ಹಬ್ಬದ ಋತು ಭರ್ಜರಿಯಾಗಿ ನಡೆಯುತ್ತಿದೆ. ನವರಾತ್ರಿಯ ಬಹುತೇಕ ದಿನಗಳು (festival season) ಮುಗಿದಿವೆ. ನವೆಂಬರ್ನಲ್ಲಿ ಬರುವ ದೀಪಾವಳಿಯವರೆಗೂ ಭಾರತದಲ್ಲಿ ಹಬ್ಬದ ಸೀಸನ್ ಇದೆ. ಊರಿಗೆ ಹೋಗುವ ಸಡಗರ, ಶಾಪಿಂಗ್ ಕಲರವ, ದಸರಾ ಕಳೆ ಜೊತೆ ದಂಡಿಯಾಗಿ ಹಣವೂ ಖರ್ಚಾಗುತ್ತಿದೆ, ಖರ್ಚಾಗುತ್ತದೆ. ಹಬ್ಬದ ವೇಳೆ ಎಷ್ಟು ಖರ್ಚು ಮಾಡಬೇಕು, ಏನು ಖರೀದಿಸಬೇಕು, ಯಾವುದನ್ನು ಕೈಬಿಡಬೇಕು ಎಂಬ ಗೊಂದಲ ಬಹುತೇಕ ಎಲ್ಲರಲ್ಲೂ ಇರುತ್ತದೆ. ಬೇರೆಯವರು ಮಾಡುವಷ್ಟೇ ಖರ್ಚನ್ನು ನಾವೂ ಮಾಡಬೇಕಾ? ನಮ್ಮ ಆದಾಯಕ್ಕೆ ತಕ್ಕಂತೆ ಖರ್ಚು ಹೇಗೆ ಮಾಡುವುದು? ಈ ಬಗ್ಗೆ ಒಂದಷ್ಟು ಟಿಪ್ಸ್ ಇಲ್ಲಿದೆ…
ತಜ್ಞರ ಪ್ರಕಾರ ನೀವು ನಿಮ್ಮ ತಿಂಗಳ ಆದಾಯದಲ್ಲಿ ಅಥವಾ ಸಂಬಳದಲ್ಲಿ 50-30-20 ಸೂತ್ರದ ಪ್ರಕಾರ ಹಣ ವಿನಿಯೋಗಿಸಬಹುದು. ಇಲ್ಲಿ 50 ಎಂಬುದು ನಿಮ್ಮ ಸಂಬಳದ ಶೇ. 50ರಷ್ಟು ಹಣವು ಅವಶ್ಯಕತೆಗಳಿಗೆ ವೆಚ್ಚವಾಗಲು ಮೀಸಲಿರಬೇಕು. ಅವಶ್ಯಕತೆಗಳೆಂದರೆ ನೀರಿನ ಬಿಲ್, ಕರೆಂಟ್ ಬಿಲ್, ಬಾಡಿಗೆ ಇತ್ಯಾದಿಯವು.
ಇದನ್ನೂ ಓದಿ: Bank FD Rates: 15 ಬ್ಯಾಂಕುಗಳಲ್ಲಿ ಠೇವಣಿ ದರಗಳೆಷ್ಟು? ಯಾವ ಬ್ಯಾಂಕಲ್ಲಿ ಗರಿಷ್ಠ ಆಫರ್?
ಇನ್ನು 30 ಎಂಬುದು ನಿಮ್ಮ ಬಯಕೆಗೆ ಇರುವ ಮಿತಿ. ನಿಮ್ಮ ಆದಾಯದ ಶೇ. 30ಕ್ಕಿಂತ ಹೆಚ್ಚು ಮೊತ್ತವು ಬಯಕೆಗಳಿಗೆ ವೆಚ್ಚವಾಗಬಾರದು. ಇಲ್ಲಿ ಬಯಕೆ ಎಂದರೆ ಹಬ್ಬ, ಕಾರು ಖರೀದಿ, ಸಿನಿಮಾ, ಪ್ರವಾಸ ಇತ್ಯಾದಿ.
ಕೊನೆಯಲ್ಲಿ ಬರುವ 20 ಎಂಬುದು ಹೂಡಿಕೆಯದ್ದು. ಕನಿಷ್ಠ ಶೇ. 20ರಷ್ಟು ಆದಾಯವನ್ನಾದರೂ ಹೂಡಿಕೆಗೆ ವಿನಿಯೋಗಿಸಬೇಕು. ಇದು ಸದ್ಯ ಜನಪ್ರಿಯವಾಗಿರುವ 50-30-20 ಸೂತ್ರ.
ನೀವು ಹಬ್ಬಕ್ಕೆ ಮುಂಚೆಯೇ ಯೋಜಿಸಿ ಹಣ ಎತ್ತಿ ಇಡದೇ ಇದ್ದರೆ 50-30-20 ಸೂತ್ರದ ಪ್ರಕಾರ ಶೇ. 30ರಷ್ಟು ಹಣವನ್ನು ಹಬ್ಬಕ್ಕೆ ಇಡಬಹುದು. ಅಂದರೆ, ನಿಮ್ಮ ಬೇರೆ ಇಚ್ಛೆಗಳನ್ನು ಬದಿಗೊತ್ತಿ ಆ ಹಣವನ್ನು ಹಬ್ಬಕ್ಕೆ ಖರ್ಚು ಮಾಡಬಹುದು.
ಇದನ್ನೂ ಓದಿ: ಹಬ್ಬದ ಸೀಸನ್ನಲ್ಲಿ ಶಾಪಿಂಗ್ ಟಿಪ್ಸ್; ಡಿಸ್ಕೌಂಟ್, ಕ್ಯಾಶ್ಬ್ಯಾಕ್, ಕೂಪನ್ ಇವೆಲ್ಲವನ್ನೂ ಸರಿಯಾಗಿ ಬಳಸುವುದು ಹೇಗೆ?
ಭಾರತದಲ್ಲಿ ವರ್ಷದಲ್ಲಿ ಹಲವು ಹಬ್ಬಗಳು ಬರುತ್ತವೆ. ಯಾವ್ಯಾವ ಹಬ್ಬಗಳು ನಿಮಗೆ ಪ್ರಮುಖವಾದುವು ಎಂಬುದನ್ನು ವರ್ಗೀಕರಿಸಿ ಅದಕ್ಕೆ ಬಜೆಟ್ ಹಾಕಬಹುದು. ನಿಮ್ಮ ಒಂದು ವರ್ಷದ ಆದಾಯದಲ್ಲಿ ಶೇ. 1ರಿಂದ 3ರವರೆಗೂ ಹಣವನ್ನು ಹಬ್ಬಗಳಿಗೆ ಮೀಸಲಿರಿಸಬಹುದು. ಉದಾಹರಣೆಗೆ ನಿಮಗೆ ಕೈಗೆ ಬರುವ ಸಂಬಳ ತಿಂಗಳಿಗೆ 40,000 ರೂ ಆಗಿದ್ದರೆ 400 ರೂನಿಂದ 1,200 ರೂವರೆಗೆ ಹಣವನ್ನು ಎತ್ತಿ ಇಡಬಹುದು. ಅಂದರೆ, ವರ್ಷಕ್ಕೆ ಸುಮಾರು 5,000 ರೂನಿಂದ 14,000 ರೂವರೆಗೆ ಹಣವನ್ನು ಹಬ್ಬಗಳಿಗೆಂದು ಇಡಬಹುದು. ಇದರಲ್ಲೇ ಬಟ್ಟೆಬರೆ, ಹೂ ಹಣ್ಣು, ಪೂಜೆ ಪುನಸ್ಕಾರ ಎಲ್ಲವೂ ಆಗುವಂತೆ ನೋಡಿಕೊಳ್ಳಿ. ಇದು ತಜ್ಞರು ನೀಡುವ ಸಲಹೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ