Investments: ಪೋಸ್ಟ್ ಆಫೀಸ್​ನಲ್ಲಿ ಈಗ ಸಿಗುತ್ತೆ ಹೆಚ್ಚು ಬಡ್ಡಿ; ಎಸ್​ಬಿಐ ಮತ್ತು ಅಂಚೆ ಕಚೇರಿ ಎಫ್​ಡಿಯಲ್ಲಿ ಒಂದು ಹೋಲಿಕೆ

|

Updated on: Apr 14, 2023 | 1:57 PM

Post Office vs SBI FD Schemes: ಸರ್ಕಾರ ಕೂಡ ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಿಸಲು ಜನರನ್ನು ಸೇವಿಂಗ್ ಸ್ಕೀಮ್​ಗಳಿಗೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಅಂತೆಯೇ ಅಂಚೆ ಕಚೇರಿಯಲ್ಲಿ ಎಫ್​ಡಿಗಳು, ಸರ್ಕಾರದ ವಿವಿಧ ಉಳಿತಾಯ ಯೋಜನೆಗಳು ಈಗ ಹೆಚ್ಚು ಬಡ್ಡಿ ಕೊಡುತ್ತವೆ.

Investments: ಪೋಸ್ಟ್ ಆಫೀಸ್​ನಲ್ಲಿ ಈಗ ಸಿಗುತ್ತೆ ಹೆಚ್ಚು ಬಡ್ಡಿ; ಎಸ್​ಬಿಐ ಮತ್ತು ಅಂಚೆ ಕಚೇರಿ ಎಫ್​ಡಿಯಲ್ಲಿ ಒಂದು ಹೋಲಿಕೆ
ಪೋಸ್ಟ್ ಆಫೀಸ್
Follow us on

ಇವತ್ತಿನ ಜಾಗತಿಕ ಅತಂತ್ರ ಆರ್ಥಿಕ ಪರಿಸ್ಥಿತಿಯಲ್ಲಿ ಹಣದ ಉಳಿತಾಯ ಬಹಳ ಮುಖ್ಯ. ನಾವು ಉಳಿಸುವ ಹಣ ಗಳಿಕೆಗೆ ಸಮ. ಎಷ್ಟು ಹಣ ಉಳಿಸುತ್ತೇವೋ ಅಷ್ಟು ಹಣ ಸಂಪಾದನೆ ಮಾಡಿದಂತೆ. ಹಣ ಉಳಿಸುವುದು ಮಾತ್ರವಲ್ಲ, ಆ ಹಣವನ್ನು ಹೇಗೆ ಉಪಯೋಗಿಸುತ್ತೇವೆ, ಎಷ್ಟು ಬೆಳೆಸುತ್ತೇವೆ ಎಂಬುದೂ ಮುಖ್ಯ. ಅದಕ್ಕೆಂದೇ ಮಾರುಕಟ್ಟೆಯಲ್ಲಿ ಹಲವಾರು ಹೂಡಿಕೆ ಯೋಜನೆಗಳು (Investment Schemes) ಜನರನ್ನು ಕೈಬೀಸಿ ಕರೆಯುತ್ತಿವೆ. ಇವುಗಳನ್ನು ವಂಚಕ ಯೋಜನೆಗಳು ಯಾವುದು, ನೈಜ ಯೋಜನೆಗಳು ಯಾವುದು ಎಂಬ ಗೊಂದಲವೂ ಜನರಿಗೆ ಏರ್ಪಡಬಹುದು. ಷೇರುಪೇಟೆಯಲ್ಲಿ ಲೆಕ್ಕ ಕೆಳಗಾಗಬಹುದು, ಮ್ಯೂಚುವಲ್ ಫಂಡ್ ನಷ್ಟ ತೋರಿಸಬಹುದು ಇತ್ಯಾದಿ ಭಯವೂ ಜನರಿಗೆ ಇದೆ. ಅಂತೆಯೇ, ಬಹಳ ಮಂದಿಗೆ ಈಗಲೂ ಕೂಡ ಬ್ಯಾಂಕ್​ನಲ್ಲಿ ಹಣ ಠೇವಣಿ ಇರಿಸುವುದೇ ಅತ್ಯಂತ ಸುರಕ್ಷಿತ ಆಯ್ಕೆ ಎನಿಸಿದೆ. ಬ್ಯಾಂಕುಗಳಲ್ಲಷ್ಟೇ ಅಲ್ಲ ಅಂಚೆ ಕಚೇರಿಯಲ್ಲಿನ ಸ್ಕೀಮ್​ಗಳೂ (Post Office Saving Schemes) ಅನೇಕರಿಗೆ ಆದ್ಯತೆಯ ಆಯ್ಕೆ ಆಗಿದೆ.

ಸರ್ಕಾರ ಕೂಡ ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಿಸಲು ಜನರನ್ನು ಸೇವಿಂಗ್ ಸ್ಕೀಮ್​ಗಳಿಗೆ (Small Savings Instruments) ಸೆಳೆಯುವ ಪ್ರಯತ್ನ ಮಾಡುತ್ತಿದೆ. ಅಂತೆಯೇ ಅಂಚೆ ಕಚೇರಿಯಲ್ಲಿ ಎಫ್​ಡಿಗಳು (POTD- Post Office Time Deposits), ಸರ್ಕಾರದ ವಿವಿಧ ಉಳಿತಾಯ ಯೋಜನೆಗಳು ಈಗ ಹೆಚ್ಚು ಬಡ್ಡಿ ಕೊಡುತ್ತವೆ. ಆರ್​ಬಿಐ ಸತತ 6 ಬಾರಿ ರೆಪೋ ದರಗಳನ್ನು ಹೆಚ್ಚಿಸಿ ಈ ಬಾರಿ ಮಾತ್ರ ಅಲ್ಪ ವಿರಾಮ ಹಾಕಿದೆ. ಹಣದುಬ್ಬರ ಕಡಿಮೆ ಆಗುವ ಸಾಧ್ಯತೆ ಇದ್ದರಿಂದ ಆರ್​ಬಿಐ ಈ ಬಾರಿ ಬಡ್ಡಿ ಏರಿಸಿಲ್ಲ. 2022 ಮೇನಿಂದೀಚೆ ಒಟ್ಟು ಶೇ. 2.5ರಷ್ಟು ಬಡ್ಡಿಯನ್ನು ಆರ್​ಬಿಐ ಹೆಚ್ಚಿಸಿದೆ. ಇದರಿಂದಾಗಿ ಈಗ ಬಹುತೇಕ ಎಲ್ಲಾ ಬ್ಯಾಂಕುಗಳೂ ತಮ್ಮಲ್ಲಿನ ಠೇವಣಿಗಳಿಗೆ ಹೆಚ್ಚು ಬಡ್ಡಿ ಕೊಡುತ್ತಿವೆ. ಸಾಲ ಪಡೆದವರಿಗೂ ಬಡ್ಡಿ ಹೆಚ್ಚಿಸಲಾಗಿದೆ.

ಇದನ್ನೂ ಓದಿInfosys: ಇನ್ಫೋಸಿಸ್ ಷೇರು ಡಿವಿಡೆಂಡ್; ಅಕ್ಷತಾ ಮೂರ್ತಿಗೆ ಸಿಗುವ ಹಣ ಎಷ್ಟು? ಕಂಪನಿ ಲಾಭ ಎಷ್ಟು? ಯಾರ ಬಳಿ ಎಷ್ಟೆಷ್ಟು ಷೇರುಗಳಿವೆ?

ಪೋಸ್ಟ್ ಆಫೀಸ್ ಎಫ್​ಡಿ ದರ ಹೆಚ್ಚಳ

ಅಂಚೆ ಕಚೇರಿಯಲ್ಲಿ ಇಡಲಾದ ನಿಶ್ಚಿತ ಠೇವಣಿಗಳಿಗೆ ಈಗ ಗಮನಾರ್ಹ ರೀತಿಯಲ್ಲಿ ಬಡ್ಡಿ ಹೆಚ್ಚಳವಾಗಿದೆ. ಅಂಚೆ ಕಚೇರಿಯಲ್ಲಿ ಸಿಗುವ ಸರ್ಕಾರದ ಸಣ್ಣ ಉಳಿತಾ ಯೋಜನೆಗಳಲ್ಲಿ ಎರಡು ವರ್ಷದ ಅವಧಿಯ ಠೇವಣಿಗಳಿಗೆ ವಾರ್ಷಿಕ ಶೇ. 6.9 ಬಡ್ಡಿ ದರದಲ್ಲಿ ರಿಟರ್ನ್ ಸಿಗುತ್ತದೆ. 3 ವರ್ಷದ ಅವಧಿಯ ಠೇವಣಿಗಳಿಗೆ ಬಡ್ಡಿ ಶೇ. 7ರವರೆಗೂ ಸಿಗುತ್ತದೆ.

ಕೆಲ ತಿಂಗಳ ಹಿಂದಷ್ಟೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಠೇವಣಿಗಳಿಗೆ ಸಿಗುತ್ತಿದ್ದ ಬಡ್ಡಿ ದರ ಕೇವಲ ಶೇ. 5ರ ಆಸುಪಾಸಿನಲ್ಲಿತ್ತು. ಈಗ ಆರ್​ಬಿಐ ಸತತವಾಗಿ ರೆಪೋ ದರ ಏರಿಸಿದ್ದು ಉಳಿತಾಯ ಸ್ಕೀಮ್​ಗಳ ರಿಟರ್ನ್ ಕೂಡ ಹೆಚ್ಚಿದೆ.

ಇದನ್ನೂ ಓದಿAadhaar-PAN Link Update: ಆಧಾರ್-ಪ್ಯಾನ್ ಲಿಂಕ್: ಈ ಫಾರ್ಮ್ ಆಯ್ಕೆ ಮಾಡಿಕೊಳ್ಳಿ- ಇಲ್ಲಿದೆ ಹೆಚ್ಚಿನ ಮಾಹಿತಿ

ಎಸ್​ಬಿಐ ನಿಶ್ಚಿತ ಠೇವಣಿಗಳಿಗೆ ಸಿಗುವ ಬಡ್ಡಿ ದರ

ಎಸ್​ಬಿಐ ಸೇರಿದಂತೆ ಎಲ್ಲಾ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ಅವಧಿ 7 ದಿನದಿಂದ ಆರಂಭವಾಗಿ 10 ವರ್ಷದವರೆಗೂ ಇರುತ್ತದೆ. ಕೆಲವೊಂದು ಅವಧಿಗಳಿಗೆ ಗರಿಷ್ಠ ಬಡ್ಡಿ ದರ ಸಿಗುತ್ತದೆ. ಎಸ್​ಬಿಐನಲ್ಲೂ ಆಕರ್ಷಕ ಎಫ್​ಡಿ ಯೋಜನೆಗಳಿವೆ. ಸಾಮಾನ್ಯ ಗ್ರಾಹಕರಿಗೆ ಶೇ. 7.1ರವರೆಗೂ ಎಫ್​ಡಿ ಬಡ್ಡಿ ಕೊಡಲಾಗುತ್ತದೆ. ಹಿರಿಯ ನಾಗರಿಕರಿಗೆ ಸಿಗುವ ಬಡ್ಡಿ ಶೇ. 7.6ರವರೆಗೂ ಇದೆ.

2ರಿಂದ 3 ವರ್ಷ ಅವಧಿಯ ನಿಶ್ಚಿತ ಠೇವಣಿಗೆ ಎಸ್​ಬಿಐನಲ್ಲಿ ಗರಿಷ್ಠ ಬಡ್ಡಿ ಸಿಗುತ್ತದೆ. ಬಹುತೇಕ ಎಲ್ಲಾ ಬ್ಯಾಂಕುಗಳಲ್ಲೂ ಇದೇ ರೀತಿಯ ಬಡ್ಡಿ ವೈವಿಧ್ಯತೆ ಇದೆ. ಕೆಲ ಸಹಕಾರಿ ಬ್ಯಾಂಕ್​ಗಳು ಎಫ್​ಡಿಗಳಿಗೆ ಶೇ. 9ವರೆಗೂ ಬಡ್ಡಿಯ ಆಫರ್ ಕೊಡುವುದುಂಟು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:57 pm, Fri, 14 April 23