ಹೆಚ್ಚುತ್ತಿದೆ ಎಸ್​ಐಪಿಗಳ ಜನಪ್ರಿಯತೆ; ಈ ವರ್ಷ 1 ಲಕ್ಷ ಕೋಟಿ ರೂ ಮೈಲಿಗಲ್ಲು ಮುಟ್ಟಿದ ಹೂಡಿಕೆ

|

Updated on: Nov 09, 2023 | 6:02 PM

Mutual Fund SIPs: ಈ ಹಣಕಾಸು ವರ್ಷದಲ್ಲಿ ಎಸ್​ಐಪಿಗಳ ಮೇಲೆ ಜನರು ಮಾಡಿರುವ ಹೂಡಿಕೆ 1 ಲಕ್ಷ ಕೋಟಿ ರೂ ಗಡಿ ದಾಟಿದೆ. ಇದು ಏಪ್ರಿಲ್​ನಿಂದ ಈಚೆಗಿನ ಏಳು ತಿಂಗಳ ಮಾಹಿತಿಯಾಗಿದೆ. ಇನ್ನೂ ಐದು ತಿಂಗಳಲ್ಲಿ ಕನಿಷ್ಠ 50,000 ಕೋಟಿ ರೂನಷ್ಟು ಮೊತ್ತವು ಎಸ್​ಐಪಿಗಳಿಂದ ಬರಲಿವೆ. ಅಲ್ಲಿಗೆ 2023-24ರ ಹಣಕಾಸು ವರ್ಷದಲ್ಲಿ ಎಸ್​ಐಪಿ ಕೊಡುಗೆ ಒಂದೂವರೆ ಲಕ್ಷ ಕೋಟಿ ರೂಗಿಂತ ಹೆಚ್ಚಿರಬಹುದು ಎಂಬ ನಿರೀಕ್ಷೆ ಇದೆ.

ಹೆಚ್ಚುತ್ತಿದೆ ಎಸ್​ಐಪಿಗಳ ಜನಪ್ರಿಯತೆ; ಈ ವರ್ಷ 1 ಲಕ್ಷ ಕೋಟಿ ರೂ ಮೈಲಿಗಲ್ಲು ಮುಟ್ಟಿದ ಹೂಡಿಕೆ
ಮ್ಯುಚುವಲ್ ಫಂಡ್
Follow us on

ಜನರು ಮ್ಯುಚುವಲ್ ಫಂಡ್​ಗಳತ್ತ ಆಕರ್ಷಿಸುತ್ತಿರುವುದರ ಜೊತೆಗೆ ಫಂಡ್​ನ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್​ಗಳಲ್ಲಿ (SIP) ಹಣ ಹೂಡಿಕೆ ಮಾಡುತ್ತಿರುವುದೂ ಹೆಚ್ಚುತ್ತಿದೆ. ಅಸೋಸಿಯೇಶನ್ ಆಫ್ ಮ್ಯುಚುವಲ್​ ಫಂಡ್ (AMFI) ಸಂಸ್ಥೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಈ ಹಣಕಾಸು ವರ್ಷದಲ್ಲಿ ಎಸ್​ಐಪಿಗಳ ಮೇಲೆ ಜನರು ಮಾಡಿರುವ ಹೂಡಿಕೆ 1 ಲಕ್ಷ ಕೋಟಿ ರೂ ಗಡಿ ದಾಟಿದೆ. ಇದು ಏಪ್ರಿಲ್​ನಿಂದ ಈಚೆಗಿನ ಏಳು ತಿಂಗಳ ಮಾಹಿತಿಯಾಗಿದೆ. ಇನ್ನೂ ಐದು ತಿಂಗಳಲ್ಲಿ ಕನಿಷ್ಠ 50,000 ಕೋಟಿ ರೂನಷ್ಟು ಮೊತ್ತವು ಎಸ್​ಐಪಿಗಳಿಂದ ಬರಲಿವೆ. ಅಲ್ಲಿಗೆ 2023-24ರ ಹಣಕಾಸು ವರ್ಷದಲ್ಲಿ ಎಸ್​ಐಪಿ ಕೊಡುಗೆ ಒಂದೂವರೆ ಲಕ್ಷ ಕೋಟಿ ರೂಗಿಂತ ಹೆಚ್ಚಿರಬಹುದು ಎಂಬ ನಿರೀಕ್ಷೆ ಇದೆ.

ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆ ಸಾಕಷ್ಟು ಏರುಪೇರು ಕಾಣುತ್ತಿದ್ದರೂ ಜನರು ಮ್ಯುಚುವಲ್ ಫಂಡ್ ಎಸ್​ಐಪಿಗಳ ಮೇಲೆ ವಿಶ್ವಾಸ ಇಡುತ್ತಿರುವುದು ವೇದ್ಯವಾಗಿದೆ. ಅಕ್ಟೋಬರ್ ತಿಂಗಳಲ್ಲಿ ಒಟ್ಟು ಎಸ್​ಐಪಿಗಳ ಸಂಖ್ಯೆ 7.30 ಕೋಟಿ ತಲುಪಿದೆ. ಇದವರೆಗಿನ ಗರಿಷ್ಠ ಸಂಖ್ಯೆ ಇದು. ಅದೇ ಅಕ್ಟೋಬರ್ ತಿಂಗಳಲ್ಲಿ ಎಸ್​ಐಪಿಗಳಿಂದ ಸಂಗ್ರಹವಾದ ಹೂಡಿಕೆ ಮೊತ್ತ 8.59 ಲಕ್ಷ ಕೋಟಿ ರೂ ತಲುಪಿದೆ.

ಇದನ್ನೂ ಓದಿ: ಕೇವಲ 10,000 ರೂ ಲಂಪ್ಸಮ್ ಹೂಡಿಕೆ ತರುತ್ತದೆ 30 ಲಕ್ಷ ರಿಟರ್ನ್; ಈ ಮಲ್ಟಿ ಅಸೆಟ್ ಫಂಡ್ ಅಚ್ಚರಿ

ಈ ರೀತಿ ಎಸ್​ಐಪಿ ಮೂಲಕ ಹೂಡಿಕೆ ಹೆಚ್ಚುತ್ತಿರುವುದು ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಮ್ಯುಚುವಲ್ ಫಂಡ್​ಗಳಲ್ಲಿ ಹಣದ ಹರಿವು ಸ್ಥಿರ ಮತ್ತು ನಿರಂತರವಾಗಿರುತ್ತದೆ. ಎಸ್​ಐಪಿ ಆಯ್ಕೆ ಮಾಡಿಕೊಳ್ಳುವ ಹೂಡಿಕೆದಾರರು ದೀರ್ಘಕಾಲೀನ ಅವಧಿ ಹೂಡಿಕೆ ಮಾಡುವವರಾಗಿರುತ್ತಾರೆ. ಮಾರುಕಟ್ಟೆ ಏರಿಳಿತವಾದಾಗೆಲ್ಲಾ ಇವರು ಹೂಡಿಕೆ ಹಿಂಪಡೆಯುವವರಂಥವರಲ್ಲ. ಇದರಿಂದ ಫಂಡ್​ಗಳಿಗೆ ಒಂದು ಸ್ಥಿರತೆ ಸಿಗುತ್ತದೆ.

2023-24ರ ಹಣಕಾಸು ವರ್ಷದಲ್ಲಿ ಎಸ್​ಐಪಿಗಳ ಮೂಲಕ ಆದ ಹೂಡಿಕೆ

  1. 2023ರ ಏಪ್ರಿಲ್: 13,728 ಕೋಟಿ ರೂ
  2. 2023ರ ಮೇ: 14,749 ಕೋಟಿ ರೂ
  3. 2023ರ ಜೂನ್: 14,734 ಕೋಟಿ ರೂ
  4. 2023ರ ಜುಲೈ: 15,245 ಕೋಟಿ ರೂ
  5. 2023ರ ಆಗಸ್ಟ್: 15,814 ಕೋಟಿ ರೂ
  6. 2023ರ ಸೆಪ್ಟೆಂಬರ್: 16,420 ಕೋಟಿ ರೂ
  7. 2023ರ ಅಕ್ಟೋಬರ್: 16,928 ಕೋಟಿ ರೂ

ಇದನ್ನೂ ಓದಿ: ಮ್ಯುಚುವಲ್ ಫಂಡ್​ನಲ್ಲಿ ಯಾವಾಗ ಹೂಡಿಕೆ ಆರಂಭಿಸಬೇಕು? ಷೇರು ಮಾರುಕಟ್ಟೆಯ ಸ್ಥಿತಿ ಪ್ರಕಾರ ನಿಮ್ಮ ಹೂಡಿಕೆ ಶುರು ಆಗಬೇಕಾ? ಇಲ್ಲಿದೆ ಡೀಟೇಲ್ಸ್

7 ತಿಂಗಳಲ್ಲಿ ಒಟ್ಟು ಹೂಡಿಕೆ 1.06 ಲಕ್ಷ ಕೋಟಿ ರೂ ಆಗಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ