
ಪೋಸ್ಟ್ ಆಫೀಸ್ನಲ್ಲಿ (Post Office) ಆಫರ್ ಮಾಡಲಾಗುತ್ತಿರುವ ಹಲವು ಸ್ಮಾಲ್ ಸೇವಿಂಗ್ಸ್ ಸ್ಕೀಮ್ಗಳಲ್ಲಿ (Small Savings Scheme) ಅತ್ಯಂತ ದೀರ್ಘಾವಧಿ ಹೂಡಿಕೆ ಅವಕಾಶ ನೀಡುವುದು ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF). ಕನಿಷ್ಠ 15 ವರ್ಷ ಲಾಕ್ ಇನ್ ಪೀರಿಯಡ್ ಇರುವ ಪಿಪಿಎಫ್, ಪಕ್ಕಾ ದೀರ್ಘಾವಧಿ ಹೂಡಿಕೆ ಎನಿಸಿದೆ. ಇದಾದ ಬಳಿಕವೂ ಹೂಡಿಕೆಯನ್ನು ಐದೈದು ವರ್ಷ ವಿಸ್ತರಿಸುವ ಅವಕಾಶ ಇದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ ಅಡಿ ಭಾರತದ ಯಾವುದೇ ನಾಗರಿಕರು ಅಕೌಂಟ್ ತೆರೆಯಬಹುದು. ಪೋಸ್ಟ್ ಆಫೀಸ್ ಮತ್ತು ರಾಷ್ಟ್ರೀಯ ಬ್ಯಾಂಕುಗಳಲ್ಲಿ ಪಿಪಿಎಫ್ ಅಕೌಂಟ್ ತೆರೆಯಬಹುದು. ಒಂದು ವರ್ಷದಲ್ಲಿ (ಏಪ್ರಿಲ್ 1ರಿಂದ ಮಾರ್ಚ್ 31ರವರೆಗೆ) 500 ರೂನಿಂದ 1,50,000 ರೂವರೆಗೆ ಎಷ್ಟು ಬೇಕಾದರೂ ಹಣವನ್ನು ಪಿಪಿಎಫ್ ಅಕೌಂಟ್ಗೆ ಹಾಕಬಹುದು.
ಇದನ್ನೂ ಓದಿ: ಫೋನ್ನಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಯಾಷ್ ವಿತ್ಡ್ರಾ ಮಾಡಿ; ಸರ್ಕಾರದಿಂದ ಹೊಸ ಪ್ರಯತ್ನ
ಪ್ರಸಕ್ತ ಈ ಸ್ಕೀಮ್ನಲ್ಲಿ ವರ್ಷಕ್ಕೆ ಶೇ. 7.1ರಷ್ಟು ಬಡ್ಡಿ ನೀಡಲಾಗುತ್ತಿದೆ. ಪ್ರತೀ ಮೂರು ತಿಂಗಳಿಗೊಮ್ಮೆ ಬಡ್ಡಿ ಪರಿಷ್ಕರಣೆ ಮಾಡಲಾಗುತ್ತದೆ. ಬಡ್ಡಿ ಬಹಳ ಹೆಚ್ಚೇನೂ ಅಲ್ಲವಾದರೂ ಪಿಪಿಎಫ್ ಟ್ಯಾಕ್ಸ್ ಲಾಭ ತಂದುಕೊಡುತ್ತದೆ. ಒಂದು ವರ್ಷದಲ್ಲಿ ನೀವು ಪಿಪಿಎಫ್ಗೆ ಮಾಡುವ ಹೂಡಿಕೆಗೆ ಟ್ಯಾಕ್ಸ್ ಡಿಡಕ್ಷನ್ ಸಿಗುತ್ತದೆ. ಈ ಕಾರಣಕ್ಕೆ ಬಹಳಷ್ಟು ತೆರಿಗೆ ಪಾವತಿದಾರರಿಗೆ ಪಿಪಿಎಫ್ ನೆಚ್ಚಿನ ಹೂಡಿಕೆ ಸ್ಥಳವಾಗಿದೆ.
ವರ್ಷದಲ್ಲಿ ಹಲವು ಬಾರಿ ಪಿಪಿಎಫ್ ಅಕೌಂಟ್ಗೆ ಹಣ ಹಾಕಬಹುದು. ಆದರೆ, ವರ್ಷದಲ್ಲಿ ಠೇವಣಿ ಇಡುವ ಒಟ್ಟು ಮೊತ್ತ 1.5 ಲಕ್ಷ ರೂ ಮೀರಬಾರದು. ಒಂದು ತಿಂಗಳಲ್ಲಿ 10,000 ರೂ, ಮತ್ತೊಂದು ತಿಂಗಳಲ್ಲಿ 30,000 ರೂ ಹೀಗೆ ನಿಮ್ಮ ಇಚ್ಛಾನುಸಾರ ಅಕೌಂಟ್ಗೆ ಹಣ ಜಮೆ ಮಾಡುತ್ತಾ ಹೋಗಬಹುದು.
ಇದನ್ನೂ ಓದಿ: ಪೋಸ್ಟ್ ಆಫೀಸ್: 20 ವರ್ಷಕ್ಕೆ 4 ಪಟ್ಟು ರಿಟರ್ನ್ ಕೊಡಬಲ್ಲ ಟಿಡಿ ಪ್ಲಾನ್
ಒಂದು ವರ್ಷದಲ್ಲಿ ನಿರ್ದಿಷ್ಟ ಮೊತ್ತ ಠೇವಣಿ ಮಾಡಿರುತ್ತೀರಿ. ಮುಂದಿನ ವರ್ಷ ಅಷ್ಟೇ ಮೊತ್ತ ಹಾಕಬೇಕು ಎನ್ನುವ ಕಡ್ಡಾಯವೇನಿಲ್ಲ. ಈ ವರ್ಷ 1.5 ಲಕ್ಷ ರೂ ಹಾಕುತ್ತೀರಿ. ಮುಂದಿನ ವರ್ಷ 1 ಲಕ್ಷ ರೂ ಮಾತ್ರವೇ ಠೇವಣಿ ಇಡಲು ಸಾಧ್ಯವಾಗಬಹುದು.
ಪಿಪಿಎಫ್ನಲ್ಲಿ ನೀವು ವರ್ಷಕ್ಕೆ ಒಂದೂವರೆ ಲಕ್ಷ ರೂ ಹೂಡಿಕೆ ಮಾಡುತ್ತಾ ಹೋಗುತ್ತೀರಿ ಎಂದಿಟ್ಟುಕೊಳ್ಳೋಣ. 15 ವರ್ಷದಲ್ಲಿ ನೀವು 22,50,000 ರೂ ಹೂಡಿಕೆ ಮಾಡಿರುತ್ತೀರಿ. ಮೆಚ್ಯೂರಿಟಿಯಾದಾಗ ನಿಮ್ಮ ಹೂಡಿಕೆಯು 40 ಲಕ್ಷ ರೂ ದಾಟಿರುತ್ತದೆ.
ಒಂದು ವೇಳೆ ನಿಮ್ಮ ಹೂಡಿಕೆ ಅವಧಿಯನ್ನು 15 ವರ್ಷದಿಂದ 25 ವರ್ಷಕ್ಕೆ ಹೆಚ್ಚಿಸಿದರೆ 37.50 ಲಕ್ಷ ರೂನ ನಿಮ್ಮ ಹೂಡಿಕೆಯ ಮೌಲ್ಯ ಒಂದು ಕೋಟಿ ರೂ ದಾಟಿರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ