ಮ್ಯುಚುವಲ್ ಫಂಡ್ ಉದ್ಯಮದಲ್ಲಿ 74 ಲಕ್ಷ ಕೋಟಿ ರೂ; 8 ಕೋಟಿ ಎಸ್​​ಐಪಿ ಅಕೌಂಟ್; ಗೋಲ್ಡ್ ಇಟಿಎಫ್​ಗಳಿಗೆ ಬೇಡಿಕೆ

Over 8 crore active SIP accounts till June 2025: ಮ್ಯೂಚುವಲ್ ಫಂಡ್ ಉದ್ಯಮ ಗಣನೀಯವಾಗಿ ಬೆಳೆಯುತ್ತಿದೆ. ಜೂನ್ ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್ ಮತ್ತು ಗೋಲ್ಡ್ ಇಟಿಎಫ್​​ಗಳಿಗೆ ಸಖತ್ ಬಂಡವಾಳ ಹರಿದುಬಂದಿದೆ. ಭಾರತದ ಮ್ಯುಚುವಲ್ ಫಂಡ್ ಉದ್ಯಮ ನಿರ್ವಹಿಸುತ್ತಿರುವ ಒಟ್ಟು ಆಸ್ತಿ 74 ಲಕ್ಷ ಕೋಟಿ ರೂ ದಾಟಿದೆ.

ಮ್ಯುಚುವಲ್ ಫಂಡ್ ಉದ್ಯಮದಲ್ಲಿ 74 ಲಕ್ಷ ಕೋಟಿ ರೂ; 8 ಕೋಟಿ ಎಸ್​​ಐಪಿ ಅಕೌಂಟ್; ಗೋಲ್ಡ್ ಇಟಿಎಫ್​ಗಳಿಗೆ ಬೇಡಿಕೆ
ಮ್ಯೂಚುವಲ್ ಫಂಡ್

Updated on: Jul 09, 2025 | 5:51 PM

ನವದೆಹಲಿ, ಜುಲೈ 9: ಭಾರತದಲ್ಲಿ ಮ್ಯುಚುವಲ್ ಫಂಡ್​ಗಳ (Mutual Funds) ಮೂಲಕ ಹೂಡಿಕೆ ಮಾಡುವ ಟ್ರೆಂಡ್ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆಯಾದ ಎಎಂಎಫ್​​ಐ (AMFI) ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಜೂನ್ ತಿಂಗಳು ಮ್ಯೂಚುವಲ್ ಫಂಡ್​​ಗಳಲ್ಲಿ ಹೂಡಿಕೆ ಶೇ. 67ರಷ್ಟು ಹೆಚ್ಚಿದೆ. ಮೇ ತಿಂಗಳಲ್ಲಿ 29,572 ಕೋಟಿ ರೂ ಹೂಡಿಕೆ ಬಂದಿದ್ದರೆ ಜೂನ್ ತಿಂಗಳಲ್ಲಿ ಅದು 49,301 ಕೋಟಿ ರೂಗೆ ಏರಿದೆ.

ಈಕ್ವಿಟಿ ಫಂಡ್​​ಗಳಲ್ಲಿ ಹೂಡಿಕೆ ಶೇ. 24ರಷ್ಟು ಹೆಚ್ಚಾಗಿದೆ. ಮೇ ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲಿ 19,013 ಕೋಟಿ ರೂ ಹಣದ ಹರಿವು ಬಂದಿತ್ತು. ಜೂನ್ ತಿಂಗಳಲ್ಲಿ ಹರಿದುಬಂದಿದ್ದು 23,587 ಕೋಟಿ ರೂ. ಈಕ್ವಿಟಿ ಫಂಡ್​ಗಳ ಪೈಕಿ ಸ್ಮಾಲ್ ಕ್ಯಾಪ್ ಫಂಡ್​​ಗಳಿಗೆ ಅತಿಹೆಚ್ಚು ಹೂಡಿಕೆ ಆಗಿದೆ. ಆದರೆ, ಲಾರ್ಜ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಫಂಡ್​​ಗಳಿಗೆ ಹಣದ ಹರಿವಿನಲ್ಲಿ ಹೆಚ್ಚು ಹೆಚ್ಚಳವಾಗಿದೆ.

ಇದನ್ನೂ ಓದಿ: ಷೇರುಮಾರುಕಟ್ಟೆಯಲ್ಲಿ ಜೇನ್ ಸ್ಟ್ರೀಟ್​​ನಂತಹ ವಂಚಕರ ಮಧ್ಯೆ ಟ್ರೇಡಿಂಗ್ ಮತ್ತು ಹೂಡಿಕೆ ಮಾಡುವ ತಂತ್ರ ತಿಳಿದಿರಿ…

ಇದನ್ನೂ ಓದಿ
ಜಿಯೋಬ್ಲ್ಯಾಕ್​ರಾಕ್: ಚೊಚ್ಚಲ ಎನ್​ಎಫ್​ಒಗೆ 17,800 ಕೋಟಿ ರೂ ಹೂಡಿಕೆ
ಮ್ಯುಚುವಲ್ ಫಂಡ್ ಎನ್​​ಎವಿ ಮೌಲ್ಯ ಬದಲಾಗೋದು ಹೇಗೆ?
ಹೇಗಿರಬೇಕು ಹೂಡಿಕೆ? ಅಗತ್ಯಕ್ಕೆ ತಕ್ಕಂತೆ ಹೂಡಿಕೆ ಮಾಡಲು ಕಲಿಯಿರಿ
ಯಾವಾಗ ಹೂಡಿಕೆ ನಿರ್ಗಮಿಸಬೇಕು? ಈ 3 ಅಂಶಗಳು ತಿಳಿದಿರಿ

ಎಂಟು ಕೋಟಿಗೂ ಅಧಿಕ ಎಸ್​​ಐಪಿ ಅಕೌಂಟ್​​ಗಳು

ಮ್ಯುಚುವಲ್ ಫಂಡ್​ಗಳಲ್ಲಿ ಎಸ್​​ಐಪಿ ಮೂಲಕ ಹೂಡಿಕೆ ಮಾಡುವ ವಿಧಾನ ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ. ಜೂನ್ ತಿಂಗಳಲ್ಲಿ 61.91 ಹೊಸ ಸಿಸ್ಟಮ್ಯಾಟಿಕ್ ಇನ್ವೆಸ್ಟ್​​ಮೆಂಟ್ ಪ್ಲಾನ್​​ಗಳು ಶುರುವಾಗಿವೆ. ಈ ಮೂಲಕ ಸಕ್ರಿಯ ಎಸ್​​ಐಪಿಗಳ ಸಂಖ್ಯೆ 8.64 ಕೋಟಿ ರೂಗೆ ಏರಿದೆ.

ಎಎಂಎಫ್​​ಐ ದತ್ತಾಂಶದ ಪ್ರಕಾರ ಜೂನ್ ತಿಂಗಳಲ್ಲಿ ಎಸ್​​ಐಪಿ ಮೂಲಕ ಮ್ಯೂಚುವಲ್ ಫಂಡ್​ಗಳಿಗೆ ಸಿಕ್ಕ ಬಂಡವಾಳ 27,268 ಕೋಟಿ ರೂ. ಒಟ್ಟಾರೆ ಎಸ್​​ಐಪಿಯಿಂದ ಈವರೆಗೆ ಬಂದಿರುವ ಒಟ್ಟು ಹೂಡಿಕೆ 15.30 ಲಕ್ಷ ಕೋಟಿ ರೂ ಎನ್ನಲಾಗಿದೆ.

ಮ್ಯೂಚುವಲ್ ಫಂಡ್​ ಉದ್ಯಮದ ಒಟ್ಟಾರೆ ನಿರ್ವಹಿತ ಬಂಡವಾಳ (Assets under Management) ಅಥವಾ ಆಸ್ತಿ 74.14 ಲಕ್ಷ ಕೋಟಿ ರೂಗೆ ಏರಿದೆ. ಮೇ ತಿಂಗಳಲ್ಲಿ ಈ ಪ್ರಮಾಣವು 71.93 ಲಕ್ಷ ಕೋಟಿ ರೂಗೆ ಏರಿತ್ತು.

ಇದನ್ನೂ ಓದಿ: ಜಿಯೋಬ್ಲ್ಯಾಕ್​ರಾಕ್ ಮ್ಯುಚುವಲ್ ಫಂಡ್​ನ ಎನ್​​ಎಫ್​​ಒಗೆ ಭರ್ಜರಿ ಸ್ಪಂದನೆ; 17,800 ಕೋಟಿ ರೂ ಹೂಡಿಕೆ ಸಂಗ್ರಹ

ಗೋಲ್ಡ್ ಇಟಿಎಫ್​​ಗಳಿಗೆ ಸಖತ್ ಬಂಡವಾಳ

ಜೂನ್ ತಿಂಗಳಲ್ಲಿ ಈಕ್ವಿಟಿಗೆ ಹೋಲಿಸಿದರೆ ಡೆಟ್ ಫಂಡ್​ಗಳಿಗೆ ಹೂಡಿಕೆ ಕಡಿಮೆ ಹರಿವು ಸಿಕ್ಕಿದೆ. ಹೈಬ್ರಿಡ್ ಫಂಡ್​​ಗಳಿಗೆ ಹರಿದುಬಂದ ಹೂಡಿಕೆ ಶೇ. 12ರಷ್ಟು ಹೆಚ್ಚಿದೆ. ಇನ್ನು, ಇಟಿಎಫ್​​ಗಳ ವಿಚಾರಕ್ಕೆ ಬಂದರೆ ಗೋಲ್ಡ್ ಇಟಿಎಫ್​​ಗಳಿಗೆ ಸಖತ್ ಬಂಡವಾಳ ಸಿಕ್ಕಿದೆ. ಮೇ ತಿಂಗಳಲ್ಲಿ ಕೇವಲ 292 ಕೋಟಿ ರೂ ಹೂಡಿಕೆ ಪಡೆದಿದ್ದ ಗೋಲ್ಡ್ ಇಟಿಎಫ್​​ಗಳು ಜೂನ್ ತಿಂಗಳಲ್ಲಿ 2,080.9 ಕೋಟಿ ರೂ ಬಂಡವಾಳ ಸಂಗ್ರಹಿಸಿವೆ. ಅಂದರೆ, ಹೂಡಿಕೆದಾರರಿಂದ ಬಂದ ಬಂಡವಾಳ ಆರು ಪಟ್ಟು ಹೆಚ್ಚಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us