
ಬೆಂಗಳೂರು, ಸೆಪ್ಟೆಂಬರ್ 22: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮಧ್ಯೆ ಬೆಲೆ ಏರಿಕೆ ಪೈಪೋಟಿ ನಡೆದಿದೆ. ಕಳೆದ ಒಂದು ವರ್ಷದಲ್ಲಿ ಈ ಎರಡು ಅಮೂಲ್ಯ ಲೋಹಗಳ ಮೇಲೆ ಹೂಡಿಕೆ ಮಾಡಿದವರಿಗೆ ಭರಪೂರ ಲಾಭ ಸಿಕ್ಕಿದೆ. ಇದೇ ವೇಳೆ ಷೇರು ಮಾರುಕಟ್ಟೆ ಸೊರಗಿದೆ. ಒಂದು ವರ್ಷದಲ್ಲಿ ನಿಫ್ಟಿ ಮತ್ತು ಸೆನ್ಸೆಕ್ಸ್ ನೆಗಟಿವ್ ರಿಟರ್ನ್ ನೀಡಿದರೆ, ಚಿನ್ನ ಮತ್ತು ಬೆಳ್ಳಿಗಳು (silver) ಸಿಕ್ಕಾಪಟ್ಟೆ ಲಾಭ ತಂದುಕೊಟ್ಟಿವೆ. ಕಳೆದ ಒಂದು ವರ್ಷದಲ್ಲಿ ಹಾಗೂ ಈ ವರ್ಷದಲ್ಲಿ ಚಿನ್ನ, ಬೆಳ್ಳಿ ಮತ್ತು ಸೆನ್ಸೆಕ್ಸ್, ನಿಫ್ಟಿ ಎಷ್ಟು ರಿಟರ್ನ್ಸ್ ಕೊಟ್ಟಿವೆ ಎನ್ನುವ ವಿವರ ಇಲ್ಲಿದೆ.
ಇದನ್ನೂ ಓದಿ: ಗ್ರಾಚುಟಿ ನಿಯಮ ಏನಿದೆ? ಎಷ್ಟು ವರ್ಷದ ಸರ್ವಿಸ್ ಮಾಡಿದ್ರೆ ಎಷ್ಟು ಹಣ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ
ಜಾಗತಿಕವಾಗಿ ಅನಿಶ್ಚಿತ ಮತ್ತು ಬಿಕ್ಕಟ್ಟು ಸಂದರ್ಭಗಳು ಎದುರಾದಾಗ ಷೇರು ಮಾರುಕಟ್ಟೆ ಕುಸಿಯುತ್ತದೆ. ಚಿನ್ನ, ಬೆಳ್ಳಿಗಳಂತಹ ಅಮೂಲ್ಯ ಸರಕುಗಳಿಗೆ ಬೇಡಿಕೆ ಹೆಚ್ಚುತ್ತದೆ. ಹೂಡಿಕೆದಾರರು ಇವುಗಳ ಮೇಲೆ ಹೂಡಿಕೆ ಮಾಡಲು ಆದ್ಯತೆ ಕೊಡುತ್ತಾರೆ. ಹೀಗಾಗಿ, ಷೇರುಪೇಟೆ ಬಿದ್ದಾಗ ಚಿನ್ನ, ಬೆಳ್ಳಿ ಬೆಲೆಗಳ ಏರಿಕೆ ಹೆಚ್ಚಿರುತ್ತದೆ. ಷೇರು ಮಾರುಕಟ್ಟೆ ಎದ್ದಾಗ ಇವಕ್ಕೆ ಬೇಡಿಕೆ ಸ್ವಲ್ಪ ತಗ್ಗುತ್ತದೆ.
ಐತಿಹಾಸಿಕವಾಗಿ ಬೆಳ್ಳಿ ಲೋಹವು ಚಿನ್ನಕ್ಕಿಂತ ಹೆಚ್ಚು ಬೇಡಿಕೆ ಪಡೆದಿದ್ದು ಇದೇ ಮೊದಲಾಗಿರಬಹುದು. ಕಳೆದ ಒಂದು ವರ್ಷದಲ್ಲಿ ಬಹಳಷ್ಟು ಸಾಂಸ್ಥಿಕ ಹೂಡಿಕೆದಾರರು ಈ ಬಿಳಿ ಲೋಹವನ್ನು ಖರೀದಿ ಮಾಡಿದ್ದಾರೆ. ಕೈಗಾರಿಕೆಗಳಲ್ಲಿ ಬೆಳ್ಳಿಯ ಬಳಕೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಬೆಳ್ಳಿಗೆ ಬೇಡಿಕೆ ಬಹಳಷ್ಟು ಹೆಚ್ಚಿದೆ.
ಇದನ್ನೂ ಓದಿ: ಕಷ್ಟಕಾಲಕ್ಕೆ ಚಿನ್ನ ಬೇಕು; ಆದರೆ ಒಡವೆ ಖರೀದಿಸಿದರೆ ಲಾಭ ಸಿಗಲು ಹಲವು ವರ್ಷಗಳೇ ಬೇಕು
ಮುಂದಿನ ದಿನಗಳಲ್ಲೂ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಇದ್ದೇ ಇರುತ್ತದೆ. ಕಳೆದ ಒಂದು ವರ್ಷದಲ್ಲಿ ಆದಷ್ಟು ಏರಿಕೆಯನ್ನು ಮುಂದಿನ ಒಂದು ವರ್ಷದಲ್ಲಿ ನಿರೀಕ್ಷಿಸಲು ಆಗುವುದಿಲ್ಲವಾದರೂ ಸಾಮಾನ್ಯಕ್ಕಿಂತ ಹೆಚ್ಚಿನ ಏರಿಕೆ ನಿರೀಕ್ಷಿಸಬಹುದು. ಐತಿಹಾಸಿಕವಾಗಿ ಚಿನ್ನವು ವರ್ಷಕ್ಕೆ ಶೇ. 12ರಷ್ಟು ಏರಿಕೆ ಕಾಣುತ್ತದೆ. ಬೆಳ್ಳಿ ಶೇ. 10ರಷ್ಟು ರಿಟರ್ನ್ ಕೊಟ್ಟಿದ್ದಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ