ನ್ಯಾಷನಲ್ ಪೆನ್ಷನ್ ಸಿಸ್ಟಂ ಈಗೀಗ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ತೆರಿಗೆ ವಿನಾಯಿತಿ ಸಿಗುತ್ತದೆಂದು ಬಹಳಷ್ಟು ಜನರು ಎನ್ಪಿಎಸ್ ಅನ್ನು ಅಪ್ಪುತ್ತಿದ್ದಾರಾದರೂ, ಅದನ್ನು ಹೊರತುಪಡಿಸಿಯೂ ಅದು ಉತ್ತಮ ಪಿಂಚಣಿ ಸೃಷ್ಟಿಸಲು ಉತ್ತಮ ಆಯ್ಕೆ ಹೌದು. ಸರ್ಕಾರಿ ಉದ್ಯೋಗಿಗಳು ಮಾತ್ರವಲ್ಲ, ಯಾರು ಬೇಕಾದರೂ ಎನ್ಪಿಎಸ್ ಖಾತೆ ತೆರೆದು ತಾವೇ ಸ್ವಂತವಾಗಿ ಪಿಂಚಣಿ ಸೃಷ್ಟಿಸುವ ಕೆಲಸ ಮಾಡಬಹುದು.
ಹಣದ ಮೌಲ್ಯ ದಿನೇ ದಿನೇ ಕಡಿಮೆ ಆಗುತ್ತಿರುತ್ತದೆ. ಇದು ಹಣದುಬ್ಬರದ ಎಫೆಕ್ಟ್. ಇವತ್ತು ನೂರು ರುಪಾಯಿಗೆ ಸಿಗುವ ವಸ್ತುವಿನ ಬೆಲೆ 25 ವರ್ಷದ ಬಳಿಕ ಮುನ್ನೂರು ರೂ ಆಗಬಹುದು. ಈ ಅಂಶಗಳನ್ನು ಪರಿಗಣಿಸಿ ಪಿಂಚಣಿ ಎಷ್ಟಿರಬೇಕು ಎಂದು ಮೊದಲೇ ಅಂದಾಜಿಸಿ ಅದಕ್ಕೆ ತಕ್ಕಂತೆ ಹೂಡಿಕೆ ಮಾಡಬೇಕು.
ಇದನ್ನೂ ಓದಿ: ಲೈಫ್ ಇನ್ಷೂರೆನ್ಸ್ ಪಾಲಿಸಿ ಸರೆಂಡರ್ ಮಾಡಬೇಕೆನ್ನುವವರ ಗಮನಕ್ಕೆ; ಎಲಿಪ್ ಸ್ಕೀಮ್ ಬಗ್ಗೆ ತಿಳಿಯಿರಿ
ನ್ಯಾಷನಲ್ ಪೆನ್ಷನ್ ಸಿಸ್ಟಂ ಮಾರುಕಟ್ಟೆ ಜೋಡಿತ ಸ್ಕೀಮ್ ಆಗಿದೆ. ಇದರ ಫಂಡ್ ಅನ್ನು ಈಕ್ವಿಟಿ ಅಥವಾ ಡೆಟ್ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಹೀಗಾಗಿ, ಎನ್ಪಿಎಸ್ನಿಂದ ಸಿಗುವ ರಿಟರ್ನ್ ವ್ಯತ್ಯಾಸ ಆಗಬಹುದು. ಒಂದು ವೇಳೆ ನಿಮ್ಮ ಎನ್ಪಿಎಸ್ ಹೂಡಿಕೆ ವರ್ಷಕ್ಕೆ ಶೇ. 10ರಷ್ಟು ದರದಲ್ಲಿ ಬೆಳೆಯಿತು ಎಂದಿಟ್ಟುಕೊಳ್ಳಿ, ಆಗ ಒಂದು ಲಕ್ಷ ರೂ ಪಿಂಚಣಿ ಸೃಷ್ಟಿಸುವುದು ಹೇಗೆ?
ನಿಮ್ಮ ವಯಸ್ಸು ಈಗ 35 ವರ್ಷ ಆಗಿದೆ ಎಂದಿಟ್ಟುಕೊಂಡರೆ ನೀವು ನಿವೃತ್ತರಾಗಲು 25 ವರ್ಷ ಕಾಲಾವಕಾಶ ಇರುತ್ತದೆ. ಈ 25 ವರ್ಷ ನೀವು ಎನ್ಪಿಎಸ್ನಲ್ಲಿ ಸತತವಾಗಿ ಹೂಡಿಕೆ ಮಾಡುತ್ತಾ ಹೋಗಬಹುದು.
ಇದನ್ನೂ ಓದಿ: ಸುಕನ್ಯಾ ಸಮೃದ್ಧಿ, ಪಿಪಿಎಫ್ ಇತ್ಯಾದಿ ಸ್ಮಾಲ್ ಸೇವಿಂಗ್ ಸ್ಕೀಮ್ ದರಗಳ ಮುಂದುವರಿಕೆ; ಇಲ್ಲಿದೆ ಈ ಯೋಜನೆಗಳ ದರಪಟ್ಟಿ
ನೀವು ನಿವೃತ್ತರಾದಾಗ ಒಂದು ಭಾಗವನ್ನು ಆನ್ಯುಟಿ ಇನ್ಷೂರೆನ್ಸ್ ಪಾಲಿಸಿ ಖರೀದಿಸಲು ಉಪಯೋಗಿಸಬೇಕು ಎನ್ನುವ ನಿಯಮ ಇದೆ. ಇನ್ನುಳಿದ ಹಣವನ್ನು ನೀವು ಲಂಪ್ಸಮ್ ಆಗಿ ಪಡೆಯಬಹುದು. ನಿವೃತ್ತಿ ಬಳಿಕ ನಿಮ್ಮ ಎನ್ಪಿಎಸ್ ಮೊತ್ತದ ಶೇ. 80ರಷ್ಟು ಹಣವನ್ನು ವರ್ಷಕ್ಕೆ ಶೇ. 6ರಷ್ಟು ರಿಟರ್ನ್ ಕೊಡುವ ಆ್ಯನುಟಿ ಪ್ಲಾನ್ವೊಂದನ್ನು ಖರೀದಿಸಲು ಉಪಯೋಗಿಸುತ್ತೀರಿ ಎಂದಿಟ್ಟುಕೊಳ್ಳಿ. ಅಗ ನೀವು ಮಾಸಿಕವಾಗಿ 17,000 ರೂನಂತೆ 25 ವರ್ಷ ಕಾಲ ಹೂಡಿಕೆ ಮಾಡಬೇಕಾಗುತ್ತದೆ.
ಒಂದು ವೇಳೆ ನೀವು ತಿಂಗಳಿಗೆ 34,000 ರೂನಂತೆ 25 ವರ್ಷ ಕಾಲ ಹೂಡಿಕೆ ಮಾಡಿದಲ್ಲಿ ನಿವೃತ್ತಿ ಬಳಿಕ ಒಂದು ಲಕ್ಷ ಪಿಂಚಣಿ ಗಳಿಸಲು ಶೇ 40ರಷ್ಟು ಹಣವನ್ನು ಮಾತ್ರವೇ ಆ್ಯನುಟಿಗೆ ಬಳಸಬಹುದು. ಇನ್ನುಳಿದ ಮೊತ್ತವನ್ನು ಲಂಪ್ಸಮ್ ಆಗಿ ಪಡೆದು ಬೇರೆಡೆ ಇಟ್ಟುಕೊಳ್ಳಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ