
ಅಂಚೆ ಕಚೇರಿಯಲ್ಲಿ (Post office) ಹಲವು ಸಣ್ಣ ಉಳಿತಾಯ ಯೋಜನೆಗಳ ಆಯ್ಕೆಗಳಿವೆ. ರಿಕರಿಂಗ್ ಡೆಪಾಸಿಟ್ನಿಂದ ಹಿಡಿದು ಸುಕನ್ಯ ಸಮೃದ್ದಿವರೆಗೆ ವಿವಿಧ ರೀತಿಯ ಸ್ಕೀಮ್ಗಳಿವೆ. ಅದರಲ್ಲಿ ಎಸ್ಸಿಎಸ್ಎಸ್, ಅಥವಾ ಹಿರಿಯ ನಾಗರಿಕರ ಉಳಿತಾಯ ಯೋಜನೆಯೂ (SCSS- Senior Citizen Savings Scheme) ಒಂದು. ಪೋಸ್ಟ್ ಆಫೀಸ್ ಸ್ಕೀಮ್ಗಳ ಪೈಕಿ ಅತಿಹೆಚ್ಚು ರಿಟರ್ನ್ ತರುವ ಯೋಜನೆಗಳಲ್ಲಿ ಇದೂ ಒಂದು. ಹಿರಿಯ ನಾಗರಿಕರಿಗೆಂದು ರೂಪಿಸಲಾಗಿರುವ ಕೆಲವೇ ಸ್ಕೀಮ್ಗಳ ಪೈಕಿ ಇದು ಇದೆ.
ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ಮಾಸಿಕ ಆದಾಯ ತರುವ ಒಂದು ಪ್ಲಾನ್. ಸದ್ಯ ಇದಕ್ಕೆ ಸರ್ಕಾರ ಶೇ. 8.25ರಷ್ಟು ಬಡ್ಡಿ ನೀಡುತ್ತಿದೆ. ಐಟಿ ಸೆಕ್ಷನ್ 80 ಸಿ ಅಡಿಯಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗಿನ ಹೂಡಿಕೆಗೆ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಸಿಗುತ್ತದೆ.
ಇದನ್ನೂ ಓದಿ: ಸಾಲ ತೀರಿಸಿದ ಬಳಿಕ ಕ್ರೆಡಿಟ್ ಸ್ಕೋರ್ ಅಪ್ಡೇಟ್ ಆಗಬೇಕು; ಇಲ್ಲದಿದ್ದರೆ ಹೀಗೆ ಮಾಡಿ
ನಿವೃತ್ತರಾದವರಿಗೆಂದು ಇರುವ ಈ ಯೋಜನೆಯು 60 ವರ್ಷ ಮೇಲ್ಪಟ್ಟ ಮಂದಿಗೆ ಸೀಮಿತವಾಗಿದೆ. ವಾಲಂಟರಿ ರಿಟೈರ್ಮೆಂಟ್ ಆಗಿದ್ದರೆ 55 ವರ್ಷ ವಯಸ್ಸಿನವರಿಗೂ ಇದು ಲಭ್ಯ ಇರುತ್ತದೆ. ಸೇನೆಯಲ್ಲಿದ್ದು ರಿಟೈರ್ ಆಗಿದ್ದರೆ ಕನಿಷ್ಠ ವಯಸ್ಸು 50 ವರ್ಷ ಇದೆ.
ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ನಲ್ಲಿ ಕನಿಷ್ಠ ಹೂಡಿಕೆ 1,000 ರೂ ಇದೆ. ಗರಿಷ್ಠ ಹೂಡಿಕೆ 30,000 ರೂ ಇದೆ. ಐದು ವರ್ಷದವರೆಗಿನ ಯೋಜನೆ ಇದು. ಅವಧಿಗೆ ಮುನ್ನ ಹೂಡಿಕೆ ಹಿಂಪಡೆದರೆ ದಂಡ ಅನ್ವಯ ಆಗುತ್ತದೆ. ಒಂದು ವರ್ಷದೊಳಗೆ ನಿರ್ಗಮಿಸಿದರೆ ಯಾವ ಬಡ್ಡಿ ಆದಾಯವೂ ಸಿಗುವುದಿಲ್ಲ. ಎರಡು ವರ್ಷದ ಬಳಿಕ ಅಕೌಂಟ್ ನಿಲ್ಲಿಸಿದರೆ ಬಡ್ಡಿಯಲ್ಲಿ ಒಂದು ಪರ್ಸೆಂಟ್ ಅಷ್ಟು ಮೊತ್ತವನ್ನು ದಂಡವಾಗಿ ಪಡೆಯಲಾಗುತ್ತದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ಸ್ಕೀಮ್; ಮಾಸಿಕ 10,000 ರೂ ಹೂಡಿಕೆ; 5 ವರ್ಷಕ್ಕೆ 7 ಲಕ್ಷ ರೂ
ಈ ಸ್ಕೀಮ್ನಲ್ಲಿ ನೀವು ಲಂಪ್ಸಮ್ ಆಗಿ ಹೂಡಿಕೆ ಮಾಡಬಹುದು. ಜಂಟಿ ಅಕೌಂಟ್ ತೆರೆಯಬಹುದು. ಸಿಂಗಲ್ ಅಕೌಂಟ್ ಆದರೆ 30,00,000 ರೂನಷ್ಟು ಲಂಪ್ಸಮ್ ಇಡಲು ಅವಕಾಶ ಇದೆ. ಗರಿಷ್ಠ ಮೊತ್ತ ಠೇವಣಿ ಇರಿಸಿದರೆ ವರ್ಷಕ್ಕೆ 2.46 ಲಕ್ಷ ರೂ ಸಿಗುತ್ತದೆ. ತಿಂಗಳಿಗೆ ಸುಮಾರು 20,500 ರೂ ಬಡ್ಡಿ ಆದಾಯ ಸಿಗುತ್ತಾ ಹೋಗುತ್ತದೆ.
ನಿಮಗೆ ಮಾಸಿಕವಾಗಿ ಹಣ ಸಿಗುವುದಿಲ್ಲ. ಬದಲಾಗಿ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ