ಪವರ್ ಆಫ್ ಕಾಂಪೌಂಡಿಂಗ್: ನಿಮ್ಮ ಸಂಪತ್ತು ವೃದ್ಧಿಸುವ ವಿಸ್ಮಯಕಾರಿ ಹೂಡಿಕೆ ಅಂಶ
Magic Power Of Compounding: ಪವರ್ ಆಫ್ ಕಾಂಪೌಂಡಿಂಗ್ ಎಂಬುದು ಹೂಡಿಕೆಯ ವಿಸ್ಮಯಕಾರಿ ಗುಣಗಳಲ್ಲಿ ಒಂದು. ಹೂಡಿಕೆ ದೀರ್ಘಾವಧಿಯಾದಷ್ಟೂ ದ್ವಿಗುಣ ಅವಧಿ ಕಡಿಮೆ ಆಗುತ್ತಾ ಹೋಗುತ್ತದೆ. ಶೇ. 7.1ರಷ್ಟು ವಾರ್ಷಿಕ ಬಡ್ಡಿ ಸಿಗುವ ಪಿಪಿಎಫ್ನಲ್ಲಿ ವರ್ಷಕ್ಕೆ 1.5 ಲಕ್ಷ ರೂನಂತೆ 30 ವರ್ಷ ಹೂಡಿಕೆ ಮಾಡಿದರೆ 1.5 ಕೋಟಿ ರೂ ರಿಟರ್ನ್ ಸಿಗುತ್ತದೆ.
ಹಣ ಉಳಿತಾಯ ಮತ್ತು ಹಣ ಹೂಡಿಕೆ ಬಹಳ ಮುಖ್ಯ. ನೀವು ಉಳಿಸುವ ಹಣವು ಅಷ್ಟೇ ಪ್ರಮಾಣದ ಹಣ ಗಳಿಕೆಗೆ ಸಮ ಎಂಬುದನ್ನು ಮೊದಲು ಮನಗಾಣಬೇಕು. ಹಾಗೆಯೇ, ಉಳಿಸಿದ ಹಣವನ್ನು ಹಾಗೇ ಬಿಡುವುದೂ ತಪ್ಪು. ಆ ಉಳಿತಾಯ ಹಣವನ್ನು (savings) ಯಾವುದಾದರೂ ಹೂಡಿಕೆಯಲ್ಲಿ ಉಪಯೋಗಿಸುವುದು ಉತ್ತಮ. ಇವತ್ತು ಹಲವು ಹೂಡಿಕೆ ಆಯ್ಕೆಗಳಿವೆ. ಷೇರುಗಳ ಮೇಲೆ ಹೂಡಿಕೆ ಮಾಡಲು ಹಿಂಜರಿತ ಇದ್ದರೆ ಸಾಕಷ್ಟು ಠೇವಣಿ ಪ್ಲಾನ್ಗಳಿವೆ, ಪಿಪಿಎಫ್ ಇತ್ಯಾದಿ ಸರ್ಕಾರಿ ಹೂಡಿಕೆ ಸ್ಕೀಮ್ಗಳಿವೆ. ನೀವು ಹೂಡಿಕೆ ಮಾಡಲು ನಿರ್ಧರಿಸಿದಲ್ಲಿ ಪವರ್ ಆಫ್ ಕಾಂಪೌಂಡಿಂಗ್ (Power of Compounding) ಅಂಶವನ್ನು ತಿಳಿಯುವುದು ಬಹಳ ಮುಖ್ಯ.
ಏನಿದು ಪವರ್ ಆಫ್ ಕಾಂಪೌಂಡಿಂಗ್?
ಪವರ್ ಆಫ್ ಕಾಂಪೌಂಡಿಂಗ್ ಎಂಬುದು ಹೂಡಿಕೆಯ ಒಂದು ವಿಸ್ಮಯಕಾರಿ ಗುಣ. ದೀರ್ಘಾವಧಿ ಹೂಡಿಕೆಯ ಲಾಭ ನಿಮಗೆ ಸಿಗುತ್ತದೆ. ನೀವು ಒಂದು ವರ್ಷದ ಹೂಡಿಕೆ ಮಾಡಿದರೆ ಅದರಿಂದ ಸಿಗುವ ರಿಟರ್ನ್ ಬಹಳ ಅತ್ಯಲ್ಪ ಎನಿಸುತ್ತದೆ. ಅದೇ ನೀವು 30 ವರ್ಷ ನಿರಂತರವಾಗಿ ಹೂಡಿಕೆ ಮಾಡುತ್ತಾ ಹೋಗಿ, ನಿಮಗೆ ಅಚ್ಚರಿ ಎನಿಸುವಷ್ಟು ಸಂಪತ್ತು ಶೇಖರಣೆ ಆಗಿರುತ್ತದೆ. ಅದು ಪವರ್ ಆಫ್ ಕಾಂಪೌಂಡಿಂಗ್ನ ಗುಣ. ಇದಕ್ಕೆ ನಿದರ್ಶನ ಈ ಕೆಳಕಂಡಂತೆ ಇದೆ.
ಇದನ್ನೂ ಓದಿ: Money Matters: ಒಟ್ಟಿಗೆ ಹಣ ಬಂದರೆ ಸಾಲ ತೀರಿಸಬೇಕಾ? ಹೂಡಿಕೆ ಮಾಡಬೇಕಾ? ಯಾವ ನಿರ್ಧಾರ ಉತ್ತಮ?
ಪವರ್ ಆಫ್ ಕಾಂಪೌಂಡಿಂಗ್ ಉದಾಹರಣೆ
ನೀವು ಪಿಪಿಎಫ್ನಲ್ಲಿ ಹೂಡಿಕೆ ಮಾಡಲು ನಿರ್ಧರಿಸುತ್ತೀರಿ ಎಂದಿಟ್ಟುಕೊಳ್ಳಿ. ಪಬ್ಲಿಕ್ ಪ್ರಾವಿಡೆಂಟ್ನ ಈಗಿನ ವಾರ್ಷಿಕ ಬಡ್ಡಿದರ ಶೇ. 7.1ರಷ್ಟು ಇದೆ. ಅದರಲ್ಲಿ ನೀವು ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂ ಹೂಡಿಕೆ ಮಾಡಬಹುದು. ಪಿಪಿಎಫ್ ಅವಧಿ 15 ವರ್ಷ ಇರುತ್ತದೆ. ಅದನ್ನು ನೀವು ಪ್ರತೀ 5 ವರ್ಷ ವಿಸ್ತರಣೆ ಮಾಡುತ್ತಾ ಹೋಗಬಹುದು. ನೀವು ಅದರಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂ ಹೂಡಿಕೆ ಮಾಡುತ್ತೀರಿ. 15 ವರ್ಷ ಬಳಿಕ ಐದು ವರ್ಷ ವಿಸ್ತರಿಸಿ ಹೂಡಿಕೆ ಮುಂದುವರಿಸುತ್ತೀರಿ ಎಂದಿಟ್ಟುಕೊಳ್ಳಿ. ಆಗ 20 ವರ್ಷದಲ್ಲಿ ನೀವು ಕಟ್ಟಿದ ಮೊತ್ತ 30 ಲಕ್ಷ ರೂ ಆಗಿರುತ್ತದೆ. ನಿಮ್ಮ ಒಟ್ಟು ಹೂಡಿಕೆ 67 ಲಕ್ಷ ರೂ ಆಗುತ್ತದೆ.
ನೀವು ಹಾಗೇ ಹೂಡಿಕೆ ಮುಂದುವರಿಸಿದರೆ 25 ವರ್ಷದ ಬಳಿಕ ಹಣವು 1.03 ಕೋಟಿ ರೂ ಆಗುತ್ತದೆ. 30 ವರ್ಷದ ಬಳಿಕ 1.55 ಕೋಟಿ ರೂ ಆಗುತ್ತದೆ. ಅಂದರೆ ಹೂಡಿಕೆ ಅವಧಿ ಹೆಚ್ಚಿದಷ್ಟೂ ಹಣ ಡಬಲ್ ಆಗುವ ಅವಧಿ ಕಡಿಮೆ ಆಗುತ್ತಾ ಹೋಗುತ್ತದೆ. ಅದು ಪವರ್ ಆಫ್ ಕಾಂಪೌಂಡಿಂಗ್.
ಇದನ್ನೂ ಓದಿ: ಚಿನ್ನದ ಬೆಲೆ ಹೆಚ್ಚಾದರೆ ಸಾಲದ ದರ ಹೆಚ್ಚುತ್ತದಾ, ಕಡಿಮೆ ಆಗುತ್ತದಾ? ಇಲ್ಲಿದೆ ಡೀಟೇಲ್ಸ್
ಶೇ. 8ರಷ್ಟು ಬಡ್ಡಿಕೊಡುವ ಸ್ಕೀಮ್ನಲ್ಲಿ ಹೂಡಿಕೆ ಮಾಡಿದರೆ?
ಇನ್ನೊಂದು ಉದಾಹರಣೆ ತೆಗೆದುಕೊಳ್ಳಬಹುದು. ನೀವು ವರ್ಷಕ್ಕೆ ಶೇ. 8ರಷ್ಟು ಬಡ್ಡಿ ಕೊಡುವ ಆರ್ಡಿಯಂತಹ ಸ್ಕೀಮ್ನಲ್ಲಿ ಹೂಡಿಕೆ ಮಾಡುತ್ತೀರಿ. ತಿಂಗಳಿಗೆ 10,000 ರೂನಂತೆ 30 ವರ್ಷ ಹೂಡಿಕೆ ಮಾಡಿದರೆ ನಿಮ್ಮ ಹಣ ಒಂದೂವರೆ ಕೋಟಿ ರೂ ಆಗುತ್ತದೆ. ಆ 30 ವರ್ಷದಲ್ಲಿ ನೀವು ಕಟ್ಟುವುದು 36 ಲಕ್ಷ ರೂ, ಆದರೆ, ನಿಮಗೆ ಸಿಗುವ ರಿಟರ್ನ್ 1.5 ಕೋಟಿ ರೂ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ