Innovation: ಇನ್ನೋವೇಶನ್ ಇಂಡೆಕ್ಸ್​ನಲ್ಲಿ ಭಾರತ ಹೈಜಂಪ್; ಕ್ರಿಯಾಶೀಲತೆಯ ವಾತಾವರಣ ಇರುವ ಟಾಪ್ 10 ಕಂಪನಿಗಳಿವು

India High Jumps In Global Innovation Index: ಜಾಗತಿಕ ಇನ್ನೋವೇಶನ್ ಎಕ್ಸಲೆನ್ಸ್ ಪಟ್ಟಿ ಪ್ರಕಟವಾಗಿದ್ದು 2018ರಲ್ಲಿ 81ನೇ ಸ್ಥಾನದಲ್ಲಿದ್ದ ಭಾರತ 2022ರಲ್ಲಿ 40ನೇ ಸ್ಥಾನಕ್ಕೆ ಏರಿದೆ. ಕ್ರಿಯಾಶೀಲತೆಯ ವಾತಾರಣ ಇರುವ ಭಾರತದ 10 ಅತ್ಯುತ್ತಮ ವರ್ಕ್​ಪ್ಲೇಸ್​ಗಳ ಪಟ್ಟಿಯೂ ಪ್ರಕಟವಾಗಿದೆ.

Innovation: ಇನ್ನೋವೇಶನ್ ಇಂಡೆಕ್ಸ್​ನಲ್ಲಿ ಭಾರತ ಹೈಜಂಪ್; ಕ್ರಿಯಾಶೀಲತೆಯ ವಾತಾವರಣ ಇರುವ ಟಾಪ್ 10 ಕಂಪನಿಗಳಿವು
ವರ್ಕ್​ಪ್ಲೇಸ್
Follow us
|

Updated on:Mar 16, 2023 | 4:01 PM

ನವದೆಹಲಿ: 2022ರ ನಾವೀನ್ಯತಾ ಶ್ರೇಷ್ಠತೆ ಪಟ್ಟಿ (Global Innovation Excellence Index) ಪ್ರಕಟವಾಗಿದ್ದು, ಭಾರತ ಗಮನಾರ್ಹ ಬೆಳವಣಿಗೆ ಸಾಧಿಸಿದೆ. 2018ರ ಇನ್ನೋವೇಶನ್ ಸೂಚಿಯಲ್ಲಿ 81ನೇ ಸ್ಥಾನದಲ್ಲಿದ್ದ ಭಾರತ ಈಗ 40ನೇ ಸ್ಥಾನಕ್ಕೆ ಜಿಗಿದಿದೆ. ನಾವಿನ್ಯತೆಗೆ (Innovation) ಒತ್ತು ಕೊಡುವ ವಿಚಾರದಲ್ಲಿ ವಿವಿಧ ದೇಶಗಳಲ್ಲಿ ಯಾವ ರೀತಿಯ ಪ್ರೋತ್ಸಾಹಕರ ವಾತಾವರಣ ಇದೆ ಎಂಬುದನ್ನು ಅವಲೋಕಿಸಿ ಈ ಇನ್ನೋವೇಶನ್ ಇಂಡೆಕ್ಸ್ ಪಟ್ಟಿ ಮಾಡಲಾಗಿದೆ. ಆರ್ ಅಂಡ್ ಡಿ ಹೆಚ್ಚು ಗಮನ ಕೊಟ್ಟಿದ್ದು ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್​ನಲ್ಲಿ ಭಾರತದ ಸ್ಥಾನ ಏರಲು ಪ್ರಮುಖವಾಗಿ ಕಾರಣ ಎನ್ನಲಾಗಿದೆ.

ರೀಸರ್ಚ್ ಅಂಡ್ ಡೆವಲಪ್ಮೆಂಟ್​ಗೆ (R&D- Research and Development) ಭಾರತ ಮಾಡುತ್ತಿರುವ ವೆಚ್ಚ ಪ್ರತೀ ವರ್ಷವೂ ಹೆಚ್ಚಾಗುತ್ತಿದೆ. 2018ರಲ್ಲಿ ಜಿಡಿಪಿಯ ಶೇ 6.45ರಷ್ಟು ಹಣವನ್ನು ಆರ್ ಅಂಡ್ ಡಿಗೆ ವ್ಯಯಿಸಲಾಗಿತ್ತು. 2021ರಲ್ಲಿ ಈ ವೆಚ್ಚ ಶೇ. 8.68ಕ್ಕೆ ಹೆಚ್ಚಾಗಿದೆ. ಇದು ಭಾರತದಲ್ಲಿ ನಾವಿನ್ಯತೆಯ ವಾತಾವರಣ ಮೂಡಿಸಲು ಎಡೆ ಮಾಡಿಕೊಟ್ಟಿರಬಹುದು ಎಂದು ಭಾವಿಸಲಾಗಿದೆ.

ಇನ್ನು, ನಾವಿನ್ಯತೆಯ ಸಂಸ್ಕೃತಿ ಬೆಳೆಸುವ ಭಾರತದ ಅತ್ಯುತ್ತಮ ಕಾರ್ಯಸ್ಥಾನಗಳ ಮೊದಲ ಪಟ್ಟಿ ಪ್ರಕಟಿಸಲಾಗಿದೆ. ಗ್ರೇಟ್ ಪ್ಲೇಸ್ ಟು ವರ್ಕ್ ಇಂಡಿಯಾ (Great Place To Work India) ಎಂಬ ಸಂಸ್ಥೆ ಈ ಪಟ್ಟಿ ಮಾಡಿದ್ದು, ಇನ್ಮುಂದೆ ಪ್ರತೀ ವರ್ಷವೂ ಪಟ್ಟಿ ಪ್ರಕಟಿಸುತ್ತಿರುತ್ತದೆ ಎಂದು ಹೇಳಲಾಗಿದೆ.

ಇದನ್ನು ಓದಿe-Rupee: ತಳ್ಳೋ ಗಾಡಿಯಲ್ಲಿ ಆನಂದ್ ಮಹೀಂದ್ರ ಹಣ್ಣು ಖರೀದಿಸಿ ಪೇಮೆಂಟ್ ಮಾಡಿದ ವಿಡಿಯೋ ವೈರಲ್; ಇದು ಇ-ರುಪೀ ಗಮ್ಮತ್ತು; ಯುಪಿಐಗೂ ಇ-ರುಪಾಯಿಗೂ ಏನು ವ್ಯತ್ಯಾಸ?

ಸಂಶೋಧನಾ ಕ್ಷೇತ್ರಕ್ಕೆ ಭಾರತ ಮಾಡುತ್ತಿರುವ ಹೆಚ್ಚು ವೆಚ್ಚದಿಂದಾಗಿ ನಾವಿನ್ಯತೆಯ ವಾತಾವರಣ ಹೆಚ್ಚುತ್ತಿದೆ. ಸ್ಟಾರ್ಟಪ್ ಇಕೋಸಿಸ್ಟಂಗಳ ಬೆಳವಣಿಗೆಗೂ ಉತ್ತೇಜನ ಸಿಕ್ಕಿದೆ.

ನಾವಿನ್ಯತೆಯ ಸಂಸ್ಕೃತಿ ಉತ್ತೇಜಿಸುವ ಅತ್ಯುತ್ತಮ ಕಾರ್ಯಸ್ಥಳಗಳಾಗಿರುವ ಟಾಪ್ 10 ಭಾರತೀಯ ಕಂಪನಿಗಳಿವು:

  1. ಅಟ್ಲಾಸಿಯನ್ ಇಂಡಿಯಾ ಎಲ್​ಎಲ್​ಪಿ
  2. ಆಬರ್ಗೈನ್ ಸಲ್ಯೂಶನ್ಸ್ ಪ್ರೈ ಲಿ
  3. ಎಫ್5 ನೆಟ್ವರ್ಕ್ಸ್ ಇನೋವೇಶನ್ ಪ್ರೈ ಲಿ
  4. ಎಚ್ ಅಂಡ್ ಆರ್ ಬ್ಲಾಕ್ ಪ್ರೈ ಲಿ
  5. ಆಪ್​ಕಿಟೋ ಟೆಕ್ನಾಲಜೀಸ್
  6. ಟೊಯೋಟಾ ಕನೆಕ್ಟೆಡ್ ಇಂಡಿಯಾ
  7. ವಲೋರೆಮ್ ರಿಪ್ಲೈ
  8. ವರ್ಷನ್ 1 ಸರ್ವಿಸಸ್ ಪ್ರೈ ಲಿ
  9. ವುರಮ್
  10. ಡಬ್ಲ್ಯೂಡಬ್ಲ್ಯೂಟಿ ಇಂಡಿಯಾ ಪ್ರೈ ಲಿ

ಇದನ್ನೂ ಓದಿCredit Suisse: ಜಾಗತಿಕ ಬ್ಯಾಂಕಿಂಗ್ ದೈತ್ಯ ಕ್ರೆಡಿಟ್ ಸ್ವೀಸ್ ಪತನ ಸಾಧ್ಯತೆ; ಭಾರತಕ್ಕೆ ತಲೆನೋವಾಗುತ್ತಾ ಈ ಸ್ವಿಸ್ ಬ್ಯಾಂಕ್? ವಾಸ್ತವ ಪರಿಸ್ಥಿತಿ ಹೇಗಿದೆ?

ಈ ಮೇಲಿನ ಪಟ್ಟಿಯಲ್ಲಿರುವ ಕಂಪನಿಗಳು ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ನಾವಿನ್ಯತೆಯನ್ನು ಉತ್ತೇಜಿಸುವ ವಾತಾವರಣ ಇದೆ. ಬಹಳ ವಿಶ್ವಾಸಾರ್ಹವಾದ ಮತ್ತು ಉನ್ನತ ಮಟ್ಟದ ಕಾರ್ಯಸಾಧನೆಗೆ ಉತ್ತೇಜನ ಕೊಡುವ ಕೆಲಸದ ವಾತಾವರಣ ಈ ಕಂಪನಿಗಳಲ್ಲಿ ಇದೆ. ಗ್ರೇಟ್ ಪ್ಲೇಸ್ ಟು ವರ್ಕ್ ಇಂಡಿಯಾ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಉದ್ಯೋಗಿಗಳಿಗೂ ನಾವಿನ್ಯತೆಯ ಅಭಿಲಾಷೆ

ಕೆಲಸದ ಸ್ಥಳದಲ್ಲಿ ನಾವಿನ್ಯತೆಗೆ ಪ್ರೋತ್ಸಾಹ ಸಿಕ್ಕರೆ ಗ್ರಾಹಕ ಸೇವೆ, ಕೆಲಸದ ವಾತಾವರಣ ಉತ್ತಮಗೊಳ್ಳುತ್ತದೆ. ಉದ್ಯೋಗಿಗಳಿಗೂ ಹೆಮ್ಮೆಯ ಭಾವನೆ ಮೂಡುತ್ತದೆ ಎಂದು ಶೇ. 72ರಷ್ಟು ಜನರು ಈ ಸಮೀಕ್ಷೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಅತ್ಯುತ್ತಮ ವರ್ಕ್​ಪ್ಲೇಸ್​ಗಳಲ್ಲಿ ಕೆಲಸ ಮಾಡುವುದು ಶೇ. 8ರಷ್ಟು ಉದ್ಯೋಗಿಗಳಲ್ಲಿ ವೈಯಕ್ತಿಕ ಮಟ್ಟದಲ್ಲಿ ಉತ್ತೇಜನ ಕೊಡುತ್ತದೆ. ಶೇ. 9ರಷ್ಟು ಉದ್ಯೋಗಿಗಳು ಇತರರಿಗೆ ಹೋಲಿಸಿದರೆ ತಮ್ಮ ಸಂಸ್ಥೆ ಜೊತೆ ಹೆಚ್ಚು ಬೆಸೆದುಕೊಳ್ಳುತ್ತಾರೆ.

ಹಾಗೆಯೇ, ಅತ್ಯುತ್ತಮ ವರ್ಕ್​ಪ್ಲೇಸ್​ಗಳಲ್ಲಿ ಉದ್ಯೋಗಿಯ ನಾವೀನ್ಯತೆಯ ದರ ಶೇ. 81ರಷ್ಟಿರುತ್ತದೆ. ಇತರ ಕಾರ್ಯಸ್ಥಳಗಳಲ್ಲಿ ಈ ದರ ಶೇ. 63 ಮಾತ್ರ ಇರುತ್ತದೆ.

ಕ್ರಿಯಾಶೀಲತೆಗೆ ಉತ್ತೇಜನ ಸಿಗುವಂತಹ ವಾತಾವರಣ ಇರುವ ಕಂಪನಿಗಳು ತಮ್ಮ ಕ್ಷೇತ್ರದಲ್ಲಿ ಇತರ ಕಂಪನಿಗಳಿಗಿಂತ ಹೆಚ್ಚು ಮುಂದಕ್ಕೆ ಹೋಗುತ್ತವೆ ಎಂಬುದು ಸಮೀಕ್ಷೆಯಿಂದ ತಿಳಿದುಬರುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Thu, 16 March 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ