ಬೆಂಗಳೂರು, ಮಾರ್ಚ್ 19: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕು (Ujjivan small finance bank) ತನ್ನ ವಿವಿಧ ಫಿಕ್ಸೆಡ್ ಡೆಪಾಸಿಟ್ ದರಗಳನ್ನು ಪರಿಷ್ಕರಿಸಿದೆ. ಸಾಮಾನ್ಯ ಗ್ರಾಹಕರ ಎಫ್ಡಿಗಳಿಗೆ ಶೇ. 8.50ರಷ್ಟು ಬಡ್ಡಿ ಆಫರ್ ಮಾಡಿದೆ. ಹಿರಿಯ ನಾಗರಿಕರಿಗೆ ಶೇ. 9ರಷ್ಟು ಬಡ್ಡಿ ಕೊಡಲಾಗುತ್ತದೆ. ವಿಶೇಷ ಠೇವಣಿಯಾದ ಪ್ಲಾಟಿನಾ ಎಫ್ಡಿಗೆ (platina fd) ಶೇ. 9.2ರಷ್ಟು ಬಡ್ಡಿ ಸಿಗುತ್ತದೆ. ಯಾವುದೇ ಕಮರ್ಷಿಯಲ್ ಬ್ಯಾಂಕುಗಳಿಗಿಂತ ಹೆಚ್ಚು ಲಾಭ ತಂದುಕೊಡುತ್ತದೆ ಉಜ್ಜೀವನ್ ಬ್ಯಾಂಕ್ನ ನಿಶ್ಚಿತ ಠೇವಣಿ ಪ್ಲಾನ್ಗಳು. ನಿಶ್ಚಿತ ಠೇವಣಿಗೆ ಅತಿಹೆಚ್ಚು ಬಡ್ಡಿ ನೀಡುವ ಬ್ಯಾಂಕುಗಳ ಸಾಲಿನಲ್ಲಿ ಉಜ್ಜೀವನ್ ಸೇರುತ್ತದೆ.
ಉಜ್ಜೇವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ 15 ತಿಂಗಳ ನಿಶ್ಚಿತ ಠೇವಣಿಗೆ ಈ ಭರ್ಜರಿ ಬಡ್ಡಿ ಆಫರ್ ಇದೆ. ಶೇ. 9.2ರಷ್ಟು ಬಡ್ಡಿ ಸಿಗುವ ಪ್ಲಾಟಿನಾ ಎಫ್ಡಿ ಪ್ಲಾನ್ನಲ್ಲಿ ಠೇವಣಿ ಒಂದು ಕೋಟಿ ರೂಗಿಂತ ಹೆಚ್ಚಿರಬೇಕು, ಎರಡು ಕೋಟಿ ರೂಗಿಂತ ಕಡಿಮೆ ಇರಬೇಕು. ಹಾಗೆಯೇ, ತೆರಿಗೆ ಲಾಭ ತಂದುಕೊಡುವ ಫಿಕ್ಸೆಡ್ ಡೆಪಾಸಿಟ್ಗಳೂ ಉಂಟು. ಇವು ಐದು ವರ್ಷದ ಲಾಕ್-ಇನ್ ಅವಧಿ ಇರುತ್ತದೆ. ಅಂದರೆ, ಕನಿಷ್ಠ ಐದು ವರ್ಷವಾದರೂ ಈ ಠೇವಣಿಯಲ್ಲಿ ಹಣ ಇರಿಸಬೇಕು.
ಇದನ್ನೂ ಓದಿ: ಡೆಟ್ ಫಂಡ್ ಎಂದರೇನು? ಎಫ್ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದರಿಂದ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್
ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಈ ಉಜ್ಜೀವನ್ ಬ್ಯಾಂಕ್ನಲ್ಲಿ ಠೇವಣಿಗಳಿಗೆ ನೀಡಲಾಗುವ ಬಡ್ಡಿ ಹಣವನ್ನು ವಿವಿಧ ಅವಧಿಯಲ್ಲಿ ಪಡೆಯುವ ಆಯ್ಕೆಗಳಿವೆ. ಮಾಸಿಕವಾಗಿಯೋ, ತ್ರೈಮಾಸಿಕವಾಗಿಯೋ ಬಡ್ಡಿ ಸ್ವೀಕರಿಸಬಹುದು. ಅಥವಾ ಎಫ್ಡಿ ಮೆಚ್ಯೂರ್ ಆದ ಬಳಿಕ ಠೇವಣಿ ಹಣದ ಜೊತೆಗೆ ಒಟ್ಟಿಗೆ ಬಡ್ಡಿಹಣವನ್ನೂ ಸೇರಿಸಿ ಪಡೆಯಬಹುದು.
ಭಾರತದಲ್ಲಿರುವ ಅತಿದೊಡ್ಡ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ ಒಂದಾದ ಉಜ್ಜೀವನ್ ಬ್ಯಾಂಕ್ 2017ರ ಫೆಬ್ರುವರಿಯಲ್ಲಿ ಆರಂಭವಾಗಿದೆ. ದೇಶಾದ್ಯಂತ 26 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದರ 729 ಶಾಖೆಗಳಿವೆ. 21 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಬಳಗ ಹೊಂದಿದೆ. 82 ಲಕ್ಷ ಗ್ರಾಹಕರು, 29,869 ಕೋಟಿ ರೂ ಠೇವಣಿ ಹೊಂದಿದೆ. ಇನ್ನಷ್ಟು ಠೇವಣಿ ಮೊತ್ತ ಹೆಚ್ಚಿಸುವ ಗುರಿ ಹೊಂದಿರುವ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಈ ನಿಟ್ಟಿನಲ್ಲಿ ಹೆಚ್ಚಿನ ಠೇವಣಿ ದರ ಪ್ರಕಟಿಸಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ