AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Money Tricks: ಎಷ್ಟು ದುಡಿದರೂ ಹಣ ನಿಲ್ಲುತ್ತಿಲ್ಲವಾ? ಈ 50-30-20 ಟ್ರಿಕ್ಸ್ ಉಪಯೋಗಿಸಿ

Learn to control expense using this 50-30-20 rule: ಹಣಕಾಸು ಕೈಲಿ ನಿಲ್ಲದೇ ಇರುವ ಸಮಸ್ಯೆಯು ಶೇ. 50ಕ್ಕಿಂತಲೂ ಹೆಚ್ಚಿನ ಜನರನ್ನು ಕಾಡುತ್ತಿದೆ. ಸರಿಯಾದ ಪ್ಲಾನಿಂಗ್ ಇಲ್ಲದೇ ಜೀವನ ನಡೆಸುವುದರ ಫಲ ಇದು. ನಿಮ್ಮ ಆದಾಯದಲ್ಲಿ ಯಾವುದಕ್ಕೆ ಎಷ್ಟು ಮಿತಿಯಲ್ಲಿ ಖರ್ಚು ಮಾಡಬೇಕು, ಯಾವುದಕ್ಕೆ ಹೆಚ್ಚು ಆದ್ಯತೆ ಕೊಡಬೇಕು ಎನ್ನುವುದಕ್ಕೆ 50-30-20 ಸೂತ್ರ ಬಳಸಬಹುದು.

Money Tricks: ಎಷ್ಟು ದುಡಿದರೂ ಹಣ ನಿಲ್ಲುತ್ತಿಲ್ಲವಾ? ಈ 50-30-20 ಟ್ರಿಕ್ಸ್ ಉಪಯೋಗಿಸಿ
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 16, 2026 | 10:02 PM

Share

ನೀವು ಎಷ್ಟೇ ಹಣ ಸಂಪಾದಿಸಿದರೂ ಅದು ಸುಖಾಸುಮ್ಮನೆ ಖರ್ಚಾಗಿ ಹೋಗುತ್ತಿದೆಯಾ? ಅರ್ಧಕ್ಕಿಂತ ಹೆಚ್ಚಿನ ಜನರ ಸಮಸ್ಯೆ ಇದು. ಯಾವುದೋ ಬಹಳ ದೊಡ್ಡ ವೆಚ್ಚ ಹಣವೆಲ್ಲಾ ಖರ್ಚಾಗಿ ಹೋಗುವುದು ಬೇರೆ, ಆದರೆ ದೈನಂದಿನ ಸಾಧಾರಣ ಜಂಜಾಟಗಳಿಂದಲೇ ಹಣ ಖರ್ಚು ಮಾಡಿಕೊಳ್ಳುವುದು ಬೇರೆ. ಅವಗಡಗಳು ನಮ್ಮ ಕೈಲಿರುವುದಿಲ್ಲ. ಆದರೆ ಇತರ ಹಲವು ವೆಚ್ಚಗಳ ನಿಯಂತ್ರಣ (Expense control) ನಮ್ಮ ಕೈಲಿರುತ್ತದೆ. ಸ್ವಲ್ಪ ಯೋಜಿಸಿದರೆ ವೆಚ್ಚಗಳ ಮೇಲೆ ಸುಲಭವಾಗಿ ಕಡಿವಾಣ ಹಾಕಬಹುದು. ಹೇಗೆ ಮಾಡಬೇಕೆಂದು ಗೊಂದಲ ಇದ್ದರೆ 50-30-20 ರೂಲ್ ನೆನಪಿನಲ್ಲಿಡಿ.

ಏನಿದು 50-30-20 ನಿಯಮ?

ನಿಮ್ಮ ಆದಾಯವನ್ನು ಹೇಗೆ ವ್ಯಯಿಸಬೇಕು, ಯಾವುದಕ್ಕೆ ಉಪಯೋಗಿಸಬೇಕು ಎಂದು ವರ್ಗೀಕರಿಸಲು ಈ 50-30-20 ನಿಯಮ ಬಳಸಿ. ಅನಿವಾರ್ಯ ವೆಚ್ಚಗಳಿಗೆ ಶೇ. 50, ತುಸು ಐಷಾರಾಮ್ಯಕ್ಕೆ ಶೇ. 30, ಹಾಗೂ ಉಳಿತಾಯ ಮತ್ತು ಹೂಡಿಕೆಗೆ ಶೇ. 20 ಎಂದು ಒಂದು ಚೌಕಟ್ಟು ಹಾಕಿಕೊಳ್ಳಿ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಉಳಿತಾಯ ಮತ್ತು ಹೂಡಿಕೆಗೆಂದು ಶೇ. 20 ಮೀಸಲಿಟ್ಟಿರುವ ಹಣ ಯಾವತ್ತೂ ಕಡಿಮೆ ಆಗಬಾರದು.

ಇದನ್ನೂ ಓದಿ: 1 ಲಕ್ಷ ರೂನಿಂದ 2.71 ಕೋಟಿ ರೂ; ಭಾರತದ ಅತ್ಯಂತ ಹಳೆಯ ಫಂಡ್​ನಿಂದ ಭರ್ಜರಿ ಆದಾಯ

ಇಲ್ಲಿ ಶೇ. 50ರ ಗುಂಪಿನಲ್ಲಿರುವ ಅನಿವಾರ್ಯ ವೆಚ್ಚಗಳಲ್ಲಿ ಮನೆ ಬಾಡಿಗೆ, ಶಾಲಾ ಫೀಸ್, ದಿನಸಿ ವಸ್ತು, ವಿದ್ಯುತ್, ನೀರು, ಗ್ಯಾಸ್ ಬಿಲ್​ಗಳು, ಕಚೇರಿಗೆ ಓಡಾಡುವ ವೆಚ್ಚ, ಇನ್ಷೂರೆನ್ಸ್, ಸಾಲದ ಇಎಂಇ ಇತ್ಯಾದಿ ಸೇರುತ್ತವೆ. ಇವಿಷ್ಟೂ ಅನಿವಾರ್ಯ ವೆಚ್ಚಗಳು ನಿಮ್ಮ ಆದಾಯದ ಶೇ. 50 ಮೀರದಂತೆ ನೋಡಿಕೊಳ್ಳಬೇಕು. ಸಾಲ ತೆಗೆದುಕೊಂಡಾಗ ಇಎಂಐ ಕೂಡ ಇದೇ ವ್ಯಾಪ್ತಿಯಲ್ಲಿ ಬರಬೇಕು. ಈ ಅನಿವಾರ್ಯ ಖರ್ಚುಗಳು ಶೇ. 50ಕ್ಕಿಂತ ಕಡಿಮೆ ಇದ್ದರೆ, ಅದರಲ್ಲಿ ಮಿಗುವ ಹಣವನ್ನು ವ್ಯಯಿಸಬೇಡಿ.

ಇನ್ನು ಎರಡನೇ ವರ್ಗ ಅಗತ್ಯವಲ್ಲದ ಮತ್ತು ಐಷಾರಾಮಿ ಎನಿಸುವ ಖರ್ಚುಗಳು. ಇದರಲ್ಲಿ ನೀವು ಹೋಟೆಲ್​ಗೆ ಹೋಗಿ ತಿನ್ನುವುದು, ಆನ್​ಲೈನ್ ಶಾಪಿಂಗ್ ಮಾಡುವುದು, ಒಟಿಟಿ ಸಬ್​ಸ್ಕ್ರಿಪ್ಷನ್, ಪ್ರವಾಸ, ಹೊಸ ಗ್ಯಾಜೆಟ್ ಖರೀದಿ, ವಾಹನ ಖರೀದಿ, ಸಿನಿಮಾ ಇತ್ಯಾದಿ ಖರ್ಚುಗಳು ಇದರಲ್ಲಿ ಬರುತ್ತವೆ. ಈ ವಿಭಾಗದಲ್ಲಿ ನೀವು ಎಷ್ಟು ಸಾಧ್ಯವೋ ಅಷ್ಟು ಖರ್ಚು ಕಡಿಮೆ ಮಾಡಲು ಯತ್ನಿಸಬಹುದು.

ಇದನ್ನೂ ಓದಿ: 2010ರಿಂದ ತಿಂಗಳಿಗೆ 15,000 ರೂ ಹೂಡಿಕೆ; ಇವತ್ತು ನೀವು ಕೋಟ್ಯಾಧಿಪತಿ; ಸಿಂಪಲ್ 15x15x15 ಫಾರ್ಮುಲಾದಿಂದ ಸಾಧ್ಯ

ನೀವು ಖರ್ಚು ಕಡಿಮೆ ಮಾಡಿ ಉಳಿಸಿದ ಹಣವನ್ನು ಹೂಡಿಕೆಗೆ ವರ್ಗಾಯಿಸಬಹುದು. ಅದಕ್ಕಿಂತ ಮುನ್ನ ಒಂದು ತುರ್ತು ನಿಧಿ ಮಾಡಿ ಅದರಲ್ಲಿ ನಿಮ್ಮ ಮಾಸಿಕ ವೆಚ್ಚದ ಆರರಷ್ಟು ಹಣವನ್ನು ಕೂಡಿಡಬೇಕು. ಇದು ನಿಮ್ಮ ಹಣಕಾಸು ಸಂಕಷ್ಟಕ್ಕೆ ಶಾಕ್ ಅಬ್ಸಾರ್ಬರ್ ರೀತಿ ಕೆಲಸ ಮಾಡುತ್ತದೆ. ಎಮರ್ಜೆನ್ಸಿ ಫಂಡ್ ಭರ್ತಿಯಾಗಿ ನಂತರ ಉಳಿಯುವ ಹಣವನ್ನು ಹೂಡಿಕೆಗೆ ಬಳಸಬಹುದು. ಹೀಗೆ ನೀವು ನಿಮ್ಮ ಆದಾಯದಲ್ಲಿ ಹೂಡಿಕೆಗೆಂದು ನಿಗದಿ ಮಾಡಿಕೊಂಡಿರುವ ಶೇ. 20ರ ಪ್ರಮಾಣವನ್ನು ಶೇ. 30, ಶೇ. 40ಕ್ಕೆ ಹೆಚ್ಚಿಸಿದರೆ ಇನ್ನೂ ಗ್ರೇಟ್. ಇದು ಸಾಧ್ಯವಾಗಬೇಕಾದರೆ ನಿಮ್ಮ ಲೈಫ್​ಸ್ಟೈಲ್ ಬದಲಾವಣೆ ಆಗಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆಮೆಗತಿಯ ಬ್ಯಾಟಿಂಗ್‌; ಬಾಬರ್​ ಆಝಂಗೆ ಸ್ಟ್ರೈಕ್ ನೀಡದ ಸ್ಮಿತ್
ಆಮೆಗತಿಯ ಬ್ಯಾಟಿಂಗ್‌; ಬಾಬರ್​ ಆಝಂಗೆ ಸ್ಟ್ರೈಕ್ ನೀಡದ ಸ್ಮಿತ್
ಗಿಲ್ಲಿ ನಟನ ಹುಟ್ಟೂರಲ್ಲಿ ಬ್ಯಾನರ್, ಕಟೌಟ್: ಹಳ್ಳಿ ಮಂದಿ ಖುಷಿ ನೋಡಿ..
ಗಿಲ್ಲಿ ನಟನ ಹುಟ್ಟೂರಲ್ಲಿ ಬ್ಯಾನರ್, ಕಟೌಟ್: ಹಳ್ಳಿ ಮಂದಿ ಖುಷಿ ನೋಡಿ..
ಲಕ್ಕುಂಡಿಯಲ್ಲಿ ಮೊದಲ ದಿನದ ಉತ್ಖನನ ಅಂತ್ಯ: ಅಧಿಕಾರಿ ಹೇಳಿದ್ದೇನು?
ಲಕ್ಕುಂಡಿಯಲ್ಲಿ ಮೊದಲ ದಿನದ ಉತ್ಖನನ ಅಂತ್ಯ: ಅಧಿಕಾರಿ ಹೇಳಿದ್ದೇನು?
ಡಿಕೆಶಿಗೂ ಮೊದಲೇ ರಾಹುಲ್ ಗಾಂಧಿ ಭೇಟಿಯಾದ ಕೆಜೆ ಜಾರ್ಜ್
ಡಿಕೆಶಿಗೂ ಮೊದಲೇ ರಾಹುಲ್ ಗಾಂಧಿ ಭೇಟಿಯಾದ ಕೆಜೆ ಜಾರ್ಜ್
ಬಸ್​​ಗೆ ಹಿಂದಿನಿಂದ ಬೊಲೆರೋ ಪಿಕ್-ಅಪ್ ಡಿಕ್ಕಿ: ಚಾಲಕ ಬದುಕಿದ್ದೇ ಪವಾಡ
ಬಸ್​​ಗೆ ಹಿಂದಿನಿಂದ ಬೊಲೆರೋ ಪಿಕ್-ಅಪ್ ಡಿಕ್ಕಿ: ಚಾಲಕ ಬದುಕಿದ್ದೇ ಪವಾಡ
ಇದು ಯಾವುದೋ ಜಾತ್ರೆಯಲ್ಲ: ಹೋರಿ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ
ಇದು ಯಾವುದೋ ಜಾತ್ರೆಯಲ್ಲ: ಹೋರಿ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ
‘ಅನ್ನ ಕದ್ದು ತಿಂದಿದ್ದೆ’; ಗಿಲ್ಲಿಯ ಹಳೆಯ ಕಥೆ ಕೇಳಿ ರಕ್ಷಿತಾ ಕಣ್ಣೀರು
‘ಅನ್ನ ಕದ್ದು ತಿಂದಿದ್ದೆ’; ಗಿಲ್ಲಿಯ ಹಳೆಯ ಕಥೆ ಕೇಳಿ ರಕ್ಷಿತಾ ಕಣ್ಣೀರು
ಜ್ವರ ಬಂದು ಬಾಯಿ ಕೆಟ್ಟಿತ್ತು: ಕಾಲ್ ಸೂಪ್, ನಾಟಿ ಚಿಕನ್ ಚಪ್ಪರಿಸಿದ ಸಿಎಂ
ಜ್ವರ ಬಂದು ಬಾಯಿ ಕೆಟ್ಟಿತ್ತು: ಕಾಲ್ ಸೂಪ್, ನಾಟಿ ಚಿಕನ್ ಚಪ್ಪರಿಸಿದ ಸಿಎಂ
ಬೈಕ್​​ಗೆ ಗುದ್ದಿದ ಕಾರು: 10 ಅಡಿ ಎತ್ತರಕ್ಕೆ ಹಾರಿಬಿದ್ದ ಸವಾರ!
ಬೈಕ್​​ಗೆ ಗುದ್ದಿದ ಕಾರು: 10 ಅಡಿ ಎತ್ತರಕ್ಕೆ ಹಾರಿಬಿದ್ದ ಸವಾರ!
ಸ್ಟೈಲಿಶ್ ಆಗಿ ಗಿಲ್ಲಿಗೆ ಆಲ್​ ದಿ ಬೆಸ್ಟ್ ಹೇಳಿದ ಶಿವಣ್ಣ; ವಿಡಿಯೋ ನೋಡಿ
ಸ್ಟೈಲಿಶ್ ಆಗಿ ಗಿಲ್ಲಿಗೆ ಆಲ್​ ದಿ ಬೆಸ್ಟ್ ಹೇಳಿದ ಶಿವಣ್ಣ; ವಿಡಿಯೋ ನೋಡಿ