ಆಧಾರ್ ಕಾರ್ಡ್ (Aadhaar Card) ಬಹಳ ಮುಖ್ಯವಾದ ದಾಖಲೆ ಎನಿಸಿದೆ. ಗುರುತಿನ ಚೀಟಿಯಾಗಿಯೂ, ವಿಳಾಸ ಸಾಕ್ಷ್ಯವಾಗಿಯೂ (Address Proof) ಅದು ಅಗತ್ಯ ದಾಖಲೆ. ಬ್ಯಾಂಕ್ ಖಾತೆ ತೆರೆಯಲು, ಪ್ಯಾನ್ ಕಾರ್ಡ್ ಸಕ್ರಿಯವಾಗಲು, ಸಿಮ್ ಕಾರ್ಡ್ ಪಡೆಯಲು, ಸರ್ಕಾರಿ ಯೋಜನೆಗಳನ್ನು ಪಡೆಯಲು ಹೀಗೆ ಬಹಳಷ್ಟು ಕೆಲಸ ಮತ್ತು ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಅತ್ಯಗತ್ಯ. ಸಾಕಷ್ಟು ಕಡೆ ನಾವು ಆಧಾರ್ ಕಾರ್ಡ್ ಅನ್ನು ಬಳಸುತ್ತೇವೆ. ಸಾಕಷ್ಟು ಕಡೆ ನಮ್ಮ ಆಧಾರ್ ದಾಖಲೆಗಳನ್ನು ಕೊಟ್ಟಿರುತ್ತೇವೆ. ಕೆಲವೊಮ್ಮೆ ನಮಗೆ ಗೊತ್ತಿಲ್ಲದೆಯೋ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿಯೂ ಆಧಾರ್ ಅನ್ನು ದುರುಪಯೋಗಿಸಿಕೊಂಡಿರಲೂ ಬಹುದು.
ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲೆ ಬಳಕೆಯಾಗಿದೆ, ಯಾವ್ಯಾವುದಕ್ಕೆ ಲಿಂಕ್ ಆಗಿದೆ ಇವೆಲ್ಲವನ್ನೂ ತಿಳಿಯುವ ಮಾರ್ಗ ಇದ್ದೇ ಇದೆ. ಆಧಾರ್ ಅನ್ನು ರೂಪಿಸಿರುವ ಮತ್ತು ನಿರ್ವಹಿಸುವ ಯುಐಡಿಎಐ ಬಳಿ ಆಧಾರ್ ಹಿಸ್ಟರಿ ಎಂಬ ಟೂಲ್ ಇದೆ. ಯುಐಡಿಎಐ ವೆಬ್ಸೈಟ್ಗೆ ಹೋದರೆ ಈ ಸಾಧನ ಬಳಸಿ ಆಧಾರ್ನ ಹಿಂದಿನ ಮತ್ತು ಈಗಿನ ಬಳಕೆಯ ಇತಿಹಾಸವನ್ನು ತಿಳಿಯಬಹುದು.
ಇದನ್ನೂ ಓದಿ: ಸಂಬಳ ಅಥವಾ ಆದಾಯ ಹೆಚ್ಚಾದರೆ, ಸಾಲ ತೀರಿಸಬೇಕಾ, ಹೂಡಿಕೆ ಹೆಚ್ಚಿಸಬೇಕಾ? ಯಾವುದು ಉತ್ತಮ ಆಯ್ಕೆ?
ಆಧಾರ್ ಕಾರ್ಡ್ ಹಿಸ್ಟರಿಯಲ್ಲಿರುವ ಮಾಹಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ. ಯಾವುದಾದರೂ ತಪ್ಪಾದ ದಾಖಲೆಗೆ ನಿಮ್ಮ ಅಧಾರ್ ಕಾರ್ಡ್ ಲಿಂಕ್ ಆಗಿದೆಯಾ ಗಮನಿಸಿ. ನಿಮ್ಮ ಆಧಾರ್ ಕಾರ್ಡ್ ನೀವಲ್ಲದೇ ಬೇರೆ ಯಾರಾದರೂ ಬಳಸಿದ್ದಾರಾ ನೋಡಿ. ಇಂಥ ವ್ಯತ್ಯಾಸ ಕಂಡು ಬಂದರೆ ಟೋಲ್ ಫ್ರೀ ನಂಬರ್ 1947 ಅಥವಾ help@uidai.gov.in ಇಮೇಲ್ ಮೂಲಕ ಯುಐಡಿಎಐ ಅನ್ನು ಸಂಪರ್ಕಿಸಿ ಮಾಹಿತಿ ನೀಡಬಹುದು.
ಇದನ್ನೂ ಓದಿ: ಗೃಹಸಾಲಕ್ಕೆ ಡೌನ್ಪೇಮೆಂಟ್ ಎಷ್ಟು? ಇಎಂಐ ಹೊರೆ ಕಡಿಮೆ ಮಾಡುವ ಉಪಾಯ ಏನು?
ಅಥವಾ ನಿಮ್ಮ ಆಧಾರ್ ಮಾಹಿತಿಯಲ್ಲಿ ತಪ್ಪು ಸೇರಿಕೊಂಡಿದ್ದರೆ ಕೂಡಲೇ ಆಧಾರ್ ಕೇಂದ್ರಕ್ಕೆ ಹೋಗಿ ಸರಿಪಡಿಸಿ.
ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿರುವುದರಿಂದ ಅದನ್ನು ಹಾಗೂ ಅದರಲ್ಲಿರುವ ಮಾಹಿತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದೂ ಬಹಳ ಮುಖ್ಯ. ನಿಮ್ಮ ಕೈಯಲ್ಲೇ ಅದರ ಸುರಕ್ಷತೆಗೆ ಸಾಧನ ಇರುವಾಗ ಅದರ ಪ್ರಯೋಜನ ಪಡೆಯಲು ಹಿಂದೆ ಮುಂದೆ ನೋಡಬೇಡಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:48 pm, Thu, 31 August 23