ಪ್ರಪಂಚದಲ್ಲಿ ಸುಮಾರು 1.2 ಬಿಲಿಯನ್ ವಾಹನಗಳಿವೆ. 2035 ರ ವೇಳೆಗೆ ಈ ವಾಹನಗಳ ಸಂಖ್ಯೆ ಸುಮಾರು 2 ಶತಕೋಟಿಗೆ ಹೆಚ್ಚಾಗುವ ನಿರೀಕ್ಷೆಯಿದೆ. ಈಗಿನ ಕಾಲಘಟ್ಟದಲ್ಲಿ ಪೆಟ್ರೋಲ್, ಡೀಸೆಲ್ ಬೇಡದ ಇಂತಹ ಹಲವು ವಾಹನಗಳು ಮಾರುಕಟ್ಟೆಗೆ ಬಂದಿವೆ. ಅನೇಕ ದೇಶಗಳು 2030 ರ ವೇಳೆಗೆ ಪೆಟ್ರೋಲ್-ಡೀಸೆಲ್ ಮುಕ್ತ ದೇಶವಾಗುವ ಪ್ರಯತ್ನ ಮಾಡುತ್ತಿವೆ.
ಎಲ್ಲವೂ ಸರಿಯಾಗಿ ನಡೆದರೆ ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬದಲು ಹೈಡ್ರೋಜನ್, ಎಲೆಕ್ಟ್ರಿಕ್, ಗ್ಯಾಸ್, ಸೋಲಾರ್ ಮೂಲಕ ವಾಹನಗಳು ಓಡಲಿವೆ. 2030 ರ ವೇಳೆಗೆ ಪೆಟ್ರೋಲ್ ಮತ್ತು ಡೀಸೆಲ್ ಇಲ್ಲದೆ ಓಡುವ ಗುರಿಯನ್ನು ಮೋದಿ ಸರ್ಕಾರ ಹೊಂದಿದೆ. ಟ್ರೋಲ್ ಮತ್ತು ಡೀಸೆಲ್‌ನಲ್ಲಿ ಚಲಿಸುವ ವಾಹನಗಳ ಮಾರಾಟವನ್ನು ನಿಷೇಧಿಸುವ ಒಂದು ಹೆಜ್ಜೆ ಇರಬಹುದು.
ಪ್ರಪಂಚವು ಪೆಟ್ರೋಲ್, ಡೀಸೆಲ್ ಇಲ್ಲದೆ ಪರ್ಯಾಯ ಮಾರ್ಗಗಳತ್ತ ಸಾಗಲು ಪ್ರಯತ್ನ ಪಡುತ್ತಿದ್ದರೂ, ಪ್ರಸ್ತುತ ಪೆಟ್ರೋಲ್, ಡೀಸೆಲ್ಗೆ ಬೇಡಿಕೆ ಹೆಚ್ಚಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕೇಂದ್ರ ತೈಲ ಕಂಪನಿಗಳು ಮಾರ್ಚ್ ತಿಂಗಳಲ್ಲಿ ಪರಿಷ್ಕರಿಸಿದ್ದವು. ಚುನಾವಣೆಗೆ ಮುನ್ನವೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ ತಲಾ 2 ರೂ. ಕಡಿಮೆ ಮಾಡಿದ್ದವು.
ಮತ್ತಷ್ಟು ಓದಿ: Petrol Diesel Price on July 11: ದೇಶಾದ್ಯಂತ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ
ದೆಹಲಿಯಲ್ಲಿ ಪೆಟ್ರೋಲ್ 94.72 ರೂ., ಡೀಸೆಲ್ 87.62 ರೂ., ಮುಂಬೈನಲ್ಲಿ ಪೆಟ್ರೋಲ್ 103.94 ರೂ., ಡೀಸೆಲ್ 89.97 ರೂ., ಕೋಲ್ಕತ್ತಾದಲ್ಲಿ ಪೆಟ್ರೋಲ್ 103.94 ರೂ., ಡೀಸೆಲ್ 90.76 ರೂ., ಚೆನ್ನೈನಲ್ಲಿ ಪೆಟ್ರೋಲ್ 100.85 ರೂ., ಡೀಸೆಲ್ 92.44 ರೂ., ಬೆಂಗಳೂರಿನಲ್ಲಿ ಪೆಟ್ರೋಲ್ 102.86 ರೂ., ಡೀಸೆಲ್ 88.94 ರೂ., ಲಕ್ನೋದಲ್ಲಿ ಪೆಟ್ರೋಲ್ 94.65 ರೂ., ಡೀಸೆಲ್ 87.76 ರೂ., ನೋಯ್ಡಾದಲ್ಲಿ ಪೆಟ್ರೋಲ್ 94.69 ರೂ., ಡೀಸೆಲ್ 87.69ರೂ. ಇದೆ.
ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
OMC ಗಳು ಬೆಲೆಗಳನ್ನು ಬಿಡುಗಡೆ ಮಾಡುತ್ತವೆ ದೇಶದ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಬಿಡುಗಡೆ ಮಾಡುತ್ತವೆ . ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಆಫ್ ಇಂಡಿಯಾ ಮುಂತಾದ ಕಂಪನಿಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಬಿಡುಗಡೆ ಮಾಡುತ್ತವೆ. ಮನೆಯಲ್ಲಿ ಕುಳಿತು ತೈಲ ಬೆಲೆಯನ್ನು ಪರಿಶೀಲಿಸಬಹುದು.
ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ