ದೊಡ್ಡ ಮೊತ್ತದ ನಗದು ವಹಿವಾಟನ್ನು ತಪ್ಪಿಸಲು ಮತ್ತು ಡಿಜಿಟಲ್ ಟ್ರಾನ್ಸಾಕ್ಷನ್ ಅನ್ನು ಉತ್ತೇಜಿಸಲು ಸರ್ಕಾರವು ಕ್ಯಾಷ್ ವಹಿವಾಟಿಗೆ ಒಂದಷ್ಟು ತೆರಿಗೆ ವಿಧಿಸುತ್ತದೆ. ಆದಾಯ ತೆರಿಗೆ ನಿಯಮ 194ಎನ್ ಪ್ರಕಾರ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಕ್ಯಾಷ್ ವಹಿವಾಟುಗಳಿಗೆ ಟಿಡಿಎಸ್ ಕಡಿತ ಆಗುತ್ತದೆ. ಐಟಿಆರ್ ಸಲ್ಲಿಸಿದವರು, ಐಟಿಆರ್ ಸಲ್ಲಿಸದವರಿಗೆ ಪ್ರತ್ಯೇಕ ಮಿತಿಗಳನ್ನು ನಿಗದಿ ಮಾಡಲಾಗಿದೆ. 2019ರ ಸೆಪ್ಟೆಂಬರ್ 1ರಿಂದಲೇ ಈ ನಿಯಮಗಳು ಚಾಲನೆಯಲ್ಲಿವೆ. ನೀವು ಹೆಚ್ಚಿನ ಮೊತ್ತದ ಕ್ಯಾಷ್ ವಹಿವಾಟು ನಡೆಸುತ್ತಿರುವಿರಾದರೆ ಈ ನಿಯಮಗಳನ್ನು ತಿಳಿದಿರುವುದು ಅವಶ್ಯಕ.
ಇನ್ಕಮ್ ಟ್ಯಾಕ್ಸ್ ಕಾಯ್ದೆ 194ಎನ್ ಸೆಕ್ಷನ್ನಲ್ಲಿ ತೆರಿಗೆ ರಹಿತವಾಗಿ ಕ್ಯಾಷ್ ವಿತ್ಡ್ರಾಯಲ್ಗೆ ಕೆಲ ಮಿತಿ ನಿಗದಿ ಮಾಡಲಾಗಿದೆ. ಅದರ ವಿವರ ಕೆಳಕಂಡಂತಿದೆ:
ಈ ಮೇಲಿನ ಮಿತಿಯು ಒಂದು ಹಣಕಾಸು ವರ್ಷದ್ದು. ಅಂದರೆ, ನೀವು ಒಂದು ಹಣಕಾಸು ವರ್ಷದಲ್ಲಿ ಈ ಮೇಲಿನ ಮಿತಿಗಿಂತ ಹೆಚ್ಚು ಮೊತ್ತದ ಹಣವನ್ನು ಬ್ಯಾಂಕುಗಳಿಂದ ವಿತ್ಡ್ರಾ ಮಾಡಿದರೆ ಅದಕ್ಕೆ ಟಿಡಿಎಸ್ ಕಡಿತಗೊಳ್ಳುತ್ತದೆ.
ಇದನ್ನೂ ಓದಿ: ಒಂದು ವರ್ಷದ ಠೇವಣಿಗೆ ಶೇ 8ಕ್ಕಿಂತಲೂ ಹೆಚ್ಚು ರಿಟರ್ನ್; ಅಧಿಕ ಬಡ್ಡಿ ನೀಡುತ್ತಿವೆ ಈ 7 ಬ್ಯಾಂಕುಗಳು
ಐಟಿ ರಿಟರ್ನ್ಸ್ ಸಲ್ಲಿಸಿರುವವರಾದರೆ ಒಂದು ಹಣಕಾಸು ವರ್ಷದಲ್ಲಿ ಒಂದು ಕೋಟಿ ರೂವರೆಗೆ ಕ್ಯಾಷ್ ವಿತ್ಡ್ರಾ ಮಾಡಬಹುದು. ಅದಕ್ಕಿಂತ ಹೆಚ್ಚಿನ ಮೊತ್ತವಾದರೆ ಶೇ. 2ರಷ್ಟು ಟಿಡಿಎಸ್ ಕಡಿತವಾಗುತ್ತದೆ.
ಉದಾಹರಣೆಗೆ, ನೀವು ಐಟಿ ಪಾವತಿದಾರರಾಗಿದ್ದು, ಒಂದು ವರ್ಷದಲ್ಲಿ ಒಂದೂವರೆ ಕೋಟಿ ರೂ ವಿತ್ಡ್ರಾ ಮಾಡಿದ್ದರೆ, ಆಗ ಮಿತಿಗಿಂತ 50 ಲಕ್ಷ ರೂ ಹೆಚ್ಚು ವಿತ್ಡ್ರಾ ಮಾಡಿರುತ್ತೀರಿ. ಈ 50 ಲಕ್ಷ ರೂಗೆ ಒಂದು ಲಕ್ಷ ರೂ ಟಿಡಿಎಸ್ ಕಡಿತವಾಗಿ 49 ಲಕ್ಷ ರೂ ಮಾತ್ರವೇ ನಿಮಗೆ ಕ್ಯಾಷ್ ಸಿಗುತ್ತದೆ.
ಇದನ್ನೂ ಓದಿ: ಬೇಡದ ಡೀಮ್ಯಾಟ್ ಖಾತೆ ಮುಕ್ತಾಯಗೊಳಿಸುವುದು ರಗಳೆಯಲ್ಲ, ಸುಲಭ; ಇಲ್ಲಿದೆ ಮಾಹಿತಿ
ಗಮನಿಸಬೇಕಾದ ಸಂಗತಿ ಎಂದರೆ ಈ ಕ್ಯಾಷ್ ವಿತ್ಡ್ರಾಯಲ್ ಮಿತಿ ಒಂದೇ ಖಾತೆಯದ್ದಾಗಿರುವುದಿಲ್ಲ. ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಅಕೌಂಟ್ಗಳಿದ್ದು, ಅವುಗಳಿಂದ ಪ್ರತ್ಯೇಕವಾಗಿ ನೀವು ಕ್ಯಾಷ್ ವಿತ್ಡ್ರಾ ಮಾಡಿದ್ದರೂ ಎಲ್ಲವೂ ಲೆಕ್ಕಕ್ಕೆ ಇರುತ್ತದೆ.
ಇನ್ನೊಂದು ಗಮನಾರ್ಹ ಸಂಗತಿ ಎಂದರೆ, ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿಲ್ಲದೇ ಇದ್ದರೆ ಶೇ. 20ರಷ್ಟು ಟಿಡಿಎಸ್ ಕಡಿತ ಆಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ