Petrol Diesel Price on April 08: ಜಮ್ಮು ಮತ್ತು ಕಾಶ್ಮೀರ ಹಾಗೂ ಆಂಧ್ರಪ್ರದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆ

|

Updated on: Apr 08, 2024 | 7:11 AM

ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಏಪ್ರಿಲ್ 8, ಸೋಮವಾರದ ಪೆಟ್ರೋಲ್, ಡೀಸೆಲ್ ದರಗಳನ್ನು ಬಿಡುಗಡೆ ಮಾಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಮುಂದುವರೆದಿದೆ. ಆದರೆ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಸ್ಥಿರವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಭಾರತೀಯ ತೈಲ ಕಂಪನಿಗಳು ಪ್ರತಿ ದಿನ ನವೀಕರಿಸುತ್ತವೆ.

Petrol Diesel Price on April 08: ಜಮ್ಮು ಮತ್ತು ಕಾಶ್ಮೀರ ಹಾಗೂ ಆಂಧ್ರಪ್ರದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆ
ಪೆಟ್ರೋಲ್
Image Credit source: Chemistry World
Follow us on

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಮುಂದುವರೆದಿದೆ. ಆದರೆ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಸ್ಥಿರವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಭಾರತೀಯ ತೈಲ ಕಂಪನಿಗಳು ಪ್ರತಿ ದಿನ ನವೀಕರಿಸುತ್ತವೆ.

ಕಚ್ಚಾತೈಲ ಬೆಲೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದುಬಾರಿಯಾಗಿದೆ, ಬ್ರೆಂಟ್​ ಕಚ್ಚಾತೈಲವು ಪ್ರತಿ ಬ್ಯಾರೆಲ್​ಗೆ 91.17 ಡಾಲರ್​ನಂತೆ ವಹಿವಾಟು ನಡೆಸುತ್ತಿದೆ. ಡಬ್ಲ್ಯೂಟಿಐ ಕಚ್ಚಾತೈಲ ಪ್ರತಿ ಬ್ಯಾರೆಲ್​ಗೆ 86.91 ಡಾಲರ್​ನಂತೆ ವಹಿವಾಟು ನಡೆಸುತ್ತಿದೆ.
ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್​ ಬೆಲೆಗಳು ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಯನ್ನು ಆಧರಿಸಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯನ್ನು ಪರಿಶೀಲಿಸಿದ ಬಳಿಕ ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ನಿರ್ಧರಿಸುತ್ತವೆ.

ಎಸ್​ಎಂಎಸ್​ ಮೂಲಕ ಬೆಲೆಗಳನ್ನು ಪರಿಶೀಲಿಸುವುದು ಹೇಗೆ?
ರಾಜ್ಯಮಟ್ಟದಲ್ಲಿ ಪೆಟ್ರೋಲ್​ಗೆ ವಿಧಿಸಲಾದ ತೆರಿಗೆಯಿಂದಾಗಿ ವಿವಿಧ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ವಿಭಿನ್ನವಾಗಿರುತ್ತವೆ. ನಿಮ್ಮ ಮೊಬೈಲ್​ನಿಂದ ಎಸ್​ಎಂಎಸ್​ ಮೂಲಕ ನೀವು ಪ್ರತಿದಿನ ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯಬಹುದು. ಇದಕ್ಕಾಗಿ ಇಂಡಿಯನ್ ಆಯಿಲ್ (IOCL) ಗ್ರಾಹಕರು RSP ಕೋಡ್ ಬರೆದು 9224992249 ಸಂಖ್ಯೆಗೆ ಕಳುಹಿಸಬೇಕು.

ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ
– ದೆಹಲಿಯಲ್ಲಿ ಪೆಟ್ರೋಲ್ 94.72 ರೂ. ಮತ್ತು ಡೀಸೆಲ್ ಲೀಟರ್‌ಗೆ 87.62 ರೂ.
– ಮುಂಬೈನಲ್ಲಿ ಪೆಟ್ರೋಲ್ 104.21ರೂ. ಮತ್ತು ಡೀಸೆಲ್ 92.15 ರೂ.
– ಕೋಲ್ಕತ್ತಾದಲ್ಲಿ ಪೆಟ್ರೋಲ್ 103.94 ರೂ. ಮತ್ತು ಡೀಸೆಲ್ 90.76 ರೂ.
-ಚೆನ್ನೈನಲ್ಲಿ 90.76 ರೂ. ಮತ್ತು ಡೀಸೆಲ್ ಲೀಟರ್‌ಗೆ 94.34 ರೂ.
-ಬೆಂಗಳೂರು: ಪೆಟ್ರೋಲ್ ಲೀಟರ್ ಗೆ 99.84 ಮತ್ತು ಡೀಸೆಲ್ ಲೀಟರ್ ಗೆ 85.93 ರೂ.

ಮತ್ತಷ್ಟು ಓದಿ: Petrol Diesel Price on April 07: ರಾಜಸ್ಥಾನ ಹಾಗೂ ಬಿಹಾರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕುಸಿತ

ಈ ನಗರಗಳಲ್ಲಿ ಬೆಲೆಗಳು ಎಷ್ಟು ಬದಲಾಗಿವೆ
ನೋಯ್ಡಾದಲ್ಲಿ ಪೆಟ್ರೋಲ್ 94.94 ರೂ. ಮತ್ತು ಡೀಸೆಲ್ ಲೀಟರ್‌ಗೆ 88.08 ರೂ. ಆಗಿದೆ.
– ಗಾಜಿಯಾಬಾದ್‌ನಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 94.65 ರೂ. ಮತ್ತು ಡೀಸೆಲ್ ಲೀಟರ್‌ಗೆ 87.75 ರೂ. ಆಗಿದೆ.
– ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 94.53 ರೂ. ಮತ್ತು ಡೀಸೆಲ್ 87.62 ರೂ. ಆಗಿದೆ.
– ಪಾಟ್ನಾದಲ್ಲಿ, ಪ್ರತಿ ಲೀಟರ್ ಪೆಟ್ರೋಲ್ 106.06 ರೂ. ಮತ್ತು ಡೀಸೆಲ್ 92.87 ರೂ. ಆಗಿದೆ.
– ಪೋರ್ಟ್ ಬ್ಲೇರ್‌ನಲ್ಲಿ ಪೆಟ್ರೋಲ್ ಲೀಟರ್‌ಗೆ 84.10 ರೂ. ಮತ್ತು ಡೀಸೆಲ್ 79.74 ರೂ. ಆಗಿದೆ.

ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹೊಸ ದರಗಳು ಬಿಡುಗಡೆಯಾಗುತ್ತವೆ
ಪ್ರತಿದಿನ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾವಣೆ ಮತ್ತು ಹೊಸ ದರಗಳು ಬಿಡುಗಡೆಯಾಗುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ಡೀಲರ್ ಕಮಿಷನ್, ವ್ಯಾಟ್ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ, ಅದರ ಬೆಲೆಯು ಮೂಲ ಬೆಲೆಗಿಂತ ದ್ವಿಗುಣಗೊಳ್ಳುತ್ತದೆ. ಇದೇ ಕಾರಣಕ್ಕೆ ಪೆಟ್ರೋಲ್, ಡೀಸೆಲ್ ದುಬಾರಿ ಬೆಲೆ ತೆತ್ತು ಖರೀದಿಸಬೇಕಾಗಿದೆ.

 

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ