
ನವದೆಹಲಿ, ಏಪ್ರಿಲ್ 25: ಪ್ರಮುಖ ಎನ್ಬಿಎಫ್ಸಿಗಳಲ್ಲೊಂದಾದ ಶ್ರೀರಾಮ್ ಫೈನಾನ್ಸ್ ಲಿ (SFL- Shriram Finance Ltd) ಸಂಸ್ಥೆ ತನ್ನ ಫಿಕ್ಸೆಡ್ ಡೆಪಾಸಿಟ್ ದರಗಳನ್ನು (Fixed deposit rates) ಪರಿಷ್ಕರಿಸಿದೆ. 12 ತಿಂಗಳಿಂದ 60 ತಿಂಗಳವರೆಗಿನ ಅವಧಿಗಳ ಠೇವಣಿಗಳಿಗೆ ಈ ದರಪರಿಷ್ಕರಣೆ ನಡೆದಿದೆ. ಗರಿಷ್ಠ ಶೇ. 8.4ರವರೆಗೂ ಬಡ್ಡಿದರ ನೀಡಲಾಗುತ್ತಿದೆ. ಮೇ 2ರಿಂದ ಈ ಪರಿಷ್ಕೃತ ಎಫ್ಡಿ ಪ್ಲಾನ್ಗಳು ಜಾರಿಗೆ ಬರುತ್ತವೆ. ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಹೆಚ್ಚಿನ ಬಡ್ಡಿ ಸಿಗುತ್ತದೆ.
ಇಲ್ಲಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಎಫ್ಡಿ ಪ್ಲಾನ್ಗಳ ಪೈಕಿ 36ರಿಂದ 60 ತಿಂಗಳ ಅವಧಿಯ ಡೆಪಾಸಿಟ್ಗಳಿಗೆ ಶೇ. 8.4 ವಾರ್ಷಿಕ ಬಡ್ಡಿದರ ನಿಗದಿ ಮಾಡಲಾಗಿದೆ. ಈ ಪೈಕಿ 60 ತಿಂಗಳ, ಅಂದರೆ, 5 ವರ್ಷದ ಅವಧಿಯ ಠೇವಣಿಗೆ ಸಿಗುವ ರಿಟರ್ನ್ಸ್ ಅಥವಾ ಯೀಲ್ಡ್ ವರ್ಷಕ್ಕೆ ಶೇ. 9.93ರಷ್ಟಾಗುತ್ತದೆ.
ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಡೆಪಾಸಿಟ್ ಪ್ಲಾನ್ನಲ್ಲಿ ತಿಂಗಳಿಗೊಮ್ಮೆ ಬಡ್ಡಿ ಜಮೆ ಆಗುತ್ತಿರುತ್ತದೆ. ಇದರಿಂದ ಚಕ್ರಬಡ್ಡಿ ಬೇಗನೇ ಬೆಳೆಯುತ್ತದೆ. ಹೀಗಾಗಿ, ಅಂತಿಮ ಯೀಲ್ಡ್ ಹೆಚ್ಚೇ ಇರುತ್ತದೆ. ನೀವು 5,000 ರೂ ಅನ್ನು 60 ತಿಂಗಳು ಡೆಪಾಸಿಟ್ ಇಟ್ಟರೆ ಅಂತಿಮವಾಗಿ ನಿಮಗೆ ಸಿಗುವ ರಿಟರ್ನ್ 7,482 ರೂ ಆಗಿರುತ್ತದೆ.
ಇದನ್ನೂ ಓದಿ: ಆಭರಣ ಚಿನ್ನದ ಬೆಲೆ 9,005 ರೂ; ಇಲ್ಲಿದೆ ಇವತ್ತಿನ ದರಪಟ್ಟಿ
ಶ್ರೀರಾಮ್ ಫೈನಾನ್ಸ್ ಲಿ ಸಂಸ್ಥೆಯ ಎಲ್ಲಾ ಡೆಪಾಸಿಟ್ ಪ್ಲಾನ್ಗಳಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಶೇ. 0.50ರಷ್ಟು ಹೆಚ್ಚುವರಿ ಬಡ್ಡಿ ಸಿಗುತ್ತದೆ. ಉದಾಹರಣೆಗೆ, 60 ತಿಂಗಳ ಡೆಪಾಸಿಟ್ ಪ್ಲಾನ್ನಲ್ಲಿ ಶೇ. 8.90ರಷ್ಟು ಬಡ್ಡಿ ಸಿಗುತ್ತದೆ.
ಮಹಿಳೆಯರಿಗೂ ಶೇ. 0.10ರಷ್ಟು ಹೆಚ್ಚುವರಿ ಬಡ್ಡಿ ಸಿಗುತ್ತದೆ. ಇನ್ನು, ನೀವು ಈಗಾಗಲೇ ಶ್ರೀರಾಮ್ ಫೈನಾನ್ಸ್ನಲ್ಲಿ ಡೆಪಾಸಿಟ್ ಪ್ಲಾನ್ ಪಡೆದುಕೊಂಡು, ಅದನ್ನು ನವೀಕರಿಸಿದಲ್ಲಿ ಶೇ. 0.25ರಷ್ಟು ಹೆಚ್ಚುವರಿ ಬಡ್ಡಿಯನ್ನು ಆಫರ್ ಮಾಡಲಾಗುತ್ತದೆ.
ಇದನ್ನೂ ಓದಿ: ಆರ್ಬಿಐ ಬಡ್ಡಿದರ ಕಡಿತದ ಬಳಿಕ ಎಸ್ಬಿಐ, ಎಚ್ಡಿಎಫ್ಸಿ, ಐಸಿಐಸಿಐ ಬ್ಯಾಂಕಲ್ಲಿ ಇತ್ತೀಚಿನ ಎಫ್ಡಿ ದರಗಳಿವು
ಇತರ ಕಮರ್ಷಿಯಲ್ ಬ್ಯಾಂಕುಗಳಿಗೆ ಹೋಲಿಸಿದರೆ ಎನ್ಬಿಎಫ್ಸಿಗಳು ಡೆಪಾಸಿಟ್ಗಳಿಗೆ ಹೆಚ್ಚು ಬಡ್ಡಿ ಆಫರ್ ಮಾಡುತ್ತವೆ. ಎಸ್ಬಿಐ, ಎಚ್ಡಿಎಫ್ಸಿ, ಎಕ್ಸಿಸ್ ಮೊದಲಾದ ಬ್ಯಾಂಕುಗಳಲ್ಲಿ ಎಫ್ಡಿಗಳಿಗೆ ಗರಿಷ್ಠ ಶೇ. 7.50 ಬಡ್ಡಿ ಇದೆ. ಅದಕ್ಕೆ ಹೋಲಿಸಿದರೆ ಶ್ರೀರಾಮ್ ಫೈನಾನ್ಸ್ನಲ್ಲಿ ಒಂದು ಪರ್ಸಂಟೇಜ್ ಪಾಯಿಂಟ್ನಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ವಿವಿಧ ಸಹಕಾರಿ ಬ್ಯಾಂಕುಗಳೂ ಕೂಡ ಠೇವಣಿಗಳಿಗೆ ಹೆಚ್ಚು ಬಡ್ಡಿ ಆಫರ್ ಮಾಡುತ್ತವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:01 pm, Fri, 25 April 25