ಅತೀವ ದೈವ ಭಕ್ತನಾಗಿರುವ ಆರೋಪಿ ನಾಗೇಶ್ ಲೈಫ್ ಹೇಗಿತ್ತು ಗೊತ್ತಾ? ಆರೋಪಿ ಹಿಡಿಯಲು ಪೊಲೀಸರು ಮಾಡಿರುವ ಪ್ಲ್ಯಾನ್ ಏನು?

ಆರೋಪಿ ನಾಗೇಶ್ಗೆ ಅತೀವವಾದ ದೈವ ಭಕ್ತಿ ಇತ್ತು. ಹಣೆ ಮೇಲೆ ಯಾವಾಗಲು ಕೆಂಪು ಬಣ್ಣದ ತಿಲಕ ಇಟ್ಕೊತಿದ್ದ. ಪ್ರತಿ ದಿನ ತಪ್ಪದೇ ಸೂರ್ಯ ನಮಸ್ಕಾರ ಮಾಡ್ತಿದ್ದ. ಸೂರ್ಯ ನಮಸ್ಕಾರ ಮಾಡಿದ ಬಳಿಕವೇ ಕೆಲಸಕ್ಕೆ ತೆರಳ್ತಿದ್ದ.

ಅತೀವ ದೈವ ಭಕ್ತನಾಗಿರುವ ಆರೋಪಿ ನಾಗೇಶ್ ಲೈಫ್ ಹೇಗಿತ್ತು ಗೊತ್ತಾ? ಆರೋಪಿ ಹಿಡಿಯಲು ಪೊಲೀಸರು ಮಾಡಿರುವ ಪ್ಲ್ಯಾನ್ ಏನು?
ಆರೋಪಿ ನಾಗೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ.
Follow us
TV9 Web
| Updated By: ಆಯೇಷಾ ಬಾನು

Updated on: May 02, 2022 | 7:47 AM

ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ದಾಳಿಯಾಗಿ ಐದಾರು ದಿನಗಳಾದ್ರೂ ಇನ್ನೂ ಕೂಡ ಆರೋಪಿ ನಾಗೇಶ್ ಅರೆಸ್ಟ್ ಆಗಿಲ್ಲ. ಆತ ಎಲ್ಲಿದ್ದಾನೆ ಅನ್ನೋ ಸುಳಿವು ಕೂಡ ಪೊಲೀಸರಿಗೆ ಸಿಕ್ಕಿಲ್ಲ. ಆದ್ರೆ ನಾಗೇಶನ ಲೈಫ್ ಸ್ಟೋರಿನ ನೋಡ್ತಿದ್ರೆ ಆತ ಈ ರೀತಿಯ ಕೃತ್ಯ ಎಸಗುವ ಮನಸಾದ್ರು ಹೇಗೆ ಮಾಡ್ದಾ ಎಂಬ ಅನುಮಾನ ಹುಟ್ಟುತ್ತೆ. ಆರೋಪಿ ನಾಗೇಶ್ ತನ್ನ ಏರಿಯಾದಲ್ಲಿ ಹೇಗೆ ಇರ್ತಿದ್ದ? ಆರೋಪಿ ನಾಗೇಶ್ನ ಲೈಫ್ ಸ್ಟೋರಿಯ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಆರೋಪಿ ನಾಗೇಶ್ಗೆ ಅತೀವವಾದ ದೈವ ಭಕ್ತಿ ಇತ್ತು. ಹಣೆ ಮೇಲೆ ಯಾವಾಗಲು ಕೆಂಪು ಬಣ್ಣದ ತಿಲಕ ಇಟ್ಕೊತಿದ್ದ. ಪ್ರತಿ ದಿನ ತಪ್ಪದೇ ಸೂರ್ಯ ನಮಸ್ಕಾರ ಮಾಡ್ತಿದ್ದ. ಸೂರ್ಯ ನಮಸ್ಕಾರ ಮಾಡಿದ ಬಳಿಕವೇ ಕೆಲಸಕ್ಕೆ ತೆರಳ್ತಿದ್ದ. ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಇರ್ತಿದ್ದ. ಹೆಚ್ಚಿನ ಸ್ನೇಹ ಬಳಗವನ್ನು ಹೊಂದಿರದ ಆರೋಪಿ ನಾಗೇಶ್ ಏರಿಯಾದಲ್ಲಿ‌ ಎದುರಿಗೆ ಸಿಕ್ಕವರ ಜೊತೆಗಷ್ಟೇ ಮಾತನಾಡ್ತಿದ್ದ.

ಲಕ್ಷ ಲಕ್ಷ ಹಣದ ಜೊತೆಗೆ ಆರೋಪಿ ನಾಗೇಶ್ ಪರಾರಿ ಆ್ಯಸಿಡ್ ಹಾಕಲು ಮೊದಲೇ ನಿರ್ಧಾರ ಮಾಡಿಕೊಂಡಿದ್ದ ಆರೋಪಿ ನಾಗೇಶ್, ತನ್ನ ಗಾರ್ಮೆಂಟ್ಸ್ ನಲ್ಲಿದ್ದ ವಸ್ತುಗಳನ್ನ ಮಾರಾಟ ಮಾಡಿದ್ದ. ಅದರಿಂದ ಬಂದ ಹಣವನ್ನು ಸಂಗ್ರಹಿಸಿ ಇಟ್ಕೊಂಡಿದ್ದ. ಅಷ್ಟು ಹಣದ ಜೊತೆಗೆ ಆ್ಯಸಿಡ್ ಹಾಕಿ ಪರಾರಿಯಾಗಿದ್ದಾನೆ. ಲಕ್ಷ ಲಕ್ಷ ಹಣದ ಜೊತೆಗೆ ಆರೋಪಿ ನಾಗೇಶ್ ಪರಾರಿಯಾಗಿದ್ದಾನೆ.

ನಾಗೇಶನಿಗಿಲ್ಲ ಕುಟುಂಬ ಅನ್ನೋ ಸೆಂಟಿಮೆಂಟ್ ತನ್ನ ಬಗ್ಗೆಯಷ್ಟೇ ಯೋಚಿಸುವ ಮನಸ್ಥಿತಿ ಹೊಂದಿದ್ದ ಆರೋಪಿ ನಾಗೇಶ್, ಕುಟುಂಬಸ್ಥರನ್ನು ಪೊಲೀಸರು ವಶಕ್ಕೆ ಪಡೆದಿದ್ದರು ಕ್ಯಾರೇ ಎಂದಿಲ್ಲ. ಅಲ್ಲದೇ ಆರೋಪಿ ಯಾರನ್ನೂ ಕೂಡ ಸಂಪರ್ಕ ಮಾಡುತ್ತಿಲ್ಲ. ಆತನ ಈ ರೀತಿಯಾದ ವರ್ತನೆಯೇ ಪೊಲೀಸರಿಗೆ ತಲೆನೋವಾಗಿದೆ. ಆರೋಪಿಯನ್ನು ಬಂಧಿಸಲು ಖಾಕಿ ಹರಸಾಹಸ ಪಡ್ತಿದೆ.

ಹಾಗಾದ್ರೆ ಆರೋಪಿ ಎಲ್ಲಿ ಅಡಗಿ ಕುಳಿತಿದ್ದಾನೆ? ಅತೀವ ದೈವಭಕ್ತನಾಗಿರುವ ಆರೋಪಿ ನಾಗೇಶ್, ತಮಿಳುನಾಡು ಅಥವಾ ಆಂಧ್ರದತ್ತ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ದೇವಸ್ಥಾನ, ಮಠಗಳಲ್ಲಿ‌ ಸೇರಿರುವ ಅನುಮಾನ ಬಂದಿದೆ. ಹೀಗಾಗಿ ಪ್ರತಿಯೊಂದು ಮಠ ಮಂದಿರ ದೇವಸ್ಥಾನಗಳಲ್ಲಿ ಹುಡುಕಾಟ ನಡೆಯುತ್ತಿದೆ. ಈಗಾಗಲೇ ಕರಪತ್ರಗಳನ್ನು ಸಿದ್ಧಪಡಿಸಿರುವ ಪೊಲೀಸರು ಅದನ್ನು ನೆರೆರಾಜ್ಯಗಳಲ್ಲಿಯೂ ಹಂಚಲು ಪ್ಲಾನ್ ಮಾಡಿದ್ದಾರೆ. ಆರೋಪಿ ಬಗೆಗಿನ ಪ್ರಕಟಣೆಯನ್ನು ತಮಿಳುನಾಡು ಮತ್ತು ಆಂಧ್ರ ಮಾಧ್ಯಮಗಳಲ್ಲಿ ಪ್ರಸಾರ ಮಾಡಲು ಚಿಂತನೆ ನಡೆಸಿದ್ದಾರೆ. ಆಯಾ ರಾಜ್ಯದ ಭಾಷೆಗಳಲ್ಲಿ ಕರಪತ್ರ ಸಿದ್ಧಪಡಿಸಲಾಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಕರಪತ್ರ ತಯಾರಾಗಿದೆ. ಶತಾಯ ಗತಾಯ ಆರೋಪಿ ಪತ್ತೆ ಮಾಡಲು ಖಾಕಿ ಪಣತೊಟ್ಟಿದೆ.

ರಾಜ್ಯದ ಇತರೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ