Mahila Samman Scheme: ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಅಂಚೆ ಕಚೇರಿ ಮಾತ್ರವಲ್ಲ ಈ 16 ಬ್ಯಾಂಕುಗಳಲ್ಲೂ ಲಭ್ಯ

|

Updated on: Jun 28, 2023 | 3:49 PM

4 Private Banks Authorised For MSSC 2023: ಕೇಂದ್ರ ಹಣಕಾಸು ಇಲಾಖೆ ಘೋಷಿಸಿರುವ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಯೋಜನೆ ಈಗ ಅಂಚೆ ಕಚೇರಿ ಹಾಗೂ 12 ಸರ್ಕಾರಿ ಬ್ಯಾಂಕುಗಳ ಜೊತೆಗೆ 4 ಖಾಸಗಿ ಬ್ಯಾಂಕುಗಳಲ್ಲೂ ಲಭ್ಯ ಇದೆ.

Mahila Samman Scheme: ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಅಂಚೆ ಕಚೇರಿ ಮಾತ್ರವಲ್ಲ ಈ 16 ಬ್ಯಾಂಕುಗಳಲ್ಲೂ ಲಭ್ಯ
ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್
Follow us on

ಕೇಂದ್ರ ಸರ್ಕಾರ ಮಹಿಳೆಯರಿಗೆಂದು ಹೊಸದಾಗಿ ಈ ವರ್ಷ ರೂಪಿಸಿರುವ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ (MSSC) 2023 ಯೋಜನೆಯನ್ನು ಈಗ ವಿವಿಧ ಬ್ಯಾಂಕುಗಳಲ್ಲೂ ಪಡೆಯಬಹುದಾಗಿದೆ. ಫೆಬ್ರುವರಿಯ ಬಜೆಟ್ ವೇಳೆ ನಿರ್ಮಲಾ ಸೀತಾರಾಮನ್ ಅವರು ಈ ಸೇವಿಂಗ್ ಸ್ಕೀಮ್ ಅನ್ನು ಘೋಷಿಸಿದ್ದರು. ಅಂಚೆ ಕಚೇರಿಗಳಲ್ಲಿ ಮಾತ್ರವೇ ಇದು ಲಭ್ಯ ಇತ್ತು. ಈಗ 16 ಬ್ಯಾಂಕುಗಳಲ್ಲಿ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಪಡೆಯಬಹುದಾಗಿದೆ. ಇದರಲ್ಲಿ 4 ಖಾಸಗಿ ಬ್ಯಾಂಕು, 12 ಸರ್ಕಾರಿ ಸ್ವಾಮ್ಯದ ಬ್ಯಾಂಕಗಳಿವೆ. ಹಣಕಾಸು ಇಲಾಖೆ ಇತ್ತೀಚಿಗೆ ಹೊರಡಿಸಿದ ಅಧಿಸೂಚನೆಯಲ್ಲಿ ಎಲ್ಲಾ ಸರ್ಕಾರಿ ಬ್ಯಾಂಕುಗಳು ಹಾಗೂ 4 ಖಾಸಗಿ ಬ್ಯಾಂಕುಗಳಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ ಲಭ್ಯ ಇರುತ್ತದೆ ಎಂದು ತಿಳಿಸಲಾಗಿದೆ.

ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಸ್ಕೀಮ್ (Mahila Samman Saving Certificate) ಅನ್ನು ಒದಗಿಸಲು ಎಲ್ಲಾ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳು ಹಾಗು ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕುಗಳಿಗೆ ಅಧಿಕಾರ ಕೊಡಲಾಗಿದೆ” ಎಂದು ಗೆಜೆಟ್ ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ.

ಮಹಿಳಾ ಸಮ್ಮಾನ್ ಉಳಿತಾಯ ಪತ್ರ 2023 ನೀಡುವ ಬ್ಯಾಂಕುಗಳು

  1. ಐಸಿಐಸಿಐ ಬ್ಯಾಂಕ್
  2. ಆಕ್ಸಿಸ್ ಬ್ಯಾಂಕ್
  3. ಎಚ್​ಡಿಎಫ್​ಸಿ ಬ್ಯಾಂಕ್
  4. ಐಡಿಬಿಐ ಬ್ಯಾಂಕ್
  5. ಎಸ್​ಬಿಐ
  6. ಬ್ಯಾಂಕ್ ಆಫ್ ಬರೋಡ
  7. ಬ್ಯಾಂಕ್ ಆಫ್ ಇಂಡಿಯಾ
  8. ಬ್ಯಾಂಕ್ ಆಫ್ ಮಹಾರಾಷ್ಟ್ರ
  9. ಕೆನರಾ ಬ್ಯಾಂಕ್
  10. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
  11. ಇಂಡಿಯನ್ ಬ್ಯಾಂಕ್
  12. ಇಂಡಿಯನ್ ಓವರ್​ಸೀಸ್ ಬ್ಯಾಂಕ್
  13. ಪಂಜಾಬ್ ನ್ಯಾಷನಲ್ ಬ್ಯಾಂಕ್
  14. ಪಂಜಾಬ್ ಅಂಡ್ ಸಿಂದ್ ಬ್ಯಾಂಕ್
  15. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
  16. ಯುಕೋ ಬ್ಯಾಂಕ್

ಇದನ್ನೂ ಓದಿRuPay Credit Card: ಕೆನರಾ ಬ್ಯಾಂಕ್​ನಿಂದ ರುಪೇ ಕ್ರೆಡಿಟ್ ಕಾರ್ಡ್ ಬಳಸಿ ಯುಪಿಐ ಪೇಮೆಂಟ್ ಸೌಲಭ್ಯ; ಸರ್ಕಾರಿ ಬ್ಯಾಂಕುಗಳಲ್ಲೇ ಇದು ಮೊದಲು

ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಯೋಜನೆಗೆ ಬ್ಯಾಂಕುಗಳಿಗೆ ಇವೆ ಕೆಲ ಷರತ್ತುಗಳು

  • ಮಹಿಳಾ ಸಮ್ಮಾನ್ ನಿಧಿ ಯೋಜನೆ ಸೇರಿ ವಿವಿಧ ರಾಷ್ಟ್ರೀಯ ಉಳಿತಾಯ ಯೋಜನೆಗಳ ಕಾರ್ಯನಿರ್ವಹಣೆಗೆ ಪ್ರತ್ಯೇಕ ತಂತ್ರಾಂಶಗಳನ್ನು ಬ್ಯಾಂಕುಗಳು ಹೊಂದಿರಬೇಕು
  • ಸ್ಕೀಮ್​ಗಳಲ್ಲಿ ಜಮೆಯಾದ ಹಣವನ್ನು ಆರ್​ಬಿಐನಲ್ಲಿರುವ ಸರ್ಕಾರದ ಖಾತೆಗೆ 1ರಿಂದ 3 ದಿನದೊಳಗೆ ವರ್ಗಾವಣೆ ಮಾಡಬೇಕು.
  • ಯಾವ್ಯಾವ ಶಾಖೆಗಳಲ್ಲಿ ನ್ಯಾಷನಲ್ ಸೇವಿಂಗ್ಸ್ ಸ್ಕೀಮ್​ಗಳು ಲಭ್ಯ ಇರುವುದಿಲ್ಲ ಎಂಬುದರ ಪಟ್ಟಿಯನ್ನು ಬ್ಯಾಂಕುಗಳು ಮುಂಚಿತವಾಗಿಯೇ ತಿಳಿಸಬೇಕು.

ಒಂದು ವೇಳೆ ಬ್ಯಾಂಕಗಳು ಉಳಿತಾಯ ಸ್ಕೀಮ್​ನಲ್ಲಿ ಬರುವ ಹಣವನ್ನು ವರ್ಗಾವಣೆ ಮಾಡುವುದು ತಡವಾದರೆ ಬಡ್ಡಿ ಹಾಗೂ ಠೇವಣಿಯ ಶೇ. 0.5ರಷ್ಟು ಮೊತ್ತವನ್ನು ದಂಡವಾಗಿ ಠೇವಣಿದಾರರಿಗೆ ಪಾವತಿಸಬೇಕು. 30 ದಿನಗಳಿಗಿಂತ ಹೆಚ್ಚು ವಿಳಂಬವಾದರೆ ಶೇ. 1ರಷ್ಟು ಮೊತ್ತವನ್ನು ದಂಡವಾಗಿ ಬ್ಯಾಂಕುಗಳು ಕಟ್ಟಬೇಕಾಗುತ್ತದೆ.

ಇದನ್ನೂ ಓದಿIT Returns: ಐಟಿ ರಿಟರ್ನ್ಸ್​ಗೆ ನೊಂದಾಯಿಸುವುದು ಹೇಗೆ, ಐಟಿಆರ್ ಫೈಲಿಂಗ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಏನಿದು ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆ?

ಇದು ಮಹಿಳೆಯರ ಹೆಸರಿನಲ್ಲಿ ಆರಂಭಿಸಬಹುದಾದ 2 ವರ್ಷದ ಠೇವಣಿ ಯೋಜನೆ. ಬಹುತೇಕ ನಿಶ್ಚಿತ ಠೇವಣಿಯಂತಿರುವ ಈ ಯೋಜನೆಯಲ್ಲಿ ವರ್ಷಕ್ಕೆ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ಮೂರು ತಿಂಗಳಿಗೊಮ್ಮೆ ಬಡ್ಡಿ ಹಣ ಈ ಖಾತೆಗೆ ಜಮೆ ಆಗುತ್ತಾ ಹೋಗುತ್ತದೆ.

1,000 ರೂನಿಂದ 2 ಲಕ್ಷ ರೂವರೆಗೂ ಹಣವನ್ನು ಈ ಯೋಜನೆಗೆ ಹೂಡಿಕೆ ಮಾಡಬಹುದು. ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಠೇವಣಿ ಮೊತ್ತದ ಚೆಕ್ ಇವಿಷ್ಟು ಇದ್ದರೆ ಸಾಕಾಗುತ್ತದೆ.

ನಿಶ್ಚಿತ ಠೇವಣಿ ರೀತಿಯದ್ದೇ ಸ್ಕೀಮ್ ಇದಾದರೂ ಟಿಡಿಎಸ್ ವಿಚಾರದಲ್ಲಿ ವ್ಯತ್ಯಾಸ ಇದೆ. ಎಫ್​ಡಿಯಿಂದ ಬರುವ ಬಡ್ಡಿ ಹಣಕ್ಕೆ ಟಿಡಿಎಸ್ ಮುರಿದುಕೊಳ್ಳಲಾಗುತ್ತದೆ. ಆದರೆ, ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್​ಗೆ ಸಿಗುವ ಬಡ್ಡಿ ಹಣಕ್ಕೆ ಯಾವುದೇ ಟಿಡಿಎಸ್ ಇರುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ