ಜಾಗತಿಕ ಆರ್ಥಿಕ ಸಂಕಷ್ಟಕ್ಕೆ ರಷ್ಯಾ-ಉಕ್ರೇನ್ ನಡುವಣ ಯುದ್ಧ (Russia Ukraine War) ಮತ್ತಷ್ಟು ಇಂಬು ನೀಡಿದೆ. ಯುದ್ಧದ ಪರಿಣಾಮವಾಗಿ ಆಹಾರ ಹಾಗೂ ಇಂಧನ ಸರಕುಗಳ ಬೆಲೆ ಏರಿಕೆಯಾಗಿದ್ದು, ಹಣದುಬ್ಬರ (Inflation) ಹೆಚ್ಚಾಗಲು ಕಾರಣವಾಗಿದೆ. ಇದರಿಂದಾಗಿ ಆರ್ಥಿಕ ಹಿಂಜರಿತದ ಭೀತಿ (Recession) ಎದುರಾಗಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರ ಹೆಚ್ಚಳವನ್ನು ತೀವ್ರಗೊಳಿಸಿದೆ. ಬ್ರಿಟನ್ನಲ್ಲಿಯೂ ಹಣದುಬ್ಬರ ಪ್ರಮಾಣ 41 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇಂಥ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ ಹೂಡಿಕೆ ತಜ್ಞರು. ಚಿನ್ನ, ಬಾಂಡ್ಗಳು, ಸ್ಥಿರ ಮತ್ತು ಸಾಲದ ಮೇಲಿನ ಹೂಡಿಕೆಗಳು ರಕ್ತದ ಸನ್ನಿವೇಶದಲ್ಲಿ ಸೂಕ್ತ ಎಂದು ಲೆನ್ಡೆನ್ ಕ್ಲಬ್ನ ಸಿಇಒ ಭಾವಿನ್ ಪಟೇಲ್ ತಿಳಿಸಿರುವುದಾಗಿ ‘ಲೈವ್ ಮಿಂಟ್’ ವರದಿ ಮಾಡಿದೆ.
ಸ್ಥಿರ ಆದಾಯ ಆಧಾರಿತ ಹೂಡಿಕೆ, ಮಾರುಕಟ್ಟೆ ಜೊತೆ ಸಂಬಂಧ ಹೊಂದಿಲ್ಲದಂತ ಹೂಡಿಕೆ ತಾಣಗಳು ಈ ಸಂದರ್ಭದಲ್ಲಿ ಹೂಡಿಕೆಗೆ ಪ್ರಶಸ್ತ ತಾಣಗಳಾಗಿವೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ ಎಲ್ಲ ರೀತಿಯ ಹೂಡಿಕೆಗಳು ಕೂಡ ರಿಸ್ಕ್ಗಳನ್ನು ಹೊಂದಿವೆ. ಇವುಗಳಲ್ಲಿ ಯಾವುದು ಉತ್ತಮ ಎಂಬುದನ್ನು ನಾವು ಆಯ್ದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಮಾರುಕಟ್ಟೆ ಆಧಾರಿತ ಹೂಡಿಕೆ ತಾಣಗಳಲ್ಲಿ ಹೂಡಿಕೆ ಮಾಡುವುದು ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಅಷ್ಟೊಂದು ಉತ್ತಮವಲ್ಲ. ಷೇರುಗಳು, ಕ್ರಿಪ್ಟೋ ಕರೆನ್ಸಿಗಳು, ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್ಗಳು ದರ ಏರಿಕೆಯಿಂದ ನೇರ ಪ್ರಭಾವಿತವಾಗುತ್ತವೆ. ಹೀಗಾಗಿ ಇಂಥ ತಂಡಗಳಲ್ಲಿ ಹೂಡಿಕೆ ಮಾಡುವುದರಿಂದ ಆರ್ಥಿಕ ಹಿಂಜರಿತದ ಪರಿಣಾಮ ಎದುರಿಸಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: No Cost EMI: ನೋ ಕಾಸ್ಟ್ ಇಎಂಐ ಆಯ್ಕೆ ಮಾಡುವ ಮುನ್ನ ಈ ವಿಚಾರಗಳನ್ನು ತಿಳಿದಿರಿ
ತುರ್ತು ನಿಧಿಯೊಂದು ಸದಾ ತನ್ನ ಬಳಿ ಇರುವಂತೆ ಗಮನಹರಿಸಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಖರ್ಚಿಗೆ ಬೇಕಾದ ಹಣ ಕೈಯಲ್ಲಿರುವಂತೆ ನೋಡಿಕೊಳ್ಳಬೇಕು. ಸಾಲ ಪಡೆದಿದ್ದರೆ ಅದನ್ನು ಆದಷ್ಟು ಬೇಗ ತೀರಿಸಲು ಪ್ರಯತ್ನಿಸುವುದು ಉತ್ತಮ. ಇದರಿಂದ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಹೊರೆ ಹೆಚ್ಚಾಗದಂತೆ ನೋಡಿಕೊಳ್ಳಬಹುದು.
ಪ್ರತಿಯೊಂದು ಹೂಡಿಗೆ ತಾಣಗಳಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳು ಇದ್ದೇ ಇರುತ್ತವೆ. ಸ್ಥಿರ ಸ್ವತ್ತುಗಳ ಮೇಲೆ ಹೂಡಿಕೆ ಮಾಡುವುದು ಯಾವಾಗಲೂ ಒಳ್ಳೆಯದು. ರಿಯಲ್ ಎಸ್ಟೇಟ್, ಸರ್ಕಾರಿ ಚಿನ್ನದ ಬಾಂಡ್ಗಳು ಹಾಗೂ ಇಂಥ ತಾಣಗಳಲ್ಲಿ ಹೂಡಿಕೆ ಮಾಡುವುದರಿಂದ ದೀರ್ಘಾವಧಿಗೆ ಉತ್ತಮ ರಿಟರ್ನ್ಸ್ ಪಡೆಯಬಹುದು. ಜೊತೆಗೆ ಆರ್ಥಿಕ ಹಿಂಜರಿತದ ಅಪಾಯದಿಂದಲೂ ಬಚಾವಾಗಬಹುದು. ಕಂಪನಿಗಳ ಮೇಲೆ ಹೂಡಿಕೆ ಮಾಡುವುದು ಅಷ್ಟೊಂದು ಉತ್ತಮವಲ್ಲ ಎಂದು ಸ್ತ್ರತ ಪ್ರಾಪರ್ಟಿ ಮ್ಯಾನೇಜ್ಮೆಂಟ್ ಸಿಇಒ ಸುದರ್ಶನ್ ಲೋಧ ಸಲಹೆ ನೀಡಿದ್ದಾರೆ.
ಒಂದು ವೇಳೆ ಕಂಪನಿಗಳ ಮೇಲೆ ಹೂಡಿಕೆ ಮಾಡುವುದಾದಲ್ಲಿ, ದೀರ್ಘಾವಧಿಗೆ ಉತ್ತಮ ವಹಿವಾಟು ನಡೆಸುತ್ತಿರುವ, ಕಡಿಮೆ ಸಾಲ ಹೊಂದಿರುವ, ಉತ್ತಮ ನಗದು ಹರಿವು ಇರುವ ಮತ್ತು ಅತ್ಯುತ್ತಮ ಬ್ಯಾಲೆನ್ಸ್ ಶೀಟ್ ಹೊಂದಿರುವ ಕಂಪನಿಗಳ ಮೇಲೆ ಹೂಡಿಕೆ ಮಾಡಬೇಕು ಎಂದು ಅವರು ಹೇಳಿದ್ದಾರೆ. ಬ್ಲೂ ಚಿಪ್ ಸ್ಟಾಕ್ಗಳು, ಸೆಕ್ಟೋಬರ್ ಫಂಡ್ಗಳು ಮತ್ತು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದು ಎಂದು ಅವರು ಸಲಹೆ ನೀಡಿದ್ದಾರೆ.
Published On - 11:15 am, Tue, 20 December 22