Green FDs: ಎಸ್​ಬಿಐನಿಂದ ಹೊಸ ಸ್ಪೆಷನ್ ಎಫ್​ಡಿ ಸ್ಕೀಮ್ ಆರಂಭ; ಗ್ರೀನ್ ರುಪೀ ಟರ್ಮ್ ಡೆಪಾಸಿಟ್ ಯೋಜನೆ ಬಗ್ಗೆ ತಿಳಿಯಿರಿ

|

Updated on: Jan 15, 2024 | 4:13 PM

SBI SGRTB Plans: ಸ್ಟೇಟ್ ಬ್ಯಾಂಕ್ ಇಂಡಿಯಾ ಇತ್ತೀಚೆಗೆ ಗ್ರೀನ್ ರುಪೀ ಟರ್ಮ್ ಡೆಪಾಸಿಟ್ ಪ್ಲಾನ್ ಆರಂಭಿಸಿದೆ. 1111, 1,777 ಮತ್ತು 2,222 ದಿನಗಳ ಅವಧಿಗಳಿಗೆ ಸ್ಪೆಷಲ್ ಡೆಪಾಸಿಟ್ ಸ್ಕೀಮ್ ಅನ್ನು ನೀಡಲಾಗಿದೆ. ಪರಿಸರಸ್ನೇಹಿ ಯೋಜನೆಗಳಿಗೆ ಈ ಡೆಪಾಸಿಟ್ ಹಣವನ್ನು ಎಸ್​ಬಿಐ ಸಾಲವಾಗಿ ನೀಡುತ್ತದೆ.

Green FDs: ಎಸ್​ಬಿಐನಿಂದ ಹೊಸ ಸ್ಪೆಷನ್ ಎಫ್​ಡಿ ಸ್ಕೀಮ್ ಆರಂಭ; ಗ್ರೀನ್ ರುಪೀ ಟರ್ಮ್ ಡೆಪಾಸಿಟ್ ಯೋಜನೆ ಬಗ್ಗೆ ತಿಳಿಯಿರಿ
ಡೆಪಾಸಿಟ್
Follow us on

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಗಾಗ್ಗೆ ವಿಶೇಷ ಠೇವಣಿ ಸ್ಕೀಮ್​ಗಳನ್ನು ತರುತ್ತಿರುತ್ತದೆ. ಕಳೆದ ವರ್ಷ ಅಮೃತ್ ಕಾಲ್ ಸ್ಪೆಷಲ್ ಡೆಪಾಸಿಟ್ ಸ್ಕೀಮ್ ತಂದಿತ್ತು. ಹಾಗೆಯೇ ವೀಕೇರ್ ಠೇವಣಿ ಸ್ಕೀಮ್ ಇದೆ. ಇತ್ತೀಚೆಗಷ್ಟೇ ಎಸ್​ಬಿಐನಿಂದ ಮತ್ತೊಂದು ವಿಶೇಷ ಟರ್ಮ್ ಟೆಪಾಸಿಟ್ ಪ್ಲಾನ್ ಹೊರಬಂದಿದೆ. ಅದು ಗ್ರೀನ್ ರುಪೀ ಟರ್ಮ್ ಡೆಪಾಸಿಟ್ (SBI SGRTD) ಯೋಜನೆ.

ಏನಿದು ಎಸ್​ಬಿಐ ಗ್ರೀನ್ ಡೆಪಾಸಿಟ್ ಪ್ಲಾನ್?

ಗ್ರೀನ್ ಬಾಂಡ್ ಇತ್ಯಾದಿಯಂತೆ ಗ್ರೀನ್ ರುಪೀ ಟರ್ಮ್ ಡೆಪಾಸಿಟ್ ಪ್ಲಾನ್ ಇರುತ್ತದೆ. ಪರಿಸರ ಸ್ನೇಹಿ ಯೋಜನೆಗಳಿಗೆ (environment friendly projects) ಅನುದಾನ ಅಥವಾ ಸಾಲ ಒದಗಿಸುವುದಕ್ಕೆ ಗ್ರೀನ್ ಇನ್ವೆಸ್ಟ್​ಮೆಂಟ್ಸ್ ಎನ್ನುವುದಕ್ಕೆ. ಎಸ್​ಬಿಐನ ಗ್ರೀನ್ ರುಪೀ ಟರ್ಮ್ ಡೆಪಾಸಿಟ್​ನಲ್ಲಿ ನೀವು ಇರಿಸುವ ಠೇವಣಿ ಹಣವನ್ನು ಪರಿಸರ ಸ್ನೇಹಿ ಅಥವಾ ಇ ಪ್ರಾಜೆಕ್ಟ್​ಗಳಿಗೆ ಸಾಲವಾಗಿ ನೀಡಲಾಗುತ್ತದೆ. ಪರಿಸರದ ಬಗ್ಗೆ ಕಾಳಜಿ ಇರುವವರು ಈ ಪ್ಲಾನ್ ಪಡೆಯಬಹುದು.

ಇದನ್ನೂ ಓದಿ: FD Rates: ಎಚ್​ಡಿಎಫ್​ಸಿ, ಎಸ್​ಬಿಐ, ಐಸಿಐಸಿಐ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳಿಗೆ ಬಡ್ಡಿದರ ಎಷ್ಟಿದೆ? ಇಲ್ಲಿದೆ ತುಲನೆ

ಎಸ್​ಬಿಐ ಗ್ರೀನ್ ರುಪೀ ಟರ್ಮ್ ಡೆಪಾಸಿಟ್ ಹೂಡಿಕೆ ಹೇಗೆ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರೀನ್ ರುಪೀ ಟರ್ಮ್ ಡೆಪಾಸಿಟ್ ಪ್ಲಾನ್​ನಲ್ಲಿ ಮೂರು ಆಯ್ಕೆಗಳಿವೆ. ಈ ಮೂರೂ ಕೂಡ ಕನಿಷ್ಠ ಮೂರು ವರ್ಷಕ್ಕಿಂತ ಮೇಲ್ಪಟ್ಟ ಅವಧಿಯವು.

1,111 ದಿನ (36 ತಿಂಗಳು)

1,777 ದಿನ (48 ತಿಂಗಳು)

2,222 ದಿನ (72 ತಿಂಗಳು)

ಈ ಸ್ಕೀಮ್​ನಲ್ಲಿ ಯಾವುದೇ ಎಸ್​ಬಿಐ ಗ್ರಾಹಕರು ಡೆಪಾಸಿಟ್ ಇಡಬಹುದು. ಎನ್​ಆರ್​ಐಗಳಿಗೂ ಅವಕಾಶ ಇದೆ. ದೇಶಾದ್ಯಂತ ಎಲ್ಲಾ ಎಸ್​ಬಿಐ ಬ್ರ್ಯಾಂಚ್​ನಲ್ಲಿ ಜಿಆರ್​ಟಿಡಿ ಪಡೆಯಬಹುದು. ಯೋನೋ ಆ್ಯಪ್ ಮತ್ತು ನೆಟ್ ಬ್ಯಾಂಕಿಂಗ್​ನಲ್ಲಿ ಸದ್ಯದಲ್ಲೇ ಇದು ಲಭ್ಯ ಇರಲಿದೆ.

ಇದನ್ನೂ ಓದಿ: SIP Magic: ದಿನಕ್ಕೆ 200 ರೂನಂತೆ ಎಸ್​ಐಪಿಯಲ್ಲಿ ಹೂಡಿಕೆ ಮಾಡಿದರೆ 25 ವರ್ಷಕ್ಕೆ ಎಷ್ಟು ಸಂಪಾದನೆ ಆಗಬಹುದು?

ಎಸ್​ಬಿಐ ಜಿಆರ್​ಟಿಡಿ ಬಡ್ಡಿ ದರ ಎಷ್ಟು?

ಗಮನಿಸಬೇಕಾದ ಸಂಗತಿ ಎಂದರೆ ಮಾಮೂಲಿಯ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ಗಳಿಗಿಂತ ಈ ಗ್ರೀನ್ ಡೆಪಾಸಿಟ್ ಪ್ಲಾನ್​ಗಳಲ್ಲಿ ಬಡ್ಡಿ ದರ ಕಡಿಮೆ ಇದೆ. ಶೇ. 5.90ಯಿಂದ ಶೇ. 7.40ಯವರೆಗೆ ಬಡ್ಡಿದರ ಇದೆ. ಹಿರಿಯ ನಾಗರಿಕರಿಗೆ ಗರಿಷ್ಠ ಬಡ್ಡಿದರ ಇರುತ್ತದೆ.

ಮಾಮೂಲಿಯ ಗ್ರಾಹಕರಾದರೆ 1,111 ಮತ್ತು 1,777 ದಿನಗಳ ಡೆಪಾಸಿಟ್​ಗಳಿಗೆ ವಾರ್ಷಿಕ ಶೇ. 6.65ರಷ್ಟು ಬಡ್ಡಿ ಇರುತ್ತದೆ. 2,222 ದಿನಗಳ ಠೇವಣಿಯಾದರೆ ಬಡ್ಡಿ ದರ ಶೇ. 6.40ರಷ್ಟು ಕೊಡಲಾಗುತ್ತದೆ. ಇವೇ ಠೇವಣಿಗಳಿಗೆ ಹಿರಿಯ ನಾಗರಿಕರಿಗೆ ಶೇ. 7.15 ಮತ್ತು ಶೇ. 7.40 ಬಡ್ಡಿ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ