
ಪರ್ಸನಲ್ ಲೋನ್ ಎಂಬುದು ಕಷ್ಟ ಕಾಲದಲ್ಲಿ ಯಾವುದೇ ಶ್ಯೂರಿಟಿ, ಜಾಮೀನು ಇಲ್ಲದೆ ದೊರೆಯುವ ಸಾಲ. ಇದನ್ನು ಅನ್ಸೆಕ್ಯೂರ್ಡ್ ಲೋನ್ ಎನ್ನಲಾಗುತ್ತದೆ. ಅಡಮಾನ ಮಾಡುವುದಕ್ಕೆ ಏನೂ ಇಲ್ಲ ಎಂದಾಗ ಪರ್ಸನಲ್ ತೆಗೆದುಕೊಳ್ಳಲಾಗುತ್ತದೆ. ಅಲ್ಪಾವಧಿಗೆ ಸಾಲ ಬೇಕೆಂದಾಗ (12ರಿಂದ 36 ತಿಂಗಳು ಹಾಗೂ ಇನ್ನೂ ಕೆಲ ಸಲ 60ರಿಂದ 84 ತಿಂಗಳ ತನಕ ದೊರೆಯುತ್ತದೆ), ಅಡಮಾನ ಮಾಡುವುದಕ್ಕೆ ಏನೂ ನೀಡುವುದಿಲ್ಲ ಎಂದಾಗ, ತಕ್ಷಣಕ್ಕೆ ಸಾಲ ಬೇಕು ಎಂಬ ಹಣದ ತುರ್ತು ಅಗತ್ಯ ಇದ್ದಾಗ ಪರ್ಸನಲ್ ಲೋನ್ ತೆಗೆದುಕೊಳ್ಳುವುದಕ್ಕೆ ಮುಂದಾಗುತ್ತಾರೆ. ಉಳಿದ ಸಾಲಕ್ಕೆ ಹೋಲಿಸಿದರೆ ಪರ್ಸನಲ್ ಲೋನ್ ಮೇಲಿನ ಬಡ್ಡಿ ತುಸು ಜಾಸ್ತಿ. ಆದರೆ ಅನಿವಾರ್ಯ ಅನ್ನೋ ಸಂದರ್ಭದಲ್ಲಿ ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು.
ಆದರೆ, ಪರ್ಸನಲ್ ತೆಗೆದುಕೊಳ್ಳುವ ಮುಂಚೆ ಬಡ್ಡಿ ದರ, ಪ್ರೊಸೆಸಿಂಗ್ ಫೀ, ಅವಧಿಗೆ ಮುಂಚೆ ಹಣ ಹಿಂತಿರುಗಿಸಿದರೆ ಪ್ರೀಕ್ಲೋಷರ್ ಶುಲ್ಕ ಹಾಗೂ ಭಾಗಶಃ ಹಣ ಪಾವತಿಸಿದರೆ ಅದಕ್ಕೆ ಇರುವ ನಿಯಮಗಳೇನು ಇತ್ಯಾದಿಗಳನ್ನು ವಿಚಾರಿಸಿಕೊಂಡ ನಂತರವೇ ಮುಂದುವರಿಯುವುದು ಉತ್ತಮ. ಇನ್ನು ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದಲ್ಲಿ ಮತ್ತು ಯಾವ ಬ್ಯಾಂಕ್ ಖಾತೆಗೆ ವೇತನ ಹೋಗುತ್ತದೋ ಅಥವಾ ನೀವು ವ್ಯವಹಾರ ಮಾಡುತ್ತೀರೋ ಅಲ್ಲೇ ಪ್ರಯತ್ನ ಪಟ್ಟರೆ ಪರ್ಸನಲ್ ಲೋನ್ ಬಡ್ಡಿ ಕಡಿಮೆ ಆಗಬಹುದು. ಆದರೆ ಚಿನ್ನ ಅಥವಾ ಆಸ್ತಿ ಅಡಮಾನ ಮಾಡಿ ಸಾಲ ಪಡೆಯುವುದು ಉತ್ತಮ ಆಯ್ಕೆ ಆಗುತ್ತದೆ. ಇರಲಿ, ಸದ್ಯಕ್ಕೆ ಪ್ರಮುಖ ಬ್ಯಾಂಕ್ಗಳಲ್ಲಿನ ಪರ್ಸನಲ್ ಲೋನ್ ಬಡ್ಡಿ ದರ ಎಷ್ಟಿದೆ ಎಂಬುದನ್ನು ತಿಳಿಯಿರಿ.
ಪಂಜಾಬ್ ನ್ಯಾಷನಲ್ ಬ್ಯಾಂಕ್: ಶೇ 8.45- ಶೇ 14.50
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: ಶೇ 8.85- ಶೇ 10.20
ಇಂಡಿಯನ್ ಬ್ಯಾಂಕ್: ಶೇ 9.05- ಶೇ 13.65
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಶೇ 9.30- ಶೇ 13.40
ಬ್ಯಾಂಕ್ ಆಫ್ ಮಹಾರಾಷ್ಟ್ರ: ಶೇ 9.55- ಶೇ 12.90
ಐಡಿಬಿಐ ಬ್ಯಾಂಕ್: ಶೇ 9.50- ಶೇ 14
ಪಂಜಾಬ್ ಅಂಡ್ ಸಿಂದ್ ಬ್ಯಾಂಕ್: ಶೇ 9.50- ಶೇ 11.50
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಶೇ 9.60- ಶೇ 13.85
ನೈನಿತಾಲ್ ಬ್ಯಾಂಕ್: ಶೇ 10- ಶೇ 10.50
ಬ್ಯಾಂಕ್ ಆಫ್ ಬರೋಡ: ಶೇ 10- ಶೇ 15.60
ಯುಕೋ ಬ್ಯಾಂಕ್: ಶೇ 10.30- ಶೇ 10.55
ಇಂಡಿಯನ್ ಓವರ್ಸೀಸ್ ಬ್ಯಾಂಕ್: ಶೇ 10.30- ಶೇ 12.05
ಬ್ಯಾಂಕ್ ಆಫ್ ಇಂಡಿಯಾ: ಶೇ 10.35- ಶೇ 12.35
ಕೊಟಕ್ ಮಹೀಂದ್ರಾ ಬ್ಯಾಂಕ್: ಶೇ 10.45- ಶೇ 24
ಆಕ್ಸಿಸ್ ಬ್ಯಾಂಕ್: ಶೇ 10.49- ಶೇ 11.25
(ಮಾಹಿತಿ ಮೂಲ: ಮೈಮನಿಮಂತ್ರ.ಕಾಮ್ ಮೇ 20, 2021ಕ್ಕೆ ಅನ್ವಯ ಆಗುವಂತೆ)
ಇದನ್ನೂ ಓದಿ: 2021-22ರಲ್ಲಿ ಭಾರತಕ್ಕೆ ಬರುವಂಥ 10 ಲಕ್ಷ ರೂಪಾಯಿಯೊಳಗಿನ ಕಾಂಪ್ಯಾಕ್ಟ್ ಕಾರುಗಳಿವು
(Here is the India’s major banks personal loan rate of interest as on May 20, 2021)