ಭಾರತದ ಅತಿದೊಡ್ಡ ವಿಮಾ ಸಂಸ್ಥೆಯಾದ ಎಲ್ಐಸಿ (LIC) ಇದೀಗ ಮಾರುಕಟ್ಟೆ ಜೋಡಿತವಾದ (Unit linked policy) ಹೊಸ ಇನ್ಷೂರೆನ್ಸ್ ಸ್ಕೀಮ್ ಹೊರತಂದಿದೆ. ಎಲ್ಐಸಿ ಇಂಡೆಕ್ಸ್ ಪ್ಲಸ್ ಪಾಲಿಸಿ (LIC Index Plus Policy) ಮೊನ್ನೆ ಸೋಮವಾರ (ಫೆ. 5) ಬಿಡುಗಡೆ ಆಗಿದೆ. ಇದು ಜೀವ ವಿಮೆ ಮತ್ತು ಉಳಿತಾಯ ಒದಗಿಸುವ ಯೋಜನೆಯಾಗಿದ್ದು, ಷೇರುಪೇಟೆ ಲಾಭ ತಂದುಕೊಡುತ್ತದೆ. 90 ದಿನ ಮಗುವಿನಿಂದ ಹಿಡಿದು 60 ವರ್ಷ ಹಿರಿಯವರೆಗೆ ಈ ಪಾಲಿಸಿ ಪಡೆಯಬಹುದು. ಕನಿಷ್ಠ ಖಾತ್ರಿ ಮೊತ್ತ ಅಥವಾ ಬೇಸಿಕ್ ಸಮ್ ಅಷ್ಯೂರ್ಡ್ (Basi sum assured) ಎಷ್ಟು ಎಂಬುದರ ಆಧಾರದ ಮೇಲೆ ಪಾಲಿಸಿ ಪಡೆಯಲು ಗರಿಷ್ಠ ವಯಸ್ಸು 50-60 ವರ್ಷ ಇರುತ್ತದೆ.
ನಿಮ್ಮ ಪಾಲಿಸಿಯ ಎಲ್ಲಾ ಹಣವನ್ನು ಪೂರ್ಣವಾಗಿ ಷೇರು ಮಾರುಕಟ್ಟೆಗೆ ತೊಡಗಿಸಲಾಗುತ್ತದೆ. ಇದಕ್ಕೆ ಎರಡು ಆಯ್ಕೆಗಳನ್ನು ಮುಂದಿಡಲಾಗಿದೆ. ನಿಫ್ಟಿ50 (ಫ್ಲೆಕ್ಸಿ ಸ್ಮಾರ್ಟ್ ಗ್ರೋತ್ ಫಂಡ್) ಮತ್ತು ನಿಫ್ಟಿ100 (ಫ್ಲೆಕ್ಸಿ ಗ್ರೋತ್ ಫಂಡ್) ಇಂಡೆಕ್ಸ್ ಮ್ಯುಚುವಲ್ ಫಂಡ್ಗಳಲ್ಲಿ ಯಾವುದಾದರೊಂದನ್ನು ಆಯ್ದುಕೊಳ್ಳಬೇಕು. ನಿಮ್ಮ ಪ್ರೀಮಿಯಮ್ ಹಣ ಅದೇ ಫಂಡ್ನಲ್ಲಿ ಹೂಡಿಕೆ ಮಾಡಲಾಗುತ್ತದೆ.
ಇದನ್ನೂ ಓದಿ: ಸಾವರನ್ ಗೋಲ್ಡ್ ಬಾಂಡ್ ಫೆ. 12ರಿಂದ 16ರವರೆಗೆ; ಇದು ಈ ವರ್ಷದ ಕೊನೆಯ ಸರಣಿ
ಪಾಲಿಸಿ ಅವಧಿ ಕನಿಷ್ಠ 10ರಿಂದ 15 ವರ್ಷ ಇರುತ್ತದೆ. ಗರಿಷ್ಠ ಅವಧಿ 25 ವರ್ಷ ಆಗಿರುತ್ತದೆ. ಇಷ್ಟು ವರ್ಷದಲ್ಲಿ ಇಂಡೆಕ್ಸ್ ಫಂಡ್ನಲ್ಲಿ ಮಾಡಿದ ಹೂಡಿಕೆ ಎಷ್ಟು ಬೆಳೆದಿರುತ್ತದೆ ಅಷ್ಟು ಮೊತ್ತದ ರಿಟರ್ನ್ ನಿಮಗೆ ಸಿಗುತ್ತದೆ.
ಈ ಇಂಡೆಕ್ಸ್ ಪ್ಲಸ್ ಪಾಲಿಸಿಯಲ್ಲಿ ಕನಿಷ್ಠ ಪ್ರೀಮಿಯಮ್ ಮೊತ್ತ ವರ್ಷಕ್ಕೆ 30,000 ರೂ ಇದೆ. ನೀವು ವರ್ಷಕ್ಕೆ ಒಮ್ಮೆ ಪ್ರೀಮಿಯಮ್ ಪಾವತಿಸಬಹುದು. ಅಥವಾ ತಿಂಗಳಿಗೊಮ್ಮೆ 2,500 ರೂ ಪ್ರೀಮಿಯಮ್ ಕಟ್ಟಬಹುದು. ಮೂರು ತಿಂಗಳಿಗೆ, ಆರು ತಿಂಗಳಿಗೆ ಬೇಕಾದರೂ ಪ್ರೀಮಿಯಮ್ ಪಾವತಿಸುವ ಆಯ್ಕೆ ಪಡೆಯಬಹುದು.
ಇದನ್ನೂ ಓದಿ: ಇನ್ನೊಂದು ವರ್ಷ ಸಮಯಾವಕಾಶ ಇರುವ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ನ ಲಾಭ ತಿಳಿಯಿರಿ
ಮೇಲೆ ಹೇಳಿದ್ದು ಕನಿಷ್ಠ ಪ್ರೀಮಿಯಮ್ ಮೊತ್ತ. ನೀವು ಇಚ್ಛಿಸಿದಲ್ಲಿ ಎಷ್ಟು ಬೇಕಾದರೂ ಪ್ರೀಮಿಯಮ್ ಮೊತ್ತ ಆಯ್ಕೆ ಮಾಡಿಕೊಳ್ಳಬಹುದು. ಮೆಚ್ಯೂರಿಟಿ ಅದ ಬಳಿಕ ಫಂಡ್ ಹೂಡಿಕೆ ಬೆಳೆದಿರುವಷ್ಟು ಮೊತ್ತ ನಿಮಗೆ ಸಿಗುತ್ತದೆ. ಜೊತೆಗೆ ಆಕ್ಸಿಡೆಂಟ್ ಡೆತ್ ಫೀಚರ್ ಇದೆ. ಅಪಘಾತದಿಂದ ಮೃತಪಟ್ಟರೆ ವಾರಸುದಾರರಿಗೆ ಪರಿಹಾರ ಸಿಗುತ್ತದೆ. ಈ ಪಾಲಿಸಿಯನ್ನು ಆನ್ಲೈನ್ನಲ್ಲೇ ಪಡೆಯಬಹುದಾಗಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ