ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಕ್ಷೇತ್ರದ ಬಹುತೇಕ ಎಲ್ಲ ಪ್ರಮುಖ ಬ್ಯಾಂಕ್ಗಳು (Major Banks) ಈಗ ವಾಟ್ಸ್ಆ್ಯಪ್ (WhatsApp) ಮೂಲಕ ಬ್ಯಾಂಕಿಂಗ್ ಸೇವೆಗಳನ್ನು (Banking Services) ನೀಡುತ್ತಿವೆ. ಡಿಜಿಟಲ್ ಬ್ಯಾಂಕಿಂಗ್ (Digital Banking) ಉಪಕ್ರಮಗಳ ಇತ್ತೀಚಿನ ಒಂದು ಭಾಗ ವಾಟ್ಸ್ಆ್ಯಪ್ ಬ್ಯಾಂಕಿಂಗ್ (WhatsApp banking). ಡಿಜಿಟಲ್ ಬ್ಯಾಂಕಿಂಗ್ನಿಂದಾಗಿ ಎಲ್ಲ ವಯಸ್ಸಿನ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಪಡೆಯವುದು ಬಹಳ ಸುಲಭ ಮತ್ತು ಸರಳವಾಗಿದೆ. ನೀವು ಎಸ್ಬಿಐ, ಎಚ್ಡಿಎಫ್ಸಿ, ಐಸಿಐಸಿಐ, ಬ್ಯಾಂಕ್ ಆಫ್ ಬರೋಡ, ಆ್ಯಕ್ಸಿಸ್ ಬ್ಯಾಂಕ್ ಇವುಗಳ ಗ್ರಾಹಕರಾಗಿದ್ದರೆ ವಾಟ್ಸ್ಆ್ಯಪ್ ಸೇವೆಗಳಿಗೆ ಹೇಗೆ ನೋಂದಾಯಿಸಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಈಗ ಖಾತೆದಾರರಿಗೆ ಮತ್ತು ಖಾತೆ ಇಲ್ಲದವರಿಗೂ ವಾಟ್ಸ್ಆ್ಯಪ್ ಮೂಲಕ ಸೇವೆ ಒದಗಿಸುತ್ತಿದೆ. ಬ್ಯಾಂಕ್ ಅನೇಕ ಸೇವೆಗಳು ವಾಟ್ಸ್ಆ್ಯಪ್ ಮೂಲಕ ಲಭ್ಯವಿವೆ. ಈ ಬ್ಯಾಂಕ್ನ ವಾಟ್ಸ್ಆ್ಯಪ್ ಸೇವೆಗಳನ್ನು ಪಡೆಯಲು ಗ್ರಾಹಕರು +91-9264092640 ಈ ಸಂಖ್ಯೆಯನ್ನು ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ ಆ್ಯಡ್ ಮಾಡಿರಬೇಕು. ನಂತರ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ +91-9264092640 ಈ ಸಂಖ್ಯೆಗೆ ಮೆಸೇಜ್ ಕಳುಹಿಸಬೇಕು.
ಬ್ಯಾಂಕ್ನಲ್ಲಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆಯಿಂದ +919022690226 ಇದಕ್ಕೆ ‘ಹಾಯ್ (Hi)’ ಸಂದೇಶ ಕಳುಹಿಸಿ. ನಂತರ ಚಾಟ್-ಬಾಟ್ನಲ್ಲಿ ಬರುವ ಸೂಚನೆಗಳನ್ನು ಅನುಸರಿಸಿ ಅಥವಾ WAREG A/C No ಎಂದು ಟೈಪ್ ಮಾಡಿ ಇದರ ಮುಂದೆ ಖಾತೆ ಸಂಖ್ಯೆಯನ್ನು ನಮೂದಿಸಿ ಎಸ್ಎಂಎಸ್ ಕಳುಹಿಸಿ. ನೋಂದಾವಣೆ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಎಸ್ಬಿಐ ವಾಟ್ಸ್ಆ್ಯಪ್ ಬ್ಯಾಂಕಿಂಗ್ ಸೌಲಭ್ಯ ದೊರೆಯುತ್ತದೆ.
ಎಚ್ಡಿಎಫ್ಸಿ ಬ್ಯಾಂಕ್ ವಾಟ್ಸ್ಆ್ಯಪ್ ಮೂಲಕ ದಿನದ 24 ಗಂಟೆಯೂ ವಾರದ ಎಲ್ಲ ದಿನಗಳಲ್ಲಿಯೂ 90+ ಸೇವೆಗಳನ್ನು ನೀಡುತ್ತಿದೆ. ಗ್ರಾಹಕರು ಚಾಟ್ ಮಾಡುವ ಮೂಲಕ ಸೇವೆಗಳನ್ನು ಪಡೆಯಬಹುದಾಗಿದೆ. ಸಂಪೂರ್ಣ ಎನ್ಕ್ರಿಪ್ಟೆಡ್ ಸೇವೆಯನ್ನು ಬ್ಯಾಂಕ್ ನೀಡುತ್ತಿದೆ. ಆದರೆ, ಬ್ಯಾಂಕ್ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮಾತ್ರ ಈ ಸೇವೆಗಳು ದೊರೆಯುತ್ತವೆ. ಕಾಂಟ್ಯಾಕ್ಟ್ ಲಿಸ್ಟ್ನಲ್ಲಿ 70700 22222 ಈ ಸಂಖ್ಯೆಯನ್ನು ಆ್ಯಡ್ ಮಾಡಿ ‘Hi’ ಸಂದೇಶ ಕಳುಹಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು.
ಐಸಿಐಸಿಐ ಬ್ಯಾಂಕ್ ಬ್ಯಾಂಕ್ ವಾಟ್ಸ್ಆ್ಯಪ್ ಸೇವೆ ಪಡೆಯಲು +91 8640086400 ಸಂಖ್ಯೆಯನ್ನು ಸೇವ್ ಮಾಡಿಕೊಂಡು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ‘Hi’ ಸಂದೇಶ ಕಳುಹಿ. 9542000030 ಸಂಖ್ಯೆಗೆ ಡಯಲ್ ಮಾಡುವ ಮೂಲಕ ಅಥವಾ OPTIN ಎಂದು ಎಸ್ಎಂಎಸ್ ಕಳುಹಿಸುವ ಮೂಲಕವೂ ವಾಟ್ಸ್ಆ್ಯಪ್ ಸೇವೆ ಪಡೆಯಲು ಆರಂಭಿಸಬಹುದು.
7036165000 ಈ ಸಂಖ್ಯೆಗೆ ಎಸ್ಎಂಎಸ್ ಕಳುಹಿಸುವ ಅಥವಾ ಮಿಸ್ಡ್ ಕಾಲ್ ಕೊಟ್ಟು ನಂತರ ‘ಸಬ್ಸ್ಕ್ರೈಬ್’ ಎಂದು ಮೆಸೇಜ್ ಕಳುಹಿಸುವ ಮೂಲಕ ವಾಟ್ಸ್ಆ್ಯಪ್ ಬ್ಯಾಂಕಿಂಗ್ ಸೌಲಭ್ಯ ಪಡೆಯಬಹುದು. ಅಕೌಂಟ್ಸ್, ಚೆಕ್, ಕ್ರೆಡಿಟ್ ಕಾರ್ಡ್, ಟರ್ಮ್ ಡಿಪಾಸಿಟ್, ಲೋನ್ ಸೇರಿದಂತೆ ಹಲವು ಸೇವೆಗಳನ್ನು ಬ್ಯಾಂಕ್ ವಾಟ್ಸ್ಆ್ಯಪ್ ಮೂಲಕ ನೀಡುತ್ತಿದೆ. ಆ್ಯಕ್ಸಿಸ್ ಬ್ಯಾಂಕ್ ಗ್ರಾಹಕರಲ್ಲದವರಿಗೂ ಸಹ ‘ಅಪ್ಲೈ ಫಾರ್ ಪ್ರಾಡಕ್ಟ್ಸ್’, ಸಮೀಪದ ಎಟಿಎಂ, ಶಾಖೆ, ಸಾಲದ ಕೇಂದ್ರ ಹುಡುಕುವ ಸೇವೆಗಳು ವಾಟ್ಸ್ಆ್ಯಪ್ ಮೂಲಕ ಲಭ್ಯವಿವೆ.
ಬ್ಯಾಂಕ್ ಆಫ್ ಬರೋಡ ಗ್ರಾಹಕರು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 8433888777ಗೆ ‘Hi’ ಸಂದೇಶ ಕಳುಹಿಸಿ ವಾಟ್ಸ್ಆ್ಯಪ್ ಸೇವೆಗಳನ್ನು ಎನೇಬಲ್ ಮಾಡಿಕೊಳ್ಳಬಹುದು. ಭಾರತದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಗ್ರಾಹಕರಿಗೂ ಈ ಸೇವೆ ಲಭ್ಯವಿದೆ.