ಬಾಗಲಕೋಟೆಯಲ್ಲಿ ಆಸ್ತಿ ವಿಚಾರಕ್ಕೆ ಸಹೋದರಿ ಮೇಲೆ ಸಹೋದರರಿಂದ ಹಲ್ಲೆ; ಶಿವಮೊಗ್ಗದಲ್ಲಿ ವೃದ್ಧೆ ತಲೆ ಒಡೆದಿದ್ದ ಆರೋಪಿ ಆತ್ಮಹತ್ಯೆಗೆ ಶರಣು
ವಿತಾ ಹಿರೇಮಠ ಹೆಸರಿಗೆ ತಾಯಿ 4 ಎಕರೆ ಜಮೀನು ಬರೆದಿದ್ದರು. ಇದೇ ವಿಚಾರದಲ್ಲಿ ಸಹೋದರರು, ಸಹೋದರಿ ನಡುವೆ ವಿವಾದ ಉಂಟಾಗಿತ್ತು. ಹುನಗುಂದ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.
ಬಾಗಲಕೋಟೆ: ಆಸ್ತಿ ವಿಚಾರಕ್ಕೆ ಜಗಳವಾಗಿ ಸಹೋದರಿ ಮೇಲೆ ಸಹೋದರರು ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ (Bagalkot) ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಢದಲ್ಲಿ ನಡೆದಿದೆ. ಹಲ್ಲೆಗೊಳಗಾದ ಕವಿತಾ ಹಿರೇಮಠ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ (Hospital) ದಾಖಲಿಸಲಾಗದೆ. ಸಹೋದರರಾದ ಚಂದ್ರಶೇಖರ, ಕುಮಾರಸ್ವಾಮಿಯಿಂದ ಹಲ್ಲೆ ನಡೆದಿದೆ. 22 ಎಕರೆ ಆಸ್ತಿ ಪಾಲುಮಾಡಿಕೊಳ್ಳುವ ವಿಚಾರದಲ್ಲಿ ಗಲಾಟೆ ನಡೆದಿತ್ತು. ಕವಿತಾ ಹಿರೇಮಠ ಹೆಸರಿಗೆ ತಾಯಿ 4 ಎಕರೆ ಜಮೀನು ಬರೆದಿದ್ದರು. ಇದೇ ವಿಚಾರದಲ್ಲಿ ಸಹೋದರರು, ಸಹೋದರಿ ನಡುವೆ ವಿವಾದ ಉಂಟಾಗಿತ್ತು. ಹುನಗುಂದ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಸದ್ಯ ಹಲ್ಲೆ ಬಗ್ಗೆ ಅಮೀನಗಢ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕಳ್ಳತನದ ಆರೋಪಿ ಆತ್ಮಹತ್ಯೆಗೆ ಶರಣು: ಶಿವಮೊಗ್ಗ: ಸಾಲ ತೀರಿಸಲು ವೃದ್ಧೆ ತಲೆ ಒಡೆದಿದ್ದ ಆರೋಪಿ ರಾಜೇಂದ್ರ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಲಾಡ್ಜ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ರಾಜೇಂದ್ರ ಇಸ್ಪೀಟ್ ಹುಚ್ಚಿಗೆ ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದ. ಸಾಲಗಾರರ ಕಿರುಕುಳ, ಒಡವೆ ಬಿಡಿಸಿಕೊಡುವಂತೆ ಹೆಂಡತಿಗೆ ಒತ್ತಡ ಹಾಕುತ್ತಿದ್ದ. ಸ್ಥಿತಿವಂತನಾಗಿದ್ದ ರಾಜೇಂದ್ರ ವಿಧಿಯಿಲ್ಲದೆ ಕಳ್ಳತನ ಮಾಡಿದ್ದ. ಏಪ್ರಿಲ್ 20ರಂದು ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ. ಬಾಡಿಗೆ ಕೇಳುವ ನೆಪದಲ್ಲಿ ತೆರಳಿ ವೈದ್ಧೆಯ ಸರಗಳ್ಳತನ ಮಾಡಿದ್ದ. ಸ್ಪ್ಯಾನರ್ನಿಂದ ಹಲ್ಲೆ ನಡೆಸಿ 48 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದ. ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಬಂಧನಕ್ಕೆ ಮುಂದಾಗಿದ್ದರು. ಅಷ್ಟರಲ್ಲೆ ಆರೋಪಿ ರಾಜೇಂದ್ರ ಲಾಡ್ಜ್ನಲ್ಲಿ ನೇಣಿಗೆ ಶರಣಾಗಿದ್ದಾನೆ.
ಲವ್ ಕೇಸ್ ವಿಚಾರದಲ್ಲಿ ರೌಡಿಶೀಟರ್ ಬರ್ಬರ ಹತ್ಯೆ: ಬಳ್ಳಾರಿ: ಹಳೇ ದ್ವೇಷ ಹಾಗೂ ಲವ್ ಕೇಸ್ ವಿಚಾರದಲ್ಲಿ ರೌಡಿಶೀಟರ್ನ ಬರ್ಬರ ಹತ್ಯೆ ನಡೆದಿದೆ. ಈ ಘಟನೆ ಬಳ್ಳಾರಿಯ ಅಹಂಭಾವಿ ಪ್ರದೇಶದಲ್ಲಿ ಸಂಭವಿಸಿದ್ದು, ರೌಡಿಶೀಟರ್ ಮಹೇಂದ್ರ ಕೊಲೆಯಾಗಿದ್ದಾನೆ. ಗ್ಯಾಂಗ್ವೊಂದು ಮಹೇಂದ್ರನನ್ನು ಲಾಂಗು, ಮಚ್ಚುಗಳಿಂದ ಕೊಚ್ಚಿ ಕೊಲೆಗೈದಿದೆ. ರೌಡಿಶೀಟರ್ ಮಹೇಂದ್ರ ಬೇಲ್ ಮೇಲೆ ಜೈಲಿನಿಂದ ಹೊರಬಂದಿದ್ದ. ಮಹೇಂದ್ರನ ಬಾಮೈದನ ಲವ್ ಕೇಸ್ನಲ್ಲಿ ವರ್ಷದ ಹಿಂದೆ ಗಲಾಟೆ ನಡೆದಿತ್ತು. ಅದೇ ಗಲಾಟೆ ವಿಚಾರದಲ್ಲಿ ಈಗ ರೌಡಿಶೀಟರ್ ಮಹೇಂದ್ರನ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ನವೀನ್, ಕೇಶವ, ಶಂಕರ, ನಾರಾಯಣ, ವಂಶಿ, ಧನಂಜಯನಿಂದ ಕೃತ್ಯ ನಡೆದಿದೆ.
ಇನ್ನು ಹಂತಕರಿಗೆ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಬೆಂಬಲ ನೀಡಿರುವ ಆರೋಪ ಕೇಳಿಬಂದಿದೆ. ಶಾಸಕ ಸೋಮಶೇಖರರೆಡ್ಡಿ ವಿರುದ್ಧ ಮಹೇಂದ್ರನ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ ಅಡಾವತ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರೌಡಿಶೀಟರ್ ಮಹೇಂದ್ರನ ಹತ್ಯೆ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.
ಇದನ್ನೂ ಓದಿ
ಅತೀವ ದೈವ ಭಕ್ತನಾಗಿರುವ ಆರೋಪಿ ನಾಗೇಶ್ ಲೈಫ್ ಹೇಗಿತ್ತು ಗೊತ್ತಾ? ಆರೋಪಿ ಹಿಡಿಯಲು ಪೊಲೀಸರು ಮಾಡಿರುವ ಪ್ಲ್ಯಾನ್ ಏನು?
ಬಾಚಣಿಗೆಯಿಂದ ಹಲ್ಲು ಕೆರೆದುಕೊಂಡ ಅಕ್ಷಯ್ ಕುಮಾರ್; ಇದು ಗುಟ್ಕಾ ಎಫೆಕ್ಟ್ ಎಂದ ನೆಟ್ಟಿಗರು
Published On - 8:20 am, Mon, 2 May 22