ಹಬ್ಬದ ಸೀಸನ್ ಬಂತು, 1 ಲಕ್ಷ ಮಹಿಳೆಯರು, ವಿಶೇಷ ಚೇತನರು ಮತ್ತಿತರಿಗೆ ಉದ್ಯೋಗ ಒದಗಿಸಲು ಫ್ಲಿಪ್​ಕಾರ್ಟ್ ಗುರಿ

Flipkart: ಹಬ್ಬದ ಸೀಸನ್​ನಲ್ಲಿ ಭರ್ಜರಿ ಮಾರಾಟದತ್ತ ಗಮನ ಹರಿಸಿರುವ ಇಕಾಮರ್ಸ್ ಪ್ಲಾಟ್​ಫಾರ್ಮ್ ಫ್ಲಿಪ್​ಕಾರ್ಟ್, ದಿ ಬಿಗ್ ಬಿಲಿಯನ್ ಡೇಸ್ ಯೋಜನೆ ಹಮ್ಮಿಕೊಂಡಿದೆ. ಇದರ ಭಾಗವಾಗಿ ಮಹಿಳೆಯರು, ವಿಶೇಷ ಚೇತನರು ಮತ್ತು ದಿನಸಿ ಅಂಗಡಿಗಳ ಡೆಲಿವರಿ ಪಾರ್ಟ್ನರ್ ಮೊದಲಾದವರು ಸೇರಿದಂತೆ 1 ಲಕ್ಷ ಮಂದಿಗೆ ಈ ಸೀಸನ್​ಗೆ ಉದ್ಯೋಗಾವಕಾಶ ಒದಗಿಸುತ್ತಿದೆ. ತನ್ನ ಶೇ. 40ರಷ್ಟು ಡೆಲಿವರಿಯನ್ನು ಸ್ಥಳೀಯ ದಿನಸಿ ಅಂಗಡಿಗಳ ಮೂಲಕವೇ ಮಾಡುವುದು ಫ್ಲಿಪ್​ಕಾರ್ಟ್ ಗುರಿ.

ಹಬ್ಬದ ಸೀಸನ್ ಬಂತು, 1 ಲಕ್ಷ ಮಹಿಳೆಯರು, ವಿಶೇಷ ಚೇತನರು ಮತ್ತಿತರಿಗೆ ಉದ್ಯೋಗ ಒದಗಿಸಲು ಫ್ಲಿಪ್​ಕಾರ್ಟ್ ಗುರಿ
ಫ್ಲಿಪ್​ಕಾರ್ಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 05, 2023 | 11:19 AM

ಬೆಂಗಳೂರು, ಸೆಪ್ಟೆಂಬರ್ 5: ಹಬ್ಬದ ಸೀಸನ್ ಬಂದಿದ್ದು, ಮಾರುಕಟ್ಟೆಗಳು ಗಿಜಿಗಿಜಿಗುಡುತ್ತವೆ. ಇದರಲ್ಲಿ ಇಮಾರುಕಟ್ಟೆಯೂ (e-Commerce) ಹೊರತಲ್ಲ. ಹಬ್ಬದ ಸಂದರ್ಭದಲ್ಲಿ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಹೆಚ್ಚು ವಹಿವಾಟು ನಡೆಯುತ್ತವೆ. ಭಾರತದಲ್ಲಿ ದೇಶೀಯವಾಗಿ ಬೆಳೆದ ಇಕಾಮರ್ಸ್ ಪ್ಲಾಟ್​ಫಾರ್ಮ್ ಫ್ಲಿಪ್​ಕಾರ್ಟ್ ಈ ಬಾರಿಯ ಹಬ್ಬದ ಸೀಸನ್​ಗೆ (Festival season) ಭರ್ಜರಿ ಸಿದ್ಧತೆ ನಡೆಸಿದೆ. ತನ್ನ ಫುಲ್​ಫಿಲ್ಮೆಂಟ್ ಸೆಂಟರ್, ಸಾರ್ಟೇಶನ್ ಸೆಂಟರ್ ಮತ್ತು ಡೆಲಿವರಿ ಹಬ್ ಸೇರಿದಂತೆ ತನ್ನ ಸಪ್ಲೈ ಚೈನ್ ವ್ಯವಸ್ಥೆಯಲ್ಲಿ 1 ಲಕ್ಷ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಗುರಿ ಇಟ್ಟುಕೊಂಡಿದೆ. ಈ ಉದ್ಯೋಗಗಳು ಖಾಯಂ ಆಗಿ ಇರುವುದಿಲ್ಲ. ಹಬ್ಬದ ಸೀಸನ್​ನ ಅವಶ್ಯಕತೆಗಳನ್ನು ಪೂರೈಸಲು ಈ ಉದ್ಯೋಗಾವಕಾಶ ಕೊಡುತ್ತಿದೆ ಫ್ಲಿಪ್​ಕಾರ್ಟ್.

ಈ ತಾತ್ಕಾಲಿಕ ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ಸ್ಥಳೀಯ ದಿನಸಿ ಅಂಗಡಿಗಳ ಡೆಲಿವರಿ ಪಾರ್ಟ್ನರ್​ಗಳು, ಮಹಿಳೆಯರು ಮತ್ತು ವಿಶೇಷ ಚೇತನ ವ್ಯಕ್ತಿಗಳು (PWD- Persons With Disablity) ಮೊದಲಾದವರಿಗೆ ಫ್ಲಿಪ್​ಕಾರ್ಟ್ ಉದ್ಯೋಗಾವಕಾಶ ಕೊಡಲು ಮುಂದಾಗಿದೆ.

ಇದನ್ನೂ ಓದಿ: ನಜಾರ ಟೆಕ್ನಾಲಜೀಸ್ ಮೇಲೆ ನಿಖಿಲ್ ಕಾಮತ್ 100 ಕೋಟಿ ರೂ ಹೂಡಿಕೆ; ಗೇಮಿಂಗ್ ಕಂಪನಿ ಬಗ್ಗೆ ಕಾಮತ್​ಗೆ ಯಾಕೆ ಒಲವು?

ಭರ್ಜರಿ ಡಿಸ್ಕೌಂಟ್, ಅಗಾಧ ವ್ಯಾಪ್ತಿ

ಅಮೇಜಾನ್​ಗೆ ನೇರ ಪ್ರತಿಸ್ಪರ್ಧಿಯಾದ ಫ್ಲಿಪ್​ಕಾರ್ಟ್ ಈ ಬಾರಿಯ ಹಬ್ಬದ ಸೀಸನ್​ಗೆ ಭರ್ಜರಿ ಪ್ಲಾನ್ ಮಾಡಿದೆ. ಟಿಬಿಬಿಡಿ (The Big Billion Days) ಯೋಜನೆ ಹಾಕಿರುವ ಫ್ಲಿಪ್​ಕಾರ್ಟ್, ತನ್ನ ಪ್ಲಾಟ್​ಫಾರ್ಮ್​ನಲ್ಲಿ ದೊಡ್ಡ ಬ್ರ್ಯಾಂಡ್ ಉತ್ಪನ್ನಗಳ ಮೇಲೆ ರಿಯಾಯಿತಿಗಳನ್ನು ಒದಗಿಸಲಿದೆ. ಸ್ಥಳೀಯ ದಿನಸಿ ಅಂಗಡಿಗಳ ಮೂಲಕವೇ ಶೇ. 40ರಷ್ಟು ಉತ್ಪನ್ನಗಳನ್ನು ಗ್ರಾಹಕರಿಗೆ ಸರಬರಾಜು ಮಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಫ್ಲಿಪ್ ಕಾರ್ಟ್ ಹಮ್ಮಿಕೊಂಡಿದೆ.

‘ಟಿಬಿಬಿಡಿಯ ಅಗತ್ಯತೆಗಳನ್ನು ಪೂರೈಸಬೇಕಾದರೆ ನಮ್ಮ ಸಾಮರ್ಥ್ಯ, ಸಂಗ್ರಹ, ಪ್ಯಾಕೇಜಿಂಗ್, ಮಾನವ ಸಂಪನ್ಮೂಲ, ತರಬೇತಿ, ಡೆಲಿವರಿ, ಇಡೀ ಸಪ್ಲೈ ಚೈನ್ ಇತ್ಯಾದಿ ಎಲ್ಲವನ್ನೂ ದೊಡ್ಡಮಟ್ಟದಲ್ಲಿ ಹೆಚ್ಚಿಸಬೇಕಾಗುತ್ತದೆ’ ಎಂದು ಫ್ಲಿಪ್​ಕಾರ್ಟ್ ಗ್ರೂಪ್​ನ ಹಿರಿಯ ಉಪಾಧ್ಯಕ್ಷ ಹೇಮಂತ್ ಬದ್ರಿ ಹೇಳುತ್ತಾರೆ.

ಆದರೆ, ಮಹಿಳೆಯರು, ವಿಶೇಷ ಚೇತನರನ್ನು ಈ ಸರಬರಾಜು ವ್ಯವಸ್ಥೆಯಲ್ಲಿ ಹೇಗೆ ಬಳಸಿಕೊಳ್ಳಕೊಳ್ಳಲಾಗುತ್ತದೆ ಎಂಬುದು ಗೊತ್ತಾಗಿಲ್ಲ.

ಇದನ್ನೂ ಓದಿ: ಸಾಲಕ್ಕೆ ಬದಲಾಗಿ ಷೇರುಗಳನ್ನು ಕೊಟ್ಟು ಸ್ಪೈಸ್​ಜೆಟ್; ವಿಮಾನ ಗುತ್ತಿಗೆ ನೀಡಿದವರಿಗೆ ಸಿಕ್ಕಲಿದೆ 4.8 ಕೋಟಿ ಷೇರು

ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಫ್ಲಿಪ್​ಕಾರ್ಟ್ ಈ ವರ್ಷ ಉತ್ತರಪ್ರದೇಶ, ಗುಜರಾತ್, ಬಿಹಾರ, ಪಂಜಾಬ್, ರಾಜಸ್ಥಾನ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ 19 ಲಕ್ಷ ಚದರ ಅಡಿ ಜಾಗವನ್ನು ಪಡೆದು ಕಾರ್ಯಾಚರಿಸುತ್ತಿದೆ.

ಬೆಂಗಳೂರಿನಲ್ಲಿ ದೇಶೀಯ ಸ್ಟಾರ್ಟಪ್ ಆಗಿ ರೂಪುಗೊಂಡ ಫ್ಲಿಪ್​ಕಾರ್ಟ್ ಇದೀಗ ಅಮೆರಿಕದ ರೀಟೇಲ್ ದಿಗ್ಗಜ ವಾಲ್ಮಾರ್ಟ್​ನ ಮಾಲಕತ್ವದಲ್ಲಿದೆ. ಫೋನ್​ಪೆ ಕೂಡ ಫ್ಲಿಪ್​ಕಾರ್ಟ್​ನ ಅಂಗಸಂಸ್ಥೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್