Tomato Price: ಗ್ರಾಹಕರಿಗೆ ಸಂಕಷ್ಟ; ಭರ್ಜರಿ ಏರಿಕೆ ಕಂಡ ಟೊಮ್ಯಾಟೊ ದರ
Tomato Rate in Bangalore: ಬೆಂಗಳೂರಿನಲ್ಲಿ ಪ್ರತಿ ಕೆ.ಜಿ ಟೊಮ್ಯಾಟೊಗೆ 60 ರೂ ಇದೆ. ಆನ್ ಲೈನ್ನಲ್ಲಿ ಉತ್ತಮ ಗುಣಮಟ್ಟದ ಟೊಮ್ಯಾಟೊ ಬೆಲೆ 70ರವರೆಗೆ ಮಾರಾಟವಾಗುತ್ತಿದೆ. ಕಳೆದ ಒಂದು ತಿಂಗಳ ಹಿಂದೆ ಕೆ.ಜಿ ಟೊಮ್ಯಾಟೊ ದರ 10 ರಿಂದ 12ರೂ. ಇತ್ತು. ಆದ್ರೀಗ ಬರೋಬ್ಬರಿ 50 ರಿಂದ 60 ರೂ. ಗೆ ಟೊಮ್ಯಾಟೊ ಮಾರಾಟವಾಗುತ್ತಿದೆ.
ಬೆಂಗಳೂರು: ನಾಲ್ಕೈದು ತಿಂಗಳ ಬಳಿಕ ರಾಜ್ಯದಲ್ಲಿ ಮತ್ತೆ ಟೊಮ್ಯಾಟೊ ದರ ಏರಿಕೆ ಕಂಡಿದೆ. ಮೇ 3ರಂದು ರಂಜಾನ್ ಹಬ್ಬವಿದ್ದು ಟೊಮ್ಯಾಟೊ ದರ ಏರಿಕೆಯಿಂದಾಗಿ ಗ್ರಾಹಕರು ಕಂಗಾಲಾಗಿದ್ದಾರೆ. ಗಗನಕ್ಕೇರಿದ ಟೊಮ್ಯಾಟೊ ದರ, ಗ್ರಾಹಕರಿಗೆ ಶಾಕ್ ನೀಡಿದೆ. ಈ ಹಿಂದೆ ಕೆ.ಜಿ ಟೊಮ್ಯಾಟೊ ಬೆಲೆ 100ರೂ. ಗಡಿ ದಾಟಿತ್ತು. ಆಗ ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿ ದರ ಏರಿಕೆಯಾಗಿತ್ತು. ಆದ್ರೀಗ ಬೇಸಿಗೆ ಹಿನ್ನೆಲೆ ರೈತರಿಗೆ ನೀರಿನ ಅಭಾವ ಎದುರಾಗಿದ್ದು ಬೇಸಿಗೆ ಕಾಲದಲ್ಲಿ ನೀರಿನ ಅಭಾವದಿಂದ ಟೊಮ್ಯಾಟೊ ಬೆಳೆಗೆ ಹಿಂದೇಟು ಬಿದ್ದಿದೆ. ಇದರ ಪರಿಣಾಮ ಟೊಮ್ಯಾಟೊ ಬೆಳೆದವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಮಾರುಕಟ್ಟೆಗೆ ಟೊಮ್ಯಾಟೊ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ.
ಇಂದು ಬೆಂಗಳೂರಿನಲ್ಲಿ ಪ್ರತಿ ಕೆ.ಜಿ ಟೊಮ್ಯಾಟೊಗೆ 60 ರೂ ಇದೆ. ಆನ್ ಲೈನ್ನಲ್ಲಿ ಉತ್ತಮ ಗುಣಮಟ್ಟದ ಟೊಮ್ಯಾಟೊ ಬೆಲೆ 70ರವರೆಗೆ ಮಾರಾಟವಾಗುತ್ತಿದೆ. ಕಳೆದ ಒಂದು ತಿಂಗಳ ಹಿಂದೆ ಕೆ.ಜಿ ಟೊಮ್ಯಾಟೊ ದರ 10 ರಿಂದ 12ರೂ. ಇತ್ತು. ಆದ್ರೀಗ ಬರೋಬ್ಬರಿ 50 ರಿಂದ 60 ರೂ. ಗೆ ಟೊಮ್ಯಾಟೊ ಮಾರಾಟವಾಗುತ್ತಿದೆ. ಒಂದು ವಾರದಿಂದ ನಿರಂತರವಾಗಿ ಟೊಮ್ಯಾಟೊ ಬೆಲೆ ಏರಿಕೆ ಕಾಣುತ್ತಿದ್ದು ಏರಿಕೆ ಹಿನ್ನೆಲೆ ಗ್ರಾಹಕರು ಕಂಗಾಲಾಗಿದ್ದಾರೆ. ಮತ್ತಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ. ಹೊಸ ಇಳುವರಿ ಬರಲು 3 ರಿಂದ 4 ತಿಂಗಳು ಕಾಲಾವದಿ ಬೇಕು. ಅಲ್ಲಿಯವರೆಗೆ ಟೊಮ್ಯಾಟೊ ದರ ಏರಿಕೆಯಾಗುವ ಸಾಧ್ಯತೆ ಇದೆ. ಕನಿಷ್ಠ ಇನ್ನು 3 ತಿಂಗಳು ಟೊಮ್ಯಾಟೊ ದರ ಇಳಿಯುವ ಲಕ್ಷಣ ಇಲ್ಲ. ಉತ್ತಮ ಗುಣಮಟ್ಟದ ಟೊಮ್ಯಾಟೊ ಸಿಗ್ತಿಲ್ಲ ಎಂದು ವ್ಯಾಪಾರಿಗಳು ಗೋಳಾಡುತ್ತಿದ್ದಾರೆ.
ಕೋಲಾರದಿಂದ ಬರುವ 14 ಕೆ.ಜಿ ಬಾಕ್ಸ್ ಟೊಮ್ಯಾಟೊಗೆ 600 ರಿಂದ 800 ರೂ ಇದೆ. ಮೈಸೂರು ಭಾಗದಿಂದ ಬರುವ 22 ಕೆ.ಜಿ ಬಾಕ್ಸ್ ಟೊಮ್ಯಾಟೊ 900 ರಿಂದ 1,100ರೂ. ಇದೆ. ಇನ್ನು ಮತ್ತೊಂದು ಕಡೆ ದುಡ್ಡು ಕೊಟ್ರೂ ಒಳ್ಳೆಯ ಕ್ವಾಲಿಟಿಯ ಟೊಮ್ಯಾಟೊ ಸಿಗೋದು ಕಷ್ಟವಾಗಿದೆ. ಟೊಮ್ಯಾಟೊ ಬೆಲೆ ಜೊತೆಗೆ ಇತರೆ ತರಕಾರಿ ದರದಲ್ಲೂ ಏರಿಕೆ ಕಂಡು ಬರುತ್ತಿದೆ.
ಇನ್ನಷ್ಟು ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:45 am, Mon, 2 May 22