ಒಂದು ವರ್ಷದ ಠೇವಣಿಗೆ ಶೇ 8ಕ್ಕಿಂತಲೂ ಹೆಚ್ಚು ರಿಟರ್ನ್; ಅಧಿಕ ಬಡ್ಡಿ ನೀಡುತ್ತಿವೆ ಈ 7 ಬ್ಯಾಂಕುಗಳು

Highest deposit rates in small finance banks: ಸುರಕ್ಷಿತ ಎನಿಸುವ ಪ್ರಮುಖ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್​ಗೆ ಬಡ್ಡಿ ತುಸು ಕಡಿಮೆ. ತುಸು ಹೆಚ್ಚು ರಿಸ್ಕಿ ಎನಿಸಿದ ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ದರ ಅಧಿಕ ಇರುತ್ತದೆ. ರಿಸ್ಕ್ ಕಡಿಮೆ ಇರುವ ಮತ್ತು ಹೆಚ್ಚು ಬಡ್ಡಿ ನೀಡುವ ಇನ್ನೊಂದು ಆಯ್ಕೆ ಎಂದರೆ ಅದು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು. ಅತಿಹೆಚ್ಚು ಠೇವಣಿ ದರ ಹೊಂದಿರುವ 7 ಎಸ್​ಎಫ್​ಬಿಗಳ ಪಟ್ಟಿ ಇಲ್ಲಿದೆ.

ಒಂದು ವರ್ಷದ ಠೇವಣಿಗೆ ಶೇ 8ಕ್ಕಿಂತಲೂ ಹೆಚ್ಚು ರಿಟರ್ನ್; ಅಧಿಕ ಬಡ್ಡಿ ನೀಡುತ್ತಿವೆ ಈ 7 ಬ್ಯಾಂಕುಗಳು
ಠೇವಣಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 18, 2024 | 3:17 PM

ಬಹಳ ಜನರಿಗೆ ಈಗಲೂ ಪ್ರಮುಖ ಹೂಡಿಕೆ ಸ್ಕೀಮ್​ಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಒಂದು. ಬಹಳ ನಿಶ್ಚಿತ ಮತ್ತು ಸುರಕ್ಷಿತವಾದ ಇನ್ವೆಸ್ಟ್​​ಮೆಂಟ್ ಪ್ಲಾನ್ ಆಗಿರುವ ಫಿಕ್ಸೆಡ್ ಡೆಪಾಸಿಟ್ ಈಗ ಹೆಚ್ಚು ಜನರನ್ನು ಆಕರ್ಷಿಸತೊಡಗಿದೆ. ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ಆಗುತ್ತಿರುವುದು ಹೂಡಿಕೆದಾರರು ಸಾಂಪ್ರದಾಯಿಕ ಹೂಡಿಕೆ ಯಂತ್ರಗಳತ್ತ ವಾಲುತ್ತಿದ್ದಾರೆ. ಬ್ಯಾಂಕುಗಳಲ್ಲಿ ಫಂಡಿಂಗ್ ಅವಶ್ಯಕತೆ ಬಹಳ ಇರುವುದರಿಂದ ಈಗ ನಿಶ್ಚಿತ ಠೇವಣಿಗಳಿಗೆ ಉತ್ತಮ ಬಡ್ಡಿ ಆಫರ್ ಮಾಡಲಾಗಿದೆ. ಪ್ರಮುಖ ಬ್ಯಾಂಕುಗಳು ಶೇ. 7ರಿಂದ 8ರಷ್ಟು ಬಡ್ಡಿಯನ್ನು ಎಫ್​​ಡಿಗೆ ನೀಡುತ್ತವೆ. ಇನ್ನೂ ಹೆಚ್ಚಿನ ಬಡ್ಡಿ ಸಿಗಬೇಕೆಂದರೆ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಡಬಹುದು.

ಕರ್ನಾಟಕದಲ್ಲಿ ಬಹಳಷ್ಟು ಒಳ್ಳೆಯ ಸಹಕಾರಿ ಬ್ಯಾಂಕುಗಳಿವೆ. ಇಲ್ಲಿ ಶೇ. 9ರ ಆಸುಪಾಸಿನ ದರದಷ್ಟು ಬಡ್ಡಿಯನ್ನು ಎಫ್​ಡಿ ಪ್ಲಾನ್​ಗಳಿಗೆ ನೀಡಲಾಗುತ್ತದೆ. ಆದರೆ, ಕೋ ಆಪರೇಟಿವ್ ಬ್ಯಾಂಕುಗಳು ಬಹಳ ರಿಸ್ಕಿ ಎಂದು ಭಾವಿಸುವವರಿಗೆ ಉತ್ತಮ ಪರ್ಯಾಯ ಆಯ್ಕೆ ಎಂದರೆ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು. ಈ ಕಿರು ಹಣಕಾಸು ಬ್ಯಾಂಕುಗಳು ಆರ್​ಬಿಐನಿಂದ ಮಾನ್ಯತೆ ಹೊಂದಿರುತ್ತವೆ. ಶೇ. 8ರಿಂದ 9ರಷ್ಟು ಎಫ್​ಡಿ ದರಗಳನ್ನು ಹೊಂದಿರುತ್ತವೆ. ಎಸ್​ಬಿಐ, ಎಚ್​ಡಿಎಫ್​ಸಿ ಇತ್ಯಾದಿ ಪ್ರಮುಖ ಕಮರ್ಷಿಯಲ್ ಬ್ಯಾಂಕುಗಳಿಗೆ ಹೋಲಿಸಿದರೆ ಈ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ ಠೇವಣಿ ದರ ಉತ್ತಮವಾಗಿರುತ್ತದೆ.

ಪ್ರಮುಖ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ ಠೇವಣಿ ದರಗಳು (1-2 ವರ್ಷ ಅವಧಿಗೆ)

  1. ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 8 ಬಡ್ಡಿ
  2. ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 8.25 ಬಡ್ಡಿ
  3. ಇಎಸ್​ಎಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 8.25 ಬಡ್ಡಿ
  4. ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 8.25 ಬಡ್ಡಿ
  5. ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 8.5 ಬಡ್ಡಿ
  6. ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 8.5 ಬಡ್ಡಿ
  7. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 8.25 ಬಡ್ಡಿ

ಇದನ್ನೂ ಓದಿ: DTI ratio: ಪರ್ಸನಲ್ ಲೋನ್: ನಿಮ್ಮ ಡಿಟಿಐ ರೇಶಿಯೋ ಪರಿಶೀಲಿಸಿ ನಿರ್ಧರಿಸುತ್ತದೆ ಬ್ಯಾಂಕು

ಇಲ್ಲಿ ಹಿರಿಯ ನಾಗರಿಕರ ಠೇವಣಿಗಳಿಗೆ ಸಾಮಾನ್ಯವಾಗಿ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ಹಿರಿಯ ನಾಗರಿಕರ ಒಂದು ವರ್ಷದ ಎಫ್​ಡಿಗಳಿಗೆ ಶೇ. 9ರಷ್ಟು ಬಡ್ಡಿ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:11 pm, Mon, 18 November 24

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್