AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RuPay Credit Card: ಕೆನರಾ ಬ್ಯಾಂಕ್​ನಿಂದ ರುಪೇ ಕ್ರೆಡಿಟ್ ಕಾರ್ಡ್ ಬಳಸಿ ಯುಪಿಐ ಪೇಮೆಂಟ್ ಸೌಲಭ್ಯ; ಸರ್ಕಾರಿ ಬ್ಯಾಂಕುಗಳಲ್ಲೇ ಇದು ಮೊದಲು

Canara Bank Provides Facility For UPI Payment Through RuPay: ರುಪೇ ಕ್ರೆಡಿಟ್ ಕಾರ್ಡ್ ಅನ್ನು ಲಿಂಕ್ ಮಾಡಿ ಆ ಮೂಲಕ ಯುಪಿಐ ಪಾವತಿ ಮಾಡುವ ಅವಕಾಶವನ್ನು ಕೆನರಾ ಬ್ಯಾಂಕ್ ಒದಗಿಸಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಇಂಥದ್ದು ಪ್ರಥಮ.

RuPay Credit Card: ಕೆನರಾ ಬ್ಯಾಂಕ್​ನಿಂದ ರುಪೇ ಕ್ರೆಡಿಟ್ ಕಾರ್ಡ್ ಬಳಸಿ ಯುಪಿಐ ಪೇಮೆಂಟ್ ಸೌಲಭ್ಯ; ಸರ್ಕಾರಿ ಬ್ಯಾಂಕುಗಳಲ್ಲೇ ಇದು ಮೊದಲು
ಕೆನರಾ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 28, 2023 | 11:59 AM

Share

ನವದೆಹಲಿ: ಯುಪಿಐ ಆ್ಯಪ್​ಗಳಿಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಿ ಹಣ ಪಾವತಿಸುವ ಪ್ರಕ್ರಿಯೆ ಹಲವರಿಗೆ ಗೊತ್ತಿರಬಹುದು. ಕ್ರೆಡಿಟ್ ಕಾರ್ಡ್ ಮೂಲಕ ಯುಪಿಐ ಹಣ ಪಾವತಿ (UPI Payment) ಸಾಧ್ಯವಾಗುತ್ತದೆ. ರುಪೇ ಕ್ರೆಡಿಟ್ ಕಾರ್ಡ್​ನಿಂದಲೂ (RuPay Credit Card) ನೀವು ಯುಪಿಐ ಪಾವತಿ ಮಾಡುವ ಅವಕಾಶ ಇದೆ. ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಈಗ ರುಪೇ ಕ್ರೆಡಿಟ್ ಕಾರ್ಡನ್ನು ಯುಪಿಐ ಪಾವತಿಗೆ ಬಳಸಲು ಅವಕಾಶ ಕೊಟ್ಟಿದೆ. ಸರ್ಕಾರಿ ಬ್ಯಾಂಕುಗಳ ಪೈಕಿ ಈ ಸೌಲಭ್ಯ ಕೊಟ್ಟಿರುವುದರಲ್ಲಿ ಕೆನರಾ ಬ್ಯಾಂಕ್ ಪ್ರಥಮ ಎನಿಸಿದೆ. ಕೆನರಾ ಬ್ಯಾಂಕ್​ನ ಬ್ಯಾಂಕಿಂಗ್ ಆ್ಯಪ್​ನಲ್ಲಿ ಇದು ಲಭ್ಯ ಇದೆ. ಆದರೆ, ಅಂಗಡಿ ಮುಂಗಟ್ಟುಗಳಲ್ಲಿ ಶಾಪಿಂಗ್ ಮಾಡಿದಾಗ ಹಣ ಪಾವತಿಸಲು ಮಾತ್ರ ಈ ಸೌಲಭ್ಯ ಇರುವುದು.

‘ರುಪೇ ಕ್ರೆಡಿಟ್ ಕಾರ್ಡ್ ಮೂಲಕ ವರ್ತಕರಿಗೆ ಯುಪಿಐ ಪೇಮೆಂಟ್ ಮಾಡುವ ಸೌಲಭ್ಯವನ್ನು ಕೆನರಾ ಬ್ಯಾಂಕ್ ಒದಗಿಸಿದೆ. ಇದು ಕೆನರಾ ಎಐ1 ಬ್ಯಾಂಕಿಂಗ್ ಸೂಪರ್ ಆ್ಯಪ್​ನಲ್ಲಿ (Canara ai1 Super App) ಲಭ್ಯ ಇರುತ್ತದೆ. ಎನ್​ಪಿಸಿಐ ಸಹಭಾಗಿತ್ವದಲ್ಲಿ ಈ ಸೌಲಭ್ಯ ಕೊಟ್ಟ ಮೊದಲ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಕೆನರಾ ಬ್ಯಾಂಕ್’ ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿSBI: ವಾಟ್ಸಾಪ್​ನಲ್ಲಿ ನಿಮ್ಮ ಎಸ್​ಬಿಐ ಬ್ಯಾಂಕ್ ಸ್ಟೇಟ್ಮೆಂಟ್ ಪಡೆಯುವುದು ಹೇಗೆ? ಇಲ್ಲಿದೆ ಸಿಂಪಲ್ ವಿಧಾನ

ಸದ್ಯ, ಕೆನರಾ ಬ್ಯಾಂಕ್​ನ ಆ್ಯಪ್​ನಲ್ಲಿ ಯುಪಿಐ ಐಡಿಗೆ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡುವುದರ ಜೊತೆಗೆ ಕೆನರಾ ಬ್ಯಾಂಕ್ ರುಪೇ ಕ್ರೆಡಿಟ್ ಕಾರ್ಡ್ ಅನ್ನೂ ಲಿಂಕ್ ಮಾಡಬಹುದು. ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಯೂ ಅದೇ ರೀತಿಯದ್ದಾಗಿರುತ್ತದೆ. ಲಿಂಕ್ ಮಾಡುವಾಗ ಅಕೌಂಟ್ ಲಿಸ್ಟಿಂಗ್​ನಲ್ಲಿ ಕೆನರಾ ಕ್ರೆಡಿಟ್ ಕಾರ್ಡ್​​ಗಳಿದ್ದರೆ ಅದರ ಪಟ್ಟಿ ಸಿಗುತ್ತದೆ. ಇದರಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಕೂಡ ಇರುತ್ತದೆ. ಅದನ್ನು ಆಯ್ದುಕೊಂಡು ಯುಪಿಐ ಐಡಿ ರಚಿಸಬಹುದು.

ಯುಪಿಐ ಪಾವತಿಗೆ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವುದರಿಂದ ಹಣ ಪಾವತಿ ಕಾರ್ಯ ಇನ್ನಷ್ಟು ಸುಗಮಗೊಳ್ಳುತ್ತದೆ. ನಿಮ್ಮ ಖಾತೆಯಲ್ಲಿ ಹಣದ ಕೊರತೆ ಇದ್ದಾಗ ಇದು ನೆರವಿಗೆ ಬರುತ್ತದೆ. ನೀವು ಪ್ರತ್ಯೇಕವಾಗಿ ಕ್ರೆಡಿಟ್ ಕಾರ್ಡ್ ತೆಗೆದುಕೊಂಡು ಹೋಗುವ ಅಗತ್ಯ ಇಲ್ಲ. ಆದರೆ, ರುಪೇ ಕ್ರೆಡಿಟ್ ಕಾರ್ಡ್ ಅನ್ನು ಯುಪಿಐ ಪಾವತಿಗೆ ಬಳಸುವಾಗ ನಿರ್ಬಂಧಗಳಿವೆ. ವರ್ತಕರಿಗೆ ಮಾತ್ರ ಹಣ ಪಾವತಿಸಲು ಸಾಧ್ಯ. ವ್ಯಕ್ತಿಯಿಂದ ವ್ಯಕ್ತಿಗೆ ಹಣದ ರವಾನೆ ಸಾಧ್ಯವಾಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ