AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಬೆಂಗಳೂರು ಮೆಟ್ರೋ ಅನುದಾನ ವಿಚಾರದಲ್ಲಿ ಸಿಎಂ, ಸಚಿವರಿಂದ ತಪ್ಪು ಮಾಹಿತಿ: ಸಂಸದ ತೇಜಸ್ವಿ ಸೂರ್ಯ ಆರೋಪ

ನಮ್ಮ ಮೆಟ್ರೋ ಯೋಜನೆಯ ಅನುದಾನ ಹಂಚಿಕೆಯ ಕುರಿತು ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಕೃಷ್ಣ ಭೈರೇಗೌಡ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಕೇಂದ್ರದ ಗ್ಯಾರಂಟಿಯಡಿ ವಿದೇಶಿ ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ರಾಜ್ಯದ ಪಾಲು ಎಂದು ತೋರಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ. ನಮ್ಮ ಮೆಟ್ರೋ ಬ್ಲ್ಯೂ ಲೈನ್​​ ಮತ್ತು ಫೇಸ್ 3A ರೆಡ್ ಲೈನ್​​ ಕಾಮಗಾರಿಗಳ ವಿಚಾರವಾಗಿಯೂ ಅವರು ಕೆಲ ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ನಮ್ಮ ಬೆಂಗಳೂರು ಮೆಟ್ರೋ ಅನುದಾನ ವಿಚಾರದಲ್ಲಿ ಸಿಎಂ, ಸಚಿವರಿಂದ ತಪ್ಪು ಮಾಹಿತಿ: ಸಂಸದ ತೇಜಸ್ವಿ ಸೂರ್ಯ ಆರೋಪ
ನಮ್ಮ ಬೆಂಗಳೂರು ಮೆಟ್ರೋ ಅನುದಾನ ವಿಚಾರದಲ್ಲಿ ಸಿಎಂ, ಸಚಿವರಿಂದ ತಪ್ಪು ಮಾಹಿತಿ: ಸಂಸದ ತೇಜಸ್ವಿ ಸೂರ್ಯ ಆರೋಪ
ಸುನಿಲ್​ ಎಮ್​ ಹೆಚ್​
| Edited By: |

Updated on: Nov 12, 2026 | 4:09 PM

Share

ಬೆಂಗಳೂರು, ನವೆಂಬರ್​​ 12: ನಮ್ಮ ಬೆಂಗಳೂರು ಮೆಟ್ರೋ ಅನುದಾನ ವಿಚಾರದಲ್ಲಿ ಸಿಎಂ ಡಿಕೆ ಶಿವಕುಮಾರ್​​ ಮತ್ತು ಸಚಿವ ಕೃಷ್ಣಭೈರೇಗೌಡ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಮೆಟ್ರೋ ಕಾಮಗಾರಿಗೆ ಪ್ರಧಾನಿ, ಸಿಎಂ ಜೇಬಿನಿಂದ ಹಣ ನೀಡುತ್ತಿಲ್ಲ. ರಾಜ್ಯದ ಜನರ ತೆರಿಗೆ ‌ಹಣದಿಂದ ಯೋಜನೆ ಆಗುತ್ತಿದೆ. BMRCLಗೆ ಕೇಂದ್ರ, ರಾಜ್ಯ ಸರ್ಕಾರ ತಲಾ 50% ಹಣ ನೀಡುತ್ತವೆ. ಅಂತಾರಾಷ್ಟ್ರೀಯ ಬ್ಯಾಂಕ್​ಗಳಿಂದಲೂ ಸಾಲ ಪಡೆದು ಕೊಡುತ್ತಾರೆ. ಈ ಸಾಲಕ್ಕೆ ಕೇಂದ್ರ ಸರ್ಕಾರ ಗ್ಯಾರಂಟಿ ಕೊಡುತ್ತೆ ಎಂದವರು ತಿಳಿಸಿದ್ದಾರೆ.

‘ರಾಜ್ಯದ ಜನತೆಗೆ ಸುಳ್ಳು ಹೇಳಿದ್ದಾರೆ’

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತೇಜಸ್ವಿ ಸೂರ್ಯ, 84% ರಾಜ್ಯ ಸರ್ಕಾರ ಮತ್ತು 16% ಕೇಂದ್ರ ಕೊಡ್ತಿದೆ ಅಂತ ಹೇಳಿದ್ದಾರೆ. ಕೇಂದ್ರ ಸರ್ಕಾರ ಕೊಡಿಸ್ತಿರೋ ಲೋನ್ ಕೇಂದ್ರದ ಕಾಲಮ್​​ನಲ್ಲಿ ಹಾಕೋ ಬದಲು ರಾಜ್ಯ ಸರ್ಕಾರ ಕಾಲಂನಲ್ಲಿ ಹಾಕಿದ್ದಾರೆ. ಸಾಲ ತೀರಿಸೋದು BMRCL, ಲೋನ್‌ಗೆ ಗ್ಯಾರಂಟಿ ಕೊಟ್ಟಿರೋದು ಕೇಂದ್ರ ಸರ್ಕಾರ. ಇದರಲ್ಲಿ ರಾಜ್ಯದ ಪಾಲು ಎಲ್ಲಿದೆ? ಸಿಎಂ ಮತ್ತು ಸಚಿವರು ಮಿಸ್ ಗೈಡ್ ಮಾಡಿ ರಾಜ್ಯದ ಜನತೆಗೆ ಸುಳ್ಳು ಹೇಳಿದ್ದಾರೆ. ಸಂವಿಧಾನ ಮೇಲೆ ಪ್ರಮಾಣ ಮಾಡಿ ಈ ರೀತಿ ಸುಳ್ಳು ಹೇಳೋದು ಸರಿಯಲ್ಲ. 28,958 ಕೋಟಿ ವಿದೇಶಿ ಬ್ಯಾಂಕ್‌ಗಳಿಂದ ಸಾಲ ಬಂದಿರೋದು. ಈ ಹಣ ನೇರವಾಗಿ BMRCLಗೆ ಹೋಗುತ್ತೆ. ಈ ಪ್ರಕಾರ ಕೇಂದ್ರದ್ದು 54%, ರಾಜ್ಯ ಸರ್ಕಾರರದ್ದು 46% ಆಗುತ್ತೆ. 77,891 ಕೋಟಿ ಒಟ್ಟು ಪ್ರಾಜೆಕ್ಟ್ ಕಾಸ್ಟ್ ಆಗಿದೆ. ಆ ಪೈಕಿ ಕೇಂದ್ರ ಸರ್ಕಾರದ ಒಟ್ಟು ಅನುದಾನ(ಸಾಲ ಸೇರಿಸಿ) 41,558 ಕೋಟಿ ಮತ್ತು ರಾಜ್ಯ ಸರ್ಕಾರದ್ದು 36,333 ಕೋಟಿ ರೂ. ಆಗಲಿದೆ. ಗೃಹ ಸಚಿವರು RSS ಬಗ್ಗೆ ಸುಳ್ಳು ಹೇಳ್ತಾರೆ, ರಿಜ್ವಾನ್ ಅರ್ಷದ್ ಎಥೆನಾಲ್ ಬಗ್ಗೆ ಸುಳ್ಳು ಹೇಳ್ತಾರೆ ಎಂದವರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪಿಂಕ್​ಲೈನ್ ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಅಸ್ತು

ದೇಶದ ಹಲವು ನಗರಗಳಲ್ಲಿ ಮೆಟ್ರೋ ಕಾಮಗಾರಿ ವೆಚ್ಚದ ಬಗ್ಗೆಯೂ ವಿವರಣೆ ನೀಡಿರುವ ತೇಜಸ್ವಿ ಸೂರ್ಯ, ಮುಂಬೈನಲ್ಲಿ ಪ್ರತಿ ಕಿ.ಮೀ.ಗೆ ಮೆಟ್ರೋ ಕಾಮಗಾರಿ ವೆಚ್ಚ 691 ಕೋಟಿ ಆಗಿದ್ದರೆ ಚೆನ್ನೈನಲ್ಲಿ 532 ಕೋಟಿ, ಲಖನೌನಲ್ಲಿ520 ಕೋಟಿ, ದೆಹಲಿಯಲ್ಲಿ405 ಕೋಟಿ ಇದ್ದರೆ ಬೆಂಗಳೂರಿನಲ್ಲಿ ಫೇಸ್ 3A ಮೆಟ್ರೋ ಕಾಮಗಾರಿ ವೆಚ್ಚ 740 ಕೋಟಿ ಆಗಿದೆ. ಬೇರೆ ರಾಜ್ಯದ ಮೆಟ್ರೋ ನಿಲ್ದಾಣದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್, ವಾಣಿಜ್ಯ ಸಂಕೀರ್ಣ ನಿರ್ಮಿಸಿ 25-30 ಕೋಟಿ ಆದಾಯ ಗಳಿಸುತ್ತಿವೆ. ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ 2 ಲಕ್ಷ ಚದರ ಅಡಿ ಜಾಗ ಖಾಲಿಯಿದೆ ಎಂದವರು ತಿಳಿಸಿದ್ದಾರೆ.

ನಮ್ಮ ಮೆಟ್ರೋ ಬ್ಲ್ಯೂ ಲೈನ್​​ ಮತ್ತು ಫೇಸ್ 3A ರೆಡ್ ಲೈನ್​​ ಕಾಮಗಾರಿಗಳ ವಿಚಾರವಾಗಿಯೂ ಮಾಹಿತಿ ನೀಡಿರುವ ಅವರು, ಬ್ಲ್ಯೂ ಲೈನ್​​ ಕಾಮಗಾರಿಗೆ ಭೂಸ್ವಾಧೀನ ವಿಳಂಬವಾಗಿರುವುದರಿಂದ 6 ಸಾವಿರ ಕೋಟಿ ನಷ್ಟ ಆಗಿದೆ. ಇದನ್ನ ಕೇಂದ್ರ ಕೂಡ ಭರಿಸಬೇಕಿದೆ. ಮೆಟ್ರೋ ಫೇಸ್ 3A ರೆಡ್ ಲೈನ್ ಕಥೆ ಕೂಡ ಇದೇ ರೀತಿಯಾಗಿದ್ದು, ವೆಚ್ಚದ ಮೊತ್ತ ಅಗತ್ಯಕ್ಕಿಂತ ಹೆಚ್ಚಿದೆ. ಡಿಸೈನ್ ವೆಚ್ಚ ಬಹಳ ಹೆಚ್ವು ಮಾಡಿ ಜನರ ತೆರಿಗೆ ಹಣ ಲೂಟಿ ಮಾಡಲು ಹೊರಟಿದ್ದರು. ಆದರೆ ಕೇಂದ್ರ ಸರ್ಕಾರ ಪರಿಶೀಲಿಸಿದ ಬಳಿಕ 2,406 ಕೋಟಿ ಕಡಿಮೆ ಮೊತ್ತವನ್ನು ಸಬ್​​ಮಿಟ್​​ ಮಾಡಲಾಗಿದೆ. ಇಡೀ ದೇಶದಲ್ಲಿ ಟನಲ್ ಮಾಡಲು ಕಿಲೋಮೀಟರ್‌ಗೆ 175 ಬೇಂಚ್ ಮಾರ್ಕ್ ವೆಚ್ಚವಿದೆ. ಇವರ ಲೆಕ್ಕದ ಪ್ರಕಾರ ಹೋಗಿದ್ರೆ 28,405 ಕೋಟಿ ಆಗಬೇಕಿತ್ತು. ಆದರೆ ಕೇಂದ್ರದ ಪರಿಶೀಲನೆ ಬಳಿಕ ಅದು 25,999 ಕೋಟಿಗೆ ಬಂದಿದೆ ಎಂದವರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಸುನಿಲ್​ ಎಮ್​ ಹೆಚ್​
ಸುನಿಲ್​ ಎಮ್​ ಹೆಚ್​
ಮೆಟ್ರೋ ಅನುದಾನ ಜಟಾಪಟಿ: ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿ ಲೈವ್
ಮೆಟ್ರೋ ಅನುದಾನ ಜಟಾಪಟಿ: ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿ ಲೈವ್
ಜೈಲಿನಿಂದ ಪರೋಲ್​​ ಮೇಲೆ ಹೊರಬಂದು ತಲೆಮರೆಸಿಕೊಂಡ ಜೀವಾವಧಿ ಶಿಕ್ಷೆ ಕೈದಿ
ಜೈಲಿನಿಂದ ಪರೋಲ್​​ ಮೇಲೆ ಹೊರಬಂದು ತಲೆಮರೆಸಿಕೊಂಡ ಜೀವಾವಧಿ ಶಿಕ್ಷೆ ಕೈದಿ
ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ಬೆಲೆ ಹೆಚ್ಚಳ ಆಯ್ತು ಈಗ ಬಾಡಿಗೆ ದರವೂ ಏರಿಕೆ!
ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ಬೆಲೆ ಹೆಚ್ಚಳ ಆಯ್ತು ಈಗ ಬಾಡಿಗೆ ದರವೂ ಏರಿಕೆ!
ಮೈಸೂರಿನಲ್ಲಿ ಯುವತಿ ಜತೆ ರ್ಯಾಪಿಡೋ ಚಾಲಕ ಅವಾಚ್ಯ ಸಂಭಾಷಣೆ
ಮೈಸೂರಿನಲ್ಲಿ ಯುವತಿ ಜತೆ ರ್ಯಾಪಿಡೋ ಚಾಲಕ ಅವಾಚ್ಯ ಸಂಭಾಷಣೆ
ಸ್ಟಿಂಗ್ ಪ್ರಕರಣ: ವಿಡಿಯೋ ಮಾಡಿದ್ದೇ ಗೊತ್ತಿಲ್ಲವೆಂದ ಕೃಪಾ ಆಳ್ವ!
ಸ್ಟಿಂಗ್ ಪ್ರಕರಣ: ವಿಡಿಯೋ ಮಾಡಿದ್ದೇ ಗೊತ್ತಿಲ್ಲವೆಂದ ಕೃಪಾ ಆಳ್ವ!
ದಾವಣಗೆರೆಯ ಸೂಳೆಕರೆಗೆ ಅಪರೂಪದ ಅತಿಥಿ ಭೇಟಿ! ನೀರುನಾಯಿಗಳು ಪ್ರತ್ಯಕ್ಷ
ದಾವಣಗೆರೆಯ ಸೂಳೆಕರೆಗೆ ಅಪರೂಪದ ಅತಿಥಿ ಭೇಟಿ! ನೀರುನಾಯಿಗಳು ಪ್ರತ್ಯಕ್ಷ
ಡಿ.2ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ
ಡಿ.2ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ
ಕರಾವಳಿ ಬಳಿಕ ಉತ್ತರ ಕರ್ನಾಟಕದತ್ತ ಮುಖ ಮಾಡಿದ ಪ್ರಮೋದ್ ಶೆಟ್ಟಿ
ಕರಾವಳಿ ಬಳಿಕ ಉತ್ತರ ಕರ್ನಾಟಕದತ್ತ ಮುಖ ಮಾಡಿದ ಪ್ರಮೋದ್ ಶೆಟ್ಟಿ
ಪ್ರಧಾನಿ ಮೋದಿ ಬೆಂಗಳೂರು ಭೇಟಿಯ ಸಂಪೂರ್ಣ ವೇಳಾಪಟ್ಟಿ
ಪ್ರಧಾನಿ ಮೋದಿ ಬೆಂಗಳೂರು ಭೇಟಿಯ ಸಂಪೂರ್ಣ ವೇಳಾಪಟ್ಟಿ
ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ
ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ