AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈಫ್ ಇನ್ಷೂರೆನ್ಸ್ ಪಾಲಿಸಿ ಸರೆಂಡರ್ ಮಾಡಬೇಕೆನ್ನುವವರ ಗಮನಕ್ಕೆ; ಎಲಿಪ್ ಸ್ಕೀಮ್ ಬಗ್ಗೆ ತಿಳಿಯಿರಿ

ACESO ALIP scheme for policyholders surrendering LIC policy: ಎಲ್​ಐಸಿಯ ಪಾಲಿಸಿಯನ್ನು ಮರಳಿಸಿದರೆ ನಿಮ್ಮ ಲೈಫ್ ಬೆನಿಫಿಟ್ ನಿಂತು ಹೋಗುತ್ತದೆ. ನೀವು ಕಟ್ಟಿರುವ ಪ್ರೀಮಿಯಮ್ ಹಣ ಮಾತ್ರ ಕೈಗೆ ಬರುತ್ತದೆ. ಆದರೆ, ACESO ಎಂಬ ಖಾಸಗಿ ಸಂಸ್ಥೆಯೊಂದು ಎಲಿಪ್ ಎಂಬ ಸ್ಕೀಮ್ ಜಾರಿಗೆ ತಂದಿದ್ದು, ಇದು ಎಲ್​ಐಸಿ ಪಾಲಿಸಿ ಸರೆಂಡರ್ ಮಾಡುವವರಿಂದ ಪಾಲಿಸಿ ಪಡೆದು ಅದನ್ನು ಮುಂದುವರಿಸಿಕೊಂಡು ಹೋಗುತ್ತದೆ. ಪಾಲಿಸಿದಾರರಿಗೆ ಆವರೆಗಿನ ಪ್ರೀಮಿಯಮ್ ಹಣವನ್ನು ನೀಡುತ್ತದೆ. ಪಾಲಿಸಿದಾರನಿಗೆ ಡೆತ್ ಬೆನಿಫಿಟ್ ಕವರೇಜ್ ಮುಂದುವರಿಯುತ್ತಿರುತ್ತದೆ. ವಾರಸುದಾರರು ಹಣ ಕ್ಕೇಮ್ ಮಾಡುವಾಗ ಖರ್ಚು ವೆಚ್ಚಗಳನ್ನು ಮುರಿದುಕೊಂಡು ಉಳಿದ ಹಣ ನೀಡಲಾಗುತ್ತದೆ.

ಲೈಫ್ ಇನ್ಷೂರೆನ್ಸ್ ಪಾಲಿಸಿ ಸರೆಂಡರ್ ಮಾಡಬೇಕೆನ್ನುವವರ ಗಮನಕ್ಕೆ; ಎಲಿಪ್ ಸ್ಕೀಮ್ ಬಗ್ಗೆ ತಿಳಿಯಿರಿ
ಲೈಫ್ ಇನ್ಷೂರೆನ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 08, 2024 | 5:41 PM

Share

ನೀವು ಎಂಡೋಮೆಂಟ್ ಲೈಫ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಿ, ಕಾರಣಾಂತರದಿಂದ ಅದನ್ನು ಮುಂದುವರಿಸುವುದು ಬೇಡ ಎಂಬ ಭಾವನೆಯಲ್ಲಿದ್ದರೆ ಇಗೋ ಇಲ್ಲೊಂದು ಸುದ್ದಿ ಇದೆ. ಎಲ್​ಐಸಿ ಪಾಲಿಸಿಯನ್ನು ಸರೆಂಡರ್ ಮಾಡಿದರೆ ನೀವು ಪಾವತಿಸಿರುವ ಪ್ರೀಮಿಯಮ್ ಹಣ ಮರಳುವ ಜೊತೆಗೆ ಲೈಫ್ ಕವರ್ ಬೆನಿಫಿಟ್ ಕೂಡ ಮುಂದುವರಿಯುತ್ತದೆ. ಅರೆ, ಇದು ಯಾರಿಗಾದರೂ ಅಚ್ಚರಿ ಎನಿಸುವ ಸುದ್ದಿ. ಆದರೆ, ಸರೆಂಡರ್ ಆದ ಪಾಲಿಸಿಯ ಪ್ರೀಮಿಯಮ್ ಹಣ ಕೊಟ್ಟು ಕವರೇಜ್ ಕೂಡ ಮುಂದುವರಿಸುವ ಕೆಲಸವನ್ನು ಎಲ್​ಐಸಿ ಮಾಡೋದಿಲ್ಲ. ಖಾಸಗಿ ಸಂಸ್ಥೆಯೊಂದು ಇದಕ್ಕಾಗೆಂದು ಎಲಿಪ್ ಸ್ಕೀಮ್ ಅನ್ನು ಪ್ರಕಟಿಸಿದೆ. ACESO ಎಂಡೋಮೆಂಟ್ ಸರ್ವಿಸಸ್ ಎಂಬ ಸಂಸ್ಥೆ ಭಾರತದಲ್ಲಿ ಮೊದಲ ಬಾರಿಗೆ ಎಲಿಪ್ ಎಂಬ ಸೇವೆ ಆರಂಭಿಸಿದೆ.

ಈಗಿರುವ ನಿಯಮಗಳ ಪ್ರಕಾರ ಎಲ್​ಐಸಿ ಪಾಲಿಸಿಯನ್ನು ನೀವು ಎಲ್​ಐಸಿ ಸಂಸ್ಥೆಗೆ ಮರಳಿಸಬೇಕಾಗುತ್ತದೆ. ಹೀಗೆ ಪಾಲಿಸಿಯನ್ನು ಸರೆಂಡರ್ ಮಾಡಿದರೆ ಆವರೆಗೆ ಕಟ್ಟಿರುವ ಪ್ರೀಮಿಯಮ್ ಹಣ ಮಾತ್ರವೇ ಸಿಗುತ್ತದೆ. ಲೈಫ್ ಕವರೇಜ್ ಬೆನಿಫಿಟ್ ನಿಂತು ಹೋಗುತ್ತದೆ. ಹೀಗಾಗಿ, ಬೇಡವೆಂದರೂ ಎಲ್​ಐಸಿ ಪಾಲಿಸಿಯನ್ನು ಪೂರ್ಣಾವಧಿ ಮುಂದುವರಿಸಿಕೊಂಡು ಹೋಗುವುದು ಅನಿವಾರ್ಯ ಆಗುತ್ತದೆ. ಈ ಸಂದರ್ಭದಲ್ಲಿ ACESO ಎಂಡೋಮೆಂಟ್ ಸರ್ವಿಸಸ್ ಸಂಸ್ಥೆಯ ALIP ಯೋಜನೆ ಸಹಾಯಕ್ಕೆ ಬರುತ್ತದೆ.

ACESO ಎಂಡೋಮೆಂಟ್ ಸರ್ವಿಸಸ್ ಇತ್ತೀಚೆಗೆ ಅಸೈನ್ಮೆಂಟ್ ಆಫ್ ಲೈಫ್ ಇನ್ಷೂರೆನ್ಸ್ ಪಾಲಿಸಿ ಅಥವಾ ALIP ಸ್ಕೀಮ್ ಅನ್ನು ಆರಂಭಿಸಿದೆ. ಎಲ್​ಐಸಿ ಪಾಲಿಸಿಯನ್ನು ಸರೆಂಡರ್ ಮಾಡುವವರಿಗೆ ಈ ಸಂಸ್ಥೆ ಪ್ರೀಮಿಯಮ್ 48 ಗಂಟೆಯಲ್ಲಿ ಪ್ರೀಮಿಯಮ್ ಹಣ ಕೊಡುವುದರ ಜೊತೆಗೆ ಅವರ ಲೈಫ್ ಕವರೇಜ್ ಅನ್ನೂ ಮುಂದುವರಿಸುವಂತೆ ಮಾಡುತ್ತದೆ. ಪಾಲಿಸಿದಾರ ಸತ್ತರೆ ಇನ್ಷೂರ್ಡ್ ಮೊತ್ತವು ವಾರಸುದಾರರಿಗೆ ವರ್ಗವಾಗುತ್ತದೆ. ಇದೇ ವೇಳೆ ಎಲ್​ಐಸಿಯ ಆ ಪಾಲಿಸಿಯನ್ನು ACESO ಮುಂದುವರಿಸಿಕೊಂಡು ಹೋಗುತ್ತದೆ.

ಇದನ್ನೂ ಓದಿ: ಆಯುಷ್ಮಾನ್ ಭಾರತ್ ಸ್ಕೀಮ್: ಇನ್ಷೂರೆನ್ಸ್ ಮೊತ್ತ ಹೆಚ್ಚಿಸಲು ಮತ್ತು ಹೆಚ್ಚು ಜನರಿಗೆ ತಲುಪಿಸಲು ಯತ್ನ ಸಾಧ್ಯತೆ

ಎಲಿಪ್ ಸ್ಕೀಮ್ ಹೇಗೆ ಕೆಲಸ ಮಾಡುತ್ತೆ?

ACESO ಸಂಸ್ಥೆ ಪಾಲಿಸಿ ಸರೆಂಡರ್ ಮಾಡಿದವರಿಗೆ ತನ್ನ ಕೈಯಿಂದಲೇ ಹಣ ಕಟ್ಟಿ ಕೊಡುತ್ತದೆ. ಈ ರೀತಿ ಸರೆಂಡರ್ ಆದ ಪಾಲಿಸಿಗಳನ್ನು ಸೇರಿಸಿ ಪಾಸ್ ಥ್ರೂ ಸರ್ಟಿಫಿಕೇಟ್ಸ್ (ಪಿಟಿಸಿ) ಅನ್ನು ಸೃಷ್ಟಿಸುತ್ತದೆ. ಇವು ಒಂದು ರೀತಿಯಲ್ಲಿ ಬಾಂಡ್​​ನಂತೆ. 12 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ವರ್ಷಕ್ಕೆ ಶೇ. 7.75ರಿಂದ ಶೇ 8ರಷ್ಟು ಆದಾಯವನ್ನು ಆಫರ್ ಮಾಡಲಾಗುತ್ತದೆ. ಈ ಪಿಟಿಸಿಗಳ ಮೇಲೆ ಹೂಡಿಕೆದಾರರು ಹಾಕುವ ಹಣವನ್ನು ACESO ಸಂಸ್ಥೆ ಪಾಲಿಸಿದಾರರಿಗೆ ಹಣ ಮರಳಿಸಲು ಬಳಸುತ್ತದೆ.

ಲೈಫ್ ಕವರ್ ಹೇಗೆ ಮಾಡುತ್ತೆ?

ಇಲ್ಲಿ ಪಾಲಿಸಿದಾರ ಮೃತಪಟ್ಟರೆ ಅವರ ವಾರಸುದಾರರಿಗೆ ಇನ್ಷೂರೆನ್ಸ್ ಹಣವನ್ನು ನೀಡುವಾಗ, ಸರೆಂಡರ್ ಮಾಡಿದಾಗಿನಿಂದ ಆವರೆಗೆ ಕಟ್ಟಲಾಗಿರುವ ಹಣ ಮತ್ತು ಬಡ್ಡಿ ಇತ್ಯಾದಿಯನ್ನು ಮುರಿದುಕೊಂಡು ಉಳಿದ ಹಣವನ್ನು ಕೊಡುತ್ತದೆ. ಪಾಲಿಸಿದಾರರಿಗೆ ಮೂಲ ಪಾಲಿಸಿಯಲ್ಲಿ ತಿಳಿಸಲಾದಷ್ಟು ಮೊತ್ತವು ಸಿಗುವುದಿಲ್ಲ.

ಇದನ್ನೂ ಓದಿ: ಇನ್ಷೂರೆನ್ಸ್ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ? ಅದರ ಪ್ರಯೋಜನಗಳೇನು ತಿಳಿದಿರಿ

ಎಲ್​ಐಸಿಯಿಂದ ಆಕ್ಷೇಪ

ACESO ಸಂಸ್ಥೆಯ ಎಲಿಪ್ ಸ್ಕೀಮ್​ಗೆ ಭಾರತೀಯ ಜೀವ ವಿಮಾ ನಿಗಮ ಆಕ್ಷೇಪ ವ್ಯಕ್ತಪಡಿಸಿದೆ. ಈ ರೀತಿ ಇನ್ಷೂರೆನ್ಸ್ ಪಾಲಿಸಿಯನ್ನು ಇನ್ನೊಬ್ಬರಿಗೆ ಮಾರುವುದಾಗಲೀ, ವರ್ಗಾವಣೆ ಮಾಡುವುದಾಗಿ ಅವಕಾಶ ನೀಡುವುದಿಲ್ಲ. ಇಂಥ ಪ್ರಕರಣಗಳಲ್ಲಿ ಕ್ಲೇಮ್ ಮಾಡುವ ಹಣವನ್ನು ರಿಜೆಕ್ಟ್ ಮಾಡುವ ಹಕ್ಕು ಎಲ್​ಐಸಿಗೆ ಇರುತ್ತದೆ. ಪಾಲಿಸಿದಾರರು ಈ ರೀತಿಯ ಸ್ಕೀಮ್​ಗಳಿಗೆಲ್ಲಾ ಮಾರು ಹೋಗಬಾರದು ಎಂದು ಕಳೆದ ತಿಂಗಳು ಎಲ್​ಐಸಿ ಹೇಳಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ