ಕಿಲೋಮೀಟರ್ ಗಟ್ಟಲೆ ನಡೆದು ಹೋಗುವ ಕಾಲವಿತ್ತು. ಆದರೆ ಈಗ ಹಾಗಲ್ಲ. ಪಕ್ಕದ ಅಂಗಡಿಗೆ ಹೋಗಬೇಕು ಅಂದರೂ ವಾಹನಗಳ ಮೇಲೆಯೇ ಹೋಗುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಜನರು ವಾಹನಗಳಿಗೆ ಹೆಚ್ಚು ಅವಲಂಬಿತವಾಗಿರುವುದರಿಂದ ಇಂಧನ (Fuel) ದರ ಎಷ್ಟೇ ಹೆಚ್ಚಾದರೂ ಖರೀದಿಸುವ ಅನಿವಾರ್ಯ ಇದೆ. ದೇಶದಲ್ಲಿ ಕಳೆದ 26 ದಿನಗಳಿಂದ ಪೆಟ್ರೋಲ್ (Petrol), ಡೀಸೆಲ್ (Diesel) ದರ ಸ್ಥಿರವಾಗಿದೆ. ಕೆಲ ತಿಂಗಳ ಮೊದಲು ಇಳಿಕೆಯಾಗಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಮಾರ್ಚ್ 22ರಿಂದ ಏರಿಸಲಾಗುತ್ತಿತ್ತು. ಇದರಿಂದ ಒಂದು ತಿಂಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ಸರಾಸರಿ ₹ 10 ರಷ್ಟು ಹೆಚ್ಚಾಗಿತ್ತು. ಆದರೆ ಕಳೆದ 26 ದಿನಗಳಿಂದ ದರ ಸ್ಥಿರವಾಗಿದೆ.
ಇಂದು (ಸೋಮವಾರ, ಮೇ 02, 2022) ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ. ಬೆಂಗಳೂರು, ದೆಹಲಿ ಸೇರಿದಂತೆ ವಿವಿಧ ನಗರಗಳ ಇಂಧನ ದರ ಎಷ್ಟಿದೆ? ಈ ಕುರಿತ ಮಾಹಿತಿ ಇಲ್ಲಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್ಗೆ ₹ 105.41 ಇದ್ದು, ಲೀಟರ್ ಡೀಸೆಲ್ ಬೆಲೆ ₹ 96.67 ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ₹ 120.51, ಡೀಸೆಲ್ ₹ 104.71ಕ್ಕೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 110.85 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 100.94 ರೂಪಾಯಿ ಇದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 115.12 ರೂ. ಡೀಸೆಲ್ ಬೆಲೆ ಲೀಟರ್ಗೆ 99.83 ರೂ. ಆಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ದರ ಹೀಗಿದೆ:
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 111.09 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.79 ರೂಪಾಯಿ ದಾಖಲಾಗಿದೆ. ಕೇರಳದ ತಿರುವನಂತಪುರಂನಲ್ಲಿ ಲೀಟರ್ ಪೆಟ್ರೋಲ್ಗೆ 116.92 ರೂಪಾಯಿ ಇದ್ದು, ಲೀಟರ್ ಡೀಸೆಲ್ ಬೆಲೆ 103.69 ರೂಪಾಯಿ ನಿಗದಿಯಾಗಿದೆ. ಹೈದರಾಬಾದ್ನಲ್ಲಿ ಲೀಟರ್ ಪೆಟ್ರೋಲ್ ದರ 119.47 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 105.47 ರೂಪಾಯಿ ನಿಗದಿಯಾಗಿದೆ.
ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ:
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.
ಇದನ್ನೂ ಓದಿ
ಅಕ್ಷಯ ತೃತೀಯಕ್ಕೆ ಮತ್ತೊಂದು ಧರ್ಮ ಯುದ್ಧ; ಮುಸ್ಲಿಮರ ಅಂಗಡಿಗಳಲ್ಲಿ ಬಂಗಾರ ಖರಿದಿಸ್ಬೇಡಿ ಎಂದ ಪ್ರಮೋದ್ ಮುತಾಲಿಕ್
Published On - 8:39 am, Mon, 2 May 22