ಯಾವುದೇ ಅಡಮಾನ ಇಲ್ಲದೇ ಸಿಗುವ ಸಾಲವೆಂದರೆ ಪರ್ಸನಲ್ ಲೋನ್. ನಮ್ಮ ಹಿಂದಿನ ಹಣಕಾಸು ಶಿಸ್ತು ಪಾಲನೆಯ ಆಧಾರದ ಮೇಲೆ ಮತ್ತು ನಮ್ಮ ಆದಾಯದ ಆಧಾರದ ಮೇಲೆ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳು ಸಾಲಗಳನ್ನು ನೀಡುತ್ತವೆ. ಇದೆಲ್ಲದಕ್ಕೂ ಕ್ರೆಡಿಟ್ ಸ್ಕೋರ್ ಆಧಾರವಾಗಿರುತ್ತದೆ. ಒಂದು ವೇಳೆ ಬೇರೆ ಬೇರೆ ಕಾರಣಗಳಿಗೆ ನಿಮ್ಮ ಕ್ರೆಡಿಟ್ ಸ್ಕೋರ್ ತೀರಾ ಕಡಿಮೆ ಇದ್ದರೆ ಪರ್ಸನಲ್ ಲೋನ್ ಸಿಗುವುದು ಬಹಳ ಕಷ್ಟವಾಗುತ್ತದೆ. ಸಿಕ್ಕರೂ ಕೂಡ ಬಡ್ಡಿದರ ದುಬಾರಿಯಾಗಿರುತ್ತದೆ. ಚಿನ್ನ ಇದ್ದರೆ ತುರ್ತಾಗಿ ಯಾವುದೇ ಸೆಕ್ಯೂರಿಟಿ ಇಲ್ಲದೇ ಸಾಲ ಪಡೆಯಬಹುದು. ಅದೂ ಇಲ್ಲದೇ ಇದ್ದ ಪಕ್ಷದಲ್ಲಿ ಬೇರೆ ಖಾಸಗಿ ಹಣಕಾಸು ಸಂಸ್ಥೆಗಳು ಅಥವಾ ಫಿನ್ಟೆಕ್ ಕಂಪನಿಗಳ ಮುಖಾಂತರ ಸಾಲ ಪಡೆಯಬಹುದು.
ಆನ್ಲೈನ್ನಲ್ಲಿ ಸುಲಭವಾಗಿ ಸಾಲ ನೀಡುತ್ತೇವೆ ಎಂದು ಹಲವು ಲೋನ್ ಆ್ಯಪ್ಗಳು ಆಫರ್ ಮಾಡುವುದನ್ನು ನೋಡಿರಬಹುದು. ಆದರೆ, ಇವುಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಅದರ ಬದಲು ಹೆಚ್ಚು ವಿಶ್ವಾಸಾರ್ಹವಾದ ಶ್ರೀರಾಮ್ ಫೈನಾನ್ಸ್, ಬಜಾಜ್ ಫೈನಾನ್ಸ್, ಪೇಟಿಎಂ, ಫೋನ್ಪೆ, ಗ್ರೋ, ಕ್ರೆಡಿಟ್ಬೀ, ಲೆಂಡಿಂಗ್ಕಾರ್ಟ್ ಇತ್ಯಾದಿ ಫಿನ್ಟೆಕ್ ಪ್ಲಾಟ್ಫಾರ್ಮ್ಗಳಲ್ಲಿ ಪ್ರಯತ್ನಿಸಬಹುದು.
ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆ: ಅ. 1ರಿಂದ ಬದಲಾಗಲಿವೆ 2 ನಿಯಮಗಳು, ಗಮನಿಸಿ
ಇದನ್ನೂ ಓದಿ: ಎಸ್ಐಪಿಯತ್ತ ಜನ ಮುಗಿಬೀಳಲು ಏನು ಕಾರಣ? ಈ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಹೊಂದುವ ಮುನ್ನ ನೀವು ತಿಳಿಯಬೇಕಾದ್ದೇನು?
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ