ಸಾವರಿನ್ ಗೋಲ್ಡ್ ಬಾಂಡ್; ಇವತ್ತು ಒಂದು ಸರಣಿಯ ಮೆಚ್ಯೂರಿಟಿ, ವರ್ಷಾಂತ್ಯದಲ್ಲಿ ಇನ್ನೆರಡು ಟ್ರಾಂಚ್ ರಿಡಂಪ್ಷನ್​ಗೆ ಲಭ್ಯ

|

Updated on: Mar 28, 2024 | 10:08 AM

Sovereign Gold Bond Scheme: ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ 2015-16ರ ಸರಣಿಯ ಒಂದು ಟ್ರಾಂಚ್ ಇಂದು ರಿಡಂಪ್ಷನ್​ಗೆ ಲಭ್ಯ ಇದೆ. 2016ರ ಮಾರ್ಚ್ 29ರಂದು ಬಿಡುಗಡೆ ಆಗಿತ್ತು. ಎಂಟು ವರ್ಷದ ಈ ಬಾಂಡ್ 2024ರ ಮಾರ್ಚ್ 29ರಂದು ಮೆಚ್ಯೂರ್ ಆಗುತ್ತದಾದರೂ ನಾಳೆ ರಜೆ ಇರುವುದರಿಂದ ಇಂದೇ ಇದನ್ನು ರಿಡೀಮ್ ಮಾಡಿಕೊಳ್ಳಬಹುದು. 2016-17ರ ಸರಣಿಯ ಎರಡು ಸರಣಿಯ ಎಸ್​ಬಿಜಿ ಇದೇ ಆಗಸ್ಟ್ ಮತ್ತು ಸೆಪ್ಟೆಂಬರ್​ನಲ್ಲಿ ಮೆಚ್ಯೂರ್ ಆಗಲಿದೆ.

ಸಾವರಿನ್ ಗೋಲ್ಡ್ ಬಾಂಡ್; ಇವತ್ತು ಒಂದು ಸರಣಿಯ ಮೆಚ್ಯೂರಿಟಿ, ವರ್ಷಾಂತ್ಯದಲ್ಲಿ ಇನ್ನೆರಡು ಟ್ರಾಂಚ್ ರಿಡಂಪ್ಷನ್​ಗೆ ಲಭ್ಯ
ಸಾವರಿನ್ ಗೋಲ್ಡ್ ಬಾಂಡ್
Follow us on

ಸಾವರಿನ್ ಗೋಲ್ಡ್ ಬಾಂಡ್ ಯೋಜನೆ (Sovereign Gold Bond Scheme) ದಿನೇ ದಿನೇ ಜನಪ್ರಿಯವಾಗುತ್ತಿದೆ. ರಿಸ್ಕ್ ರಹಿತವಾಗಿ, ಈಕ್ವಿಟಿ ಮಾರುಕಟ್ಟೆ ರೀತಿಯಲ್ಲಿ ಲಾಭ ತಂದುಕೊಡಬಲ್ಲ ಕಾರಣಕ್ಕೆ ಎಸ್​ಜಿಬಿ ಸ್ಕೀಮ್ ಹೆಚ್ಚು ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. 2015ರಲ್ಲಿ ಆರಂಭವಾದ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ ಮೊದಲೆರಡು ಟ್ರಾಂಚ್​ಗಳು ಕೆಲ ತಿಂಗಳ ಹಿಂದೆ ರಿಡಂಪ್ಷನ್​ಗೆ ಬಂದಿದ್ದವು. 2016ರಲ್ಲಿ ನಾಲ್ಕು ಟ್ರಾಂಚ್​ಗಳನ್ನು ಬಿಡುಗಡೆ ಮಾಡಲಾಗಿತ್ತು. ಫೆಬ್ರುವರಿಯಲ್ಲಿ ಈಗಾಗಲೇ ಒಂದು ಮೆಚ್ಯೂರ್ ಆಗಿದೆ. ಇವತ್ತು ಗುರುವಾರ (ಮಾ. 28) ಮತ್ತೊಂದು ಮೆಚ್ಯೂರ್ ಆಗುತ್ತಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್​ನಲ್ಲಿ ಇನ್ನೆರಡು ಎಸ್​ಬಿಜಿ ಟ್ರಾಂಚ್​ಗಳು ರಿಡಂಪ್ಷನ್​ಗೆ ಬರುತ್ತಿವೆ. ಎಂಟು ವರ್ಷದ ಈ ಸ್ಕೀಮ್​ನಲ್ಲಿ ಚಿನ್ನದ ದರ ಬದಲಾವಣೆಗೆ ಅನುಗುಣವಾಗಿ ಹೂಡಿಕೆ ಬೆಳೆಯುತ್ತದೆ. ಮೊದಲೆರಡು ಟ್ರಾಂಚ್​ಗಳು ಭರ್ಜರಿ ಲಾಭ ತಂದಿದ್ದವು. ಸರಾಸರಿಯಾಗಿ ವರ್ಷಕ್ಕೆ ಶೇ. 12ರಂತೆ ಬೆಳೆದಿದ್ದವು. ಈ ವರ್ಷದ ಉಳಿದ ಎಸ್​ಜಿಬಿ ಟ್ರಾಂಚ್​ಗಳು ಎಷ್ಟು ಬೆಳೆದಿರಬಹುದು?

2016ರ ಎಸ್​ಜಿಬಿ ಸರಣಿ-1 ಫೆಬ್ರುವರಿ 8ರಂದು ಮೆಚ್ಯೂರ್ ಆಗಿತ್ತು. ಇದರ ಆರಂಭಿಕ ಬೆಲೆ ಒಂದು ಗ್ರಾಮ್​ಗೆ 2,600 ರೂ ಇತ್ತು. ಎಂಟು ವರ್ಷದ ಮೆಚ್ಯೂರಿಟಿ ಬಳಿಕ ಅಂತಿಮ ಬೆಲೆ 6,271 ರೂ ಆಗಿತ್ತು. ಎಂಟು ವರ್ಷದಲ್ಲಿ ಎರಡಕ್ಕೂ ಹೆಚ್ಚು ಪಟ್ಟು ಲಾಭ ತಂದಿದೆ.

ಇನ್ನು, 2016ರ ಸೀರೀಸ್-2 ಆ ವರ್ಷ ಮಾರ್ಚ್ 29ರಂದು ಬಿಡುಗಡೆ ಆಗಿತ್ತು. ಈ ಮಾರ್ಚ್ 29ರಂದು ರಜೆ ಇರುವುದರಿಂದ ಇಂದೇ (ಮಾರ್ಚ್ 28) ಇದನ್ನು ರಿಡಂಪ್ಷನ್ ಪಡೆಯಬಹುದು. ಆಗ ಒಂದು ಗ್ರಾಮ್​ಗೆ 2,600 ರೂ ಇತ್ತು. ಭಾರತೀಯ ಆಭರಣ ಸಂಸ್ಥೆಯ ವೆಬ್​ಸೈಟ್​ನಲ್ಲಿರುವ ಮಾಹಿತಿ ಪ್ರಕಾರ ಇವತ್ತು ಚಿನ್ನದ ಬೆಲೆ ಗ್ರಾಮ್​ಗೆ 6,683 ರೂ ಇದೆ. ಮಾರ್ಚ್ 18ರಿಂದ 22ರ ವಾರದ ಸರಾಸರಿ ಪರಿಗಣಿಸಿದರೆ ಗ್ರಾಮ್​ಗೆ 6,601 ರೂ ಆಗುತ್ತದೆ. ಇದೂ ಕೂಡ ಎರಡು ಪಟ್ಟಿಗೂ ಹೆಚ್ಚು ಲಾಭ ತಂದಿದೆ.

ಇದನ್ನೂ ಓದಿ: ಎಸ್​ಬಿಎಂನಲ್ಲಿ ಕೇವಲ 2,000 ರೂಗೆ ಎಫ್​ಡಿ ಇಡಿ; ಸ್ಟೆಪಪ್ ಕ್ರೆಡಿಟ್ ಕಾರ್ಡ್ ಪಡೆಯಿರಿ

2016-17ರ ಸರಣಿ 1 ಮತ್ತು ಸರಣಿ 2 ಈ ವರ್ಷದ ಕೊನೆಯಲ್ಲಿ ಮೆಚ್ಯೂರ್ ಆಗುತ್ತವೆ. ಸರಣಿ-1 2016ರ ಆಗಸ್ಟ್ 5ರಂದು ಬಿಡುಗಡೆ ಆಗಿತ್ತು. ಈ ವರ್ಷ ಆಗಸ್ಟ್ ಮೊದಲ ವಾರ ಇದು ಮೆಚ್ಯೂರ್ ಆಗುತ್ತದೆ. ಎರಡನೇ ಸರಣಿಯು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಮೆಚ್ಯೂರ್ ಆಗುವ ನಿರೀಕ್ಷೆ ಇದೆ. ಮೊದಲ ಸರಣಿಯಲ್ಲಿ ಬೆಲೆ ಗ್ರಾಮ್​ಗೆ 3,119 ರೂ ಇದ್ದರೆ, ಎರಡನೇ ಸರಣಿಯಲ್ಲಿ 3,150 ರೂ ಇತ್ತು. ಸೆಪ್ಟೆಂಬರ್​ನಲ್ಲಿ ಚಿನ್ನದ ಬೆಲೆ ಸರಾಸರಿಯಾಗಿ ಗ್ರಾಮ್​ಗೆ 7,000 ರೂ ದಾಟುವ ನಿರೀಕ್ಷೆ ಇದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ