Bank FD Rates: 15 ಬ್ಯಾಂಕುಗಳಲ್ಲಿ ಠೇವಣಿ ದರಗಳೆಷ್ಟು? ಯಾವ ಬ್ಯಾಂಕಲ್ಲಿ ಗರಿಷ್ಠ ಆಫರ್?

ದೀರ್ಘಾವಧಿಗಿಂತ ಹೆಚ್ಚಾಗಿ 5 ವರ್ಷದೊಳಗಿನ ಅಲ್ಪಾವಧಿ ಹೂಡಿಕೆಗೆ ಎಫ್​ಡಿ ಹೇಳಿ ಮಾಡಿಸಿದ್ದಾಗಿದೆ ಎಂಬುದು ಹಣಕಾಸು ತಜ್ಞರ ಅಭಿಮತ. ಎಸ್​ಬಿಐ, ಕೆನರಾ ಬ್ಯಾಂಕ್ ಇತ್ಯಾದಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗಿಂತ ಖಾಸಗಿ ಬ್ಯಾಂಕ್ ಮತ್ತು ಸಣ್ಣ ಬ್ಯಾಂಕುಗಳಲ್ಲಿ ಠೇವಣಿ ದರಗಳು ಹೆಚ್ಚು. ಯಾವ್ಯಾವ ಬ್ಯಾಂಕುಗಳಲ್ಲಿ ಎಫ್​ಡಿ ದರಗಳು ಎಷ್ಟು ಎಂಬ ವಿವರ ಇಲ್ಲಿದೆ.

Bank FD Rates: 15 ಬ್ಯಾಂಕುಗಳಲ್ಲಿ ಠೇವಣಿ ದರಗಳೆಷ್ಟು? ಯಾವ ಬ್ಯಾಂಕಲ್ಲಿ ಗರಿಷ್ಠ ಆಫರ್?
ಠೇವಣಿ
Follow us
|

Updated on: Oct 18, 2023 | 5:40 PM

ಬ್ಯಾಂಕ್​ಗಳಲ್ಲಿ ಉಳಿತಾಯ ಹಣವನ್ನು ಠೇವಣಿ ಇಡುವುದು ಮಧ್ಯಮವರ್ಗದ ಫೇವರಿಟ್ ಹೂಡಿಕೆ ಎನಿಸಿದೆ. ಈಕ್ವಿಟಿ ಆಧಾರಿತ ಮ್ಯುಚುವಲ್ ಫಂಡ್​ಗಳಲ್ಲಿ ಹೂಡಿಕೆ ಹೆಚ್ಚಿದ್ದರೂ ಸಾಂಪ್ರದಾಯಿಕವಾದ ಎಫ್​ಡಿ ಸ್ಕೀಮ್​ಗಳಿಗೆ (fixed deposit schemes) ಮೊರೆಹೋಗುವವರ ಸಂಖ್ಯೆ ಕಡಿಮೆ ಆಗಿಲ್ಲ. ಆರ್​ಡಿ ಮತ್ತು ಎಫ್​ಡಿ ಬಹಳ ಸರಳಗೊಂಡಿದೆ. ಈಗಂತೂ ಆನ್​ಲೈನ್​ನಲ್ಲಿ ಬಹಳ ಬೇಗ ಠೇವಣಿ ಇಡಬಹುದು. ದೀರ್ಘಾವಧಿಗಿಂತ ಹೆಚ್ಚಾಗಿ 5 ವರ್ಷದೊಳಗಿನ ಅಲ್ಪಾವಧಿ ಹೂಡಿಕೆಗೆ ಎಫ್​ಡಿ ಹೇಳಿ ಮಾಡಿಸಿದ್ದಾಗಿದೆ ಎಂಬುದು ಹಣಕಾಸು ತಜ್ಞರ ಅಭಿಮತ. ಎಸ್​ಬಿಐ, ಕೆನರಾ ಬ್ಯಾಂಕ್ ಇತ್ಯಾದಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗಿಂತ ಖಾಸಗಿ ಬ್ಯಾಂಕ್ ಮತ್ತು ಸಣ್ಣ ಬ್ಯಾಂಕುಗಳಲ್ಲಿ ಠೇವಣಿ ದರಗಳು ಹೆಚ್ಚು. ಯಾವ್ಯಾವ ಬ್ಯಾಂಕುಗಳಲ್ಲಿ ಎಫ್​ಡಿ ದರಗಳು ಎಷ್ಟು ಎಂಬ ವಿವರ ಇಲ್ಲಿದೆ.

ವಿವಿಧ ಬ್ಯಾಂಕುಗಳಲ್ಲಿ 1 ಕೋಟಿ ರೂ ಒಳಗಿನ 1ರಿಂದ 5 ವರ್ಷದ ಅವಧಿಯ ಠೇವಣಿಗಳಿಗೆ ನೀಡಲಾಗುವ ಬಡ್ಡಿದರಗಳು

  • ಡಿಸಿಬಿ ಬ್ಯಾಂಕ್: ಶೇ. 7.15ರಿಂದ ಶೇ. 7.90ರವರೆಗೆ ಬಡ್ಡಿ
  • ಎಕ್ಸಿಸ್ ಬ್ಯಾಂಕ್: ಶೇ. 6.75ರಿಂದ ಶೇ. 7.10ರವರೆಗೆ ಬಡ್ಡಿ
  • ಎಚ್​ಡಿಎಫ್​ಸಿ ಬ್ಯಾಂಕ್: ಶೇ. 6.60ರಿಂದ ಶೇ. 7.20ರವರೆಗೆ ಬಡ್ಡಿ
  • ಇಂಡಸ್​ಇಂಡ್ ಬ್ಯಾಂಕ್: ಶೇ. 7.50ಯಿಂದ ಶೇ. 7.85ರವರೆಗೆ ಬಡ್ಡಿ

ಇದನ್ನೂ ಓದಿ: ಜಂಟಿಯಾಗಿ ಗೃಹಸಾಲ ಪಡೆಯಬಹುದಾ? ಅನುಕೂಲ, ಅನನುಕೂಲಗಳೇನು? ಇಲ್ಲಿದೆ ಡೀಟೇಲ್ಸ್

  • ಐಡಿಎಫ್​ಸಿ ಫಸ್ಟ್ ಬ್ಯಾಂಕ್: ಶೇ. 6.50ಯಿಂದ ಶೇ. 7.50ರವರೆಗೆ ಬಡ್ಡಿ
  • ಆರ್​ಬಿಎಲ್ ಬ್ಯಾಂಕ್: ಶೇ. 7ರಿಂದ ಶೇ. 7.80ರವರೆಗೆ ಬಡ್ಡಿ
  • ಯೆಸ್ ಬ್ಯಾಂಕ್: ಶೇ. 7.25ರಿಂದ ಶೇ. 7.50ರವರೆಗೆ ಬಡ್ಡಿ
  • ಐಸಿಐಸಿಐ ಬ್ಯಾಂಕ್: ಶೇ. 6.70ಯಿಂದ ಶೇ. 7.10ರವರೆಗೆ ಬಡ್ಡಿ
  • ಕೆನರಾ ಬ್ಯಾಂಕ್: ಶೇ. 6.85ರಿಂದ ಶೇ. 7.25ರವರೆಗೆ ಬಡ್ಡಿ
  • ಯೂನಿಯನ್ ಬ್ಯಾಂಕ್ ಆಫ್ ಇಂಡಿಯ: ಶೇ. 6.30ಯಿಂದ ಶೇ. 7 ರವರೆಗೆ ಬಡ್ಡಿ
  • ಧನಲಕ್ಷ್ಮಿ ಬ್ಯಾಂಕ್: ಶೇ. 6.75ರಿಂದ ಶೇ. 7.25 ರವರೆಗೆ ಬಡ್ಡಿ
  • ಫೆಡರಲ್ ಬ್ಯಾಂಕ್: ಶೇ. 6.75ರಿಂದ ಶೇ. 7.30 ರವರೆಗೆ ಬಡ್ಡಿ
  • ಬ್ಯಾಂಕ್ ಆಫ್ ಬರೋಡ: ಶೇ. 6.75ರಿಂದ ಶೇ. 7 ರವರೆಗೆ ಬಡ್ಡಿ

ಇದನ್ನೂ ಓದಿ: ಬ್ಯಾಂಕುಗಳಿಗಿಂತ ಎನ್​ಬಿಎಫ್​ಸಿಗಳಲ್ಲಿ ಠೇವಣಿ ದರ ಯಾಕೆ ಹೆಚ್ಚು? ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಎಸ್​ಬಿ ಖಾತೆ ತೆರೆಯಲು ಯಾಕೆ ಸಾಧ್ಯವಿಲ್ಲ?

  • ಇಂಡಿಯನ್ ಓವರ್ಸೀಸ್ ಬ್ಯಾಂಕ್: ಶೇ. 6.50ಯಿಂದ ಶೇ. 7.25 ರವರೆಗೆ ಬಡ್ಡಿ
  • ಪಂಜಾಬ್ ನ್ಯಾಷನಲ್ ಬ್ಯಾಂಕ್: ಶೇ. 6.75ರಿಂದ ಶೇ. 7.25 ರವರೆಗೆ ಬಡ್ಡಿ
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಶೇ. 6.80ಯಿಂದ ಶೇ. 7.10 ರವರೆಗೆ ಬಡ್ಡಿ
  • ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್: ಶೇ. 6.50ರಿಂದ ಶೇ. 7.10 ರವರೆಗೆ ಬಡ್ಡಿ

ಮೇಲೆ ತಿಳಿಸಿದ ದರಗಳು 1ರಿಂದ 5 ವರ್ಷದ ವಿವಿಧ ಅವಧಿಗಳ ಠೇವಣಿಗಳದ್ದಾಗಿವೆ. 1 ಕೋಟಿ ರೂ ಒಳಗಿನ ಠೇವಣಿಗಳಿಗೆ ಈ ದರ ಅನ್ವಯ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು