AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ ತೃತೀಯಕ್ಕೆ ಮತ್ತೊಂದು ಧರ್ಮ ಯುದ್ಧ; ಮುಸ್ಲಿಮರ ಅಂಗಡಿಗಳಲ್ಲಿ ಬಂಗಾರ ಖರಿದಿಸ್ಬೇಡಿ ಎಂದ ಪ್ರಮೋದ್ ಮುತಾಲಿಕ್

ಅಕ್ಷಯ ತೃತೀಯಕ್ಕೂ ಧರ್ಮ ಸಂಘರ್ಷದ ಕಿಡಿ ಹೊತ್ತಿದೆ. ರಾಜ್ಯಾದ್ಯಂತ ಮುಸ್ಲಿಮರ ಅಂಗಡಿಗಳಲ್ಲಿ ಬಂಗಾರ ಖರಿದಿಸ್ಬೇಡಿ, ಹಿಂದೂಗಳ ಅಂಗಡಿಗಳಲ್ಲೇ ಚಿನ್ನ ಖರೀದಿಸಿ ಎಂದು ಶ್ರೀರಾಮಸೇನೆ ಕಹಳೆ ಮೊಳಗಿಸಿದೆ.

ಅಕ್ಷಯ ತೃತೀಯಕ್ಕೆ ಮತ್ತೊಂದು ಧರ್ಮ ಯುದ್ಧ; ಮುಸ್ಲಿಮರ ಅಂಗಡಿಗಳಲ್ಲಿ ಬಂಗಾರ ಖರಿದಿಸ್ಬೇಡಿ ಎಂದ ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಅಧ್ಯಕ್ಷ
TV9 Web
| Edited By: |

Updated on:May 02, 2022 | 8:27 AM

Share

ಮಂಗಳೂರು: ಮೇ 3ರಂದು ಅಕ್ಷಯ ತೃತೀಯಕ್ಕೆ ಮತ್ತೊಂದು ಧರ್ಮ ಯುದ್ಧ ಶುರುವಾಗಿದೆ. ಹಿಂದೂಗಳ ಪಾಲಿಗೆ ಅಕ್ಷಯ ತೃತೀಯ ತುಂಬಾನೆ ಮಂಗಳಕರವಾದ ದಿನ. ಎಂತಾ ಬಡವರಾದ್ರೂ ಸರಿ, ಈ ದಿನದಂದು ಒಂದೇ ಒಂದು ಗ್ರಾಮ್ ಚಿನ್ನವನ್ನಾದ್ರೂ ಖರೀದಿಸಬೇಕು ಅನ್ನೋ ನಂಬಿಕೆ. ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದ್ರೆ ಅದು ಅಕ್ಷಯವಾಗುತ್ತೆ, ಐಶ್ವರ್ಯ ವೃದ್ಧಿಯಾಗುತ್ತೆ ಅನ್ನೋ ವಿಶ್ವಾಸ. ಇದು ಎಮೋಷನಲ್ ಸೆಂಟಿಮೆಂಟ್ ಕೂಡ ಹೌದು. ಆದ್ರೀಗ ಅಕ್ಷಯ ತೃತೀಯಕ್ಕೂ ಧರ್ಮ ಸಂಘರ್ಷದ ಕಿಡಿ ಹೊತ್ತಿದೆ. ರಾಜ್ಯಾದ್ಯಂತ ಮುಸ್ಲಿಮರ ಅಂಗಡಿಗಳಲ್ಲಿ ಬಂಗಾರ ಖರಿದಿಸ್ಬೇಡಿ, ಹಿಂದೂಗಳ ಅಂಗಡಿಗಳಲ್ಲೇ ಚಿನ್ನ ಖರೀದಿಸಿ ಎಂದು ಶ್ರೀರಾಮಸೇನೆ ಕಹಳೆ ಮೊಳಗಿಸಿದೆ.

ಕೇರಳದಿಂದ ಕಳ್ಳ ಮಾಲು ತಂದು ಕರ್ನಾಟಕದಲ್ಲಿ ಚಿನ್ನ ಮಾರಾಟ ಮಾಡುತ್ತಿದ್ದಾರೆ. ಅಕ್ಷಯ ತೃತಿಯದಂದು ಹಿಂದುಗಳ ಅಂಗಡಿಯಲ್ಲೇ ಚಿನ್ನ ಖರೀದಿಸಿ. ಈ ಆಭಿಯಾನ ಈಗಾಗಾಲೇ ನಡೆಯುತ್ತಿದೆ. ಮಹಿಳಾ ಮಂಡಳಿಗಳಿಗೆ ಈ ಬಗ್ಗೆ ಮನವಿ ಮಾಡಿದ್ದೇವೆ. ಇದನ್ನು ಕ್ರಮೇಣ ಹಿಂದುಗಳು ಜಾಗೃತರಾಗಿ ಅಳವಡಿಸಿಕೊಳ್ಳುತ್ತಾರೆ ಎಂದು ಮಂಗಳೂರಿನಲ್ಲಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ಇನ್ನಷ್ಟು ರಾಜ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನು ಇದೇ ವೇಳೆ ಆಜಾನ್ ಬಗ್ಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಆಜಾನ್ ತೆರವು ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಕೊಟ್ಟ ಗಡುವು ಮುಗಿದಿದೆ. ಆದ್ರೆ ಯು.ಪಿ ಸಿಎಂ ಹಾಗೆ ಕಠಿಣ ಕ್ರಮ ಕೈಗೊಳ್ಳಲು ಇಲ್ಲಿ ಸಾಧ್ಯವಾಗಿಲ್ಲ. ಆದ್ರಿಂದ ಮೇ.09 ರಂದು ರಾಜ್ಯಾದ್ಯಂತ ಅಭಿಯಾನ ಶುರು ಮಾಡಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ದೇವಸ್ಥಾನಗಳು, ಹಿಂದು ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಬಳಸಿ ಭಜನೆ ನಡೆಸುತ್ತೇವೆ. ಆಜಾನ್ ನಷ್ಟೆ ಸೌಂಡ್ ಇಟ್ಟು ಮಂತ್ರಘೋಷ ಮೊಳಗುತ್ತೆ. ಅಂದಿನಿಂದ ಸತತವಾಗಿ ಅದೇ ರೀತಿ ಮಾಡುತ್ತೇವೆ. ಇದಕ್ಕೆ ಉಳಿದ ಹಿಂದು ಸಂಘಟನೆಗಳಾದ ಭಜರಂಗದಳ, ವಿ.ಎಚ್.ಪಿ ಎಲ್ಲಾ ಬೆಂಬಲ ಕೊಡಲಿದೆ ಎಂದು ಟಿವಿ9 ಗೆ ಮಂಗಳೂರಿನಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ್ರು.

ನಾಳೆ ರಾಜ್ಯದಲ್ಲಿ ಧಗಧಗಿಸುತ್ತಾ ಧರ್ಮ ಯುದ್ಧದ ಜ್ವಾಲೆ? ಮೇ 3ರಂದು ಅಕ್ಷಯ ತೃತೀಯ. ಅಂದೇ ಮುಸ್ಲಿಮರ ರಂಜಾನ್ ಹಬ್ಬ. ರಂಜಾನ್‌ಗಾಗಿ ಮುಸ್ಲಿಮರ ಒಂದು ತಿಂಗಳ ಉಪವಾಸ ಮಾಡ್ತಾರೆ. ಅದ್ರೀಗ ರಂಜಾನ್ ಹಬ್ಬದ ದಿನವೇ ಅಕ್ಷಯ ತೃತೀಯ ಬಂದಿರೋದ್ರಿಂದ ಮುಸ್ಲಿಂ ವರ್ತಕರು ಭರ್ಜರಿ ವ್ಯಾಪಾರದ ಲೆಕ್ಕಾಚಾರದಲ್ಲಿದ್ದಾರೆ. ತಿಂಗಳ ಉಪವಾಸದ ಹಸಿವನ್ನ ಅಕ್ಷಯ ತೃತೀಯದ ವ್ಯಾಪಾರದ ಮೂಲಕ ತುಂಬಿಸಿಕೊಳ್ಳೋ ಕಾತರದಲ್ಲಿದ್ದಾರೆ. ಆದ್ರೀಗ, ಶ್ರೀರಾಮಸೇನೆ ಬಂಗಾರ ಬ್ಯಾನ್ ಅಭಿಯಾನ ಶುರುಮಾಡಿದ್ದು, ಮುಸ್ಲಿ ವ್ಯಾಪಾರಿಗಳ ಕನಸಿಗೆ ಕೊಳ್ಳಿ ಬೀಳೋದು ಫಿಕ್ಸ್ ಆಗಿದೆ. ಅಕ್ಷಯ ತೃತೀಯದಂದು ಚಿನ್ನ ಖರೀದಿಸಲೇಬೇಕು ಅನ್ನೋದು ಹಿಂದೂಗಳ ವಾಡಿಕೆ. ಆದ್ರೆ ಅಂದೇ ಮುಸ್ಲಿಮರ ವ್ಯಾಪಾರಕ್ಕೆ ಕೊಡಲಿಪೆಟ್ಟು ಕೊಡೋದು ಶ್ರೀರಾಮಸೇನೆ ಮಾಸ್ಟರ್‌ ಪ್ಲ್ಯಾನ್. ಹೀಗಾಗಿ ಅಕ್ಷಯ ತೃತೀಯಕ್ಕೆ ಬಂಗಾರ ಬ್ಯಾನ್ ಸಮರ ಜ್ವಾಲಾಮುಖಿಯಾಗಿ ಸ್ಫೋಟಿಸೋ ಸಾಧ್ಯತೆ ಇದೆ.

ಅಕ್ಷಯ ತೃತೀಯ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:27 am, Mon, 2 May 22

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು