LIC New Policy: ಎಲ್​ಐಸಿ ಜೀವನ್ ಧಾರಾ-2 ಪಾಲಿಸಿ ಇಂದು ಬಿಡುಗಡೆ; ಇದರ ಅನುಕೂಲಗಳೇನು, ವಿವರ ತಿಳಿಯಿರಿ

|

Updated on: Jan 22, 2024 | 10:49 AM

LIC Jeevan Dhara II: ಎಲ್​ಐಸಿ ಜೀವನ್ ಧಾರಾ-2 ಇನ್ಷೂರೆನ್ಸ್ ಪಾಲಿಸಿ ಇಂದು ಮಾರುಕಟ್ಟೆಗೆ ಬಿಡುಗಡೆ ಆಗಿದೆ. ಇದು ನಾನ್ ಲಿಂಕ್ಡ್ ನಾನ್ ಪಾರ್ಟಿಸಿಪೇಟಿಂಗ್ ಪಾಲಿಸಿ ಆಗಿದೆ. ಈ ಹೊಸ ಎಲ್​ಐಸಿ ಪಾಲಿಸಿ ಪಡೆಯಲು ಕನಿಷ್ಠ ವಯಸ್ಸು 20 ವರ್ಷ ಆಗಿದೆ. ಸಿಂಗಲ್ ಪ್ರೀಮಿಯಮ್ ಅಥವಾ ರೆಗ್ಯುಲರ್ ಪ್ರೀಮಿಯಮ್ ಆಯ್ಕೆಗಳಿವೆ. ಹಲವು ಆ್ಯನ್ಯುಟಿ ಆಯ್ಕೆಗಳೂ ಇವೆ.

LIC New Policy: ಎಲ್​ಐಸಿ ಜೀವನ್ ಧಾರಾ-2 ಪಾಲಿಸಿ ಇಂದು ಬಿಡುಗಡೆ; ಇದರ ಅನುಕೂಲಗಳೇನು, ವಿವರ ತಿಳಿಯಿರಿ
ಎಲ್​ಐಸಿ
Follow us on

ನವದೆಹಲಿ, ಜನವರಿ 22: ಕಳೆದ ತಿಂಗಳು ಜೀವನ್ ಉತ್ಸವ್ ಇನ್ಷೂರೆನ್ಸ್ ಪ್ಲಾನ್ ಬಿಡುಗಡೆ ಮಾಡಿದ್ದ ಭಾರತೀಯ ಜೀವ ವಿಮಾ ನಿಗಮ ಎಲ್​ಐಸಿ ಇದೀಗ ಹೊಸ ಇನ್ಷೂರೆನ್ಸ್ ಪಾಲಿಸಿ ಆರಂಭಿಸಿದೆ. ಎಲ್​ಐಸಿ ಜೀವನ್ ಧಾರಾ-2 ಇಂದಿನಿಂದ (ಜ. 22) ಲಭ್ಯ ಇದೆ. ಆನ್​ಲೈನ್ ಮತ್ತು ಆಫ್​ಲೈನ್ ಎರಡೂ ಕಡೆಯಲ್ಲಿ ಇದನ್ನು ಖರೀದಿಸಬಹುದಾಗಿದೆ. ಎಲ್​ಐಸಿ ಜೀವನ್ ಧಾರಾ2 ಪಾಲಿಸಿ ನಾನ್ ಲಿಂಕ್ಡ್ ನಾನ್ ಪಾರ್ಟಿಸಿಪೇಟಿಂಗ್ (Non linked Non Participating) ಆ್ಯನ್ಯುಟಿ ಪ್ಲಾನ್ ಆಗಿದೆ. ನಾನ್ ಲಿಂಕ್ಡ್ ಎಂದರೆ ಈ ಪಾಲಿಸಿಯ ಹಣವನ್ನು ಎಲ್​ಐಸಿ ಸಂಸ್ಥೆ ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಿಲ್ಲ. ಪೂರ್ವನಿಗದಿತವಾದ ರಿಟರ್ನ್ಸ್ (Annuity) ಅನ್ನು ನಿರೀಕ್ಷಿಸಬಹುದು.

ಎಲ್​ಐಸಿ ಜೀವನ್ ಧಾರಾ2 ಪಾಲಿಸಿ ಪಡೆಯಲು ಕನಿಷ್ಠ ವಯಸ್ಸು 20 ವರ್ಷವಾಗಿದೆ. ಗರಿಷ್ಠ ವಯೋಮಿತಿ 80 ವರ್ಷದವರೆಗೂ ಇದೆ.

ಪಾಲಿಸಿದಾರರಿಗೆ 11 ಆ್ಯನ್ಯುಟಿ ಆಯ್ಕೆಗಳು ಸಿಗುತ್ತವೆ. ಪಾಲಿಸಿಯ ಡಿಫರ್ಮೆಂಟ್ ಅವಧಿ (Deferment Period), ಅಂದರೆ ಮುಂದೂಡಿಕೆ ಅವಧಿಯಲ್ಲೂ ಇನ್ಷೂರೆನ್ಸ್ ಕವರ್ ಇರುತ್ತದೆ. ಆ್ಯನ್ಯುಟಿ ಎಂದರೆ ನಿಮಗೆ ಸಿಗುವ ರಿಟರ್ನ್​ಗಳು. ಲಂಪ್ಸಮ್ ಆಗಿ ಬೇಕಾದರೂ ಬೆನಿಫಿಟ್ ಪಡೆಯಬಹುದು. ಅಥವಾ ಪಿಂಚಣಿ ರೂಪದಲ್ಲಿ ನಿಯಮಿತವಾಗಿ ಬೆನಿಫಿಟ್ ಪಡೆಯಬಹುದು.

ಇದನ್ನೂ ಓದಿ: Great Return: ಒಂದು ಲಕ್ಷ ಹಣ ಆರು ತಿಂಗಳಲ್ಲಿ 12 ಲಕ್ಷ ರೂ; ಇದು ಈ ಮಲ್ಟಿಬ್ಯಾಗರ್ ಮ್ಯಾಜಿಕ್

ಹೆಚ್ಚುವರಿ ಪ್ರೀಮಿಯಮ್ ಮತ್ತು ಆ್ಯನ್ಯುಟಿ

ಸಿಂಗಲ್ ಪ್ರೀಮಿಯಮ್ ಪಾವತಿಸುವ ಪಾಲಿಸಿದಾರರಿಗೆ ಹೆಚ್ಚುವರಿ ಪ್ರೀಮಿಯಮ್ ಕಟ್ಟುವ ಆಯ್ಕೆ ಇದೆ. ಆದರೆ, ಡಿಫರ್ಮೆಂಟ್ ಪೀರಿಯಡ್​ನಲ್ಲಿ ಮಾತ್ರ ಈ ಹೆಚ್ಚುವರಿ ಹಣ ಕಟ್ಟಬಹುದು. ಇದರಿಂದ ಆ್ಯನ್ಯುಟಿ ಮೊತ್ತ ಹೆಚ್ಚಾಗುತ್ತದೆ. ಡಿಫರ್ಮೆಂಟ್ ಅವಧಿ ಎಂದರೆ ಪಾಲಿಸಿ ಕಟ್ಟುವ ಮತ್ತು ಆ್ಯನ್ಯುಟಿ ಶುರುವಾಗುವ ನಡುವಿನ ಅವಧಿಯಾಗಿರುತ್ತದೆ.

ಆ್ಯನ್ಯುಟಿ ಅಯ್ಕೆಗಳು

  • ರೆಗ್ಯುಲರ್ ಪ್ರೀಮಿಯಮ್: ಇದರಲ್ಲಿ ಡಿಫರ್ಮೆಂಟ್ ಅವಧಿ 5ರಿಂದ 15 ವರ್ಷ ಇದೆ.
  • ಸಿಂಗಲ್ ಪ್ರೀಮಿಯಮ್: ಡಿಫರ್ಮೆಂಟ್ ಪೀರಿಯಡ್ 15 ವರ್ಷದವರೆಗೂ ಇದೆ.
  • ಸಿಂಗಲ್ ಲೈಫ್ ಆ್ಯನ್ಯುಟಿ ಮತ್ತು ಜಾಯಿಂಟ್ ಲೈಫ್ ಆ್ಯನ್ಯುಟಿ

ಇದನ್ನೂ ಓದಿ: TCS: ಯೂರೋಪ್​ನಲ್ಲಿ ಉದ್ಯೋಗಿಗಳು ಮೆಚ್ಚುವ ಕಂಪನಿಗಳಲ್ಲಿ ಟಿಸಿಎಸ್​ಗೆ ಮೊದಲ ಸ್ಥಾನ

ಪಾಲಿಸಿದಾರರು ಯಾವಾಗಿನಿಂದ ರಿಟರ್ನ್ಸ್ ಅಥವಾ ಆ್ಯನ್ಯುಟಿ ಬರಬೇಕು ಎಂಬುದನ್ನು ಅಯ್ಎಕ ಮಾಡಿಕೊಳ್ಳಬಹುದು. ತಿಂಗಳಿಗೆ, ಮೂರು ತಿಂಗಳಿಗೆ, ಆರು ತಿಂಗಳಿಗೆ, ಒಂದು ವರ್ಷಕ್ಕೆ ಹೀಗೆ ಬೇರೆ ಬೇರೆ ಆಯ್ಕೆಗಳಿವೆ. ಒಮ್ಮೆ ನೀವು ಆ್ಯನ್ಯುಟಿ ಆಯ್ಕೆ ಮಾಡಿಕೊಂಡರೆ ಅದನ್ನು ಬದಲಿಸಲು ಆಗುವುದಿಲ್ಲ. ಅಂದರೆ ತಿಂಗಳಿಗೊಮ್ಮೆ ಹಣ ಸಿಗುವ ಆಯ್ಕೆ ನಿಮ್ಮದಾದರೆ ಅದನ್ನೇ ಕೊನೆಯವರೆಗೂ ಮುಂದುವರಿಸಬೇಕಾಗುತ್ತದೆ.

ಪಾಲಿಸಿ ಮೇಲೆ ಸಾಲ ಸೌಲಭ್ಯ

ಪಾಲಿಸಿಯ ಡಿಫರ್ಮೆಂಟ್ ಅವಧಿಯಲ್ಲಿ, ಅಥವಾ ನಂತರ ಯಾವಾಗ ಬೇಕಾದರೂ ಸಾಲ ಸೌಲಭ್ಯ ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ