2021-22ರಲ್ಲಿ ಭಾರತಕ್ಕೆ ಬರುವಂಥ 10 ಲಕ್ಷ ರೂಪಾಯಿಯೊಳಗಿನ ಕಾಂಪ್ಯಾಕ್ಟ್ ಕಾರುಗಳಿವು

Cars Under 10 Lakhs: ಭಾರತದಲ್ಲಿ 2021- 2022ರಲ್ಲಿ ಬರಲಿರುವ ರೂ. 10 ಲಕ್ಷದೊಳಗಿನ ಕಾಂಪ್ಯಾಕ್ಟ್ ಕಾರುಗಳಿವು. ಇವುಗಳ ಫೀಚರ್ ಆಕರ್ಷಕವಾಗಿವೆ.

2021-22ರಲ್ಲಿ ಭಾರತಕ್ಕೆ ಬರುವಂಥ 10 ಲಕ್ಷ ರೂಪಾಯಿಯೊಳಗಿನ ಕಾಂಪ್ಯಾಕ್ಟ್ ಕಾರುಗಳಿವು
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 20, 2021 | 6:46 PM

ಪೆಟ್ರೋಲ್​- ಡೀಸೆಲ್ ಎರಡೂ ಪರಮ ದುಬಾರಿಯಾಗಿ ಯಾವುದೋ ಕಾಲವಾಯಿತು. ಈ ಹಿಂದೆಲ್ಲ ಅಲ್ಲೊಂದು- ಇಲ್ಲೊಂದು ಅನ್ನೋ ಹಾಗೆ ಎಲೆಕ್ಟ್ರಿಕ್ ಸ್ಕೂಟರ್ ಕಾಣಿಸಿಕೊಳ್ಳುತ್ತಿತ್ತು. ಈಗ ಹೇಗಾಗಿದೆ ಅಂದರೆ ಎಲೆಕ್ಟ್ರಿಕ್ ಸ್ಕೂಟರ್​ಗೆ ಭರ್ಜರಿ ಮಾರ್ಕೆಟ್ ಸೃಷ್ಟಿಯಾಗುತ್ತಿದೆ. ಹಾಗಂತ ಪೆಟ್ರೋಲ್- ಡೀಸೆಲ್ ಕಾರು ಮಾರಾಟ ಹಿಂದುಳಿದಿದೆಯಾ? ಖಂಡಿತಾ ಇಲ್ಲ. ಭಾರತದಲ್ಲಿ ಮುಂಬರುವ ದಿನಗಳಲ್ಲಿ 10 ಲಕ್ಷ ರೂಪಾಯಿಯೊಳಗೆ ಬರುವಂಥ ಕಾಂಪ್ಯಾಕ್ಟ್ ಕಾರುಗಳ ಪಟ್ಟಿಯೊಂದು ನಿಮ್ಮೆದುರಿಗೆ ಇದೆ.

CITROEN C3 ಕಾಂಪ್ಯಾಕ್ಟ್ ಎಸ್​ಯುವಿ CITROENನಿಂದ ನಾಲ್ಕು ಮೀಟರ್​ನ ಎಸ್​ಯುವಿ ಬಿಡುಗಡೆ ಮಾಡಲಾಗುವುದು. ಇದು 2021ರ ಕೊನೆಗೆ ಭಾರತೀಯ ಮಾರುಕಟ್ಟೆಗೆ ಬರಬಹುದು. ಅಂದ ಹಾಗೆ ಈ ಎಸ್​ಯುವಿ ಹೊಸ ಸಿಎಂಪಿ ಪ್ಲಾಟ್​ಫಾರ್ಮ್​ ಮೇಲೆ ಆಧಾರಪಟ್ಟಿರುತ್ತದೆ. ರೆನೋ ಕೈಗರ್, ನಿಸಾನ್ ಮ್ಯಾಗ್ನೈಟ್ ಮತ್ತಿತರ ವಾಹನಗಳಿಗೆ ವಿರುದ್ಧವಾಗಿ ಈ ಮಾಡೆಲ್ ನಿಲ್ಲಲಿದೆ. ಇದು ಬಹುಶಃ ಭಾರತದ ಮೊದಲ ಫ್ಲೆಕ್ಸಿಫ್ಯುಯೆಲ್ ಮಾಡೆಲ್ ಆಗಲಿದೆ. 1.2 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಜತೆಗೆ ಎಥನಾಲ್ ಕೂಡ ಇದೆ. ಇದು 118 ಬಿಎಚ್​ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮಾಮೂಲಿ ಮಾಡೆಲ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಜತೆಗೆ ಬರುತ್ತದೆ.ಅದು 5 ಸ್ಪೀಡ್ ಮ್ಯಾನ್ಯುಯೆಲ್ ಮತ್ತು DCT (ಡ್ಯುಯಲ್ ಕ್ಲಚ್ ಟ್ರಾನ್ಸ್​ಮಿಷನ್) ಆಟೋಮೆಟಿಕ್ ಗೇರ್​ ಬಾಕ್ಸ್ ಜತೆ ಬರುತ್ತದೆ.

Nexr- Gen ಮಾರುತಿ ವಿಟಾರಾ ಬ್ರೆಜಾ ಮಾರುತಿ ಸುಜುಕಿಯಿಂದ 2021ರ ಕೊನೆಗೆ ಮುಂದಿನ ತಲೆಮಾರಿನ ಬ್ರೆಜಾ ಬಿಡುಗಡೆ ಮಾಡಲಾಗುತ್ತದೆ. ಈ ಹೊಸ ಮಾಡಲ್ HEARTECT ಪ್ಲಾಟ್​ಫಾರ್ಮ್ ಅತ್ಯಾಧುನಿಕ ವರ್ಷನ್ ಮೇಲೆ ಆಧಾರವಾಗಿದೆ. ಮೇಲ್ದರ್ಜೆಗೇರಿದ ಇನ್ಫೋಟೇನ್​ಮೆಂಟ್ ಸಿಸ್ಟಮ್, ಡಿಜಿಟಲ್ ಇನ್​ಸ್ಟ್ರುಮೆಂಟ್ ಕನ್​ಸೋಲ್, ಆಟೋಮೆಟಿಕ್ ಏಸಿ, ಕ್ರೂಸ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಸನ್​ರೂಫ್​ನಂಥ ಫೀಚರ್​ನೊಂದಿಗೆ ಬರುತ್ತದೆ. ಈ ಎಸ್​ಯುವಿ 1.5 ಲೀಟರ್ ಪ್ರಬಲ ಮಧ್ಯಮ- ಹೈಬ್ರಿಡ್ ಸಿಸ್ಟಮ್ ಜತೆಗೆ ಬರುತ್ತದೆ. ಟ್ರಾನ್ಸ್​ಮಿಷನ್ ಆಯ್ಕೆಯು 6- ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್​ಮಿಷನ್ ಮತ್ತು 6- ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್​ಮಿಷನ್​ನೊಂದಿಗೆ ಬರುತ್ತದೆ.

Nexr- Gen ಮಾರುತಿ ಸೆಲೆರಿಯೋ ಎರಡನೇ ತಲೆಮಾರಿನ ಮಾರುತಿ ಸುಜುಕಿ ಸೆಲೆರಿಯೋ 2021ರ ವರ್ಷದ ಮಧ್ಯಭಾಗದಲ್ಲಿ ಬಿಡುಗಡೆ ಮಾಡುವ ಯೋಜನೆ ಇತ್ತು. ಅದೀಗ ಮೂರನೇ ತ್ರೈಮಾಸಿಕಕ್ಕೆ ಮುಂದಕ್ಕೆ ಹೋಗಿದೆ. ಇದು ಕೂಡ HEARTECT ಪ್ಲಾಟ್​ಫಾರ್ಮ್​ನೊಂದಿಗೆ ಬರುತ್ತದೆ. ಎರಡು ಬಗೆಯ ಎಂಜಿನ್​ ಆಯ್ಕೆಯೊಂದಿಗೆ ಬರುವ ಸಾಧ್ಯತೆ ಇದೆ. 1.2 ಲೀಟರ್- 4 ಸಿಲಿಂಡರ್ ಪೆಟ್ರೋಲ್ ಮತ್ತು 1.0 ಲೀಟರ್- 3 ಸಿಲಿಂಡರ್ ಪೆಟ್ರೋಲ್ ಹೀಗೆ ಎರಡಿದೆ. ಟ್ರಾನ್ಸ್​ಮಿಷನ್ ಆಯ್ಕೆಯಲ್ಲಿ 5 ಸ್ಪೀಡ್ ಮ್ಯಾನ್ಯುಯೆಲ್ ಮತ್ತು ಎಎಂಟಿ ಆಯ್ಕೆಗಳಿವೆ.

Nexr- Gen ಆಲ್ಟೋ ಈ ವರ್ಷಕ್ಕೆ ಮಾರುತಿಯಿಂದ ಮುಂದಿನ ತಲೆಮಾರಿನ ಆಲ್ಟೋ ಬಿಡುಗಡೆ ಆಗಲಿದೆ. ಜಪಾನ್ ಮಾಧ್ಯಮಗಳ ಪ್ರಕಾರ, ಹೊಸ ಸುಜುಕಿ ಆಲ್ಟೋ ಹಗುರ ತೂಕದ HEARTECT ಪ್ಲಾಟ್​ಫಾರ್ಮ್ ಬದಲಾವಣೆಯ ವರ್ಷನ್ ಆಗಿರುತ್ತದೆ. ಈಗಿರುವ ಮಾಡೆಲ್​ಗಿಂತ ಹಗುರವಾಗಿ ಇರಲಿದೆ. ಪವರ್ ಟು ವೇಯ್ಟ್ ರೇಷಿಯೋ ಉತ್ತಮವಾಗಿ ಇರಲದೆ. ಭಾರತದಲ್ಲಿ ವೈಶಿಷ್ಟ್ಯಕ್ಕೆ ಬಂದರೆ ಹೊಸ ಸುಜುಕಿ ಆಲ್ಟೋ 800ನಲ್ಲಿ ಈಗಿರುವ 796 ಸಿಸಿ ಪೆಟ್ರೋಲ್ ಎಂಜಿನ್​ನನ್ನೇ ಬಳಸಲಾಗುತ್ತದೆ. ಅದು 48 ಬಿಎಚ್​ಪಿ ಮತ್ತು 69ಎನ್​ಎಂ ಟಾರ್ಕ್ ಸೃಷ್ಟಿಸುತ್ತದೆ. ಈ ಎಂಜಿನ್​ನಲ್ಲಿ ಸುಜುಕಿಯ ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿ ಇರಲಿದೆ. ಮ್ಯಾನ್ಯುಯೆಲ್ ಮತ್ತು ಆಟೋಮೆಟಿಕ್ ಎರಡೂ ಟ್ರಾನ್ಸ್​ಮಿಷನ್ ಇರುತ್ತದೆ.

ಹುಂಡೈ AX1 ಕೋಡ್​ ಹೆಸರು AX1 ಜತೆಗೆ ಸೇರಿ ಹುಂಡೈನಿಂದ ಹೊಸ ಮೈಕ್ರೋ ಎಸ್​ಯುವಿ ಬಿಡುಗಡೆ ಆಗಲಿದೆ. 2022ರ ಮೊದಲಾರ್ಧದಲ್ಲಿ ಭಾರತದ ಮಾರುಕಟ್ಟೆಗೆ ಬರಬಹುದು. ಟಾಟಾ ಎಚ್​ಬಿಎಕ್ಸ್, ಮಾರುತಿ ಸುಜುಕಿ ಇಗ್ನೀಸ್, ಮಹೀಂದ್ರಾ ಕೆಯುವಿ100 ಎನ್​ಎಕ್ಸ್​ಟಿ ಇಂತವುಗಳಿಗೆ ಸಡ್ಡು ಹೊಡೆಯಲು ಬರುತ್ತಿದೆ. ಗ್ರಾಂಡ್​ i10 ನಿಯೋಸ್​ನಲ್ಲಿ ಕೆ1 ಪ್ಲಾಟ್​ಫಾರ್ಮ್ ಅನ್ನು AX1ನಲ್ಲೂ ಬಳಸುವ ಸಾಧ್ಯತೆ ಇದೆ. 68 bhp ಮತ್ತು 96 Nm ಟಾರ್ಕ್​ನೊಂದಿಗೆ ಬರುತ್ತದೆ. ಟ್ರಾನ್ಸ್​ಮಿಷನ್ ಆಯ್ಕೆಯಲ್ಲಿ 5- ಸ್ಪೀಡ್ ಮ್ಯಾನ್ಯುಯೆಲ್ ಹಾಗೂ ಎಎಂಟಿ ಬರುತ್ತದೆ. ಇದರ ಜತೆಗೆ ಕಂಪೆನಿಯಿಂದ 82 ಬಿಎಚ್​ಪಿ, 1.2 ಲೀಟರ್ ಪೆಟ್ರೋಲ್ ಎಂಜಿನ್ ಕೂಡ ಸೇರ್ಪಡೆ ಆಗಲಿದೆ. ಸದ್ಯಕ್ಕೆ ಗ್ರಾಂಡ್ i10 ನಿಯೋಸ್​ನಲ್ಲಿ ಬಳಕೆ ಆಗುತ್ತಿರುವುದು ಇದೇ ಎಂಜಿನ್.

ಮಾರುತಿ ಜಿಮ್ನಿ ಮಾರುತಿಯಿಂದ 5 ಡೋರ್​ಗಳ ಆಫ್​ರೋಡ್ ವರ್ಷನ್ ಜಿಮ್ನಿ ಬಿಡುಗಡೆಗೂ ಕೆಲಸ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ 2022ರ ಆರಂಭದಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. 300ಎಂಎಂ ದೊಡ್ಡದಾದ ವ್ಹೀಲ್​ಬೇಸ್​ ಇರುವ ವಾಹ ಇದೆ. ಉದ್ದವನ್ನು 300ಎಂಎಂ ಹೆಚ್ಚಿಸಲಾಗಿದೆ. ಈ ಹೊಸ ಮಾಡೆಲ್ ಬೆಲೆಯನ್ನು 10 ಲಕ್ಷ ರೂಪಾಯಿಯೊಳಗೆ ಇಡುವುದಕ್ಕೆ ಮಾರುತಿ ಗುರಿ ಹಾಕಿಕೊಂಡಿದೆ ಎನ್ನಲಾಗಿದೆ. ಹೊಸ ಟರ್ಬೋಚಾರ್ಜ್ ಪೆಟ್ರೋಲ್ ಎಂಜಿನ್ ಜತೆಗೆ ಮ್ಯಾನ್ಯುಯೆಲ್ ಮತ್ತು ಆಟೋಮೆಟಿಕ್ ಗೇರ್ ಬಾಕ್ಸ್ ಜತೆಗೆ ಬರುತ್ತದೆ ಎನ್ನಲಾಗುತ್ತಿದೆ. ಭಾರತದ ಮಾಡೆಲ್ ಹೊಸ 1.5 ಲೀಟರ್ ಎನ್​ಎ ಪೆಟ್ರೋಲ್ ಎಂಜಿನ್ ಜತೆಗೆ ಬರುತ್ತದೆ.

ಟಾಟಾ ಎಚ್​ಬಿಎಕ್ಸ್ ಟಾಟಾ ಮೋಟಾರ್ಸ್​ನಿಂದ 2021ರ ಅಕ್ಟೋಬರ್ ಹೊತ್ತಿಗೆ ಪ್ರೊಡಕ್ಷನ್ ವರ್ಷನ್​ನ ಎಚ್​ಬಿಎಕ್ಸ್​ ಮೈಕ್ರೋ ಎಸ್​ಯುವಿ ಬಿಡುಗಡೆ ಆಗಲಿದೆ. ಇದನ್ನು ಟಾಟಾ ಟಿಮೆರೊ ಎಂದು ಕರೆಯುವ ಸಾಧ್ಯತೆ ಇದೆ. ಮಾರುತಿಯ ಇಗ್ನೀಸ್ ಹಾಗೂ ಮಹೀಂದ್ರಾದ ಕೆಯುವಿ100ಎನ್​ಎಕ್ಸ್​ಟಿಗೆ ಪ್ರತಿಸ್ಪರ್ಧಿ ಆಗಲಿದೆ. ALFA ಮಾಡ್ಯುಲಾರ್ ಪ್ಲಾಟ್​ಫಾರ್ಮ್​ನಲ್ಲಿ ಇದು ಅಲ್ಟ್ರೋಜ್ ನಂತರ ಎರಡನೇ ಮಾಡೆಲ್. 1.2 ಲೀಟರ್, 3 ಸಿಲಿಂಡರ್​ ಪೆಟ್ರೋಲ್ ಎಂಜಿನ್. 86 ಬಿಎಚ್​ಪಿ ಪವರ್ ಮತ್ತು 113 ಎನ್​ಎಂ ಟಾರ್ಕ್ ಸೃಷ್ಟಿಸಬಲ್ಲದು. ಈ ಸಣ್ಣ ಯುವಿ 1.2 ಲೀಟರ್ ಟರ್ಬೋ ಚಾರ್ಜ್ಡ್​ ಪೆಟ್ರೋಲ್ ಎಂಜಿನ್ 100 ಬಿಎಚ್​ಪಿ ಔಟ್​ಪುಟ್​ನೊಂದಿಗೆ ಬರುತ್ತದೆ. ಇದರಲ್ಲಿ 5 ಸ್ಪೀಡ್ ಮ್ಯಾನ್ಯುಯೆಲ್ ಮತ್ತು 5- ಸ್ಪೀಡ್ ಆಟೋಮೆಟೆಡ್ ಮ್ಯಾನ್ಯುಯೆಲ್ ಟ್ರಾನ್ಸ್​ಮಿಷನ್ ಇದೆ.

ಮಹೀಂದ್ರಾ ಟಿಯುವಿ300 ಫೇಸ್​ಲಿಫ್ಟ್ (ಬೊಲೆರೋ ನಿಯೋ) ಮಹೀಂದ್ರಾದಿಂದ ಟಿಯುವಿ300 ಫೇಸ್​ಲಿಫ್ಟ್​ ಅನ್ನು ಬೇರೆ ಹೆಸರಿನಿಂದ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಅದನ್ನು ಮಹೀಂದ್ರಾ ಬೊಲೆರೊ ನಿಯೋ ಎಂದು ಕರೆಯುವ ಸಾಧ್ಯತೆ ಇದೆ. ಹಳೆ ಟಿಯುವಿ300 ರೀತಿಯಲ್ಲೇ ಮಹೀಂದ್ರಾ ಬೊಲೆರೋ ನಿಯೋ ಕೂಡ ಇರಲಿದೆ. 1.5 ಲೀಟರ್ ಡೀಸೆಲ್ ಎಂಜಿನ್ ಇರಲಿದ್ದು, ಬಿಎಸ್​6 ಎಮಿಷನ್​ ಕೂಡ ಅಳವಡಿಕೆ ಆಗಿರುತ್ತದೆ. ಅಂದಹಾಗೆ ಇದು ಬಿಎಸ್​4 ಇದ್ದಾಗ 100 ಬಿಎಚ್​ಪಿ ಮತ್ತು 240ಎನ್​ಎಂ ಟಾರ್ಕ್ ಸೃಷ್ಟಿಸುತ್ತಿತ್ತು. ಟ್ರಾನ್ಸ್​ಮಿಷನ್ 5- ಸ್ಪೀಡ್ ಮ್ಯಾನ್ಯುಯೆಲ್ ಮತ್ತು ಎಎಂಟಿ ಇರಲಿದೆ.

ಇದನ್ನೂ ಓದಿ: Top 5 automatic cars: ಭಾರತದಲ್ಲಿ ಖರೀದಿಸಬಹುದಾದ 10 ಲಕ್ಷ ರೂಪಾಯಿ ಒಳಗಿನ ಟಾಪ್ 5 ಆಟೋಮೆಟಿಕ್ ಕಾರುಗಳಿವು

( Here are some of the cars within Rs 10 lakhs expected to be launch in India during 2021 and 2022)

ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್