Petrol Diesel Price on August 19: ಉತ್ತರ ಪ್ರದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕೊಂಚ ಏರಿಕೆ

|

Updated on: Aug 19, 2024 | 7:08 AM

ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಆಗಸ್ಟ್​ 19, ಸೋಮವಾರದ ಪೆಟ್ರೋಲ್, ಡೀಸೆಲ್ ದರಗಳನ್ನು ಬಿಡುಗಡೆ ಮಾಡಿವೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಯನ್ನು ಆಧರಿಸಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯನ್ನು ಪರಿಶೀಲಿಸಿದ ಬಳಿಕಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ನಿರ್ಧರಿಸುತ್ತವೆ.

Petrol Diesel Price on August 19: ಉತ್ತರ ಪ್ರದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕೊಂಚ ಏರಿಕೆ
ಪೆಟ್ರೋಲ್
Image Credit source: Cars
Follow us on

ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳು ಸ್ಥಿರತೆಯನ್ನು ಕಾಯ್ದುಕೊಂಡಿವೆ. ಉತ್ತರ ಪ್ರದೇಶದ ಕೆಲವೆಡೆ ಬೆಲೆಗಳು ಕೊಂಚ ಏರಿಕೆಯಾಗಿವೆ. ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ 9 ಪೈಸೆ ಹೆಚ್ಚಾಗಿದೆ ಮತ್ತು ಲೀಟರ್‌ಗೆ 94.75 ರೂ.ಗೆ ಮಾರಾಟವಾಗುತ್ತಿದೆ. ಡೀಸೆಲ್ ಕೂಡ 10 ಪೈಸೆ ಏರಿಕೆಯಾಗಿ ಪ್ರತಿ ಲೀಟರ್ ಗೆ 87.86 ರೂ.ಗೆ ತಲುಪಿದೆ.

ಗಾಜಿಯಾಬಾದ್‌ನಲ್ಲಿ, ಪೆಟ್ರೋಲ್ ಬೆಲೆ 26 ಪೈಸೆ ಹೆಚ್ಚಾಗಿದೆ ಮತ್ತು ಲೀಟರ್‌ಗೆ 94.65 ರೂ.ಗೆ ಮಾರಾಟವಾಗುತ್ತಿದೆ, ಆದರೆ ಡೀಸೆಲ್ 30 ಪೈಸೆಯಷ್ಟು ಏರಿಕೆಯಾಗಿ ಲೀಟರ್‌ಗೆ 87.75 ರೂ.ಗೆ ಮಾರಾಟವಾಗುತ್ತಿದೆ. ಇಂದು ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಪೆಟ್ರೋಲ್ ಬೆಲೆ 31 ಪೈಸೆಯಷ್ಟು ಹೆಚ್ಚಾಗಿದೆ ಮತ್ತು ಲೀಟರ್‌ಗೆ 104.88 ರೂ.ಗೆ ಮಾರಾಟವಾಗುತ್ತಿದೆ, ಡೀಸೆಲ್ ಬೆಲೆ ಲೀಟರ್‌ಗೆ 29 ಪೈಸೆ ಏರಿಕೆಯಾಗಿ 90.36 ರೂ.ಗೆ ತಲುಪಿದೆ.

ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 79.50 ಡಾಲರ್​ಗೆ ತಲುಪಿದೆ. ಡ್ಲ್ಯೂಟಿಐ ದರವು ಪ್ರತಿ ಬ್ಯಾರೆಲ್‌ಗೆ 76.49 ಡಾಲರ್​ಗೆ ಏರಿದೆ.

ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ
– ದೆಹಲಿಯಲ್ಲಿ ಪೆಟ್ರೋಲ್ ರೂ 96.65 ಮತ್ತು ಡೀಸೆಲ್ ಲೀಟರ್‌ಗೆ ರೂ 89.82
– ಮುಂಬೈನಲ್ಲಿ ಪೆಟ್ರೋಲ್ 106.31ರೂ. ಮತ್ತು ಡೀಸೆಲ್ 94.27 ರೂ.
– ಚೆನ್ನೈನಲ್ಲಿ ಪೆಟ್ರೋಲ್ 102.63 ರೂ. ಮತ್ತು ಡೀಸೆಲ್ 94.24 ರೂ.
ಕೋಲ್ಕತ್ತಾದಲ್ಲಿ 94.24 ರೂ. ಮತ್ತು ಡೀಸೆಲ್ ಲೀಟರ್‌ಗೆ 92.76 ರೂ.

ಮತ್ತಷ್ಟು ಓದಿ:
Petrol Diesel Price on August 18: ಕಚ್ಚಾತೈಲ ಬೆಲೆ ಕುಸಿತ, ದೇಶಾದ್ಯಂತ ಇಂಧನ ದರ ಎಷ್ಟಿದೆ?

ಈ ನಗರಗಳಲ್ಲಿ ದರಗಳು ಬದಲಾಗಿವೆ
– ಗೌತಮ್ ಬುದ್ಧ ನಗರದಲ್ಲಿ ಪೆಟ್ರೋಲ್ 94.75 ರೂ ಮತ್ತು ಡೀಸೆಲ್ ಲೀಟರ್‌ಗೆ 87.86 ರೂ.
– ಗಾಜಿಯಾಬಾದ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 94.65 ರೂ ಮತ್ತು ಡೀಸೆಲ್ 87.75 ರೂ ಆಗಿದೆ.
ಜೈಪುರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 104.88 ರೂ ಮತ್ತು ಡೀಸೆಲ್ 90.36 ರೂ ಆಗಿದೆ.

ಪೆಟ್ರೋಲ್, ಡೀಸೆಲ್ ನಿಖರ ಬೆಲೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹೊಸ ದರಗಳು ಬಿಡುಗಡೆಯಾಗುತ್ತವೆ
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ. ಹೊಸ ದರಗಳು ಬೆಳಗ್ಗೆ 6 ಗಂಟೆಯಿಂದಲೇ ಜಾರಿಗೆ ಬರಲಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ಡೀಲರ್ ಕಮಿಷನ್, ವ್ಯಾಟ್ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ, ಅದರ ಬೆಲೆ ಮೂಲ ಬೆಲೆಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗುತ್ತದೆ. ಇದೇ ಕಾರಣಕ್ಕೆ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ