Petrol Price Today: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಮಾರ್ಚ್​ 17 ರಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ, ವಿವರ ಇಲ್ಲಿದೆ

ಇಂದಿಗೂ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. WTI ಕಚ್ಚಾ ತೈಲದ ಬೆಲೆಯಲ್ಲಿ 0.06 ಶೇಕಡಾ ಸ್ವಲ್ಪ ಇಳಿಕೆ ಕಂಡುಬಂದಿದೆ. ಅದೇ ಸಮಯದಲ್ಲಿ, ಬ್ರೆಂಟ್ ಕಚ್ಚಾ ತೈಲದ ಬೆಲೆಗಳು ಸ್ಥಿರವಾಗಿವೆ.

Petrol Price Today: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಮಾರ್ಚ್​ 17 ರಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ, ವಿವರ ಇಲ್ಲಿದೆ
ಪೆಟ್ರೋಲ್Image Credit source: Kalinga
Follow us
ನಯನಾ ರಾಜೀವ್
|

Updated on: Mar 17, 2023 | 7:38 AM

ಇಂದಿಗೂ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. WTI ಕಚ್ಚಾ ತೈಲದ ಬೆಲೆಯಲ್ಲಿ 0.06 ಶೇಕಡಾ ಸ್ವಲ್ಪ ಇಳಿಕೆ ಕಂಡುಬಂದಿದೆ. ಅದೇ ಸಮಯದಲ್ಲಿ, ಬ್ರೆಂಟ್ ಕಚ್ಚಾ ತೈಲದ ಬೆಲೆಗಳು ಸ್ಥಿರವಾಗಿವೆ. WTI ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 68.31ಡಾಲರ್ ಮತ್ತು ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 74.70 ಡಾಲರ್​ನಂತೆ ವಹಿವಾಟು ನಡೆಸುತ್ತಿದೆ. ಕಚ್ಚಾ ತೈಲದ ಬೆಲೆಯಲ್ಲಿನ ಏರಿಳಿತದ ಪರಿಣಾಮ ಇಂದು ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಕಾಣಿಸುತ್ತಿಲ್ಲ. ನಾಲ್ಕು ಮಹಾನಗರಗಳ ಜೊತೆಗೆ, ಇತರ ಅನೇಕ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ.

ಮತ್ತಷ್ಟು ಓದಿ: Petrol Price Today: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಮಾರ್ಚ್​ 16 ರಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ, ವಿವರ ಇಲ್ಲಿದೆ

ಮಾರ್ಚ್​ 17ರಂದು  5 ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ- ದೆಹಲಿ- ಪೆಟ್ರೋಲ್ 96.72 ರೂ ಮತ್ತು ಡೀಸೆಲ್ ಲೀಟರ್‌ಗೆ 89.62 ರೂ ಚೆನ್ನೈ – ಪ್ರತಿ ಲೀಟರ್ ಪೆಟ್ರೋಲ್ 102.63 ರೂಮತ್ತು ಡೀಸೆಲ್ 94.24 ರೂ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 101.94 ರೂ, ಡೀಸೆಲ್ ಬೆಲೆ 87.89 ರೂ. ಇದೆ. ಮುಂಬೈ- ಪೆಟ್ರೋಲ್ 106.31 ಮತ್ತು ಡೀಸೆಲ್ ಲೀಟರ್‌ಗೆ 94.27 ರೂ ಕೋಲ್ಕತ್ತಾ – ಪ್ರತಿ ಲೀಟರ್ ಪೆಟ್ರೋಲ್ 106.03 ಮತ್ತು ಡೀಸೆಲ್ 92.76 ರೂ

ಇತರ ನಗರಗಳ ಪೆಟ್ರೋಲ್-ಡೀಸೆಲ್ ಬೆಲೆ ನೋಯ್ಡಾ-ಪೆಟ್ರೋಲ್ 96.59 ರೂ. ಮತ್ತು ಡೀಸೆಲ್ ಲೀಟರ್‌ಗೆ 89.76 ರೂ ಗುರುಗ್ರಾಮ್-ಪೆಟ್ರೋಲ್ 96.92 ರೂ. ಮತ್ತು ಡೀಸೆಲ್ ಲೀಟರ್‌ಗೆ 89.79 ರೂ ಲಕ್ನೋ-ಪೆಟ್ರೋಲ್ ರೂ 96.61 ಮತ್ತು ಡೀಸೆಲ್ ಲೀಟರ್‌ಗೆ ರೂ 89.80 ಹೈದರಾಬಾದ್ – ಪ್ರತಿ ಲೀಟರ್ ಪೆಟ್ರೋಲ್ 109.66 ಮತ್ತು ಡೀಸೆಲ್ 97.82 ರೂ ಪಾಟ್ನಾ-ಪೆಟ್ರೋಲ್ ರೂ 107.74 ಮತ್ತು ಡೀಸೆಲ್ ಲೀಟರ್‌ಗೆ ರೂ 94.51

ಮನೆಯಲ್ಲಿ ಕುಳಿತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಶೀಲಿಸಿ ದೇಶದ ಸರ್ಕಾರಿ ತೈಲ ಕಂಪನಿಗಳು ತಮ್ಮ ಗ್ರಾಹಕರಿಗೆ ಮನೆಯಲ್ಲಿ ಕುಳಿತು ನಗರಕ್ಕೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಶೀಲಿಸುವ ಸೌಲಭ್ಯವನ್ನು ನೀಡುತ್ತವೆ. HPCL ಗ್ರಾಹಕರು 9222201122 ಗೆ HPPRICE <ಡೀಲರ್ ಕೋಡ್> ಎಂದು SMS ಕಳುಹಿಸುತ್ತಾರೆ. ಮತ್ತೊಂದೆಡೆ, ಇಂಡಿಯನ್ ಆಯಿಲ್ ಗ್ರಾಹಕರು ತಮ್ಮ ನಗರದಲ್ಲಿ ಇಂಧನ ದರಗಳನ್ನು ಪರಿಶೀಲಿಸಲು RSP<ಡೀಲರ್ ಕೋಡ್> ಅನ್ನು 9224992249 ಗೆ ಕಳುಹಿಸಬಹುದು. BPCL ಗ್ರಾಹಕರು RSP<ಡೀಲರ್ ಕೋಡ್> ಅನ್ನು 9223112222 ಗೆ ಕಳುಹಿಸುತ್ತಾರೆ. ಇದರ ನಂತರ, ಕೆಲವೇ ನಿಮಿಷಗಳಲ್ಲಿ, ನಿಮ್ಮ ನಗರದ ಇತ್ತೀಚಿನ ದರವನ್ನು ನೀವು SMS ಮೂಲಕ ತಿಳಿಯಬಹುದು.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ