Petrol Price on August 10: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಆಗಸ್ಟ್ 10ರಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ, ವಿವರ ಇಲ್ಲಿದೆ

ಭಾರತದಲ್ಲಿ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿಗದಿಪಡಿಸಲಾಗುತ್ತದೆ. ಗುರುವಾರ, ಆಗಸ್ಟ್ 10ರಂದು ಅನೇಕ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ.

Petrol Price on August 10: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಆಗಸ್ಟ್ 10ರಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ, ವಿವರ ಇಲ್ಲಿದೆ
ಪೆಟ್ರೋಲ್Image Credit source: News 18
Follow us
ನಯನಾ ರಾಜೀವ್
|

Updated on: Aug 10, 2023 | 7:35 AM

ಭಾರತದಲ್ಲಿ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿಗದಿಪಡಿಸಲಾಗುತ್ತದೆ. ಗುರುವಾರ, ಆಗಸ್ಟ್ 10ರಂದು ಅನೇಕ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬಗ್ಗೆ ಮಾತನಾಡುವುದಾದರೆ, ಸ್ವಲ್ಪ ಇಳಿಕೆ ದಾಖಲಾಗುತ್ತಿದೆ. WTI ಕಚ್ಚಾ ತೈಲದ ಬೆಲೆ 0.24 ಪ್ರತಿಶತದಷ್ಟು ಕಡಿಮೆಯಾಗಿದೆ ಮತ್ತು ಪ್ರತಿ ಬ್ಯಾರೆಲ್‌ಗೆ 84.20 ಡಾಲರ್​ ಆಗಿದೆ. ಅದೇ ಸಮಯದಲ್ಲಿ, ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ ಶೇಕಡಾ 0.17 ರಷ್ಟು ಇಳಿಕೆಯಾಗಿದೆ ಮತ್ತು ಇದು ಪ್ರತಿ ಬ್ಯಾರೆಲ್ಗೆ 87.40 ಡಾಲರ್​ನಂತೆ ವಹಿವಾಟು ನಡೆಸುತ್ತಿದೆ.

ಐದು ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಎಷ್ಟು? ನವದೆಹಲಿ – ಲೀಟರ್ ಪೆಟ್ರೋಲ್ ರೂ 96.72, ಡೀಸೆಲ್ ರೂ 89.62 ಮುಂಬೈ- ಪೆಟ್ರೋಲ್ ಲೀಟರ್‌ಗೆ 106.31 ರೂ., ಡೀಸೆಲ್ ಲೀಟರ್‌ಗೆ 94.27 ರೂ. ಬೆಂಗಳೂರಿನಲ್ಲಿ ಪೆಟ್ರೋಲ್ 101.94 ರೂ, ಡೀಸೆಲ್ 87.89 ರೂ ಇದೆ. ಚೆನ್ನೈ- ಲೀಟರ್ ಪೆಟ್ರೋಲ್ ರೂ 102.74, ಡೀಸೆಲ್ ರೂ 94.33 ಕೋಲ್ಕತ್ತಾ- ಪೆಟ್ರೋಲ್ 106.03 ರೂ., ಡೀಸೆಲ್ ಲೀಟರ್‌ಗೆ 92.76 ರೂ ಯಾವ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗಿವೆ- ಗುರುಗ್ರಾಮ- ಪೆಟ್ರೋಲ್ 16 ಪೈಸೆ ಕಡಿಮೆಯಾಗಿ 96.81 ರೂ, ಡೀಸೆಲ್ 15 ಪೈಸೆ ಅಗ್ಗವಾಗಿ ಲೀಟರ್‌ಗೆ 89.69 ರೂ. ಗೋರಖ್‌ಪುರ – ಪೆಟ್ರೋಲ್ ಬೆಲೆ 18 ಪೈಸೆಯಿಂದ 96.71 ರೂ, ಡೀಸೆಲ್ ಬೆಲೆ 18 ಪೈಸೆ ಹೆಚ್ಚಾಗಿದೆ ಮತ್ತು ಲೀಟರ್‌ಗೆ 89.90 ರೂಗಳಲ್ಲಿ ಲಭ್ಯವಿದೆ.

ಮತ್ತಷ್ಟು ಓದಿ: Petrol Price on August 9: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಆಗಸ್ಟ್ 9ರಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ, ವಿವರ ಇಲ್ಲಿದೆ

ನೋಯ್ಡಾ – ಪೆಟ್ರೋಲ್ ಬೆಲೆ 33 ಪೈಸೆ 96.59 ರೂ, ಡೀಸೆಲ್ 32 ಪೈಸೆ 89.76 ರೂ. ಜೈಪುರ- ಪೆಟ್ರೋಲ್ 29 ಪೈಸೆ ಕಡಿಮೆಯಾಗಿ 108.61 ರೂ., ಡೀಸೆಲ್ 26 ಪೈಸೆ ಕಡಿಮೆಯಾಗಿ ಲೀಟರ್‌ಗೆ 93.84 ರೂ. ಆಗ್ರಾ- ಪೆಟ್ರೋಲ್ ಬೆಲೆ 41 ಪೈಸೆಯಿಂದ 96.71 ರೂ., ಡೀಸೆಲ್ ಬೆಲೆ 40 ಪೈಸೆ ಮತ್ತು ಲೀಟರ್‌ಗೆ 89.87 ರೂ.ಗೆ ಲಭ್ಯವಿದೆ. ಅಮೃತಸರ – ಪೆಟ್ರೋಲ್ ಬೆಲೆ 6 ಪೈಸೆಯಿಂದ 98.74 ರೂ.ಗೆ, ಡೀಸೆಲ್ ಬೆಲೆ 6 ಪೈಸೆಯಿಂದ ಲೀಟರ್‌ಗೆ 89.05 ರೂ. ಅಹಮದಾಬಾದ್- ಪೆಟ್ರೋಲ್ 47 ಪೈಸೆ ಕಡಿಮೆಯಾಗಿ 96.42 ರೂ, ಡೀಸೆಲ್ 49 ಪೈಸೆ ಅಗ್ಗವಾಗಿ ಲೀಟರ್‌ಗೆ 92.17 ರೂ.

ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ನಗರವಾರು ಇಂಧನ ಬೆಲೆಯನ್ನು ಪರಿಶೀಲಿಸಿ ದೇಶದ ವಿವಿಧ ನಗರಗಳು ಮತ್ತು ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಸರ್ಕಾರಿ ತೈಲ ಕಂಪನಿಗಳು ಎಂಎಂಎಸ್ ಮೂಲಕವೇ ಪೆಟ್ರೋಲ್ ಮತ್ತು ಡೀಸೆಲ್‌ನ ಹೊಸ ದರಗಳನ್ನು ತಿಳಿದುಕೊಳ್ಳುವ ಸೌಲಭ್ಯವನ್ನು ನೀಡುತ್ತವೆ. BPCL ಗ್ರಾಹಕರು ಬೆಲೆಯನ್ನು ತಿಳಿಯಲು <ಡೀಲರ್ ಕೋಡ್> ಅನ್ನು 9223112222 ಗೆ ಕಳುಹಿಸಬಹುದು. ಇಂಡಿಯನ್ ಆಯಿಲ್ ಗ್ರಾಹಕರಿಗೆ, RSP<ಡೀಲರ್ ಕೋಡ್> ಅನ್ನು 9224992249 ಗೆ ಕಳುಹಿಸಿ. ಮತ್ತು 9222201122 ಗೆ HPPRICE <ಡೀಲರ್ ಕೋಡ್> ಟೈಪ್ ಮಾಡುವ ಮೂಲಕ HPCL ಗ್ರಾಹಕರಿಗೆ SMS ಕಳುಹಿಸಿ. ಕೆಲವೇ ನಿಮಿಷಗಳಲ್ಲಿ ನೀವು ಹೊಸ ದರಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತೀರಿ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ