜನರಿಗೆ ಅರಿವಿಲ್ಲ. ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡುವಾಗ ಎಸ್​ಐಪಿ ಜೊತೆಗೆ ಎಸ್​ಡಬ್ಲ್ಯುಪಿ ಫೀಚರ್ ಕೂಡ ಇರುತ್ತದೆ. ಫಂಡ್​ನಲ್ಲಿ ನೀವು ಲಂಪ್ಸಮ್ ಆಗಿ ಹೂಡಿಕೆ ಮಾಡಿದಾಗ ಎಸ್​ಡಬ್ಲ್ಯುಪಿ ಫೀಚರ್ ಆಯ್ಕೆ ಮಾಡಿಕೊಳ್ಳಬಹುದು. ಫಂಡ್​ನಲ್ಲಿ ನಿಮ್ಮ ಹೂಡಿಕೆ ಬೆಳೆಯುವುದರ ಜೊತೆಜೊತೆಗೆ ನಿಮಗೆ ಬೇಕಾದಷ್ಟು ಹಣವನ್ನು ಹಿಂಪಡೆಯಬಹುದು.

ಎಸ್​ಐಪಿ ಮತ್ತು ಎಸ್​ಡಬ್ಲ್ಯುಪಿ ಸಂಯೋಜನೆಯಲ್ಲಿ ನಿಮ್ಮ ಜೀವನಕ್ಕೊಂದು ಭದ್ರತೆ ನೀಡುವುದು ಹೇಗೆ?
ಹಣ
Follow us on

ಈಗಂತೂ ಹೂಡಿಕೆದಾರರಿಗೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್ ಅಥವಾ ಎಸ್​ಐಪಿ ಒಂದು ರೀತಿಯಲ್ಲಿ ಮಂತ್ರದಂತಾಗಿ ಹೋಗಿದೆ. ವಾಸ್ತವವಾಗಿ ಎಸ್​ಐಪಿ ನಿಮಗೆ ಹಣಕಾಸು ಬಲ ತಂದುಕೊಡುವ ಸ್ಕೀಮ್ ಎಂಬುದು ನೂರಕ್ಕೆ ನೂರು ಸತ್ಯ. ನಿಮ್ಮ ನಿವೃತ್ತಿ ಜೀವನಕ್ಕೆ ಈಗಲೇ ಪ್ಲಾನ್ ಮಾಡುತ್ತಿದ್ದರೆ ಎಸ್​ಐಪಿ ಜೊತೆಗೆ ಎಸ್​ಡಬ್ಲ್ಯುಪಿ ಎಂಬುದೂ ನೆನಪಿನಲ್ಲಿರಲಿ. ಎಸ್​ಡಬ್ಲ್ಯುಪಿ ಎಂದರೆ ಸಿಸ್ಟಮ್ಯಾಟಿಕ್ ವಿತ್​ಡ್ರಾಯಲ್ ಪ್ಲಾನ್. ಇದೂ ಕೂಡ ಮ್ಯೂಚುವಲ್ ಫಂಡ್​ಗಳಿಂದ ಆಫರ್ ಮಾಡಲಾಗುವ ಫೀಚರ್ ಆಗಿರುತ್ತದೆ.

ಎಸ್​ಐಪಿ ಎಂಬುದು ನಿಮಗೆ ನಿಯಮಿತವಾಗಿ ನಿರ್ದಿಷ್ಟ ಮೊತ್ತದ ಹಣವನ್ನು ಹೂಡಿಕೆ ಮಾಡಲು ಇರುವ ಮಾರ್ಗವಾಗಿದೆ. ಪ್ರತೀ ತಿಂಗಳು ನೀವು ಉಳಿಸಿದ ಹಣವನ್ನು ಎಸ್​ಐಪಿ ಮೂಲಕ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಬಹುದು.

ಎಸ್​ಡಬ್ಲ್ಯುಪಿ ಎಂಬುದು ಒಂದು ಮ್ಯೂಚುವಲ್ ಫಂಡ್​ನಲ್ಲಿ ನಿಮ್ಮ ಹೂಡಿಕೆಯನ್ನು ನಿಯಮಿತವಾಗಿ ಹಿಂಪಡೆಯಲು ಅನುವು ಮಾಡಿಕೊಡುವ ಸ್ಕೀಮ್. ನೀವು ಕೆಲಸ ಮಾಡುವುದನ್ನು ನಿಲ್ಲಿಸಿದ ನಂತರದಿಂದ ನಿಮಗೆ ನಿಯಮಿವಾಗಿ ಇದು ಆದಾಯ ತಂದುಕೊಡುತ್ತದೆ.

ಇದನ್ನೂ ಓದಿ: ಎಸ್​ಬಿಐನ ಈ ಫಂಡ್ ಭರ್ಜರಿ ಲಾಭ; ತಿಂಗಳಿಗೆ 10,000 ರೂ ಹೂಡಿಕೆ; 3 ವರ್ಷದಲ್ಲಿ 5 ಲಕ್ಷ ರೂ ಸಂಪತ್ತು

ಎಸ್​ಐಪಿ ಮತ್ತು ಎಸ್​ಡಬ್ಲ್ಯುಪಿ ಡೆಡ್ಲಿ ಕಾಂಬಿನೇಶನ್..!

ನೀವು ಕೆಲಸ ಮಾಡುವ ಹಂತದಲ್ಲಿ ಎಸ್​ಐಪಿ ಚಾಲನೆಯಲ್ಲಿ ಇಟ್ಟಿರುತ್ತೀರಿ. ಒಂದೇ ಮ್ಯೂಚುವಲ್ ಫಂಡ್ ಆಗಿರಬಹುದು, ಹೆಚ್ಚಿನ ಫಂಡ್​ಗಳಾಗಿರಬಹುದು, ಒಂದಕ್ಕಿಂತ ಹೆಚ್ಚು ಎಷ್ಟು ಬೇಕಾದರೂ ನೀವು ಎಸ್​ಐಪಿ ನಡೆಸಬಹುದು. ನೀವು ಬಿಸಿನೆಸ್ ಅಥವಾ ಉದ್ಯೋಗದಲ್ಲಿ ಗಳಿಸುವ ಆದಾಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣ ಉಳಿಸಿ ಎಸ್​ಐಪಿಗೆ ಸಾಧ್ಯವಾದಷ್ಟು ಹೆಚ್ಚು ಹೂಡಿಕೆ ಮಾಡುವುದು ಗುರಿಯಾಗಿರಬೇಕು.

ನೀವು ನಿವೃತ್ತಿ ಆಗುವವರೆಗೂ ಎಸ್​ಐಪಿ ನಡೆಸಿ ಆ ಬಳಿಕ ನಿಲ್ಲಿಸಬಹುದು. ನಿವೃತ್ತಿ ನಂತರ ನಿಮ್ಮ ಎಲ್ಲಾ ಎಸ್​ಐಪಿಗಳ ಹಣವನ್ನು ಒಂದೆಡೆ ಹೂಡಿಕೆ ಮಾಡಿ ಎಸ್​ಡಬ್ಲ್ಯುಪಿ ಫೀಚರ್ ಆಯ್ಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಪಾಲಿಸಿ: ನಿಮ್ಮ ಕ್ಲೇಮ್ ರಿಜೆಕ್ಟ್ ಆಗುತ್ತಿದೆಯಾ? ಇಲ್ಲಿವೆ 5 ಕಾರಣಗಳು

ಒಂದು ರೀತಿಯಲ್ಲಿ ನೀವು ಲಂಪ್ಸಮ್ ಆಗಿ ಮ್ಯೂಚುವಲ್ ಫಂಡ್​ನಲ್ಲಿ ಹಣ ಹಾಕುತ್ತೀರಿ. ಎಸ್​ಡಬ್ಲ್ಯುಪಿ ಫೀಚರ್​ನಲ್ಲಿ ನೀವು ತಿಂಗಳಿಗೆ ನಿಮಗೆ ಅಗತ್ಯವಾದ ಎಷ್ಟು ಹಣ ಹಿಂಪಡೆಯಬೇಕು ಎಂಬುದನ್ನು ನಿರ್ದಿಷ್ಟಪಡಿಸಿದರೆ ತನ್ನಂತಾನೆ ನಿಮ್ಮ ಖಾತೆಗೆ ಅಷ್ಟು ಹಣ ಬಂದು ಬೀಳುತ್ತಿರುತ್ತದೆ.

ಅದ್ಭುತ ಏನೆಂದರೆ, ನಿಮ್ಮ ಲಂಪ್ಸಮ್ ಹಣ ಹೆಚ್ಚಿದ್ದು, ಅದರಿಂದ ಬೆಳೆಯುವ ಹಣವು ನೀವು ವಿತ್​ಡ್ರಾ ಮಾಡಿಕೊಳ್ಳುವ ಮೊತ್ತಕ್ಕಿಂತ ಹೆಚ್ಚಿದ್ದರೆ ಆಗ ಹೂಡಿಕೆ ಮೊತ್ತ ಅಕ್ಷಯಪಾತ್ರೆಯಂತೆ ಮುಂದುವರಿಯುತ್ತಲೇ ಹೋಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ