Great Return: ಒಂದು ಲಕ್ಷ ಹಣ ಆರು ತಿಂಗಳಲ್ಲಿ 12 ಲಕ್ಷ ರೂ; ಇದು ಈ ಮಲ್ಟಿಬ್ಯಾಗರ್ ಮ್ಯಾಜಿಕ್
Rathi Steel and Power shares: ರಾಥಿ ಗ್ರೂಪ್ಗೆ ಸೇರಿದ ರಾಥಿ ಸ್ಟೀಲ್ ಅಂಡ್ ಪವರ್ ಸಂಸ್ಥೆಯ ಷೇರು 2023ರಲ್ಲಿ ಮಲ್ಟಿಬ್ಯಾಗರ್ ಆಗಿ ಪರಿವರ್ತನೆ ಆಗಿದೆ. ಆರು ತಿಂಗಳ ಹಿಂದೆ 3.30 ರೂ ಇದ್ದ ರಾಥಿ ಷೇರು ಬೆಲೆ ಈಗ 41 ರೂಗೆ ಏರಿದೆ. ಆರು ತಿಂಗಳ ಹಿಂದೆ ರಾಥಿ ಷೇರಿನ ಮೇಲೆ 1 ಲಕ್ಷ ರೂ ಹೂಡಿಕೆ ಮಾಡಿದ್ದವರಿಗೆ ಇವತ್ತು 12 ಲಕ್ಷ ರೂ ಲಾಭ ಸಿಗುತ್ತಿತ್ತು.
2023ರ ವರ್ಷದಲ್ಲಿ ಷೇರು ಮಾರುಕಟ್ಟೆ ಉತ್ತುಂಗಕ್ಕೆ ಹೋಗಿದೆ. ಈ ವರ್ಷವೂ ಅದೇ ಟ್ರೆಂಡ್ ಮುಂದುವರಿಯುತ್ತದಾ ಗೊತ್ತಿಲ್ಲ. ಆದರೆ, ಷೇರುಪೇಟೆಯ ಈ ಗಣನೀಯ ಏರಿಕೆಯಲ್ಲಿ ಸಣ್ಣ ಸಂಸ್ಥೆಗಳ ಕೊಡುಗೆ ಬಹಳ ಇದೆ. ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಷೇರುಗಳು ಸಖತ್ ಲಾಭ ತಂದಿವೆ. ಕೆಲ ಪೆನಿ ಸ್ಟಾಕ್ಗಳಂತೂ (penny stocks) ಅದ್ವಿತೀಯವಾಗಿ ಓಡಿವೆ. ಪೆನ್ನಿ ಸ್ಟಾಕ್ ಎಂದರೆ ಬಹಳ ಕಡಿಮೆ ಬೆಲೆಗೆ ಲಭ್ಯ ಇರುವ ಷೇರು. ಒಳ್ಳೆಯ ಲಾಭ ತಂದಿರುವ ಇಂತಹ ಪೆನ್ನಿ ಸ್ಟಾಕ್ಗಳಲ್ಲಿ ರಾಥಿ ಸ್ಟೀಲ್ ಅಂಡ್ ಪವರ್ ಸಂಸ್ಥೆಯದ್ದು (Rathi Steel and Power) ಒಂದು. ನೀವು ನಂಬುವುದಿಲ್ಲ, ಇದರ ಷೇರು ಬೆಲೆ ಆರು ತಿಂಗಳಲ್ಲಿ 14 ಪಟ್ಟು ಹೆಚ್ಚಾಗಿದೆ. ಅಕ್ಷರಶಃ ಇದು ಮಲ್ಟಿಬ್ಯಾಗರ್ ಸ್ಟಾಕ್ ಎನಿಸಿದೆ.
ಷೇರು ಖರೀದಿಸುವವರಿಗೆ ಪೆನ್ನಿ ಸ್ಟಾಕ್ ಆಗಲೀ ದೊಡ್ಡ ಸ್ಟಾಕ್ ಆಗಲೀ ಎಲ್ಲವೂ ಒಂದೇ. ಅವರು ಎಷ್ಟು ಮೊತ್ತದ ಹೂಡಿಕೆ ಮಾಡುತ್ತಾರೆ ಎಂಬುದು ಮುಖ್ಯ. ದೀರ್ಘಾವಧಿಯಲ್ಲಿ ಹೂಡಿಕೆದಾರರಿಗೆ ಸಿಕ್ಕಾಪಟ್ಟೆ ಲಾಭ ತಂದಿರುವ ಪೆನ್ನಿ ಸ್ಟಾಕ್ಸ್ ಹಲವಿವೆ. ರಾಥಿ ಸ್ಟೀಲ್ ಅಂಡ್ ಪವರ್ ಷೇರುಬೆಲೆ ಆರು ತಿಂಗಳ ಹಿಂದೆ 3.30 ರೂ ಬೆಲೆ ಹೊಂದಿತ್ತು. ಇದೀಗ ಅದರ ಬೆಲೆ 41.07 ರೂ ಆಗಿದೆ. ಅಂದರೆ ಶೇ. 1,150ರಷ್ಟು ಮೌಲ್ಯ ಹೆಚ್ಚಾಗಿದೆ.
ಇದನ್ನೂ ಓದಿ: Investment Ideas: 2024ರಲ್ಲಿ ಎಲ್ಲೆಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ ಮತ್ತು ಲಾಭಕಾರಿ? ಇಲ್ಲಿದೆ ಡೀಟೇಲ್ಸ್
ಆರು ತಿಂಗಳ ಹಿಂದೆ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ?
ನೀವು ರಾಥಿ ಸ್ಟೀಲ್ ಅಂಡ್ ಪವರ್ ಷೇರಿನ ಮೇಲೆ ಆರು ತಿಂಗಳ ಹಿಂದೆ ಒಂದು ಲಕ್ಷ ರೂ ಹೂಡಿಕೆ ಮಾಡಿದಿದ್ದರೆ ಇವತ್ತು ಎಷ್ಟು ಲಾಭ ಆಗಿರುತ್ತಿತ್ತು? ಅಂದರೆ ಷೇರುಬೆಲೆ 3.30 ರೂ ಇದ್ದಾಗ ನೀವು 1,00,000 ರೂ ಹೂಡಿಕೆ ಮಾಡುತ್ತೀರಿ. ಅಂದರೆ 30,303 ಷೇರುಗಳನ್ನು ಖರೀದಿ ಮಾಡುತ್ತೀರಿ ಎಂದಿಟ್ಟುಕೊಳ್ಳಿ. ಈಗ ಆರು ತಿಂಗಳ ಬಳಿಕ ನಿಮ್ಮ ಅದೇ ಹೂಡಿಕೆ 12.50 ಲಕ್ಷ ರೂ ಆಗಿರುತ್ತಿತ್ತು.
3 ಕೋಟಿ ಷೇರುಗಳ ಹಂಚಿಕೆ
ರಾಥಿ ಗ್ರೂಪ್ಗೆ ಸೇರಿದ ರಾಥಿ ಸ್ಟೀಲ್ಸ್ ಅಂಡ್ ಪವರ್ ಸಂಸ್ಥೆ 3.56 ಕೋಟಿ ಈಕ್ವಿಟಿ ಷೇರುಗಳನ್ನು 32.25 ರೂಗೆ ತನ್ನ ಷೇರುದಾರರಿಗೆ ಮಾರಲು ಹೊರಟಿದೆ. ಜನವರಿ 18ರಂದು ಇದಕ್ಕೆ ಸಂಸ್ಥೆಯ ಆಡಳಿತ ಮಂಡಳಿ ಅನುಮೋದನೆ ಸಿಕ್ಕಿದೆ. ಷೇರುದಾರರ ಅನುಮೋದನೆ ಸಿಕ್ಕರೆ ಹಂಚಿಕೆ ನಡೆಯಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ