Money Tricks: ಹಣ ಉಳಿತಾಯಕ್ಕೆ ಈ ಉಪಾಯಗಳು ಬೆಸ್ಟ್; ಭವಿಷ್ಯ ಭದ್ರ ಮಾಡಿಕೊಳ್ಳುವ ಟ್ರಿಕ್ಸ್ ಇವು

|

Updated on: Nov 05, 2023 | 4:56 PM

Financial Management Tips: ಸರ್ಕಾರಿ ನೌಕರಿಯಾದರೆ ನಿಯಮಿತವಾಗಿ ಪಿಂಚಣಿ ಬರುತ್ತದೆ. ಇತರರು ತಮ್ಮ ಪಿಂಚಣಿಗೆ ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಇವತ್ತಿನದ್ದು ಇವತ್ತಿಗೆ, ನಾಳೆಯದ್ದು ನಾಳೆಗೆ ಎನ್ನೋ ಭ್ರಮೆಯಲ್ಲಿದ್ದರೆ ನಾಳೆಯ ಪಾಲು ಇವತ್ತಿನ ದುರಂತಕ್ಕೆ ಖರ್ಚಾಗಿ ಹೋಗಿರುತ್ತದೆ. ಈ ದುಃಸ್ಥಿತಿ ತಪ್ಪಿಸಲು ಹಣಕಾಸು ಯೋಜನೆ ಬಹಳ ಮುಖ್ಯ.

Money Tricks: ಹಣ ಉಳಿತಾಯಕ್ಕೆ ಈ ಉಪಾಯಗಳು ಬೆಸ್ಟ್; ಭವಿಷ್ಯ ಭದ್ರ ಮಾಡಿಕೊಳ್ಳುವ ಟ್ರಿಕ್ಸ್ ಇವು
ಹಣ
Follow us on

ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿರುವ ಸಂಪನ್ಮೂಲವೆಂದರೆ ಅದು ಹಣ. ಕೈ ಬಲ ಇರುವವರೆಗೂ, ಮಾನಸಿಕವಾಗಿ ಶಕ್ತರಾಗಿರುವವರೆಗೂ ಕೆಲಸ ಮಾಡಲು ಮತ್ತು ವ್ಯವಹಾರ ಮಾಡಲು ಸಾಧ್ಯ. ಆ ಬಳಿಕ ನಮ್ಮ ಹಣ ಸಂಪಾದನೆ (money earning) ನಿಂತುಹೋಗುತ್ತದೆ. ನಿವೃತ್ತಿಗೆ ಮುನ್ನ ಸಾಕಷ್ಟು ಹಣ ಕೂಡಿಡದೇ ಹೋದರೆ ಮುಂದಿನ ಜೀವನ ಇಕ್ಕಟ್ಟಿಗೆ ಸಿಲುಕುತ್ತದೆ. ಸರ್ಕಾರಿ ನೌಕರಿಯಾದರೆ ನಿಯಮಿತವಾಗಿ ಪಿಂಚಣಿ ಬರುತ್ತದೆ. ಇತರರು ತಮ್ಮ ಪಿಂಚಣಿಗೆ ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಇವತ್ತಿನದ್ದು ಇವತ್ತಿಗೆ, ನಾಳೆಯದ್ದು ನಾಳೆಗೆ ಎನ್ನೋ ಭ್ರಮೆಯಲ್ಲಿದ್ದರೆ ನಾಳೆಯ ಪಾಲು ಇವತ್ತಿನ ದುರಂತಕ್ಕೆ ಖರ್ಚಾಗಿ ಹೋಗಿರುತ್ತದೆ. ಈ ದುಃಸ್ಥಿತಿ ತಪ್ಪಿಸಲು ಹಣಕಾಸು ಯೋಜನೆ ಬಹಳ ಮುಖ್ಯ.

ಈ ಮೂರು ಅಂಶ ಬಹಳ ಮುಖ್ಯ

  1. ಹಣ ಸಂಪಾದನೆ
  2. ಹಣ ಉಳಿತಾಯ
  3. ಹಣ ಹೂಡಿಕೆ

ಇದನ್ನೂ ಓದಿ: ಬ್ಯಾಂಕ್​ನಲ್ಲಿ ಸಾಲ ಮಾಡಿ, ಇಎಂಐ ಕಟ್ಟಲು ಆಗುತ್ತಿಲ್ಲವೆಂದರೆ, ಈ ಕೆಲ ಸಲಹೆಗಳನ್ನು ಪಾಲಿಸಿ, ನಿಮ್ಮ ಕ್ರೆಡಿಟ್ ಸ್ಕೋರ್ ನಶಿಸದಂತೆ ನೋಡಿಕೊಳ್ಳಿ

ಹಣ ಸಂಪಾದನೆ ಸೂತ್ರ

ನಿಮ್ಮ ವೃತ್ತಿಜೀವನದಲ್ಲಿ ಎಷ್ಟು ಉನ್ನತಿಗೆ ಏರಲು ಸಾಧ್ಯ, ಅದಕ್ಕೆ ಏನೇನು ಹೆಚ್ಚುವರಿ ಕೌಶಲ್ಯ ಬೇಕು ಎಂಬುದನ್ನು ಅವಲೋಕಿಸಿ, ಅದರ ಬೆಳವಣಿಯತ್ತ ಗಮನ ಹರಿಸಿ.

ಇದರ ಜೊತೆಗೆ, ಒಂದೇ ಆದಾಯಕ್ಕೆ ಅವಲಂಬಿತರಾಗದೇ, ಹೆಚ್ಚುವರಿ ಆದಾಯ ಮೂಲ ಸೃಷ್ಟಿಸಲು ಪ್ರಯತ್ನಿಸಿ. ಮನೆ ಕಟ್ಟಿ ಬಾಡಿಗೆಗೆ ಕೊಡುವುದೋ, ಇಬ್ಯುಸಿನೆಸ್, ಷೇರು ಡಿವಿಡೆಂಡ್ ಹೀಗೆ ಆದಾಯ ಬರುವಂತೆ ಮಾಡಬಹುದು.

ಹಣ ಉಳಿತಾಯ ಬಹಳ ಮುಖ್ಯ…

ಹಣ ಸಂಪಾದನೆ ಜೊತೆಗೆ ಹಣದ ಉಳಿತಾಯ ಬಹಳ ಮುಖ್ಯ. ನಾವು ಉಳಿಸುವ ಪ್ರತಿಯೊಂದು ಹಣವೂ ಅಷ್ಟೇ ಸಂಪಾದನೆಗೆ ಸಮ. ನಿಮ್ಮ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ.

ಆರೋಗ್ಯಯುತ ಜೀವನಶೈಲಿ ಅನುಸರಿಸಿ ರೋಗಗಳಿಂದ ಸಾಧ್ಯವಾದಷ್ಟೂ ದೂರವಾಗಿರಿ. ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ. ಒಂದು ದೊಡ್ಡ ರೋಗ ದಾಳಿ ಮಾಡಿಹೋದರೆ ನಮ್ಮಿಡೀ ಸೇವಿಂಗ್ ಹಣ ಮಾಯವಾಗಿ ಹೋಗುತ್ತದೆ. ಆದ್ದರಿಂದ ಆರೋಗ್ಯಯುವ ಜೀವನ ಶೈಲಿ ಮತ್ತು ಹೆಲ್ತ್ ಇನ್ಷೂರೆನ್ಸ್ ಅಗತ್ಯ.

ಇದನ್ನೂ ಓದಿ: FIRE Model: ನಿಮ್ಮ ಜೀವನಕ್ಕೆ ಬೆಂಕಿ ಕಿಚ್ಚು; ಫೈರ್ ತಂತ್ರ ಅನುಸರಿಸಿ ಬೇಗ ನಿವೃತ್ತಿ ಪಡೆದು ಆರಾಮವಾಗಿರಿ

ನಿಮ್ಮ ತಿಂಗಳ ಎಲ್ಲಾ ವೆಚ್ಚಗಳನ್ನು ಬರೆದಿಡಿ. ಯಾವುದಕ್ಕೆ ಹೆಚ್ಚು ವ್ಯಯವಾಗುತ್ತದೆ ಎಂಬುದನ್ನು ಗಮನಿಸಿ. ಹೋಟೆಲ್​ಗೆ ಹೋಗುವುದನ್ನು ಕಡಿಮೆ ಮಾಡಿ. ಕಚೇರಿಗೆ ಹೋಗಲು ಸ್ವಂತ ವಾಹನದ ಬದಲು ನಡಿಗೆ ಮತ್ತು ಸಾರ್ವಜನಿಕ ಸಾರಿಗೆ ಬಳಸಿದರೆ ಹಣ ಉಳಿತಾಯದ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.

ಹಣ ಹೂಡಿಕೆ ಅತ್ಯಗತ್ಯ…

ನಿಮ್ಮ ಆದಾಯದಲ್ಲಿ ಶೇ. 20ರಷ್ಟಾದರೂ ಹಣವನ್ನು ಹೂಡಿಕೆಗೆ ಉಪಯೋಗಿಸಬೇಕು. ಇನ್ನೂ ಹೆಚ್ಚು ಸಾಧ್ಯವಿದ್ದರೆ ಉತ್ತಮ. ಈಕ್ವಿಟಿ, ಡೆಟ್ ಮ್ಯುಚುವಲ್ ಫಂಡ್​ಗಳಲ್ಲಿ ನಿಮ್ಮ ಹೂಡಿಕೆ ವ್ಯಾಪಿಸಿರಲಿ. ಬರೀ ಈಕ್ವಿಟಿಯಲ್ಲಿ ಮಾತ್ರ ಹಣ ಹಾಕುವುದು ರಿಸ್ಕ್. ನಿಶ್ಚಿತ ಮತ್ತು ಗ್ಯಾರಂಟಿ ರಿಟರ್ನ್ ಕೊಡುವ ಡೆಟ್ ಫಂಡ್​ಗಳೂ ಮುಖ್ಯ. ಇದರಿಂದ ಸಮತೋಲನ ಸಾಧಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ