AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Costly: ಚಿನ್ನ ಭಾರೀ ಏರಿಕೆ; ಬೆಂಗಳೂರು, ದುಬೈ, ಅಮೆರಿಕ ಮೊದಲಾದೆಡೆ ಇಂದಿನ ಬೆಲೆಗಳು ಎಷ್ಟು?

Bullion Market 2023, March 17th: ಭಾರತದಲ್ಲಿ ಚಿನ್ನದ ಬೆಲೆ 500 ರುನಷ್ಟು ಏರಿಕೆಯಾಗಿದೆ. ಈಗ 22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ 53,550 ರೂ ಇದೆ. 24 ಕ್ಯಾರಟ್ ಚಿನ್ನದ ಬೆಲೆ 58,420 ರೂ ಇದೆ. ಬೆಳ್ಳಿ ಬೆಲೆಯಲ್ಲಿ ಅಲ್ಪ ವ್ಯತ್ಯಯವಾಗಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Costly: ಚಿನ್ನ ಭಾರೀ ಏರಿಕೆ; ಬೆಂಗಳೂರು, ದುಬೈ, ಅಮೆರಿಕ ಮೊದಲಾದೆಡೆ ಇಂದಿನ ಬೆಲೆಗಳು ಎಷ್ಟು?
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 17, 2023 | 5:06 AM

Share

ಬೆಂಗಳೂರು: ಕಳೆದ ಹಲವು ದಿನಗಳಿಂದ ಏರಿಳಿಕೆಯ ಅನಿಶ್ಚಿತತೆಯಲ್ಲಿರುವ ಚಿನ್ನದ ಬೆಲೆ (Gold Rates Hike) ಇದೀಗ ದಿಢೀರ್ 500 ರುಪಾಯಿಯಷ್ಟು ಏರಿಕೆ ಕಂಡಿದೆ. ನಿನ್ನೆ ಇಳಿಕೆಯಾಗಿದ್ದ ಚಿನ್ನಕ್ಕೆ ಮತ್ತೆ ಬೇಡಿಕೆ ಶುರುವಾಗಿದೆ. ಮುಂದಿನ ದಿನಗಳೂ ಬೆಲೆಗಳಲ್ಲಿ ಕ್ಷಿಪ್ರ ವ್ಯತ್ಯಯಗಳಾಗುವ ಸಾಧ್ಯತೆ ಇದೆ. ಇದೀಗ ಭಾರತದಲ್ಲಿ 10 ಗ್ರಾಮ್ ಚಿನ್ನದ ಬೆಲೆ 53,550 ರುಪಾಯಿ ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ 58,420 ರುಪಾಯಿ ಆಗಿದೆ. ಬೆಳ್ಳಿ ಬೆಲೆ 100 ಗ್ರಾಮ್​ಗೆ 20 ರುಪಾಯಿಯಷ್ಟು ಏರಿಕೆ ಆಗಿದೆ. ನಿನ್ನೆ 50 ರೂನಷ್ಟು ಬೆಲೆ ಹೆಚ್ಚಿಸಿಕೊಂಡಿತ್ತು ಬೆಳ್ಳಿ ಲೋಹ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 53,600 ರುಪಾಯಿ ಆದರೆ, 100 ಗ್ರಾಮ್ ಬೆಳ್ಳಿ ಬೆಲೆ 7,270 ರುಪಾಯಿಗೆ ಏರಿಕೆಯಾಗಿದೆ.

ವಿದೇಶಗಳ ಚಿನಿವಾರಪೇಟೆಗಳಲ್ಲಿಯೂ (Bullion Market) ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಅನಿವಾಸಿ ಭಾರತೀಯರು ಹೆಚ್ಚಾಗಿ ನೆಲಸಿರುವ ಅರಬ್ ದೇಶಗಳು, ಅಮೆರಿಕ, ಸಿಂಗಾಪುರ, ಮಲೇಷ್ಯಾ ದೇಶಗಳಲ್ಲಿ ಚಿನ್ನದ ಬೆಲೆ ಭಾರತಕ್ಕೆ ಹೋಲಿಸಿದರೆ ಕಡಿಮೆ ಇದೆ. ಯುಎಇಯ ಭಾಗವಾಗಿರುವ ದುಬೈ, ಅಬುಧಾಬಿ ಮತ್ತು ಶಾರ್ಜಾ ನಗರಗಳಲ್ಲಿ ಬೆಲೆ ಸ್ವಲ್ಪ ಕಡಿಮೆ ಆಗಿದೆ. ಮಲೇಷ್ಯಾ ಮತ್ತು ಓಮನ್ ದೇಶಗಳಲ್ಲಿ ಚಿನ್ನದ ಬೆಲೆ 50 ಸಾವಿರ ರೂ ಗಡಿ ದಾಟಿದೆ. ಕತಾರ್, ಕುವೇತ್ ದೇಶಗಳಲ್ಲಿ 50 ಸಾವಿರ ಗಡಿ ಸಮೀಪ ಬೆಲೆ ಹೋಗುತ್ತಿದೆ.

ಚಿನ್ನದ ಬೆಲೆ ಏರಿಕೆಗೆ ಏನು ಕಾರಣ?

ಅಮೆರಿಕದ ಆರ್ಥಿಕತೆಯ ತುಮುಲ, ನಿರುದ್ಯೋಗ ಅಂಕಿ ಅಂಶದ ಗೊಂದಲ, ಹಣದುಬ್ಬರ ಅನಿಶ್ಚಿತತೆ, ಬಡ್ಡಿ ದರ ಬಗ್ಗೆ ಅಸ್ಪಷ್ಟತೆ, ಡಾಲರ್ ದುರ್ಬಲಗೊಂಡಿರುವುದು ಇವೆಲ್ಲವೂ ಹೂಡಿಕೆದಾರರನ್ನು ಚಿನ್ನದತ್ತ ಗಮನ ಕೊಡುವಂತೆ ಮಾಡಿವೆ. ಹೀಗಾಗಿ, ಚಿನ್ನಕ್ಕೆ ಬೇಡಿಕೆ ಹೆಚ್ಚಿ ಬೆಲೆ ಕೂಡ ಹೆಚ್ಚುತ್ತಿದೆ. ತಜ್ಞರ ಪ್ರಕಾರ ಇನ್ನೂ ಬಹಳಷ್ಟು ದಿನ ಚಿನ್ನದ ಬೆಲೆ ಏರಿಕೆಯ ಟ್ರೆಂಡ್ ಮುಂದುವರಿಯಬಹುದು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಈಗಲೂ ಪ್ರಶಸ್ತ ಸಮಯ ಇದೆ ಎಂಬ ಸಲಹೆಯನ್ನು ಕೊಡಲಾಗಿದೆ.

ಇದನ್ನೂ ಓದಿAreca Nut Price: ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ: ಎಲ್ಲೆಲ್ಲಿ ಅಡಿಕೆ ಧಾರಣೆ ಎಷ್ಟಿದೆ: ಇಲ್ಲಿದೆ ಮಾಹಿತಿ

ಭಾರತದಲ್ಲಿರುವ ಬೆಲೆ (ಮಾರ್ಚ್ 17ಕ್ಕೆ):

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 53,550 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,420 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 692 ರೂ

ಬೆಂಗಳೂರಿನಲ್ಲಿರುವ ಬೆಲೆ

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 53,600 ರೂ

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,470 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 727 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 53,600 ರೂ
  • ಚೆನ್ನೈ: 54,250 ರೂ
  • ಮುಂಬೈ: 53,550 ರೂ
  • ದೆಹಲಿ: 53,700 ರೂ
  • ಕೋಲ್ಕತಾ: 53,550 ರೂ
  • ಕೇರಳ: 53,550 ರೂ
  • ಅಹ್ಮದಾಬಾದ್: 53,600 ರೂ
  • ಜೈಪುರ್: 53,700 ರೂ
  • ಲಕ್ನೋ: 53,700 ರೂ
  • ಭುವನೇಶ್ವರ್: 51,550 ರೂ

ಇದನ್ನೂ ಓದಿInnovation: ಇನ್ನೋವೇಶನ್ ಇಂಡೆಕ್ಸ್​ನಲ್ಲಿ ಭಾರತ ಹೈಜಂಪ್; ಕ್ರಿಯಾಶೀಲತೆಯ ವಾತಾವರಣ ಇರುವ ಟಾಪ್ 10 ಕಂಪನಿಗಳಿವು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,750 ರಿಂಗಿಟ್ (50,581 ರುಪಾಯಿ)
  • ದುಬೈ: 2152.50 ಡಿರಾಮ್ (48,498 ರುಪಾಯಿ)
  • ಅಮೆರಿಕ: 585 ಡಾಲರ್ (48,412 ರುಪಾಯಿ)
  • ಸಿಂಗಾಪುರ: 804 ಸಿಂಗಾಪುರ್ ಡಾಲರ್ (49,385 ರುಪಾಯಿ)
  • ಕತಾರ್: 2,220 ಕತಾರಿ ರಿಯಾಲ್ (50,455 ರೂ)
  • ಓಮನ್: 234 ಒಮಾನಿ ರಿಯಾಲ್ (48,147 ರುಪಾಯಿ)
  • ಕುವೇತ್: 184.50 ಕುವೇತಿ ದಿನಾರ್ (49,725 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 7,270 ರೂ
  • ಚೆನ್ನೈ: 7,270 ರೂ
  • ಮುಂಬೈ: 6,920 ರೂ
  • ದೆಹಲಿ: 6,920 ರೂ
  • ಕೋಲ್ಕತಾ: 6,920 ರೂ
  • ಕೇರಳ: 7,270 ರೂ
  • ಅಹ್ಮದಾಬಾದ್: 6,920 ರೂ
  • ಜೈಪುರ್: 6,920 ರೂ
  • ಲಕ್ನೋ: 6,920 ರೂ
  • ಭುವನೇಶ್ವರ್: 7,270 ರೂ

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ