LIC Jeevan Dhara: ಬೇಗನೇ ನಿವೃತ್ತಿ ಜೀವನಕ್ಕೆ ಕಾಲಿಡಬೇಕೆ? ಇಲ್ಲಿದೆ ಹೊಸ ಎಲ್​ಐಸಿ ಜೀವನ್ ಧಾರಾ ಪಾಲಿಸಿ

Insurance policy for early retirement plan: ಎಲ್​​ಐಸಿ ಜೀವನ್ ಧಾರಾ-2 ಇನ್ಷೂರೆನ್ಸ್ ಪ್ಲಾನ್ ಬೇಗನೇ ನಿವೃತ್ತರಾಗಲು ಬಯಸುವ ಅಥವಾ ತತ್​ಕ್ಷಣದಿಂದಲೇ ರಿಟರ್ನ್ ಪಡೆಯಲು ಬಯಸುವ ಜನರಿಗೆ ಹೇಳಿ ಮಾಡಿಸಿದೆ. 11 ವಿವಿಧ ಆ್ಯನುಟಿ ಪೇಮೆಂಟ್​ನ ಆಯ್ಕೆಗಳಿವೆ. ಮಾಸಿಕ ಕಂತುಗಳಲ್ಲಿ ಪಾವತಿ ಪಡೆಯಬಹುದು, ಮೂರು ತಿಂಗಳಿಗೆ, ಆರು ತಿಂಗಳಿಗೆ ಅಥವಾ ವರ್ಷಕ್ಕೆ ಒಮ್ಮೆ ರಿಟರ್ನ್ ಬರುವಂತೆ ಆಯ್ದುಕೊಳ್ಳಬಹುದು. ಡಿಫರ್ಮೆಂಟ್ ಪೀರಿಯಡ್ ಅಥವಾ ಮುಂದೂಡಿಕೆ ಅವಧಿ 15 ವರ್ಷಗಳವರೆಗೂ ಇದೆ.

LIC Jeevan Dhara: ಬೇಗನೇ ನಿವೃತ್ತಿ ಜೀವನಕ್ಕೆ ಕಾಲಿಡಬೇಕೆ? ಇಲ್ಲಿದೆ ಹೊಸ ಎಲ್​ಐಸಿ ಜೀವನ್ ಧಾರಾ ಪಾಲಿಸಿ
ಎಲ್​​ಐಸಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 01, 2024 | 12:06 PM

60 ವರ್ಷದವರೆಗೂ ಕೆಲಸ ಮಾಡುವ ಮನಸು ಇಲ್ಲವಾ? ಕೆಲಸದ ಒತ್ತಡದಿಂದ ಮುಕ್ತಗೊಂಡು ಬೇಗನೇ ವಿಶ್ರಾಂತ ಜೀವನದ ಹಂತಕ್ಕೆ ಹೋಗಿ ನೆಮ್ಮದಿಯಾಗಿರುವ ಪ್ಲಾನ್ ಇದೆಯಾ? ಹಾಗಿದ್ದರೆ ಅದಕ್ಕೆ ಈಗಲೇ ಸಂಪೂರ್ಣ ಯೋಜನೆ ಹಾಕಿಕೊಳ್ಳಬೇಕು. ವಿವಿಧ ಮಾರ್ಗೋಪಾಯಗಳನ್ನು ಅವಲೋಕಿಸಬೇಕು. ಅದರಲ್ಲಿ ಎಲ್​ಐಸಿಯ ಹೊಸ ಜೀವನ್ ಧಾರಾ ಪಾಲಿಸಿಯೂ (LIC Jeevan Dhara-2 Policy) ಅಂಥ ಒಂದು ಆಯ್ಕೆ. ಬೇಗನೇ ನಿವೃತ್ತಿ ಬಯಸುವವರಿಗೆ ಈ ಪಾಲಿಸಿ ಅನುಕೂಲ ಎನಿಸಬಹುದು. ಜನವರಿ 22ರಂದು ಬಿಡುಗಡೆಯಾದ ಜೀವನ್ ಧಾರಾ-2 ವ್ಯಕ್ತಿಗತ ನಿವೃತ್ತಿ ಉಳಿತಾಯ ಪ್ಲಾನ್ ಆಗಿದೆ. ನಿಮ್ಮ ಇಚ್ಛೆಯ ಅವಧಿಯಲ್ಲಿ ನಿವೃತ್ತಿ ಪಾವತಿಗಳನ್ನು ಪಡೆಯಬಹುದು. 11 ರೀತಿಯ ಪಾವತಿ ಆಯ್ಕೆಗಳು ಇದರಲ್ಲಿ ಇವೆ.

ಎಲ್​​ಐಸಿ ಜೀವನ್ ಧಾರಾ-2 ಇನ್ಷೂರೆನ್ಸ್ ಪ್ಲಾನ್​ನ ಪ್ರಮುಖ ಅಂಶಗಳು

  • ವಿವಿಧ ರೀತಿಯ ಪಾವತಿ ಆಯ್ಕೆಗಳಿವೆ
  • ನಿಯಮಿತವಾಗಿ ಪ್ರೀಮಿಯಮ್ ಕಟ್ಟಬಹುದು, ಅಥವಾ ಏಕಕಾಲದ ಪ್ರೀಮಿಯಮ್ ಅವಕಾಶ ಇರುತ್ತದೆ.

ಇದನ್ನೂ ಓದಿ: ಹೊಸ ಎಲ್​ಐಸಿ ಅಮೃತ್​ಬಾಲ್ ಪಾಲಿಸಿ; ಮಕ್ಕಳಿಗೆಂದು ರೂಪಿಸಿರುವ ಲೈಫ್ ಇನ್ಷೂರೆನ್ಸ್ ಸ್ಕೀಮ್

  • ಒಬ್ಬ ವ್ಯಕ್ತಿಗೆ ಪಾವತಿ ಪಡೆಬಹುದು, ಅಥವಾ ದಂಪತಿ ಇದ್ದರೆ ಇಬ್ಬರೂ ಜಂಟಿಯಾಗಿ ಪಾವತಿ ಸೌಲಭ್ಯ ಪಡೆಯಬಹುದು.
  • 15 ವರ್ಷಗಳವರೆಗೆ ಡಿಫರ್ಮೆಂಟ್ ಪೀರಿಯಡ್​ನ ಅವಕಾಶ ಇರುತ್ತದೆ. ಅಂದರೆ ಪ್ರೀಮಿಯಮ್ ಪಾವತಿ ಅವಧಿ ಮುಗಿದು ನಿರ್ದಿಷ್ಟ ಅವಧಿಯ ಬಳಿಕ ಆ್ಯನುಟಿ ಪಾವತಿ ಪಡೆಯಲು ಆರಂಭಿಸಬಹುದು. ಪ್ರೀಮಿಯಮ್ ಕಟ್ಟುವ ಅವಧಿ ಇವತ್ತು ಮುಗಿದರೆ ತತ್​ಕ್ಷಣದಿಂದಲೇ ಆ್ಯನುಟಿ ಅಥವಾ ರಿಟರ್ನ್ ಪಡೆಯಲು ಆರಂಭಿಸಬಹುದು. ಅಥವಾ 15 ವರ್ಷಗಳ ಬಳಿಕ ರಿಟರ್ನ್ ಪಡೆಯಲು ಆರಂಭಿಸುವ ಆಯ್ಕೆ ಪಡೆಯಬಹುದು.
  • ನಿಮ್ಮ ಆ್ಯನುಟಿ ಪೇಮೆಂಟ್ ಅಥವಾ ರಿಟರ್ನ್ ತಿಂಗಳಿಗೆ ಬರುವಂತೆ ನಿಗದಿ ಮಾಡಬಹುದು. ಅಥವಾ ಮೂರು ತಿಂಗಳಿಗೊಮ್ಮೆಯಂತೆ, ಆರು ತಿಂಗಳಿಗೊಮ್ಮೆಯಂತೆ ಅಥವಾ ವರ್ಷಕ್ಕೆ ಒಮ್ಮೆಯಂತೆ ಬರುವಂತೆ ಆಯ್ಕೆ ಮಾಡಿಕೊಳ್ಳಬಹುದು.
  • ಡಿಫರ್ಮೆಂಟ್ ಪೀರಿಯಸ್, ಅಥವಾ ಮುಂದೂಡಿಕೆ ಅವಧಿಯಲ್ಲಿ ಯಾವಾಗ ಬೇಕಾದರೂ ನೀವು ಹೆಚ್ಚುವರಿ ಪ್ರೀಮಿಯಮ್ ಪಾವತಿಸಬಹುದು. ಈ ರೀತಿಯಲ್ಲಿ ನಿಮ್ಮ ಆ್ಯನುಟಿ ಮೊತ್ತವನ್ನು ಏರಿಸುವ ಅವಕಾಶ ಇರುತ್ತದೆ.

ಇದನ್ನೂ ಓದಿ: ಎಸ್​ಜಿಬಿ ಮ್ಯಾಜಿಕ್; ತಿಂಗಳಿಗೆ 10,000 ರೂನಂತೆ ಎಂಟೇ ವರ್ಷ ಹೂಡಿಕೆ; 40 ವರ್ಷದಲ್ಲಿ ಆಗುತ್ತೆ 48 ಕೋಟಿ ರೂ

  • ಡೆತ್ ಬೆನಿಫಿಟ್ ಅನ್ನು ಲಂಪ್ಸಮ್ ಆಗಿ ಪಡೆಯುವ ಆಯ್ಕೆ ಇರುತ್ತದೆ. ಅಥವಾ ಕಂತುಗಳ ರೂಪದಲ್ಲೂ ಬೇಕಾದರೆ ಸಿಗುವಂತೆ ಆಯ್ದುಕೊಳ್ಳಬಹುದು.
  • ಮುಂದೂಡಿಕೆ ಅವಧಿ ಅಥವಾ ಡಿಫರ್ಮೆಂಟ್ ಪೀರಿಯಡ್​ನಲ್ಲಿ ಪಾಲಿಸಿದಾರನಿಗೆ ಇನ್ಷೂರೆನ್ಸ್ ಕವರ್ ಇರುತ್ತದೆ.

ಬೇಗನೇ ನಿವೃತ್ತರಾಗಬೇಕೆಂದು ಬಯಸಿದರೆ ಈ ಎಲ್​ಐಸಿ ಜೀವನ್ ಧಾರಾ ಪಾಲಿಸಿ ಮಾತ್ರವಲ್ಲ, ಬೇರೆ ಬೇರೆ ಹೂಡಿಕೆ ಆಯ್ಕೆಗಳನ್ನೂ ಪರಿಶೀಲಿಸಬಹುದು. ನಿಮ್ಮ ಸಂಪಾದನೆಯಲ್ಲಿ ಸಾಧ್ಯವಾದಷ್ಟೂ ಹೆಚ್ಚಿನ ಮೊತ್ತವನ್ನು ಉಳಿಸಿ, ಅದನ್ನು ಮ್ಯೂಚುವಲ್ ಫಂಡ್ ಎಸ್​ಐಪಿ, ಎಸ್​ಜಿಬಿ ಇತ್ಯಾದಿ ಕಡೆ ಹೂಡಿಕೆ ಮಾಡಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್