
ಆದಾಯ ತೆರಿಗೆ ಇಲಾಖೆಯಿಂದ (Income Tax) ನೋಟೀಸ್ ಅನ್ನು ಕೇವಲ ದೊಡ್ಡ ಶ್ರೀಮಂತರಿಗೆ ಕೊಡೋದಿಲ್ಲ, ಸಾಮಾನ್ಯ ಆದಾಯ ಇರುವ ವ್ಯಕ್ತಿಗಳಿಗೂ ಐಟಿ ನೋಟೀಸ್ ಭಾಗ್ಯ ಇರುತ್ತೆ. ಬಹಳ ಅಸಹಜ ಎನಿಸುವ ಹಣದ ವಹಿವಾಟು ನಡೆದಿದ್ದರೆ, ಅದು ಇಲಾಖೆಯ ಗಮನಕ್ಕೆ ಹೋಗುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯ ಘೋಷಿತ ಆದಾಯಕ್ಕಿಂತ ಹೆಚ್ಚಿನ ಹಣದ ವಹಿವಾಟು ನಡೆದಿದ್ದರೆ ಐಟಿ ಮೂಗಿಗೆ ಆ ವಾಸನೆ ಬಡಿದೇ ಬಡಿಯುತ್ತದೆ. ತೀರಾ ಹೆಚ್ಚಿನ ವ್ಯತ್ಯಾಸ ಇದ್ದಂತಹ ಸಂದರ್ಭದಲ್ಲಿ ನೋಟೀಸ್ ನೀಡಿ ವಿವರಣೆ ಕೇಳಲಾಗುತ್ತದೆ.
ಹಣದ ವಹಿವಾಟಿಗೆ ಪ್ರಧಾನ ಮೂಲವೇ ಸೇವಿಂಗ್ಸ್ ಅಕೌಂಟ್. ಇಲ್ಲಿ ಎಲೆಕ್ಟ್ರಾನಿಕ್ ರೂಪದಲ್ಲಿ ಕ್ಯಾಷ್ ವಹಿವಾಟು ನಡೆದರೆ ಅದು ಎಲ್ಲಿಂದ ಬಂತು, ಎಲ್ಲಿಂದ ಹೋಯಿತು ಎನ್ನುವ ಜಾಡು ಸಿಕ್ಕಿಹೋಗುತ್ತದೆ. ಕ್ಯಾಷ್ ವಹಿವಾಟು ನಡೆದಾಗ ಅಷ್ಟು ಆದಾಯ ಎಲ್ಲಿಂದ ಬಂತು ಎನ್ನುವುದಕ್ಕೆ ಸಾಕ್ಷ್ಯ ಕೊಡಬೇಕು. ಐಟಿ ಗಮನಿಸಬಹುದಾದ ಕೆಲ ಪ್ರಮುಖ ಸೇವಿಂಗ್ಸ್ ಅಕೌಂಟ್ ಟ್ರಾನ್ಸಾಕ್ಷನ್ಗಳ ವಿವರ ಕೆಳಕಂಡಂತಿದೆ.
ಇದನ್ನೂ ಓದಿ: ಚಿನ್ನಕ್ಕೆ ಮೇಕಿಂಗ್ ಚಾರ್ಜ್ ಇಲ್ಲ ಅಂತಾರೆ, ಆದರೆ ನಯವಾಗಿ ಬೇರೆ ಚಾರ್ಜಸ್ ಹಾಕ್ತಾರೆ, ಹುಷಾರ್
ನಿಮ್ಮ ಎಲ್ಲಾ ಸೇವಿಂಗ್ಸ್ ಅಕೌಂಟ್ಗಳಲ್ಲಿ ಒಂದು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚಿನ ಕ್ಯಾಷ್ ಡೆಪಾಸಿಟ್ ಆಗಿದ್ದರೆ, ಬ್ಯಾಂಕುಗಳು ಅದನ್ನು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರುತ್ತದೆ. ಅಷ್ಟು ಕ್ಯಾಷ್ ಹಣ ಎಲ್ಲಿಂದ ಬಂತು ಎಂದು ಐಟಿ ನೋಟೀಸ್ ಬರಬಹುದು. ಆ ಆದಾ ಮೂಲಕ್ಕೆ ಸಾಕ್ಷ್ಯ ತೋರಿಸಬೇಕಾಗುತ್ತದೆ.
ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆ ಒಟ್ಟು 10 ಲಕ್ಷ ರೂ ದಾಟಿದರೆ ಬ್ಯಾಂಕುಗಳು ಮತ್ತು ಕ್ರೆಡಿಟ್ ಕಾರ್ಡ್ ಕಂಪನಿಗಳು ಐಟಿ ಗಮನಕ್ಕೆ ತರುತ್ತವೆ. ಹಾಗೆಯೇ, ಒಂದು ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಪೇಮೆಂಟ್ ಅನ್ನು ಕ್ಯಾಷ್ ಮೂಲಕ ಮಾಡಿದಾಗಲೂ ಅದು ಐಟಿ ಗಮನಕ್ಕೆ ಹೋಗುತ್ತದೆ.
ಇದನ್ನೂ ಓದಿ: ಇಬ್ಬರು ಗೆಳೆಯರು.. ಅದೇ ವಯಸ್ಸು, ಅದೇ ಸಂಬಳ; ಒಬ್ಬನದ್ದು ಆರಾಮ ಜೀವನ, ಮತ್ತೊಬ್ಬನದ್ದು ಡೆಟ್ ಟ್ರ್ಯಾಪ್; ತಪ್ಪಾಗಿದ್ದು ಎಲ್ಲಿ?
ಬಹಳ ದೊಡ್ಡ ಮೊತ್ತದ ಕ್ಯಾಷ್ ಟ್ರಾನ್ಸಾಕ್ಷನ್ ನಡೆಸಿದರೆ ಅದು ಐಟಿ ಇಲಾಖೆಗೆ ಅನುಮಾನ ಮೂಡಿಸಬಹುದು. ಹೆಚ್ಚು ಕ್ಯಾಷ್ ವಿತ್ಡ್ರಾ ಮಾಡುವುದು, ಅಥವಾ ಹೆಚ್ಚು ಕ್ಯಾಷ್ ಡೆಪಾಸಿಟ್ ಮಾಡುವುದು ಇವು ರೆಡ್ ಫ್ಲ್ಯಾಗ್ಸ್ ಎಂದು ಪರಿಗಣಿಸಬಹುದು.
30 ಲಕ್ಷ ರೂಗೂ ಅಧಿಕ ಮೌಲ್ಯದ ಯಾವುದೇ ಚಿರಾಸ್ತಿಯನ್ನು ಖರೀದಿಸಿದಾಗ ಅಥವಾ ಮಾರಿದಾಗ ಉಪನೊಂದಣಿ ಇಲಾಖೆಯಿಂದ ಐಟಿ ಇಲಾಖೆಗೆ ಮಾಹಿತಿ ರವಾನೆಯಾಗುತ್ತದೆ. ಐಟಿ ಇದನ್ನು ಪರಿಶೀಲಿಸಬಹುದು.
ಇದನ್ನೂ ಓದಿ: ನೂರು ಕೋಟಿ ಗಳಿಸುವ ಸಿಂಪಲ್ ಐಡಿಯಾ; 25 ವರ್ಷದ ಯುವಜನರಿಗೆ ಉದ್ಯಮಿ ಕಿವಿಮಾತು
ಬಹಳ ದಿನಗಳಿಂದ ನಿಷ್ಕ್ರಿಯಗೊಂಡಿದ್ದ ಬ್ಯಾಂಕ್ ಅಕೌಂಟ್ ಸಕ್ರಿಯಗೊಂಡು, ಬಹಳ ಶೀಘ್ರದಲ್ಲೇ ಹೆಚ್ಚಿನ ವಹಿವಾಟು ನಡೆಸುವುದು ಇತ್ಯಾದಿ ಆದಲ್ಲಿ ಐಟಿಗೆ ಸಂಶಯ ತರಬಹುದು. ನೋಟೀಸ್ ಕೊಟ್ಟು ವಿವರಣೆ ಕೇಳಬಹುದು.
ಹಾಗೆಯೇ, ಅಧಿಕ ಮೊತ್ತದ ಫಾರೀನ್ ಕರೆನ್ಸಿ ಟ್ರಾನ್ಸಾಕ್ಷನ್ಗಳು ಆಗಿರುವುದು; ಐಟಿಆರ್ನಲ್ಲಿ ಘೋಷಣೆ ಆಗಿರುವುದಕ್ಕೂ ಬ್ಯಾಂಕ್ನಿಂದ ಬಡ್ಡಿ ಆದಾಯ ರಿಪೋರ್ಟ್ ಆಗಿರುವುದಕ್ಕೂ ಮಾಹಿತಿಯಲ್ಲಿ ವ್ಯತ್ಯಾಸ ಆಗಿರುವುದು ಇತ್ಯಾದಿ ಸಂದರ್ಭಗಳೂ ಕೂಡ ಐಟಿಯ ಕಣ್ಣು ನೆಡುವಂತೆ ಮಾಡುತ್ತವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ