ಸೆ. 30ರೊಳಗೆ ಈ ಕೆಲಸ ಮಾಡದಿದ್ದರೆ ಪಿಪಿಎಫ್, ಸೇವಿಂಗ್ಸ್ ಸ್ಕೀಮ್ ಇತ್ಯಾದಿ ನಿಮ್ಮ ಹೂಡಿಕೆ ಸ್ಥಗಿತಗೊಳ್ಳಲಿದೆ

|

Updated on: Sep 05, 2023 | 11:55 AM

Submit Aadhaar by 2023 September 30: ಸುಕನ್ಯಾ ಸಮೃದ್ಧಿ ಯೋಜನೆ, ಕಿಸಾನ್ ವಿಕಾಸ್ ಪತ್ರ, ಪಿಪಿಎಫ್ ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳನ್ನು ನೀವು ಹೊಂದಿದ್ದರೆ ಈ ಸುದ್ದಿ ತಪ್ಪದೇ ಓದಿ. ನೀವು ಯೋಜನೆ ಆರಂಭಿಸುವಾಗ ಆಧಾರ್ ಸಲ್ಲಿಸದೇ ಇದ್ದರೆ ಸೆಪ್ಟೆಂಬರ್ 30ರೊಳಗೆ ಅದನ್ನು ಕಡ್ಡಾಯವಾಗಿ ಸಲ್ಲಿಬೇಕು. ಇಲ್ಲದಿದ್ದರೆ ಅಕ್ಟೋಬರ್ 1ರಿಂದ ನಿಮ್ಮ ಖಾತೆ ಫ್ರೀಜ್ ಆಗುತ್ತದೆ. ಮಾರ್ಚ್ 31ರಂದು ಕೇಂದ್ರ ಹಣಕಾಸು ಸಚಿವಾಲಯ ಈ ಬಗ್ಗೆ ಅಧಿಸೂಚನೆ ಹೊರಡಿಸಿತ್ತು.

ಸೆ. 30ರೊಳಗೆ ಈ ಕೆಲಸ ಮಾಡದಿದ್ದರೆ ಪಿಪಿಎಫ್, ಸೇವಿಂಗ್ಸ್ ಸ್ಕೀಮ್ ಇತ್ಯಾದಿ ನಿಮ್ಮ ಹೂಡಿಕೆ ಸ್ಥಗಿತಗೊಳ್ಳಲಿದೆ
ಸೇವಿಂಗ್ ಸ್ಕೀಮ್
Follow us on

ಅಂಚೆ ಕಚೇರಿಯಲ್ಲಿ ಹಲವಾರು ಯೋಜನೆಗಳಿಗೆ ಅವಕಾಶ ಇದೆ. ಸುಕನ್ಯಾ ಸಮೃದ್ಧಿ ಯೋಜನೆ (SSY), ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF), ಪೋಸ್ಟ್ ಆಫೀಸ್ ಡೆಪಾಸಿಟ್, ಹಾಗೂ ಇತರ ಕೆಲ ಕಿರು ಉಳಿತಾಯ ಯೋಜನೆಗಳನ್ನು ಅಂಚೆ ಕಚೇರಿಯಲ್ಲಿ ಆಫರ್ ಮಾಡಲಾಗುತ್ತದೆ. ನೀವೇನಾದರೂ ಅಂಚೆ ಕಚೇರಿಯಲ್ಲಿ ಖಾತೆ ಹೊಂದಿದ್ದರೆ ಸೆಪ್ಟೆಂಬರ್ 30ರೊಳಗೆ ನಿಮ್ಮ ಆಧಾರ್ ನಂಬರ್ ಅನ್ನು ಕೊಡುವುದು ಕಡ್ಡಾಯವಾಗಿದೆ. ಆಧಾರ್ ಸಲ್ಲಿಸದಿದ್ದರೆ ಅಂಚೆ ಕಚೇರಿಯಲ್ಲಿನ ನಿಮ್ಮ ಖಾತೆ ಹಾಗೂ ಇತರ ಸ್ಕೀಮ್​ಗಳು ಸ್ಥಗಿತಗೊಳ್ಳುತ್ತವೆ. ಅಂಚೆ ಕಚೇರಿಯಲ್ಲಿ ಅಲ್ಲದಿದ್ದರೂ ಯಾವುದೇ ಬ್ಯಾಂಕ್​ನಲ್ಲಾದರೂ ನೀವು ಈ ಉಳಿತಾಯ ಯೋಜನೆಗಳನ್ನು ಹೊಂದಿದ್ದರೆ ಅಲ್ಲೂ ಕೂಡ ಸೆಪ್ಟೆಂಬರ್ 30ರೊಳಗೆ ಆಧಾರ್ ನಂಬರ್ ಕೊಡಬೇಕು.

ಸುಕನ್ಯಾ ಸಮೃದ್ಧಿ ಯೋಜನೆ, ಪಿಪಿಎಫ್, ಹಿರಿಯ ನಾಗರಿಕರ ಉಳಿತಾಯ ಯೋಜನೆ ಇತ್ಯಾದಿ ಸ್ಕೀಮ್​ಗಳಲ್ಲಿ ಹೂಡಿಕೆ ಮಾಡಲು ಪ್ಯಾನ್ ಮತ್ತು ಆಧಾರ್ ನಂಬರ್ ಅನ್ನು ಸಲ್ಲಿಸುವುದು ಕಡ್ಡಾಯ ಎಂದು ಮಾರ್ಚ್ 31ರಂದು ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಎಲ್ಲರೂ ಆಧಾರ್ ನಂಬರ್ ಸಲ್ಲಿಸಬೇಕಾ?

ಕೇಂದ್ರ ಹಣಕಾಸು ಸಚಿವಾಲಯದ ಅಧಿಸೂಚನೆ ಪ್ರಕಾರ, ಪಿಪಿಎಫ್ ಇತ್ಯಾದಿ ಯೋಜನೆಗಳನ್ನು ಆರಂಭಿಸುವಾಗ ಆಧಾರ್ ಮತ್ತು ಪ್ಯಾನ್ ನಂಬರ್ ಸಲ್ಲಿಸದೇ ಇರುವವರು 2023ರ ಸೆಪ್ಟೆಂಬರ್ 30ರೊಳಗೆ ಆಧಾರ್ ನಂಬರ್ ಅನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಸಣ್ಣ ಉಳಿತಾಯ ಖಾತೆಗೆ ಆಧಾರ್ ಜೋಡಿತವಾಗದಿದ್ದರೆ, ಇನ್ನು ಆರು ತಿಂಗಳಲ್ಲಿ ಅದು ಸ್ಥಗಿತಗೊಳ್ಳುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಹಬ್ಬದ ಸೀಸನ್ ಬಂತು, 1 ಲಕ್ಷ ಮಹಿಳೆಯರು, ವಿಶೇಷ ಚೇತನರು ಮತ್ತಿತರಿಗೆ ಉದ್ಯೋಗ ಒದಗಿಸಲು ಫ್ಲಿಪ್​ಕಾರ್ಟ್ ಗುರಿ

ಅದರಂತೆ, ಸಣ್ಣ ಉಳಿತಾಯ ಯೋಜನೆ ಹೊಂದಿರುವವರು ಆಧಾರ್ ನಂಬರ್ ಒದಗಿಸದಿದ್ದರೆ ಅಕ್ಟೋಬರ್ 1ಕ್ಕೆ ಅವರ ಸ್ಕೀಮ್​ಗಳು ಫ್ರೀಜ್ ಆಗುತ್ತವೆ.

ಏನಿವು ಸಣ್ಣ ಉಳಿತಾಯ ಯೋಜನೆಗಳು?

ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಸುಕನ್ಯಾ ಸಮೃದ್ಧಿ ಯೋಜನೆ ಇತ್ಯಾದಿ ಸಣ್ಣ ಉಳಿತಾಯ ಯೋಜನೆಗಳು ಉತ್ತಮ ಬಡ್ಡಿ ಆಫರ್ ಮಾಡುವುದರ ಜೊತೆಗೆ ತೆರಿಗೆ ರಿಯಾಯಿತಿ ಅವಕಾಶವನ್ನೂ ಕೊಡುತ್ತವೆ. ಈ ಯೋಜನೆಗಳಿಗೆ ಸರ್ಕಾರ ಪ್ರತೀ ಮೂರು ತಿಂಗಳಿಗೊಮ್ಮೆ ಬಡ್ಡಿದರ ಪರಿಷ್ಕರಿಸುತ್ತದೆ. ಆಯಾ ಸಂದರ್ಭದಲ್ಲಿ ಆರ್​ಬಿಐ ನಿಗದಿ ಮಾಡುವ ಬಡ್ಡಿದರಕ್ಕೆ ಅನುಗುಣವಾಗಿ ಈ ಯೋಜನೆಗಳಿಗೆ ಬಡ್ಡಿ ಬದಲಾಯಿಸಲಾಗುತ್ತದೆ.

ಇದನ್ನೂ ಓದಿ: ಫುಯೆಲ್ ಕ್ರೆಡಿಟ್ ಕಾರ್ಡ್​ನಿಂದ ಏನು ಪ್ರಯೋಜನ? ಸೂಕ್ತ ಎನಿಸುವ ಕಾರ್ಡ್​ಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?

2023ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಉಳಿತಾಯ ಯೋಜನೆಗಳಿಗೆ ಇರುವ ಬಡ್ಡಿದರ

  • ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (ಎಸ್​ಸಿಎಸ್​ಎಸ್): ಶೇ. 8.2
  • ಸುಕನ್ಯಾ ಸಮೃದ್ಧಿ ಯೋಜನೆ: ಶೇ. 8
  • ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್: ಶೇ. 7.7
  • ಕಿಸಾನ್ ವಿಕಾಸ್ ಪತ್ರ: ಶೇ. 7.5
  • ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ: ಶೇ. 7.4
  • ಪಿಪಿಎಫ್: ಶೇ. 7.1

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ